• search
  • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭದ್ರತಾ ಪಡೆಯ ಭಯದಿಂದ ಉಗ್ರರು ನೇಮಕಾತಿ ಹೇಗೆ ಮಾಡಿದ್ದಾರೆ ಗೊತ್ತಾ?

|
Google Oneindia Kannada News

ಶ್ರೀನಗರ,ಜನವರಿ 04: ಉಗ್ರರಿಗೆ ಜಮ್ಮು ಮತ್ತು ಕಾಶ್ಮೀರ ಭದ್ರತಾ ಪಡೆಗಳ ಭಯವಿದ್ದು, ಉಗ್ರರ ನೇಮಕಾತಿಯನ್ನು ಆನ್‌ಲೈನ್ ಮೂಲಕ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಉಗ್ರರ ದಮನ ಮಾಡುತ್ತಿದ್ದು, ಭಯೋತ್ಪಾದನೆ ಮಾಡುತ್ತಿದ್ದವರಿಗೇ ಈಗ ಭಯ ಎದುರಾಗಿದೆ.

ಮುಂಬೈ ದಾಳಿ ಮಾಸ್ಟರ್ ಮೈಂಡ್ ಲಖ್ವಿ ಬಂಧನಮುಂಬೈ ದಾಳಿ ಮಾಸ್ಟರ್ ಮೈಂಡ್ ಲಖ್ವಿ ಬಂಧನ

ಜಮ್ಮು ಕಾಶ್ಮೀರ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಉಗ್ರರರನ್ನು ಹತ್ಯೆಗೈಯುತ್ತಿರುವ ಭದ್ರತಾ ಪಡೆಗಳು ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಹೊಸ ಉಗ್ರರನ್ನು ನೇಮಕಾತಿ ಮಾಡಿಕೊಳ್ಳುವುದಕ್ಕೆ ಪಾಕಿಸ್ತಾನದ ಗುಪ್ತಚರ ಇಲಾಖೆ ಹಾಗೂ ಭಯೋತ್ಪಾದಕ ಸಂಘಟನೆಗಳಿಗೆ ಕಷ್ಟವಾಗುತ್ತಿದ್ದು, ಆನ್ ಲೈನ್ ಮೂಲಕ ನೇಮಕಾತಿ ಮಾಡಿಕೊಳ್ಳುವುದಕ್ಕೆ ಪ್ರಾರಂಭಿಸಿದ್ದಾರೆ.

ಫೇಸ್‌ಬುಕ್ ಮೂಲಕ ಪಾಕಿಸ್ತಾನಿ ಏಜೆಂಟರ ಸಂಪರ್ಕ

ಫೇಸ್‌ಬುಕ್ ಮೂಲಕ ಪಾಕಿಸ್ತಾನಿ ಏಜೆಂಟರ ಸಂಪರ್ಕ

ಈ ಇಬ್ಬರೂ ಉಗ್ರರು ಫೇಸ್ ಬುಕ್ ಮೂಲಕ ಪಾಕಿಸ್ತಾನಿ ಏಜೆಂಟ್ ನ್ನು ಸಂಪರ್ಕಿಸಿ ಉಗ್ರ ಸಂಘಟನೆ ಸೇರಿದ್ದರು, ಈ ರೀತಿ ಸೇರುವ ಯುವಕರಿಂದ ಯೂಟ್ಯೂಬ್ ಬಳಸಿಕೊಂಡೂ ತರಬೇತಿ ನೀಡಲಾಗುತ್ತದೆ ಎಂದು ಉಗ್ರರು ಬಾಯ್ಬಿಟ್ಟಿದ್ದಾರೆ.

