ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು ಕಾಶ್ಮೀರದಲ್ಲಿ ಸೈನಿಕ ಅಪಹರಣವಾಗಿಲ್ಲ : ರಕ್ಷಣಾ ಸಚಿವಾಲಯ ಸ್ಪಷ್ಟನೆ

|
Google Oneindia Kannada News

ಶ್ರೀನಗರ, ಮಾರ್ಚ್ 09 : ಜಮ್ಮು ಮತ್ತು ಕಾಶ್ಮೀರದ ಬಡ್ಗಾಮ್ ನಲ್ಲಿ ಭಾರತೀಯ ಸೇನೆಯ ಜವಾನನೊಬ್ಬನನ್ನು ಉಗ್ರರು ಶುಕ್ರವಾರ ಸಂಜೆ ಅಪಹರಿಸಿದ್ದಾರೆ ಎಂಬ ಸುದ್ದಿ ಸರಿಯಲ್ಲ ಎಂದು ಕೇಂದ್ರ ರಕ್ಷಣಾ ಇಲಾಖೆ ಸ್ಪಷ್ಟಪಡಿಸಿದೆ.

ಬಡ್ಗಾಮ್ ಜಿಲ್ಲೆಯ ಕಾಜಿಪೋರಾ ಚಂದೂರಾ ಎಂಬಲ್ಲಿರುವ ಮೊಹಮ್ಮದ್ ಯಾಸೀನ್ ಭಟ್ ಅವರು ತಿಂಗಳ ರಜಾಕ್ಕೆಂದು ತಮ್ಮ ಗ್ರಾಮಕ್ಕೆ ಬಂದಿದ್ದರು. ಆಗ ಅವರನ್ನು ಅಪಹರಿಸಲಾಗಿದೆ ಎಂಬ ಸುದ್ದಿ ಹಬ್ಬಿತ್ತು.

ಗ್ರೆನೇಡನ್ನು ಲಂಚ್ ಬಾಕ್ಸಲ್ಲಿ ಅನ್ನದ ಕೆಳಗೆ ಬಚ್ಚಿಟ್ಟಿದ್ದ ಉಗ್ರ ಬಾಲಕಗ್ರೆನೇಡನ್ನು ಲಂಚ್ ಬಾಕ್ಸಲ್ಲಿ ಅನ್ನದ ಕೆಳಗೆ ಬಚ್ಚಿಟ್ಟಿದ್ದ ಉಗ್ರ ಬಾಲಕ

ಪುಲ್ವಾಮಾದಲ್ಲಿ ಭೀಕರ ಹತ್ಯಾಕಾಂಡ ನಡೆದ ನಂತರ ತ್ವೇಷಮಯ ಪರಿಸ್ಥಿತಿ ಇದ್ದು, ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ. ಯಾವ ಸುದ್ದಿಯನ್ನೂ ಹಗುರವಾಗಿ ತೆಗೆದುಕೊಳ್ಳುವಂತಿಲ್ಲ.

Army jawan kidnapped by terrorists in Jammu and Kashmir

ಕಳೆದ ವರ್ಷದ ಜೂನ್ ನಲ್ಲಿ ಕೂಡ 44 ರಾಷ್ಟ್ರೀಯ ರೈಫಲ್ ನ ರೈಫಲ್ ಮ್ಯಾನ್ ಔರಂಗಜೇಬ್ ಅವರನ್ನು ಉಗ್ರರು ಅಪಹರಿಸಿದ್ದರು ನಂತರ ಹತ್ಯೆಗೈದಿದ್ದರು. ಈ ಘಟನೆ ಕೂಡ ಪುಲ್ವಾಮಾದಲ್ಲಿಯೇ ನಡೆದಿತ್ತು.

ಜಮ್ಮುನಲ್ಲಿ ಗ್ರೆನೇಡ್ ಎಸೆದವ ಹಿಜ್ಬುಲ್ ಮುಜಾಹಿದ್ದಿನ್ ಉಗ್ರ ಯಾಸಿರ್ ಭಟ್ಜಮ್ಮುನಲ್ಲಿ ಗ್ರೆನೇಡ್ ಎಸೆದವ ಹಿಜ್ಬುಲ್ ಮುಜಾಹಿದ್ದಿನ್ ಉಗ್ರ ಯಾಸಿರ್ ಭಟ್

ಎರಡು ದಿನಗಳ ಹಿಂದೆ 15 ವರ್ಷದ ವಿದ್ಯಾರ್ಥಿಯೊಬ್ಬ ಜಮ್ಮುವಿನಲ್ಲಿ ಗ್ರೆನೇಡ್ ಎಸೆದು ಮೂವರನ್ನು ಹತ್ಯೆಗೈದು 29 ಜನರನ್ನು ಗಾಯಗೊಳಿಸಿದ್ದ. ತನ್ನ ಊಟದ ಡಬ್ಬಿಯಲ್ಲಿ ಗ್ರೆನೇಡ್ ಇಟ್ಟುಕೊಂಡು ಆ ವಿದ್ಯಾರ್ಥಿ ಈ ಕೆಲಸ ಮಾಡಿದ್ದ.

English summary
Defence Ministry: Media reports of the abduction of a serving Army soldier(Mohammad Yaseen) on leave from Qazipora, Chadoora, Budgam(J&K) are incorrect. Individual is safe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X