India
 • search
 • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಈಗ ಅಮರನಾಥ ಯಾತ್ರೆಗೆ ಆಧಾರ್‌ ಕಡ್ಡಾಯ

|
Google Oneindia Kannada News

ಶ್ರೀನಗರ, ಜೂ. 14: ಭಾರತೀಯರ ಸುಪ್ರಸಿದ್ಧ ಯಾತ್ರಸ್ಥಳವಾದ ಅಮರನಾಥ ಯಾತ್ರೆಗೆ ಜಮ್ಮು ಕಾಶ್ಮೀರ ಆಡಳಿತವು ಅಧಾರ್‌ ಕಡ್ಡಾಯಗೊಳಿಸಿದೆ. ಹಾಗಾಗಿ ಇನ್ನು ಮೇಲೆ ಅಮರನಾಥ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳು ಆಧಾರ್‌ ದೃಢೀಕರಣ ಮಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ.

ಯಾತ್ರೆ ಕೈಗೊಳ್ಳಲು ಉದ್ದೇಶಿಸಿರುವ ಯಾತ್ರಾರ್ಥಿಗಳು ತಮ್ಮ ಆಧಾರ್ ಕಾರ್ಡ್ ಅನ್ನು ಒದಗಿಸಬೇಕು ಎಂದು ಜಮ್ಮು ಮತ್ತು ಕಾಶ್ಮೀರ ಆಡಳಿತ ಸೋಮವಾರ ಹೇಳಿದೆ. ಉತ್ತಮ ಆಡಳಿತಕ್ಕಾಗಿ ಆಧಾರ್ ದೃಢೀಕರಣ (ಸಾಮಾಜಿಕ ಕಲ್ಯಾಣ, ನಾವೀನ್ಯತೆ, ಜ್ಞಾನ) ನಿಯಮಗಳು 2020 ರ ನಿಯಮ 5 ರ ಅನುಸಾರವಾಗಿ, ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಕೇಂದ್ರ ಸರ್ಕಾರದ ಪೂರ್ವಾನುಮತಿಯೊಂದಿಗೆ ಅಮರನಾಥ ತೀರ್ಥಯಾತ್ರೆ ಕೈಗೊಳ್ಳಲು ಬಯಸುವ ಯಾತ್ರಾರ್ಥಿಗಳಿಗೆ ಈ ಮೂಲಕ ಸೂಚನೆ ನೀಡಿದೆ.

ಅಧಿಕೃತ ಗೆಜೆಟ್‌ನಲ್ಲಿ ಈ ಅಧಿಸೂಚನೆಯನ್ನು ಪ್ರಕಟಿಸಿದ ದಿನಾಂಕದಿಂದ ಆಧಾರ್ ಹೊಂದಿರುವ ಪುರಾವೆಗಳನ್ನು ಒದಗಿಸಬೇಕು. ಇಲ್ಲವೆ ಸ್ವಯಂಪ್ರೇರಿತ ಆಧಾರದ ಮೇಲೆ ಆಧಾರ್ ದೃಢೀಕರಣಕ್ಕೆ ಒಳಗಾಗಬೇಕು ಎಂದು ಸಾಮಾನ್ಯ ಆಡಳಿತ ಇಲಾಖೆ ಹೊರಡಿಸಿದ ಅಧಿಸೂಚನೆಯಲ್ಲಿ ಹೇಳಲಾಗಿದೆ.

