ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; ಬಾರಾಮುಲ್ಲ ಎನ್‌ಕೌಂಟರ್; 4 ಉಗ್ರರ ಹತ್ಯೆ

|
Google Oneindia Kannada News

ಶ್ರೀನಗರ, ಏಪ್ರಿಲ್ 22; ಜಮ್ಮು ಮತ್ತು ಕಾಶ್ಮೀರದ ಬಾರಮುಲ್ಲಾದ ಮಾಲ್ವ ಪ್ರದೇಶದಲ್ಲಿ ನಡೆಯುತ್ತಿರುವ ಎನ್‌ಕೌಂಟರ್ 2ನೇ ದಿನಕ್ಕೆ ಕಾಲಿಟ್ಟಿದೆ. ಬುದ್‌ಗಾಂವ್ ಪೊಲೀಸರು ಮತ್ತು ಭದ್ರತಾ ಪಡೆಗಳು ಈ ಪ್ರದೇಶದಲ್ಲಿ ಉಗ್ರರ ಜೊತೆ ಗುಂಡಿನ ಕಾಳಗ ನಡೆಸುತ್ತಿವೆ.

ಇದುವರೆಗೂ ನಾಲ್ವರು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಹೇಳಿದ್ದಾರೆ. ಇವರಲ್ಲಿ ಎಲ್‌ಇಟಿ ಉಗ್ರ ಸಂಘಟನೆ ಕಮಾಂಡರ್ ಯೂಸೂಫ್ ಕಾಂಥ್ರೋ ಸಹ ಸೇರಿದ್ದಾನೆ. ಗುರುವಾರ ಬೆಳಗ್ಗೆ ಆರಂಭವಾದ ಎನ್‌ಕೌಂಟರ್ ಇನ್ನೂ ಮುಂದುವರೆದಿದೆ.

Breaking; ಬಾರಾಮುಲ್ಲದಲ್ಲಿ ಎನ್‌ಕೌಂಟರ್, ಎಲ್‌ಇಟಿ ಕಮಾಂಡ್ ಹತ್ಯೆ Breaking; ಬಾರಾಮುಲ್ಲದಲ್ಲಿ ಎನ್‌ಕೌಂಟರ್, ಎಲ್‌ಇಟಿ ಕಮಾಂಡ್ ಹತ್ಯೆ

ಕಟ್ಟಡವೊಂದರಲ್ಲಿ ಇನ್ನೂ ಮೂವರು ಉಗ್ರರು ಅಡಗಿ ಕುಳಿತಿದ್ದಾರೆ. ಯೋಧರು, ಜಮ್ಮು ಮತ್ತು ಕಾಶ್ಮೀರದ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸುತ್ತಿದ್ದಾರೆ. ಬುದ್‌ಗಾಂವ್ ಪೊಲೀಸರು ನೀಡಿದ ನಿಖರ ಮಾಹಿತಿ ಅನ್ವಯ ಗುರುವಾರ ಉಗ್ರರಿಗಾಗಿ ತಪಾಸಣೆ ಆರಂಭಿಸಿದಾಗ ಗುಂಡಿನ ದಾಳಿ ಆರಂಭವಾಯಿತು.

 ಯಶಸ್ವಿ 100 ಕಾರ್ಯಾಚರಣೆ: 2021ರಲ್ಲಿ 20 ವಿದೇಶಿಗರು ಸೇರಿ 182 ಉಗ್ರರು ಹತ ಯಶಸ್ವಿ 100 ಕಾರ್ಯಾಚರಣೆ: 2021ರಲ್ಲಿ 20 ವಿದೇಶಿಗರು ಸೇರಿ 182 ಉಗ್ರರು ಹತ

Baramulla Encounter Four Terrorists Killed

ಗುಂಡಿನ ಕಾಳಗದಲ್ಲಿ ಇದುವರೆಗೂ ನಾಲ್ವರು ಯೋಧರು, ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ. ಮೊದಲು ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯಲ್ಲಿದ್ದ ಯೂಸೂಫ್ ಕಾಂಥ್ರೋ 2005ರಲ್ಲಿ ಬಂಧಿಸಲಾಗಿತ್ತು. 2008ರಲ್ಲಿ ಬಿಡುಗಡೆಗೊಂಡ ಆತ ಮತ್ತೆ ಉಗ್ರ ಸಂಘಟನೆ ಸೇರಿದ್ದ.

ಜಮ್ಮುವಿನಲ್ಲಿ 15 ಸಿಐಎಸ್‌ಎಫ್ ಸಿಬ್ಬಂದಿ ಹೊತ್ತೊಯ್ಯುತ್ತಿದ್ದ ಬಸ್‌ ಮೇಲೆ ಉಗ್ರರ ದಾಳಿ ಜಮ್ಮುವಿನಲ್ಲಿ 15 ಸಿಐಎಸ್‌ಎಫ್ ಸಿಬ್ಬಂದಿ ಹೊತ್ತೊಯ್ಯುತ್ತಿದ್ದ ಬಸ್‌ ಮೇಲೆ ಉಗ್ರರ ದಾಳಿ

ಜಮ್ಮು ಮತ್ತು ಕಾಶ್ಮೀರದ ಟಾಪ್ 10 ಉಗ್ರರ ಪಟ್ಟಿಯಲ್ಲಿದ್ದ ಯೂಸೂಫ್ ಕಾಂಥ್ರೋನನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿದೆ. ಹತ್ಯೆಯಾದ ಉಳಿದ ಉಗ್ರರ ಗುರುತು ಇನ್ನೂ ಪತ್ತೆಯಾಗಿಲ್ಲ.

ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 24ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ. ಈ ಹಿನ್ನಲೆಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಇಂತಹ ಸಮಯದಲ್ಲಿಯೇ ಉಗ್ರರು ಒಳನುಸುಳಿದ್ದಾರೆ. ಯೋಧರು ಸಾಗುತ್ತಿದ್ದ ಬಸ್ ಮೇಲೆ ಸಹ ಶುಕ್ರವಾರ ಉಗ್ರರು ದಾಳಿ ಮಾಡಿದ್ದಾರೆ.

English summary
Jammu and Kashmir police said that in Baramulla encounter so far four terrorists were killed. Operation underway.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X