ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಶ್ಮೀರದ ಶಾಂತಿ ಕದಡಿದರೆ ಅಷ್ಟೇ! ಪಾಕ್ ಗೆ ಭಾರತದ ಎಚ್ಚರಿಕೆ

|
Google Oneindia Kannada News

ನವದೆಹಲಿ, ಆಗಸ್ಟ್ 09: "ಪಾಕಿಸ್ತಾನವೇನಾದರೂ ಭಾರತದ ಕಾಶ್ಮೀರದಲ್ಲಿ ಶಾಂತಿ ಕದಡಲು ಪ್ರಯತ್ನಿಸಿದರೆ ಪರಿಣಾಮ ಎದುರಿಸಬೇಕಾದೀತು" ಎಂಬ ಖಡಕ್ ಎಚ್ಚರಿಕೆಯನ್ನು ಪಾಕಿಸ್ತಾನಕ್ಕೆ ಭಾರತೀಯ ಸೇನೆ ನೀಡಿದೆ.

ಚಿನ್ನಾರ್ ಕ್ರಾಪ್ಸ್ ಕಮಾಂಡರ್ ಲೆ.ಜ.ಕೆಜೆಎಸ್ ದಿಲ್ಲಾನ್ ಅವರು ಸಂದರ್ಶನವೊಂದರಲ್ಲಿ ಮಾತನಾಡುತ್ತ, ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದರು.

"ಸೇ ನೋ ಟು ಇಂಡಿಯಾ" ಪಾಕಿಸ್ತಾನದ ಹೊಸ ಘೋಷವಾಕ್ಯ!

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370 ನೇ ವಿಧಿಯನ್ನು ಭಾರತ ಸರ್ಕಾರ ರದ್ದುಗೊಳಿಸಿದ ನಂತರ ಪಾಕ್ ರಾಜಕೀಯ ಮುಖಂಡರು ಮತ್ತು ಸೇನೆ ಭಾರತಕ್ಕೆ ಬೆದರಿಕೆ ನೀಡುತ್ತಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಅವರು ಈ ರೀತಿ ಎಚ್ಚರಿಕೆ ನೀಡಿದ್ದಾರೆ.

Anybody Trying To Disrupt Peace In Kashmir Will Be Eliminated: Indian Army

"ಪಾಕಿಸ್ತಾನ ಮತ್ತು ಅದರ ಸೇನೆ ಕಣಿವೆಯಲ್ಲಿ ಶಾಂತಿ ಕದಡುವ ಕೆಲಸವನ್ನು ಎಂದಿನಿಂದಲೋ ಮಾಡಿಕೊಂಡು ಬರುತ್ತಿವೆ, ಈಗಲೂ ಅದನ್ನೇ ಮುಂದುವರಿಸುತ್ತಿವೆ. ಇತ್ತೀಚೆಗೆ ಕಣಿವೆಯಲ್ಲಿ ಶಾಂತಿ ಕದಡವು ಬೆದರಿಕೆಗಳು ನೇರವಾಗಿಯೇ ಬರುತ್ತಿವೆ. ಅಕಸ್ಮಾತ್ ಯಾರಾದರೂ ಆ ಕೆಲಸಕ್ಕೆ ಕೈ ಹಾಕಿದ್ದೇ ಆದರೆ ಅಂಥವರನ್ನು ನಾವು ನಾಶ ಮಾಡುತ್ತೇವೆ" ಎಂದು ಅವರು ಸ್ಪಷ್ಟ ಮಾತುಗಳಿಂದ ಹೇಳಿದರು.

ಭಾರತ-ಪಾಕ್ ಉದ್ವಿಗ್ನ: ಚೀನಾಗೆ ದೌಡಾಯಿಸಿದ ಪಾಕ್ ವಿದೇಶಾಂಗ ಸಚಿವ ಭಾರತ-ಪಾಕ್ ಉದ್ವಿಗ್ನ: ಚೀನಾಗೆ ದೌಡಾಯಿಸಿದ ಪಾಕ್ ವಿದೇಶಾಂಗ ಸಚಿವ

"ಪಾಕಿಸ್ತಾನ ಕದನವಿರಾಮ ಉಲ್ಲಂಘಿಸುವ ಕೆಲಸವನ್ನು ಆಗಾಗ ಮಾಡುತ್ತಲೇ ಇದೆ. ಈ ದುಸ್ಸಾಹಸ ಮುಂದುವರಿದರೆ ನಾವೂ ಅದರದೇ ಭಾಷೆಯಲ್ಲಿ ಉತ್ತರಿಸಬೇಕಾಗುತ್ತದೆ" ಎಂದು ದಿಲ್ಲಾನ್ ಹೇಳಿದರು.

English summary
Indian Army warns Pakistan, said, anybody trying to disrupt peace in Kashmir will be eliminated.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X