ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು ಕಾಶ್ಮೀರದಲ್ಲಿ ನಾಗರಿಕರೇ ಟಾರ್ಗೆಟ್: ಗೋಲ್ ಗಪ್ಪಾ ವ್ಯಾಪಾರಿ ಹತ್ಯೆಗೈದ ಉಗ್ರರು

|
Google Oneindia Kannada News

ಶ್ರೀನಗರ್, ಅಕ್ಟೋಬರ್ 16: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರು ನಾಗರಿಕರನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ. ಶನಿವಾರ ಸಂಜೆ ವೇಳೆ ಗೋಲ್ ಗಪ್ಪಾ ಮಾರಾಟಗಾರನನ್ನು ಉಗ್ರರು ಹತ್ಯೆಗೈದಿದ್ದು, ಆತಂಕಕಾರಿ ವಾತಾವರಣ ಸೃಷ್ಟಿಯಾಗಿದೆ. ಕಳೆದ ಎರಡು ವಾರಗಳಲ್ಲಿ 8 ಮಂದಿ ನಾಗರಿಕರನ್ನು ಉಗ್ರರು ಕೊಂದು ಹಾಕಿರುವುದು ವರದಿಯಾಗಿದೆ.
ಜಮ್ಮು ಕಾಶ್ಮೀರದ "ಶ್ರೀನಗರದ ಈದ್ಗಾ ಪ್ರದೇಶದಲ್ಲಿ ಅರವಿಂದ್ ಕುಮಾರ್ ಎಂಬ ಸ್ಥಳೀಯೇತರ ಮಾರಾಟಗಾರನನ್ನು ಭಯೋತ್ಪಾದಕರು ಹತ್ಯೆ ಮಾಡಿದ್ದಾರೆ" ಎಂದು ಹಿರಿಯ ಪೊಲೀಸ್ ಅಧಿಕಾರಿ ಕಾಶ್ಮೀರ ವಿಜಯ್ ಕುಮಾರ್ ಸುದ್ದಿಸಂಸ್ಥೆ ಎಎನ್ಐಗೆ ತಿಳಿಸಿದ್ದಾರೆ. ಭಯೋತ್ಪಾದಕರು ಮಾರಾಟಗಾರನ ಮೇಲೆ ಗುಂಡು ಹಾರಿಸಿದ್ದಾರೆ ಎಂದು ತಿಳಿದು ಬಂದಿದೆ.

ಜಮ್ಮು-ಕಾಶ್ಮೀರದಲ್ಲಿ ನಾಪತ್ತೆಯಾದ ಯೋಧರ ಶೋಧ ಕಾರ್ಯಜಮ್ಮು-ಕಾಶ್ಮೀರದಲ್ಲಿ ನಾಪತ್ತೆಯಾದ ಯೋಧರ ಶೋಧ ಕಾರ್ಯ

ಜಮ್ಮು ಕಾಶ್ಮೀರದ ಶ್ರೀನಗರ್ ನಲ್ಲಿ ಉಗ್ರರಿಂದ ಹತ್ಯೆಗೀಡಾದ ಗೋಲ್ ಗಪ್ಪಾ ವ್ಯಾಪಾರಿ ಅರವಿಂದ್ ಕುಮಾರ್ ಸಾಹ್ ಕುಟುಂಬಕ್ಕೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

ಕಾಶ್ಮೀರದಲ್ಲಿ ಗುರಿಯಾಗಿಸಿಕೊಂಡು ನಡೆಯುತ್ತಿರುವ ನಾಗರಿಕ ಹತ್ಯೆಗಳಿಂದ ಒಂದು ವಾರದ ಹಿಂದೆ ಕಳೆದ ಹಲವು ಶಿಬಿರಗಳಲ್ಲಿ ವಾಸಿಸುತ್ತಿದ್ದ ಹಲವಾರು ಕಾಶ್ಮೀರಿ ಪಂಡಿತರು ರಾಜ್ಯ ತೊರೆಯುವುದಕ್ಕೆ ಪ್ರಮುಖ ಕಾರಣವಾಯಿತು. ಹತ್ತಾರು ಕುಟುಂಬಗಳು - ಕಾಶ್ಮೀರಿ ವಲಸಿಗರಿಗೆ ಪ್ರಧಾನ ಮಂತ್ರಿಗಳ ವಿಶೇಷ ಉದ್ಯೋಗ ಯೋಜನೆಯಡಿ ಕೆಲಸ ನೀಡಿದ ನಂತರ ಕಣಿವೆಗೆ ಮರಳಿದ ಅನೇಕ ಸರ್ಕಾರಿ ಉದ್ಯೋಗಿಗಳು ಸದ್ದಿಲ್ಲದೆ ಜಮ್ಮು ಕಾಶ್ಮೀರವನ್ನು ತೊರೆಯುತ್ತಿದ್ದಾರೆ.

