ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜ. 1ರಂದು 27 ಸಾವಿರ ಭಕ್ತರಿಂದ ಮಾತೆ ವೈಷ್ಣೋ ದೇವಿ ದರ್ಶನ

|
Google Oneindia Kannada News

ಶ್ರೀನಗರ, ಜನವರಿ 02; ಜಮ್ಮು ಮತ್ತು ಕಾಶ್ಮೀರದ ಕತ್ರಾದಲ್ಲಿರುವ ಮಾತಾ ವೈಷ್ಣೋ ದೇವಿ ದೇವಾಲಯದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 12 ಪ್ರವಾಸಿಗರು ಮೃತಪಟ್ಟಿದ್ದಾರೆ. ಜನವರಿ 1ರಂದು 27 ಸಾವಿರ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ.

Recommended Video

ಮಾತಾ ವೈಷ್ಣೋದೇವಿ ಮಂದಿರದಲ್ಲಿ ಕಾಲ್ತುಳಿತದಿಂದ 12 ಭಕ್ತರ ಸಾವು | Oneindia Kannada

ಕಾಲ್ತುಳಿತ ಪ್ರಕರಣ ಬಗ್ಗೆ ತನಿಖೆ ನಡೆಸಲು ತ್ರಿ ಸದಸ್ಯರ ಸಮಿತಿಯನ್ನು ರಚನೆ ಮಾಡಲಾಗಿದೆ. ಒಂದು ವಾರದಲ್ಲಿ ಸಮಿತಿ ತನಿಖೆ ನಡೆಸಿ ವರದಿ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಕಾಲ್ತುಳಿತ ಪ್ರಕರಣದ ಬಳಿಕ ಶಾಂತಿಯುತವಾಗಿ ದರ್ಶನ ನಡೆದಿದೆ.

ವೈಷ್ಣೋ ದೇವಿ ಭಕ್ತರಿಗೆ ಖುಷಿ ಸುದ್ದಿ ನೀಡಿದ ಮೋದಿ ಸರ್ಕಾರ ವೈಷ್ಣೋ ದೇವಿ ಭಕ್ತರಿಗೆ ಖುಷಿ ಸುದ್ದಿ ನೀಡಿದ ಮೋದಿ ಸರ್ಕಾರ

ಜನವರಿ 1 ಹೊಸ ವರ್ಷದಿಂದ 27,000 ಭಕ್ತರು ಮಾತಾ ವೈಷ್ಣೋ ದೇವಿ ದರ್ಶನ ಪಡೆದಿದ್ದಾರೆ ಎಂದು ದೇವಾಲಯದ ವಕ್ತಾರರು ಹೇಳಿದ್ದಾರೆ. ಕಾಲ್ತುಳಿತ ಸಂಭವಿಸಿದ ಬಳಿಕ ದೇವಾಲಯದ ಸಿಬ್ಬಂದಿ, ಜಿಲ್ಲಾಡಳಿತ ತುರ್ತು ರಕ್ಷಣಾ ಕಾರ್ಯಚರಣೆ ಕೈಗೊಂಡಿದ್ದು, ಬಳಿಕ ದೇವಿಯ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಡಲಾಗಿತ್ತು.

 'ನಾನು ಕಾಶ್ಮೀರಿ ಪಂಡಿತ, ಮನೆಯಲ್ಲಿದಂತಹ ಭಾವ': ವೈಷ್ಣೋ ದೇವಿ ದೇಗುಲ ಭೇಟಿ ಬಳಿಕ ರಾಹುಲ್‌ 'ನಾನು ಕಾಶ್ಮೀರಿ ಪಂಡಿತ, ಮನೆಯಲ್ಲಿದಂತಹ ಭಾವ': ವೈಷ್ಣೋ ದೇವಿ ದೇಗುಲ ಭೇಟಿ ಬಳಿಕ ರಾಹುಲ್‌

After Stampede 27,000 Pilgrims Offered Prayers At Mata Vaishno Devi Temple

ಮಾತಾ ವೈಷ್ಣೋ ದೇವಿ ದೇವಾಲಯದ ಬೋರ್ಡ್ ಅಧ್ಯಕ್ಷರೂ ಆಗಿರುವ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಕಾಲ್ತುಳಿತ ಪ್ರಕರಣದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 10 ಲಕ್ಷ ಮತ್ತು ಗಾಯಾಳುಗಳಿಗೆ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.

ಜಮ್ಮು- ಕಾಶ್ಮೀರದ ವೈಷ್ಣೋದೇವಿ ದೇಗುಲದಲ್ಲಿ ಕಾಲ್ತುಳಿತ; 12 ಸಾವು, 14 ಜನಕ್ಕೆ ಗಾಯಜಮ್ಮು- ಕಾಶ್ಮೀರದ ವೈಷ್ಣೋದೇವಿ ದೇಗುಲದಲ್ಲಿ ಕಾಲ್ತುಳಿತ; 12 ಸಾವು, 14 ಜನಕ್ಕೆ ಗಾಯ

ಕಾಲ್ತುಳಿತ ಪ್ರಕರಣದ ಬಳಿಕ ದೇವಾಲಯದ ಪರಿಸ್ಥಿತಿ ಬಗ್ಗೆ ಅವರು ನಿರಂತರ ನಿಗಾವಹಿಸಿದ್ದರು. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಗೊಂಡವರ ಆರೋಗ್ಯ ವಿಚಾರಿಸಿದರು. ಕಾನೂನಿನ ತೊಡಕು ಉಂಟಾಗದಂತೆ ತಕ್ಷಣ ಪರಿಹಾರದ ಹಣ ಬಿಡುಗಡೆ ಮಾಡಬೇಕು ಎಂದು ಸೂಚನೆಯನ್ನು ಅಧಿಕಾರಿಗಳಿಗೆ ನೀಡಿದರು.