   Yogi ಸರ್ಕಾರದ ಬುಲ್ಡೋಜರ್ ಆಟಾಟೋಪಕ್ಕೆ ಬ್ರೇಕ್ ಹಾಕುತ್ತಾ ಹೈಕೋರ್ಟ್ | *Politics | OneIndia Kannada
   ಪ್ರತಿ ಮಾರ್ಗಕ್ಕೆ 10,000 ಯಾತ್ರಾರ್ಥಿಗಳಿಗೆ ಮಾತ್ರ ಅವಕಾಶ

   ಪ್ರತಿ ಮಾರ್ಗಕ್ಕೆ 10,000 ಯಾತ್ರಾರ್ಥಿಗಳಿಗೆ ಮಾತ್ರ ಅವಕಾಶ

   ಹಿಮಾಲಯದ ಗುಹಾ ದೇಗುಲಕ್ಕೆ ಯಾತ್ರೆಯು ಜೂನ್ 30 ರಂದು ಪ್ರಾರಂಭವಾಗಲಿದ್ದು, ಆಗಸ್ಟ್ 11 ರಂದು ಮುಕ್ತಾಯಗೊಳ್ಳಲಿದೆ. ಅಮರನಾಥ ದೇಗುಲ ಮಂಡಳಿಯು ಈ ವರ್ಷ ಮೂರು ಲಕ್ಷಕ್ಕೂ ಹೆಚ್ಚು ಯಾತ್ರಿಕರ ಭೇಟಿ ನೀಡಬಹುದು ಎಂದು ಅಂದಾಜಿಸಲಾಗಿದೆ. ಸದ್ಯ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುವವರನ್ನು ಹೊರತುಪಡಿಸಿ, ಪ್ರತಿ ಮಾರ್ಗದಲ್ಲಿ ದಿನಕ್ಕೆ 10,000 ಯಾತ್ರಾರ್ಥಿಗಳಿಗೆ ಮಾತ್ರ ಈಗ ಅವಕಾಶ ನೀಡಲಾಗುತ್ತಿದೆ.

   ರಕ್ಷಾ ಬಂಧನದ ದಿನದಂದು ಮುಕ್ತಾಯ

   ರಕ್ಷಾ ಬಂಧನದ ದಿನದಂದು ಮುಕ್ತಾಯ

   ಜೂನ್‌ 30ರಂದು ಆರಂಭವಾಗಿರುವ ಅಮರನಾಥ ಯಾತ್ರೆ ಎಲ್ಲಾ ಕೋವಿಡ್ ಪ್ರೋಟೋಕಾಲ್‌ಗಳೊಂದಿಗೆ ಸಂಪ್ರದಾಯದ ಪ್ರಕಾರ ರಕ್ಷಾ ಬಂಧನದ ದಿನದಂದು ಮುಕ್ತಾಯಗೊಳ್ಳುತ್ತದೆ. ಈ ವರ್ಷ ಅಮರನಾಥ ಯಾತ್ರೆ 43 ದಿನಗಳ ಕಾಲ ನಡೆಯಲಿದೆ. ಅಮರನಾಥ ಯಾತ್ರೆಗೆ ನೋಂದಣಿ ಪ್ರಕ್ರಿಯೆಯು ಏಪ್ರಿಲ್‌ನಿಂದಲೇ ಪ್ರಾರಂಭವಾಗಿತ್ತು, ದಿನಕ್ಕೆ 20,000 ನೋಂದಣಿಗಳ ಮಿತಿಯನ್ನು ಇಡಲಾಗಿತ್ತು. ಇದೀಗ ಯಾತ್ರಾರ್ಥಿಗಳಿಗೆ ಆಧಾರ್‌ ಕಾರ್ಡ್‌ನ್ನು ಕಡ್ಡಾಯಗೊಳಿಸಿದೆ.