A gol gappa seller Arbind Kumar Sah killed by terrorists in Eidgah area of Srinagar

ಅರವಿಂದ್ ಕುಮಾರ್ ಹತ್ಯೆಗೆ ಖಂಡನೆ:
ಶ್ರೀನಗರದಲ್ಲಿ ನಡೆದ ಭೀಕರ ದಾಳಿಯಲ್ಲಿ ಬೀದಿ ಬದಿ ವ್ಯಾಪಾರಿ ಅರವಿಂದ್ ಕುಮಾರ್ ಹತ್ಯೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಇದು ನಾಗರಿಕರನ್ನು ಈ ರೀತಿ ಗುರಿಯಾಗಿಸಿಕೊಂಡ ಇನ್ನೊಂದು ಪ್ರಕರಣವಾಗಿದೆ. ಅರವಿಂದ್ ಕುಮಾರ್ ಉದ್ಯೋಗ ಹುಡುಕಿಕೊಂಡು ಹಣ ಸಂಪಾದಿಸುವುದಕ್ಕಾಗಿ ಶ್ರೀನಗರಕ್ಕೆ ಬಂದಿದ್ದು ಆತನನ್ನು ಹತ್ಯೆ ಮಾಡಿರುವುದು ಖಂಡನೀಯ "ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ.

A gol gappa seller Arbind Kumar Sah killed by terrorists in Eidgah area of Srinagar

ಕಣಿವೆ ರಾಜ್ಯದಲ್ಲಿ ಉದ್ವಿಗ್ನತೆಗೆ 200 ಹಿಟ್ ಲಿಸ್ಟ್
ಕಣಿವೆ ರಾಜ್ಯದಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸಲು ಐಎಸ್ಐ 200 ಜನರ "ಹಿಟ್-ಲಿಸ್ಟ್" ಮಾಡಿದೆ. ಭಾರತೀಯ ಸರ್ಕಾರಕ್ಕೆ ಹತ್ತಿರವಿರುವ ಮಾಧ್ಯಮ ಸಿಬ್ಬಂದಿ ಮತ್ತು ಭಾರತೀಯ ಏಜೆನ್ಸಿಗಳು ಮತ್ತು ಭದ್ರತಾ ಪಡೆಗಳ ಮೂಲಗಳು ಮತ್ತು ಮಾಹಿತಿದಾರರನ್ನು ಹೊರತುಪಡಿಸಿ, ಪಟ್ಟಿಯಲ್ಲಿ ಪಂಡಿತರನ್ನು ಕಾಶ್ಮೀರಕ್ಕೆ ಹಿಂದಿರುಗಿಸಲು ಸಕ್ರಿಯವಾಗಿ ಪ್ರತಿಪಾದಿಸುತ್ತಿರುವ ಅನೇಕ ಕಾಶ್ಮೀರಿ ಪಂಡಿತರ ಹೆಸರನ್ನು ಸೇರಿಸಲಾಗಿದೆ ಎಂದು ಹೇಳಲಾಗಿದೆ.

