ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದಿಂದ ಕದಮ ವಿರಾಮ ಉಲ್ಲಂಘನೆ: ಓರ್ವ ಯೋಧ ಹುತಾತ್ಮ

|
Google Oneindia Kannada News

ಇಸ್ಲಾಮಾಬಾದ್,ಸೆಪ್ಟೆಂಬರ್ 02: ಪಾಕಿಸ್ತಾನವು ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಭಾರತೀಯ ಸೇನೆಯ ಜ್ಯೂನಿಯರ್ ಕಮಿಷನ್ಡ್ ಆಫೀಸರ್ ಹುತಾತ್ಮರಾಗಿದ್ದಾರೆ.

Recommended Video

China ತನ್ನ ವಾಯು , ನೌಕಾ ಪಡೆಯನ್ನು ದ್ವಿಗುಣಗೊಳಿಸುತ್ತಿರುವುದೇಕೆ | Oneindia Kannada

ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಬುಧವಾರ ಘಟನೆ ಸಂಭವಿಸಿದೆ. ರಜೌರಿಯ ಕೆರಿ ಪ್ರದೇಶದಲ್ಲಿ ಜೆಸಿಒ ರಾಜೇಶ್ ಕುಮಾರ್ ಸಾವನ್ನಪ್ಪಿದ್ದಾರೆ. ಕಳೆದ ಮೂರು ದಿನಗಳ ಹಿಂದಷ್ಟೇ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿತ್ತು.

ಭಾರತ-ಪಾಕಿಸ್ತಾನ ಗಡಿಯಲ್ಲಿ ಸುರಂಗ ಪತ್ತೆ ಹಚ್ಚಿದ ಯೋಧರುಭಾರತ-ಪಾಕಿಸ್ತಾನ ಗಡಿಯಲ್ಲಿ ಸುರಂಗ ಪತ್ತೆ ಹಚ್ಚಿದ ಯೋಧರು

ಪಾಕಿಸ್ತಾನವು ಕಲ್ಸಿಯಾನ್, ಭವಾನಿ, ನೌಷೆರಾ ಪ್ರದೇಶವನ್ನು ಗುರಿಯಾಗಿಸಿಕೊಂಡಿತ್ತು. ಅಲ್ಲಿಯೇ ಜೆಸಿಒ ಮೇಲೆ ಗುಂಡಿನ ದಾಳಿ ನಡೆದಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಯಾವುದೇ ಪ್ರಯೋಜನವಾಗಿಲ್ಲ.

Army JCO Killed In Pakistan Ceasefire

ಭಾರತ-ಪಾಕಿಸ್ತಾನ ಗಡಿಯಲ್ಲಿ ಬಿಎಸ್‌ಎಫ್ ಯೋಧರು ಸುರಂಗವನ್ನು ಪತ್ತೆ ಹಚ್ಚಿದ್ದರು.ಸಾಂಭಾ ಜಿಲ್ಲೆಯಲ್ಲಿ ಈ ಸುರಂಗ ಕಂಡು ಬಂದಿದೆ. ಸುರಂಗವು 25 ಅಡಿ ಆಳವಿದ್ದು, 150 ಮೀಟರ್ ಅಷ್ಟು ಉದ್ದವಿದೆ. ಮರಳು ಚೀಲ ಹಾಗೂ ಕರಾಚಿ, ಶಕ್ಕೇರ್‌ಗಢದ ಕೆಲವು ಮಾರ್ಕಿಂಗ್‌ಗಳು ಲಭ್ಯವಾಗಿವೆ.

ಇಂತಹ ಸುರಂಗದಿಂದ ಉಗ್ರರು ಒಳನುಸುಳುವ ಸಾಧ್ಯತೆ ಇರುವುದರಿಂದ ಸುತ್ತಮಮುತ್ತಲಿನ ಪ್ರದೇಶದಲ್ಲಿ ಕಾರ್ಯಾಚರಣೆ ಕೈಗೊಂಡಿದ್ದಾರೆ. ಜಮ್ಮುವಿನ ಬಳಿ ಇದಕ್ಕೂ ಮೊದಲು ಕೂಡ ಒಂದು ಸುರಂಗ ಪತ್ತೆಯಾಗಿತ್ತು.

2012ರಲ್ಲಿ ಬಿಎಸ್‌ಎಫ್ ಯೋಧರು 400 ಮೀಟರ್ ಉದ್ದದ ಸುರಂಗವನ್ನು ಪತ್ತೆ ಹಚ್ಚಿದ್ದರು. 2014ರಲ್ಲಿ ಪಲನ್‌ವಾಲಾ ಸೆಕ್ಟರ್ ಬಳಿ ಕೂಡ ಇಂತದ್ದೇ ಸುರಂಗ ಪತ್ತೆಯಾಗಿತ್ತು.

English summary
A Junior Commissioned Officer (JCO) of the Indian Army was killed in firing by Pakistani troops along the Line of Control in the Rajouri sector in Jammu and Kashmir Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X