ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಸಿಗೆ ಬಿಸಿಲಿಗೆ ಬಸ್‌ಗೆ ಹೊತ್ತುಕೊಂಡ ಬೆಂಕಿ: ನಾಲ್ವರು ಸಾವು, 22 ಮಂದಿ ಗಾಯ

|
Google Oneindia Kannada News

ಶ್ರೀನಗರ ಮೇ 13: ಜಮ್ಮುವಿನ ವೈಷ್ಣೋದೇವಿ ಮಾರ್ಗವಾಗಿ ತೆರಳುತ್ತಿದ್ದ ಪ್ರಯಾಣಿಕರ ಬಸ್‌ಗೆ ಬೆಂಕಿ ತಗುಲಿ ನಾಲ್ವರು ಸಾವನ್ನಪ್ಪಿದ್ದು, 22 ಮಂದಿ ಗಾಯಗೊಂಡಿರುವ ದಾರುಣ ಘಟನೆ ನಡೆದಿದೆ.

ಕತ್ರಾದಿಂದ ಜಮ್ಮುವಿಗೆ ಹೊರಟಿದ್ದ ಬಸ್‌ಗೆ ಕತ್ರಾದಿಂದ 1.5 ಕಿಮೀ ದೂರದಲ್ಲಿರುವ ಖಾರ್ಮಲ್ ಬಳಿ ಬೆಂಕಿ ಹೊತ್ತಿಕೊಂಡ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, 22 ಮಂದಿ ಗಾಯಗೊಂಡಿದ್ದಾರೆ. ಪ್ರಾಥಮಿಕ ತನಿಖೆಯ ನಂತರ ಬೆಂಕಿಯ ಮೂಲ ಎಂಜಿನ್ ಎಂದು ತಿಳಿದುಬಂದಿದೆ. ಇದರಿಂದ ಬೆಂಕಿ ಇಡೀ ಬಸ್‌ಗೆ ವೇಗವಾಗಿ ವ್ಯಾಪಿಸಿ ದುರಂತ ಸಂಭವಿಸಿದೆ ಎಂದು ಜಮ್ಮು ಎಡಿಜಿಪಿ ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ರಿಯಾಸಿಯ ಡೆಪ್ಯುಟಿ ಕಮಿಷನರ್ ಬಬಿಲಾ ರಕ್ವಾಲ್, ಅತಿಯಾದ ಬಿಸಿಲಿಗೆ ಬಸ್‌ನ ಟ್ಯಾಂಕ್ ಸ್ಫೋಟಗೊಂಡು ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಿದ್ದಾರೆ.

Bus fire in Jammu: four killed, 22 injured

ಟ್ವೀಟ್‌ನಲ್ಲಿ, ಕೇಂದ್ರ ಸಚಿವ ಡಾ ಜಿತೇಂದ್ರ ಸಿಂಗ್ ಅವರ, "ಕತ್ರಾದಲ್ಲಿ ಬಸ್ ಅಪಘಾತದ ಮಾಹಿತಿ ಪಡೆದ ತಕ್ಷಣ, ಇದೀಗ ಡೆಪ್ಯೂಟಿ ಕಮಿಷನರ್, ರಿಯಾಸಿ (ಜೆ&ಕೆ), ಶ್ರೀಮತಿ ಬಬಿಲಾ ರಖ್ವಾಲ್ ಅವರೊಂದಿಗೆ ಮಾತನಾಡಿದ್ದಾರೆ. 2 ಸಾವುನೋವುಗಳು ವರದಿಯಾಗಿವೆ, ಗಾಯಗೊಂಡವರನ್ನು ನರೈನಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಗಾಯಾಳುಗಳಿಗೆ ಆರ್ಥಿಕವಾಗಿ ಮತ್ತು ಇತರ ರೀತಿಯಲ್ಲಿ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಲಾಗುವುದು" ಎಂದು ಬರೆದಿದ್ದಾರೆ.

Recommended Video

Rajath Patidar ಹೊಡೆದ ಸಿಕ್ಸರ್‌ನಿಂದ ಆಗಬೇಕಿತ್ತು ದೊಡ್ಡ ಅನಾಹುತ | Oneindia Kannada

ಘಟನೆಯ ಬಗ್ಗೆ ಲೆಫ್ಟಿನೆಂಟ್ ಗವರ್ನರ್ ಜಮ್ಮು ಮತ್ತು ಕಾಶ್ಮೀರ ಶೋಕ ವ್ಯಕ್ತಪಡಿಸಿದ್ದಾರೆ. "ಕತ್ರಾದಲ್ಲಿ ಸಂಭವಿಸಿದ ದುರಂತ ಬಸ್ ಘಟನೆಯಲ್ಲಿ ಜೀವಹಾನಿಯಿಂದ ತೀವ್ರ ನೋವಾಗಿದೆ. ನಾನು ದುಃಖಿತ ಕುಟುಂಬಗಳಿಗೆ ನೋವು ಭರಿಸುವ ಶಕ್ತಿ ಸಿಗಲಿ ಮತ್ತು ಸಾವನ್ನಪ್ಪಿದವರಿಗೆ ಸಂತಾಪ ಮತ್ತು ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲು ಪ್ರಾರ್ಥಿಸುತ್ತೇನೆ. ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡಲು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಲಾಗಿದೆ" ಎಂದು LG, J&K ಕಚೇರಿ ಟ್ವೀಟ್ ಮಾಡಿದ್ದಾರೆ.

English summary
A passenger bus which was on its way to Vaishno Devi in ​​Jammu was set on fire, killing four people and injuring 22 others.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X