ದೇವಾಲಯದಲ್ಲಿ ನಡೆದ ಕಾಲ್ತುಳಿತ ಪ್ರಕರಣದ ಬಗ್ಗೆ ತನಿಖೆ ನಡೆಸಲು ನೇಮಿಸಿರುವ ಸಮಿತಿ ದೇವಾಲಯದ ಸಿಇಓ, ಕತ್ರಾದ ಸಿಆರ್‌ಪಿಎಫ್ ಎಸ್ಪಿ ಸೇರಿದಂತೆ ಹಲವು ಅಧಿಕಾರಿಗಳನ್ನು ಭೇಟಿ ಮಾಡಿ ವಿಡಿಯೋ ಹೇಳಿಕೆಗಳನ್ನು ದಾಖಲು ಮಾಡಿಕೊಂಡಿದೆ.

ಈ ಹಿಂದೆ ನಡೆದ ಕಾಲ್ತುಳಿತ ಪ್ರಕರಣಗಳನ್ನು ಸಹ ಸಮಿತಿ ಪರಿಶೀಲನೆ ನಡೆಸಲಿದೆ. ಬಳಿಕ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಲಿದೆ. ಭವಿಷ್ಯದಲ್ಲಿ ಇಂತಹ ಪ್ರಕರಣಗಳು ನಡೆಯದಂತೆ ಸೂಕ್ತ ಶಿಫಾರಸುಗಳನ್ನು ಸಹ ಸಮಿತಿ ಮಾಡಲಿದೆ.

ವಿಚಾರಣಾ ಸಮಿತಿಯಲ್ಲಿ ಜಮ್ಮು ವಿಭಾಗೀಯ ಆಯುಕ್ತ ರಾಘವ ಲ್ಯಾಂಗರ್ ಮತ್ತು ಜಮ್ಮುವಿನ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಮುಖೇಶ್ ಸಿಂಗ್ ಇದ್ದಾರೆ.

ಯುವಕರ ವಾಗ್ವಾದವೇ ಕಾರಣ?; ಮಾತಾ ವೈಷ್ಣೋ ದೇವಿ ದೇವಾಲಯದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಯುವಕರ ನಡುವೆ ನಡೆದ ವಾಗ್ವಾದವೇ ಕಾರಣ ಎಂದು ಶಂಕಿಸಲಾಗಿದೆ. ಗೇಟ್ ನಂಬರ್ 3ರ ಬಳಿ ಕೆಲವು ಯುವಕರ ನಡುವೆ ವಾಗ್ವಾದ ನಡೆದ ಕೆಲವೇ ನಿಮಿಷಗಳಲ್ಲಿ ಕಾಲ್ತುಳಿತ ಸಂಭವಿಸಿದೆ.

ಘಟನೆ ಬಗ್ಗೆ ಮಾತನಾಡಿರುವ ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್, "ಪೊಲೀಸರು ಮತ್ತು ದೇವಾಲಯದ ಸಿಬ್ಬಂದಿ ತಕ್ಷಣವೇ ಸ್ಪಂದಿಸಿದ್ದಾರೆ. ಆದರೂ ಘಟನೆಯಲ್ಲಿ 12 ಜನರು ಮೃತಪಟ್ಟಿರುದು ದುರಾದೃಷ್ಟಕರ" ಎಂದು ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಕಾತ್ರಾ ಜಿಲ್ಲೆಯ ತ್ರಿಕೂಟಾ ಬೆಟ್ಟದಲ್ಲಿದೆ ಪ್ರಸಿದ್ಧ ಯಾತ್ರಾ ಸ್ಥಳ ವೈಷ್ಣೋ ದೇವಿ ದೇವಾಲಯ. ಕೋವಿಡ್ ಸಂದರ್ಭದಲ್ಲಿ ಬೆಟ್ಟಕ್ಕೆ ಭಕ್ತರ ಪ್ರವೇಶಕ್ಕೆ ನಿಷೇಧ ಹೇರಲಾಗಿತ್ತು. ಬಳಿಕ ಆಗಸ್ಟ್‌ನಲ್ಲಿ ಪುನಃ ದರ್ಶನ ಆರಂಭಿಸಲಾಗಿತ್ತು.

ಶನಿವಾರ ತಡರಾತ್ರಿ 2.45ರ ಸುಮಾರಿಗೆ ಭಕ್ತರ ನಡುವೆ ವಾಗ್ವಾದ ನಡೆದು ಪರಸ್ಪರ ತಳ್ಳಾಟ ನಡೆದಿತ್ತು. ಆಗ ಸಂಭವಿಸಿದ ಕಾಲ್ತುಳಿತದಲ್ಲಿ 12 ಜನರು ಮೃತಪಟ್ಟು 14 ಜನರು ಗಾಯಗೊಂಡಿದ್ದರು. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದರು.

English summary
The Mata Vaishno Devi yatra is going smoothly after stampede. On January 1st 27,000 pilgrims offered prayers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X