2 ಡಜನ್‌ಗಳಿಗಿಂತಲೂ ಹೆಚ್ಚು ಟೆರರ್ ಮಾಡ್ಯೂಲ್‌ಗಳ ಪತ್ತೆ

2 ಡಜನ್‌ಗಳಿಗಿಂತಲೂ ಹೆಚ್ಚು ಟೆರರ್ ಮಾಡ್ಯೂಲ್‌ಗಳ ಪತ್ತೆ

2020 ರಲ್ಲಿ 2 ಡಜನ್ ಗಿಂತಲೂ ಹೆಚ್ಚು ಟೆರರ್ ಮಾಡ್ಯೂಲ್ ಗಳನ್ನು ಭದ್ರತಾ ಪಡೆಗಳು ಪತ್ತೆ ಹಚ್ಚಿದ್ದವು ಹಾಗೂ 40 ಕ್ಕೂ ಹೆಚ್ಚು ಉಗ್ರರ ಬೆಂಬಲಿಗರನ್ನು ಬಂಧಿಸಲಾಗಿತ್ತು. ಈ ಪೈಕಿ ಶರಣಾಗತರಾಗಿದ್ದ ಇಬ್ಬರು ಭಯೋತ್ಪಾದಕರು, ತಾವರ್ ವಾಘೆ, ಅಮೀರ್ ಅಹ್ಮದ್ ಮಿರ್ ಎಂಬುವವರು ತಾವು ಉಗ್ರ ಸಂಘಟನೆ ಸೇರಿದ್ದರ ಬಗ್ಗೆ ಮಾಹಿತಿ ನೀಡುತ್ತಾ, ಯುವಕರನ್ನು ನೇಮಕಾತಿ ಮಾಡದೇ ಸೈಬರ್ ಮೂಲಕ ಸಂಪರ್ಕಿಸಿ ಉಗ್ರ ಸಂಘಟನೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ನೇಮಕಾತಿ ಮಾಡಿಕೊಳ್ಳುತ್ತಿರುವುದರ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಸಂಘಟನೆ ನೇರವಾಗಿ ಅವರನ್ನು ಭೇಟಿ ಮಾಡುತ್ತಿತ್ತು

ಸಂಘಟನೆ ನೇರವಾಗಿ ಅವರನ್ನು ಭೇಟಿ ಮಾಡುತ್ತಿತ್ತು

ಈ ಹಿಂದೆ ಉಗ್ರ ಸಂಘಟನೆಗಳಿಗೆ ಯುವಕರನ್ನು ಸೇರಿಸಿಕೊಳ್ಳುವುದಕ್ಕೆ ಉಗ್ರ ಸಂಘಟನೆಯವರು ನೇರವಾಗಿ ಅವರನ್ನು ಭೇಟಿ ಮಾಡುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಇಂತಹವರನ್ನೂ ಸೇರಿದಂತೆ ಉಗ್ರರು, ಉಗ್ರರ ಬೆಂಬಲಿಗರನ್ನೂ ಸೇನೆ ನಿರ್ದಯವಾಗಿ ಹೆಡೆಮುರಿಕಟ್ಟಲು ಪ್ರಾರಂಭಿಸಿರುವ ಹಿನ್ನೆಲೆಯಲ್ಲಿ ಈಗ ಉಗ್ರ ಸಂಘಟನೆಗಳೂ ತಮ್ಮ ಕಾರ್ಯಶೈಲಿಯನ್ನು ಬದಲಿಸಿವೆ

ನಕಲಿ ವಿಡಿಯೋಗಳ ರವಾನೆ

ನಕಲಿ ವಿಡಿಯೋಗಳ ರವಾನೆ

ಪಾಕಿಸ್ತಾನದ ಐಎಸ್ಐ ಹ್ಯಾಂಡ್ಲರ್ ಗಳು ಹೊಸದಾಗಿ ನೇಮಕಗೊಂಡಿರುವವರಲ್ಲಿ ಭಯೋತ್ಪಾದನೆಗೆ ಪ್ರಚೋದಿಸುವುದಕ್ಕಾಗಿ ಸುಳ್ಳು ಮಾಹಿತಿಯನ್ನು ಹಂಚುತ್ತಿದ್ದು, ಸ್ಥಳೀಯರ ವಿರುದ್ಧ ಸೇನೆ ದೌರ್ಜನ್ಯವೆಸಗುತ್ತಿರುವಂತಿರುವ ನಕಲಿ ವಿಡಿಯೋಗಳನ್ನೂ ಸೃಷ್ಟಿಸುತ್ತಿದೆ ಎಂದು ಭದ್ರತಾಪಡೆ ಅಧಿಕಾರಿಗಳು ಹೇಳಿದ್ದಾರೆ.

English summary
Pakistan's intelligence agency and terror groups are now carrying out recruitment in Jammu and Kashmir using applications in cyber and mobile space as direct physical interactions have become difficult due to the security forces' hawk-eyed vigil, officials said on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X