ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಶ್ಮೀರದಲ್ಲಿ ಬ್ರಾಡ್‌ಬ್ಯಾಂಡ್ ಸೇವೆ 7 ತಿಂಗಳ ಬಳಿಕ ಪುನರಾರಂಭ

|
Google Oneindia Kannada News

ಶ್ರೀನಗರ, ಮಾರ್ಚ್ 5: ಕಾಶ್ಮೀರದಲ್ಲಿ ಏಳು ತಿಂಗಳ ಬಳಿಕ ಬ್ರಾಡ್‌ಬ್ಯಾಂಡ್ ಸೇವೆ ಪುನರಾರಂಭಗೊಂಡಿದೆ.

ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಸಾಮಾಜಿಕ ಮಾಧ್ಯಮಗಳ ಮೇಲಿನ ನಿಷೇಧವನ್ನು ತೆಗೆದುಹಾಕಿದ ಒಂದು ದಿನದ ನಂತರ ಈ ಇಂಟರ್ ನೆಟ್ ಸೇವೆಗಳು ಪುನರಾರಂಬವಾಗಿದೆ. ಕಣಿವೆಯಲ್ಲಿ ಏಳು ತಿಂಗಳ ಕಾಲ ಜಾರಿಯಲ್ಲಿದ್ದ ಇನ್ಫಾರ್ಮೇಷನ್ ಬ್ಲಾಕೌಟ್ ಈ ಮೂಲಕ ಅಂತ್ಯವಾಗಿದೆ.

ಉಗ್ರರೊಂದಿಗಿನ ಕಾದಾಟದಲ್ಲಿ ಕೋಲಾರ ಯೋಧ ಹುತಾತ್ಮಉಗ್ರರೊಂದಿಗಿನ ಕಾದಾಟದಲ್ಲಿ ಕೋಲಾರ ಯೋಧ ಹುತಾತ್ಮ

ಸೋಶಿಯಲ್ ಮೀಡಿಯಾ ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳನ್ನು ಪ್ರವೇಶಿಸುವ ನಿಷೇಧವನ್ನು ಅಧಿಕಾರಿಗಳು ಬುಧವಾರ ರದ್ದು ಮಾಡಿದ್ದರು. ಮೊಬೈಲ್ ಇಂಟರ್ನೆಟ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಫೇಸ್‌ಬುಕ್ ಮತ್ತು ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ನಂತಹ ಸಾವಿರಾರು ಸೈಟ್‌ಗಳಿಗೆ ಪ್ರವೇಶದ ಮೇಲಿನ ನಿರ್ಬಂಧವನ್ನು ಸರ್ಕಾರ ತೆಗೆದುಹಾಕಿದೆ.

After 7 Months Broadband Internet Service Returns To Jammu And Kashmir

ಇಲ್ತಿಜಾ ಮುಫ್ತಿ, ತನ್ನ ತಾಯಿಯ ಖಾತೆಯಿಂದ ಟ್ವೀಟ್ ಮಾಡಿದ್ದು "ಕಾಶ್ಮೀರಿಗಳ ಮೇಲೆ ಹೇರಲಾಗಿದ್ದ ಇಂಟರ್ನೆಟ್ ನಿಷೇಧದ ಹಿಂದಿನ ನಿರರ್ಥಕತೆಯನ್ನು ಆಡಳಿತವು ಅರಿತುಕೊಂಡಿದೆ ಎಂದು ಹೇಳಿದರು.

ಸಂವಿಧಾನದ 19 ನೇ ಪರಿಚ್ಚೇಧದ ಅಡಿಯಲ್ಲಿ ಇಂಟರ್ನೆಟ್ ಬಳಕೆ ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್ ಜನವರಿಯಲ್ಲಿ ಹೇಳಿದ ನಂತರ ಮೊಬೈಲ್ ಮತ್ತು ಇಂಟರ್ನೆಟ್ ಸೇವೆಗಳ ಮೇಲಿನ ನಿರ್ಬಂಧಗಳನ್ನು ಭಾಗಶಃ ಸಡಿಲಿಸಲಾಗಿತ್ತು.

ಇಂಟರ್ನೆಟ್ ವೇಗದ ಮೇಲೆ ನಿಯಂತ್ರಣ ಹೇರಲಾಗಿದೆ. ಮೊಬೈಲ್ ಡೇಟಾ ಸೇವೆಯನ್ನು 2ಜಿ ಸೇವೆಗಳಿಗೆ ಸೀಮಿತಗೊಳಿಸಲಾಗಿದೆ."ಸರ್ಕಾರವು ನಿಷೇಧವನ್ನು ತೆಗೆದಿದೆ. ಆದರೆ ಕಳೆದ ಕೆಲವು ತಿಂಗಳಿನಿಂದ ಏನು ಬದಲಾವಣೆಗಳಾಗಿದೆ ಎಂದು ನಮಗೆ ತಿಳಿದಿಲ್ಲ.

English summary
After almost seven months, broadband internet service has been restored in Jammu and Kashmir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X