ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಧಾರಿತ ಸ್ಫೋಟಕ ನಿಷ್ಕ್ರಿಯಗೊಳಿಸಲು ಹೋಗಿ ಸೇನಾಧಿಕಾರಿ ಹುತಾತ್ಮ

|
Google Oneindia Kannada News

ಜಮ್ಮು ಕಾಶ್ಮೀರ, ಫೆಬ್ರವರಿ 16 : ಮೊನ್ನೆಯಷ್ಟೆ ಪುಲ್ವಾಮಾದಲ್ಲಿ ಉಗ್ರರು ಭಾರತೀಯ ಸೇನೆ ಮೇಲೆ ಬಾಂಬ್‌ ದಾಳಿ ನಡೆಸಿದ್ದರೆ ಇಂದು ಸುಧಾರಿತ ಸ್ಫೋಟಕ ಸಿಡಿದು ಮೇಜರ್ ಚಿತ್ರೇಶ್ ಸಿಂಗ್ ಬಿಶ್ಟ್ ಹುತಾತ್ಮರಾಗಿದ್ದಾರೆ.

ಹುತಾತ್ಮ ಯೋಧರ ಕುಟುಂಬದ ಹೃದಯ ಹಿಂಡುವ ಚಿತ್ರಗಳುಹುತಾತ್ಮ ಯೋಧರ ಕುಟುಂಬದ ಹೃದಯ ಹಿಂಡುವ ಚಿತ್ರಗಳು

ಕಾಶ್ಮೀರ ರಜೋರಿಯಲ್ಲಿ ಗಡಿ ನಿಯಂತ್ರಣಾ ರೇಖೆಯ ಬಳಿ ಉಗ್ರರು ಇರಿಸಿದ್ದ ಸುಧಾರಿತ ಸ್ಫೋಟಕವನ್ನು ನಿಷ್ಕ್ರಿಯಗೊಳಿಸಲು ಹೋಗಿ, ಅದು ಸ್ಫೋಟಗೊಂಡು ಸೇನಾ ಅಧಿಕಾರಿ ಮೇಜರ್ ಚಿತ್ರೇಶ್ ಹುತಾತ್ಮರಾದರು.

ಮಾನವೀಯತೆ ಮರೆತ ರಮ್ಯಾ: ಈ ದುರಂತದಲ್ಲಿಯೂ ರಾಜಕೀಯವೇ?ಮಾನವೀಯತೆ ಮರೆತ ರಮ್ಯಾ: ಈ ದುರಂತದಲ್ಲಿಯೂ ರಾಜಕೀಯವೇ?

ಮೇಜರ್ ರ‍್ಯಾಂಕ್ ಇರುವ ಆ ಸೇನಾಧಿಕಾರಿ ಕೋರ್ ಆಫ್ ಇಂಜಿನಿಯರ್ಸ್ ಗೆ ಸೇರಿದ್ದು, ರಾಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್ ನಲ್ಲಿ ಗಡಿ ನಿಯಂತ್ರಣಾ ರೇಖೆಯೊಳಗೆ 1.5 ಕಿ.ಮೀ. ದೂರದಲ್ಲಿ ಇರಿಸಲಾಗಿದ್ದ ಸುಧಾರಿತ ಸ್ಫೋಟಕವನ್ನು ನಿಷ್ಕ್ರಿಯಗೊಳಿಸುವಾಗ ಈ ದುರ್ಘಟನೆ ನಡೆದಿದೆ.

Attack on Indian army in Jammu Kashmirs Rajori

ಬಾಂಬ್ ನಿಷ್ಕ್ರಿಯ ದಳದ ಮುಖಂಡರಾಗಿದ್ದ ಮೇಜರ್ ಚಿತ್ರೇಶ್ ಅವರು ಒಂದು ಸುಧಾರಿತ ಬಾಂಬ್ ಅನ್ನು ನಿಷ್ಕ್ರಿಯಗೊಳಿಸಿದ್ದರು. ಎರಡನೇ ಬಾಂಬ್ ಅನ್ನು ನಿಷ್ಕ್ರಿಯಗೊಳಿಸುವಾಗ ಸಿಡಿದೆ. ತೀವ್ರವಾಗಿ ಗಾಯಗೊಂಡ ಅವರು ಕೊನೆಯುಸಿರೆಳೆದರು.

ಫೆಬ್ರವರಿ 14 ರಂದು ಕಾಶ್ಮೀರದ ಪುಲ್ವಾಮಾನದಲ್ಲಿ ಉಗ್ರರು ಸಿಆರ್‌ಪಿಎಫ್ ಜವಾನರು ಸಂಚರಿಸುತ್ತಿದ್ದ ಬಸ್‌ಗೆ ಸ್ಪೋಟಕ ತುಂಬಿದ್ದ ಸ್ಕಾರ್ಪಿಯೋ ಗುದ್ದಿಸಿ 49 ಸೈನಿಕರನ್ನು ಬಲಿ ಪಡೆದಿದ್ದಾರೆ.

Attack on Indian army in Jammu Kashmirs Rajori

ನಮ್ಮ ದೇಶದೊಳಗಿರುವ 'ಪಾಕಿಸ್ತಾನಿ'ಗಳನ್ನು ಮೊದಲು ಹೊರಗಟ್ಟಬೇಕಿದೆನಮ್ಮ ದೇಶದೊಳಗಿರುವ 'ಪಾಕಿಸ್ತಾನಿ'ಗಳನ್ನು ಮೊದಲು ಹೊರಗಟ್ಟಬೇಕಿದೆ

ಈ ನಡುವೆ ಪಾಕಿಸ್ತಾನವು ಕದನ ವಿರಾಮ ಉಲ್ಲಂಘಿಸಿರುವುದು ಈಗಾಗಲೇ ಪಾಕಿಸ್ತಾನದ ಮೇಲೆ ಪ್ರತೀಕಾರಕ್ಕೆ ಹಾತೊರೆಯುತ್ತಿರುವ ಭಾರತೀಯ ಸೇನೆಗೆ ಪ್ರಚೋದನೆ ನೀಡಿದೆ.

English summary
Major Chitresh Singh Bisht from Dehradun, Uttarakhand, who lost his life today while defusing an IED which had been planted by terrorists across the LoC in Naushera sector,Rajouri. During sanitisation of track in Naushera Sector.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X