ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದೆಂಥ ನ್ಯಾಯ? ಮೊಬೈಲ್ ಸೇವೆಯೇ ಇಲ್ದಿದ್ರೂ ಬಿಲ್ ಕಟ್ಬೇಕು!

By ಅಭಿಮುಖಿ ಬೆಂಗಳೂರು
|
Google Oneindia Kannada News

ಶ್ರೀನಗರ, ಅಕ್ಟೋಬರ್ 14: ಅಕ್ಷರಶಃ ದ್ವೀಪದಂತೆ ಬದುಕಿದ್ದ ಕಾಶ್ಮೀರಿಗಳ ಪಾಲಿಗೆ ನಿನ್ನೆ ಮೊಬೈಲ್ ಸೇವೆ ಯಥಾಸ್ಥಿತಿಗೆ ಮರಳಿದ್ದು ಹರ್ಷ ಪಡುವ ವಿಷಯವಾಗಿರಲಿಲ್ಲ... ಯಾಂಕಂದ್ರೆ ಎರಡು ತಿಂಗಳಗಳ ಕಾಲ ತಾವು ಉಪಯೋಗಿಸದ ಮೊಬೈಲ್ ಸೇವೆಗಾಗಿ ಸಾವಿರಾರು ರೂಪಾಯಿ ಬಿಲ್ ಕಟ್ಟಬೇಕಾದ ಅರ್ಥವಾಗದ ಸ್ಥಿತಿಯಲ್ಲಿ ಅವರಿದ್ದರು.

ಹೌದು, ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದು, ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿದ ಸರ್ಕಾರದ ನಿರ್ಧಾರದಿಂದಾಗಿ ಕಾಶ್ಮೀರದ ಜನಸಾಮಾನ್ಯರು ಪರದಾಡಿದ್ದು ಅಷ್ಟಿಷ್ಟಲ್ಲ!

72 ದಿನಗಳ ನಂತರ ಜಮ್ಮು ಕಾಶ್ಮೀರದಲ್ಲಿ ಮೊಬೈಲ್ ಸೇವೆ ಪ್ರಾರಂಭ72 ದಿನಗಳ ನಂತರ ಜಮ್ಮು ಕಾಶ್ಮೀರದಲ್ಲಿ ಮೊಬೈಲ್ ಸೇವೆ ಪ್ರಾರಂಭ

ಈ ಕುರಿತಂತೆ 'ದಿ ಕ್ವಿಂಟ್' ಹಲವು ಕಾಶ್ಮೀರಿಗಳನ್ನು ಮಾತನಾಡಿಸಿತು. ಅದಕ್ಕೆ ಉತ್ತರಿಸಿ, ಆಕ್ರೋಶ ವ್ಯಕ್ತಪಡಿಸಿದ ಜನ, 70 ಕ್ಕೂ ಹೆಚ್ಚು ದಿನಗಳ ಕಾಲ ಮೊಬೈಲ್ ಸೇವೆಯೇ ಇಲ್ಲದೆ ಕಳೆದ ನಾವು, ಈಗ ಅದಕ್ಕೆ ಬಿಲ್ ಕಟ್ಟಬೇಕು ಎಂದರೆ ಹೇಗೆ ಸಾಧ್ಯ? ಎಂದು ಪ್ರಶ್ನಿಸುತ್ತಿದ್ದಾರೆ.

Article 370: Kashmiris asked to Pay Postpaid Phone bills

ಸೋಮವಾರದಿಂದ 40 ಲಕ್ಷಕ್ಕೂ ಹೆಚ್ಚು ಮೊಬೈಲ್ ಫೋನ್ ಗಳನ್ನು ಸೇವೆಗೆ ಮುಕ್ತಗೊಳಿಸಲಾಗಿತ್ತು. ಆದರೆ ಸದ್ಯ ಮೊಬೈಲ್ ಸೇವೆ ಪುನರಾರಂಭವಾಯ್ತು ಎಂದು ಖುಷಿ ಪಡುವ ಮೊದಲೇ ಎಲ್ಲರ ಫೋನಿಗೂ ಮೆಸೇಜ್ ಗಳು ಬಂದಿದ್ದವು. ನಿಮ್ಮ ಮೊಬೈಲ್ ಸೇವೆಯನ್ನು ಪುನರಾರಂಬಿಸಲು ಎಡು ತಿಂಗಳ ಬಿಲ್ ಪಾವತಿಸಿ ಎಂಬ ಮೆಸೇಜ್ ಗಳನ್ನು ನೋಡಿ ಗ್ರಾಹಕರು ಹೌಹಾರಿದರು. ಎರಡು ತಿಂಗಳ ಕಾಲ ಮೊಬೈಲ್ ಸಂಪರ್ಕವೇ ಇಲ್ಲದೆ, ಮೊಬೈಲ್ ಬಿಲ್ ಬರುವುದಕ್ಕೆ ಹೇಗೆ ಸಾಧ್ಯ ಎಂಬುದು ಜನರ ಪ್ರಶ್ನೆ.

ಈ ಕುರಿತು ಸಾವಿರಾರು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಜನರ ಆಕ್ರೋಶಕ್ಕೆ ಬಗ್ಗದ ಮೊಬೈಲ್ ಕಂಪನಿಗಳು ಮೊದಲು ಬಿಲ್ ಕಟ್ಟಿ, ನಂತರ ಪ್ರತಿಭಟನೆ ಮಾಡಿ ಎನ್ನುತ್ತಿವೆ!

ಇಂದಿನಿಂದ ಜಮ್ಮು-ಕಾಶ್ಮೀರ ಪ್ರವಾಸಿಗರಿಗೆ ಮುಕ್ತಇಂದಿನಿಂದ ಜಮ್ಮು-ಕಾಶ್ಮೀರ ಪ್ರವಾಸಿಗರಿಗೆ ಮುಕ್ತ

ಆಗಸ್ಟ್ 5 ರಂದು ಕೇಂದ್ರ ಸರ್ಕಾರವು ಭಾರತದ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿ, ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿತ್ತು. ಜಮ್ಮು-ಕಾಶ್ಮೀರ ಮತ್ತು ಲಡಾಖ್ ಅನ್ನು ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಘೋಷಿಸಿತ್ತು.

English summary
Two Months After Scrapping of Article 370, Kashmiris asked to Pay Postpaid Phone bills.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X