ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇವರೇ ಮಾದರಿ: ಕೊರೊನಾವೈರಸ್ ಲಸಿಕೆ ಪಡೆದ 124 ವರ್ಷದ ಅಜ್ಜಿ

|
Google Oneindia Kannada News

ಶ್ರೀನಗರ್, ಜೂನ್ 04: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ನಿಯಂತ್ರಿಸುವುದಕ್ಕೆ ಲಸಿಕೆ ವಿತರಣೆಯೊಂದೇ ರಾಮಬಾಣವಾಗಿದೆ. ಜಮ್ಮು-ಕಾಶ್ಮೀರದಲ್ಲಿ ಪ್ರತಿಯೊಬ್ಬರಿಗೆ ಕೊವಿಡ್-19 ಲಸಿಕೆ ವಿತರಿಸುವ ನಿಟ್ಟಿನಲ್ಲಿ ಕಾರ್ಯ ಯೋಜನೆ ರೂಪಿಸಲಾಗಿದೆ.

ಕೊರೊನಾವೈರಸ್ ಲಸಿಕೆ ಹಾಕಿಸಿಕೊಳ್ಳುವುದಕ್ಕೆ ಇಂದಿಗೂ ಕೆಲವರು ಭಯ ಪಡುತ್ತಿದ್ದಾರೆ. ಲಸಿಕೆ ಪಡೆದರೆ ಎಲ್ಲಿ ಏನಾಗುತ್ತದೆಯೋ ಎಂಬ ಭೀತಿಯಲ್ಲಿ ಲಸಿಕೆ ಪಡೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಇಂಥವರ ಮಧ್ಯೆ ಕೊವಿಡ್-19 ಲಸಿಕೆ ಪಡೆದ 124 ವರ್ಷದ ವೃದ್ಧೆ ಮಾದರಿ ಎನಿಸಿದ್ದಾರೆ.

ಕೊರೊನಾವೈರಸ್ ಲಸಿಕೆಗೆ ಹೆದರಿ ಮನೆಯ ಡ್ರಮ್ ಹಿಂದೆ ಅಡಗಿ ಕುಳಿತ ಅಜ್ಜಿ!ಕೊರೊನಾವೈರಸ್ ಲಸಿಕೆಗೆ ಹೆದರಿ ಮನೆಯ ಡ್ರಮ್ ಹಿಂದೆ ಅಡಗಿ ಕುಳಿತ ಅಜ್ಜಿ!

ಜಮ್ಮು-ಕಾಶ್ಮೀರದಲ್ಲಿ ಮನೆ ಮನೆಗೆ ತೆರಳಿ ಆರೋಗ್ಯ ಸಿಬ್ಬಂದಿಯು ಕೊರೊನಾವೈರಸ್ ಲಸಿಕೆ ನೀಡುತ್ತಿದ್ದಾರೆ. ಈ ವೇಳೆ ಬಾರಾಮುಲ್ಲಾದ ವಗೂರಾ ಪ್ರದೇಶದ ಶ್ರಾಕ್ವಾರಾ ಬ್ಲಾಕ್ ನಲ್ಲಿ ವಾಸವಿರುವ 124 ವರ್ಷದ ವೃದ್ಧೆಗೆ ಕೊವಿಡ್-19 ಲಸಿಕೆ ನೀಡಲಾಗಿದೆ.

A 124-year-old woman received her first Dose Corona vaccine In Jammu-Kashmir

124 ವರ್ಷದ ವೃದ್ಧೆ ಆರೋಗ್ಯದ ಬಗ್ಗೆ ವೈದ್ಯರ ಮಾತು:

ಜಮ್ಮು-ಕಾಶ್ಮೀರದ ಬಾರಾಮುಲ್ಲಾದಲ್ಲಿ ಮನೆ ಮನೆಗೆ ತೆರಳಿ ನಾವು ಕೊರೊನಾವೈರಸ್ ಲಸಿಕೆಯನ್ನು ವಿತರಿಸುತ್ತಿದ್ದೇವೆ. ಲಸಿಕೆ ವಿತರಣೆ ಸಂದರ್ಭದಲ್ಲಿ 124 ವರ್ಷದ ವೃದ್ಧೆಗೆ ಕೊವಿಡ್-19 ಲಸಿಕೆಯನ್ನು ನೀಡಲಾಗಿದೆ. ಅವರು ಇಂದಿಗೂ ಆರೋಗ್ಯವಂತರಾಗಿದ್ದಾರೆ ಎಂದು ಶ್ರಾಕ್ವಾರ್ ಪ್ರದೇಶದ ವೈದ್ಯಕೀಯ ಅಧಿಕಾರಿ ಡಾ.ತಾಜ್ಮುಲ್ ಮಲ್ಲಿಕ್ ತಿಳಿಸಿದ್ದಾರೆ.

ಭಾರತದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಅಭಿಯಾನ ಆರಂಭವಾಗಿ 139 ದಿನಗಳಲ್ಲಿ 22,37,27,632 ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಗುರುವಾರ ರಾತ್ರಿ 7 ಗಂಟೆ ವೇಳೆಗೆ 26,24,971 ಮಂದಿಗೆ ಕೊರೊನಾವೈರಸ್ ಲಸಿಕೆ ನೀಡಲಾಗಿದೆ. ಈ ಪೈಕಿ 24,04,166 ಜನರಿಗೆ ಮೊದಲ ಡೋಸ್ ಹಾಗೂ 2,20,805 ಫಲಾನುಭವಿಗಳಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ.

English summary
A 124-year-old woman received her first Dose Coronavirus vaccine on Wednesday In Jammu-Kashmir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X