ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಲ್ವಾಮ ಉಗ್ರರ ದಾಳಿಯಲ್ಲಿ 60 ಕೆಜಿ RDX ಬಳಕೆ

|
Google Oneindia Kannada News

ಶ್ರೀನಗರ, ಫೆಬ್ರವರಿ 16: ಪುಲ್ವಾಮಾದಲ್ಲಿ ಫೆಬ್ರವರಿ 14ರಂದು ನಡೆದ ಉಗ್ರರ ಆತ್ಮಾಹುತಿ ದಾಳಿಯಲ್ಲಿ ಈ ಹಿಂದೆ ಭಾವಿಸಿದ್ದಂತೆ 350 ಕೆಜಿ ಸ್ಫೋಟಕವಿಲ್ಲ ಬದಲಾಗಿ 60 ಕೆಜಿ ಆರ್‌ಡಿಎಕ್ಸ್ ಬಳಸಲಾಗಿತ್ತು ಎಂಬ ಮಾಹಿತಿ ಸಿಆರ್‌ಪಿಎಫ್ ಅಧಿಕಾರಿಗಳ ಮೂಲಗಳು ತಿಳಿಸಿವೆ.

ಪುಲ್ವಾಮಾದಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ 42 ಮಂದಿ ಯೋಧರು ಹುತಾತ್ಮರಾಗಿದ್ದರು. ಅವರ ದೇಹಗಳು 80 ಮೀಟರ್‌ ದೂರದವರೆಗೆ ಛಿದ್ರ ಛಿದ್ರವಾಗಿ ಬಿದ್ದಿತ್ತು. ಪ್ರಾಥಮಿಕ ತನಿಖೆಯಲ್ಲಿ ದಾಳಿಯಲ್ಲಿ ಆರ್‌ಡಿಎಕ್ಸ್ ಬಳಕೆ ಮಾಡಿಲ್ಲ ಎನ್ನುವ ಮಾಹಿತಿ ಲಭ್ಯವಾಗಿತ್ತು, ಆದರೆ ಇದೀಗ ಬಂದ ಮಾಹಿತಿ ಪ್ರಕಾರ 60 ಕೆಜಿಯಷ್ಟು ಆರ್‌ಡಿಎಕ್ಸ್ ಕಾರಿನಲ್ಲಿತ್ತು ಎನ್ನಲಾಗಿದೆ.

60 kg RDX Used In Pulwama Terror Attack, A Body Was Flung 80 Metres Away

ದಾಳಿ ನಡೆದ ಸಂದರ್ಭದಲ್ಲಿ 350 ಕಿಲೋಗ್ರಾಂ ಸ್ಫೋಟಕ ತುಂಬಿದ್ದ ಸ್ಕಾರ್ಪಿಯೋ ಎಸ್​ಯುವಿಯನ್ನು ಉಗ್ರ ಆದಿಲ್​ ಅಹ್ಮದ್​ ದರ್​ ಸಿಆರ್​ಪಿಎಫ್​ ಯೋಧರಿದ್ದ ವಾಹನಕ್ಕೆ ಡಿಕ್ಕಿ ಹೊಡೆಸಿದ್ದ ಎಂದು ಹೇಳಲಾಗುತ್ತಿತ್ತು. ಆದರೆ, ಆ ಉಗ್ರ ಚಲಾಯಿಸಿದ್ದ ಆರ್​ಡಿಎಕ್ಸ್ ತುಂಬಿದ್ದ ಸೆಡಾನ್​ ಕಾರು.

ಸಿಆರ್​ಪಿಎಫ್​ ಯೋಧರಿದ್ದ ಬಸ್​ಗೆ ಆತ ಅದನ್ನು ಡಿಕ್ಕಿ ಹೊಡೆಸಿಲ್ಲ. ಬದಲಿಗೆ ಸಿಆರ್​ಪಿಎಫ್​ ಸಿಬ್ಬಂದಿ ಇದ್ದ 78 ಬಸ್​ಗಳನ್ನು ಎಡಭಾಗದಿಂದ ಓವರ್​ಟೇಕ್​ ಮಾಡಿ, ಸಾಲಿನಲ್ಲಿದ್ದ ಮೊದಲ ಬಸ್​ ಪಕ್ಕದಲ್ಲಿ ಅದನ್ನು ಸ್ಫೋಟಿಸಿದ್ದಾನೆ. ಹಾಗಾಗಿ ಅದು 150 ಮೀಟರ್​ ಪರಿಧಿಯಲ್ಲಿ ಸಿಡಿದಿದೆ. ಈ ಸ್ಫೋಟ ಎಷ್ಟು ಪ್ರಬಲವಾಗಿತ್ತೆಂದರೆ, ಬಸ್​ನಲ್ಲಿದ್ದ ಯೋಧರೊಬ್ಬರ ದೇಹ ಛಿದ್ರಗೊಂಡು ಘಟನಾ ಸ್ಥಳದಿಂದ 80 ಮೀಟರ್​ ದೂರದವರೆಗೆ ಸಿಡಿದಿತ್ತು ಎಂದು ಸಿಆರ್​ಪಿಎಫ್​ ಮೂಲಗಳು ಹೇಳಿವೆ.

English summary
The terrorist in Thursday's deadly terror attack, in which 40 soldiers were killed, drove up next to a massive security convoy on the Jammu-Srinagar highway and detonated around 60 kg of powerful RDX, source.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X