ಭಾರತದಲ್ಲಿ ತನಿಖಾ ಸಂಸ್ಥೆಗಳ ದಾರಿ ತಪ್ಪಿಸುವ ಹುನ್ನಾರ
ಪಾಕಿಸ್ತಾನ್ ಆಕ್ರಮಿಕ ಕಾಶ್ಮೀರದಲ್ಲಿ ಇತ್ತೀಚಿಗೆ ಐಎಸ್‌ಐ ಅಧಿಕಾರಿಗಳು ಮತ್ತು ಭಯೋತ್ಪಾದಕ ಗುಂಪುಗಳ ನಾಯಕರ ನಡುವಿನ ಸಭೆಯಲ್ಲಿ ಒಂದು ಹೊಸ ಭಯೋತ್ಪಾದಕ ಸಂಘಟನೆಯನ್ನು ರಚಿಸಲಾಗಿದೆ. ಈ ತಂಡವು ಭಾರತೀಯ ತನಿಖಾ ಸಂಸ್ಥೆಗಳ ದಾರಿ ತಪ್ಪಿಸುವ ಹಾಗೂ ಹತ್ಯೆಗಳು ಮತ್ತು ದಾಳಿಯ ಗುರಿಯನ್ನು ಬಿಟ್ಟುಕೊಡದಂತೆ ಎಚ್ಚರಿಕೆ ವಹಿಸುತ್ತದೆ. ಅಲ್ಲದೇ ಹಾಕಿಕೊಂಡ ಯೋಜನೆಯನ್ನು ಅನುಷ್ಠಾನಗೊಳಿಸುವ ಹೊಣೆಗಾರಿಕೆಯನ್ನು ತೆಗೆದುಕೊಳ್ಳುತ್ತದೆ.

ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ:
"ಜಮ್ಮು ಕಾಶ್ಮೀರ ಪೂಂಚ್ ಜಿಲ್ಲೆಯ ಮೆಂಧರ್ ಉಪ ವಿಭಾಗದ ನರಖಾಸ್ ಅರಣ್ಯದ ಸಾಮಾನ್ಯ ಪ್ರದೇಶದಲ್ಲಿ ನಡೆಯುತ್ತಿದೆ. ಕಳೆದ 14 ಅಕ್ಟೋಬರ್ 2021 ರಂದು ಸಂಜೆ ಸಮಯದ ವೇಳೆ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಸೇನಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆಯಿತು. ನಂತರ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ಜೆಸಿಒ ಮತ್ತು ಒಬ್ಬ ಸೈನಿಕ ತೀವ್ರವಾಗಿ ಗಾಯಗೊಂಡಿದ್ದು, ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ," ಎಂದು ಘಟನೆ ಬಗ್ಗೆ ಸೇನೆಯು ಮಾಹಿತಿ ನೀಡಿದೆ.

6ನೇ ದಿನಕ್ಕೆ ಕಾಲಿಟ್ಟ ಸೇನಾ ಕಾರ್ಯಾಚರಣೆ:
ಈ ಹಿಂದೆ ಡೇರಾ ಕಿ ಗಲಿಯಲ್ಲಿ ಭಯೋತ್ಪಾದಕರು ಇರುವ ಬಗ್ಗೆ ಮಾಹಿತಿ ಪಡೆದ ಸೇನೆಯು ಕೂಂಬಿಂಗ್ ಕಾರ್ಯಾಚರಣೆಯನ್ನು ಆರಂಭಿಸಿತು. ಆರಂಭಿಕ ಶೂಟೌಟ್‌ನಲ್ಲಿ, ಒಬ್ಬ ಜೂನಿಯರ್ ಕಮಿಷನ್ಡ್ ಆಫೀಸರ್ (JCO) ಸೇರಿದಂತೆ ಐವರು ಸೈನಿಕರು ಸಾವನ್ನಪ್ಪಿದರು. ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸೇನೆಯು ಒಂದೇ ಎನ್ಕೌಂಟರ್ನಲ್ಲಿ ಇಷ್ಟೊಂದು ಸಾವುನೋವುಗಳನ್ನು ಅನುಭವಿಸಿದೆ. ಈ ಪ್ರದೇಶದಲ್ಲಿ ಉಗ್ರರ ನಿಗ್ರಹಕ್ಕೆ ಸೇನೆ ಲಗ್ಗೆಯಿಟ್ಟಿತು. ಅಂದಿನಿಂದ ಸೇನೆಯು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಆರಂಭಿಸಲಾಗಿದ್ದು, ಎನ್ಕೌಂಟರ್ ಇಂದು ಆರನೇ ದಿನಕ್ಕೆ ಕಾಲಿಟ್ಟಿದೆ. ಆದರೆ ಇಲ್ಲಿಯವರೆಗೆ ಯಾವುದೇ ಭಯೋತ್ಪಾದಕರನ್ನು ಕೊಲ್ಲಲಾಗಿಲ್ಲ ಎಂದು ತಿಳಿದು ಬಂದಿದೆ.

English summary
Jammu And Kashmir: A gol gappa seller Arbind Kumar Sah killed by terrorists in Eidgah area of Srinagar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X