ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು-ಕಾಶ್ಮೀರದಲ್ಲಿ 3 ತಿಂಗಳು ಬಂದ್ ಆಗಿದ್ದ ಬಸ್ ನಿಲ್ದಾಣ ಪುನಾರಂಭ

|
Google Oneindia Kannada News

ಶ್ರೀನಗರ್, ಜುಲೈ.14: ನೊವೆಲ್ ಕೊರೊನಾವೈರಸ್ ಸೋಂಕು ಹರಡುವಿಕೆ ಭೀತಿಯಲ್ಲಿ ಸ್ತಬ್ಧಗೊಂಡಿದ್ದ ಜಮ್ಮು-ಕಾಶ್ಮೀರದಲ್ಲಿ ಬರೋಬ್ಬರಿ ಮೂರೂವರೆ ತಿಂಗಳ ನಂತರ ಸಾರ್ವಜನಿಕ ಸಾರಿಗೆ ಸೇವೆಯನ್ನು ಪುನಾರಂಭಗೊಳಿಸಲಾಗಿದೆ.

ಪೂಂಚ್ ಪ್ರದೇಶದಲ್ಲಿ ಬಸ್ ನಿಲ್ದಾಣವು ಕಳೆದ ಮೂರು ತಿಂಗಳಿನಿಂದ ಬಂದ್ ಆಗಿದ್ದರಿಂದ ನಾವು ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದೆವು. ಇದೀಗ ಬಸ್ ನಿಲ್ದಾಣದಲ್ಲಿ ಸೇವೆಯನ್ನು ಪುನಾರಂಭ ಮಾಡಿದ್ದಕ್ಕೆ ಆಡಳಿತ ವರ್ಗಕ್ಕೆ ಸಾರ್ವಜನಿಕರು ಧನ್ಯವಾದ ತಿಳಿಸಿದ್ದಾರೆ.

ಕಾಶ್ಮೀರ ಕಣಿವೆಯ 200ಕ್ಕೂ ಹೆಚ್ಚು ಯುವಕರು ಪಾಕ್‌ ವೀಸಾದೊಂದಿಗೆ ನಾಪತ್ತೆ: ಗುಪ್ತಚರ ಸಂಸ್ಥೆ ಎಚ್ಚರಿಕೆಕಾಶ್ಮೀರ ಕಣಿವೆಯ 200ಕ್ಕೂ ಹೆಚ್ಚು ಯುವಕರು ಪಾಕ್‌ ವೀಸಾದೊಂದಿಗೆ ನಾಪತ್ತೆ: ಗುಪ್ತಚರ ಸಂಸ್ಥೆ ಎಚ್ಚರಿಕೆ

ಕೊರೊನಾವೈರಸ್ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸುವುದಕ್ಕೆ ಮುಖಕ್ಕೆ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಇದರಿಂದ ಸಮುದಾಯಕ್ಕೆ ಸೋಂಕು ಹರಡದಂತೆ ತಡೆಯುವುದಕ್ಕೆ ಅನುಕೂಲವಾಗಲಿದೆ ಎಂದು ಅಶೋಕ್ ಕುಮಾರ್ ವರ್ಮಾ ಎಂಬುವವರು ಹೇಳಿದ್ದಾರೆ.

Bus Stand Services Resumed After 3 Months In Jammu-Kashmir

ಪೂಂಚ್ ಬಸ್ ನಿಲ್ದಾಣದ ಸಹಾಯಕ ನಿರ್ದೇಶಕರು ಹೇಳುವುದೇನು?

ಜಮ್ಮು-ಕಾಶ್ಮೀರದ ಪೂಂಚ್ ನಲ್ಲಿ ಸಾರಿಗೆ ವ್ಯವಸ್ಥೆಯಿಲ್ಲದೇ, ಬಸ್ ಗಳ ಸಂಚಾರವಿಲ್ಲದೇ ಸಾರ್ವಜನಿಕರು ಸಾಕಷ್ಟು ತೊಂದರೆಗಳನ್ನು ಎದುರಿಸುವಂತಾ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಹಿನ್ನೆಲೆ ಸಾರಿಗೆ ವ್ಯವಸ್ಥೆಯನ್ನು ಪುನಾರಂಭಗೊಳಿಸಲಾಗಿದೆ ಎಂದು ಪೂಂಚ್ ಬಸ್ ನಿಲ್ದಾಣದ ಸಹಾಯಕ ನಿರ್ದೇಶಕ ರಾಜೇಶ್ ಖಜೂರಿಯಾ ತಿಳಿಸಿದ್ದಾರೆ. ಬಸ್ ಸಂಚಾರ ವ್ಯವಸ್ಥೆ ಪುನಾರಂಭಕ್ಕೆ ಅನುಮತಿ ನೀಡಿದ ಜಿಲ್ಲಾಡಳಿತ ಮತ್ತು ಸಹಕಾರ ನೀಡಿದ ಪೊಲೀಸರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ 10,513 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ 5979 ಸೋಂಕಿತರು ಗುಣಮುಖರಾಗಿದ್ದಾರೆ. ಬಾಕಿ ಉಳಿದ 4355 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಇದುವರೆಗೂ ಮಹಾಮಾರಿಗೆ 179 ಮಂದಿ ಪ್ರಾಣ ಬಿಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಾಹಿತಿ ನೀಡಿದೆ.

English summary
Bus Stand Services Resumed After 3 Months In Jammu-Kashmir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X