   ಮಿಲಿಟರಿ ಅಧಿಕಾರಿಗಳೂ ಭಾಗಿ

   ಮಿಲಿಟರಿ ಅಧಿಕಾರಿಗಳೂ ಭಾಗಿ

   ಜಮ್ಮು ಪ್ರದೇಶದ ಹಿರಿಯ ಸೇನಾ ಮತ್ತು ಪೊಲೀಸ್ ಅಧಿಕಾರಿಗಳು ಭದ್ರತಾ ಸಭೆಯಲ್ಲಿ ಪಾಲ್ಗೊಂಡು ಮುಂಬರುವ ಅಮರನಾಥ ಯಾತ್ರೆಯ ಯಶಸ್ಸಿಗೆ ನಾಗರಿಕ ಮತ್ತು ಮಿಲಿಟರಿ ಏಜೆನ್ಸಿಗಳ ನಡುವೆ ಸಂವಾದ ಮತ್ತು ಸಮನ್ವಯಕ್ಕೆ ಕರೆ ನೀಡಿದ ಒಂದು ದಿನದ ನಂತರ ಈ ಪ್ರಕಟಣೆ ಬಂದಿದೆ. ಈ ಸಭೆಯಲ್ಲಿ ಡೋಡಾ, ಕಿಶ್ತವಾರ ಮತ್ತು ರಾಮಬನ್‌ನ ಡಿಐಜಿಗಳು,, ರಾಮಬನ್ ಎಸ್‌ಎಸ್‌ಪಿ, ಎಸ್‌ಎಸ್‌ಪಿ (ಸಂಚಾರ), ಸಹಾಯಕ ಕಮಿಷನರ್ (ಆರ್ & ಎಡಬ್ಲ್ಯೂ) ಮತ್ತು ಪ್ರದೇಶದ ಹಿರಿಯ ಮಿಲಿಟರಿ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು ಎಂದು ವಕ್ತಾರರು ತಿಳಿಸಿದ್ದಾರೆ.

   43 ದಿನಗಳ ಯಾತ್ರೆ

   43 ದಿನಗಳ ಯಾತ್ರೆ

   ಈ ಸಂವಾದವು ಅಮರನಾಥ ಯಾತ್ರೆ ಪ್ರದೇಶದ ಭದ್ರತೆಯ ಮೇಲೆ ಪರಿಣಾಮ ಬೀರುವ ಪರಸ್ಪರ ಹಿತಾಸಕ್ತಿಯ ಪ್ರಮುಖ ವಿಷಯಗಳ ಕುರಿತು ಚರ್ಚೆಗೆ ಅವಕಾಶವನ್ನು ಒದಗಿಸಿದೆ ಎಂದು ಅವರು ಹೇಳಿದರು. ಅಮರನಾಥನ 3,880 ಮೀಟರ್ ಎತ್ತರದ ಪವಿತ್ರ ಗುಹಾ ದೇಗುಲಕ್ಕೆ 43 ದಿನಗಳ ಯಾತ್ರೆಯು ಜೂನ್ 30 ರಂದು ಎರಡು ಮಾರ್ಗಗಳಿಂದ ಪ್ರಾರಂಭವಾಗಲಿದ್ದು, ದಕ್ಷಿಣ ಕಾಶ್ಮೀರದ ಪಹಲ್ಗಾಮ್‌ನ ಸಾಂಪ್ರದಾಯಿಕ 48-ಕಿಮೀ ನುನ್ವಾನ್ ಮಾರ್ಗ ಮತ್ತು 14 ಕಿಮೀ ಚಿಕ್ಕದಾದ ಬಾಲ್ಟಾಲ್ ಮಾರ್ಗ ಮಧ್ಯ ಕಾಶ್ಮೀರದ ಗಂದರ್ಬಾಲ್ ನಡುವೆ ಯಾತ್ರೆ ಸಾಗಲಿದೆ. ಯಾತ್ರಾರ್ಥಿಗಳು ಕಣಿವೆಯಲ್ಲಿರುವ ಬೇಸ್ ಕ್ಯಾಂಪ್‌ಗಳನ್ನು ತಲುಪಲು ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಮಬಾನ್ ಮೂಲಕ ಹಾದು ಹೋಗುತ್ತಾರೆ.

   English summary
   The Jammu and Kashmir administration has made it mandatory for the Amarnath Yatra, a popular pilgrimage site for the Indians. It is therefore mandatory for the pilgrims to undertake the Amarnath Yatra.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X