ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್ ಹಿಮ್ಮೆಟ್ಟಿಸಲು ಹೋದ ಒಂದು ಮಿಗ್ 21 ವಿಮಾನ ನಾಪತ್ತೆ

|
Google Oneindia Kannada News

ನವದೆಹಲಿ, ಫೆಬ್ರವರಿ 27 : ಪಾಕಿಸ್ತಾನದ ಯುದ್ಧ ವಿಮಾನಗಳನ್ನು ಹಿಮ್ಮೆಟ್ಟಿಸಲು 6 ಮಿಗ್ 21 ವಿಮಾನಗಳು ತೆರಳಿದ್ದವು. ಇವುಗಳಲ್ಲಿ 5 ವಿಮಾನಗಳು ಸುರಕ್ಷಿತವಾಗಿ ವಾಯುನೆಲೆಗೆ ವಾಪಸ್ ಆಗಿವೆ. ಇನ್ನೊಂದು ವಿಮಾನ ಇನ್ನೂ ತಲುಪಬೇಕಿದೆ.

ಬುಧವಾರ ಬೆಳಗ್ಗೆ ಶ್ರೀನಗರದ ವಾಯುನೆಲೆಯಿಂದ 6 ಮಿಗ್ 21 ವಿಮಾನಗಳನ್ನು ಗಡಿಯಲ್ಲಿ ಪಾಕಿಸ್ತಾನದ ವಿಮಾನಗಳನ್ನು ಹಿಮ್ಮೆಟ್ಟಿಸಲು ಕಳುಹಿಸಲಾಗಿತ್ತು. ಇವುಗಳಲ್ಲಿ ವಿಂಗ್ ಕಮಾಂಡ್ ಅಭಿನಂದನ್ ಪೈಲೆಟ್ ಆಗಿದ್ದ ಮಿಗ್ 21 ಬೈಸನ್ ಜೆಟ್ ಇನ್ನೂ ವಾಪಸ್ ಆಗಿಲ್ಲ.

ಅಭಿನಂದನ್ ಅವರನ್ನು ವಾಪಸ್ ಕರೆತನ್ನಿ : ಟ್ವಿಟ್ಟಿಗರ ಕೂಗುಅಭಿನಂದನ್ ಅವರನ್ನು ವಾಪಸ್ ಕರೆತನ್ನಿ : ಟ್ವಿಟ್ಟಿಗರ ಕೂಗು

ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಅವರು ಬುಧವಾರ ಮಧ್ಯಾಹ್ನ ಪತ್ರಿಕಾಗೋಷ್ಠಿ ನಡೆಸಿ, 'ಆಪರೇಷನ್ ಸಂದರ್ಭದಲ್ಲಿ ನಾವು ಮಿಗ್ 21 ವಿಮಾನವನ್ನು ಕಳೆದುಕೊಂಡಿದ್ದೇವೆ. ಒಬ್ಬ ಪೈಲೆಟ್ ನಾಪತ್ತೆಯಾಗಿದ್ದಾರೆ. ಪಾಕಿಸ್ತಾನ ಪೈಲೆಟ್ ನಮ್ಮ ವಶದಲ್ಲಿದ್ದಾನೆ ಎಂದು ಹೇಳಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ' ಎಂದು ಹೇಳಿದ್ದಾರೆ.

6 MiG 21 took off to push back Pakistani Air Force plane one down

'ಬುಧವಾರ ಬೆಳಗ್ಗೆ ಪಾಕಿಸ್ತಾನದ ವಿಮಾನಗಳು ನಮ್ಮನ್ನು ಟಾರ್ಗೆಟ್ ಮಾಡಿ ದಾಳಿ ನಡೆಸಲು ಮುಂದಾಗಿದ್ದವು. ತಕ್ಷಣ ಪ್ರತಿಕ್ರಿಯೆ ನೀಡಿದ ನಮ್ಮ ವಿಮಾನಗಳು ಅವುಗಳನ್ನು ಹಿಮ್ಮೆಟ್ಟಿಸಿವೆ. ಈ ವೇಳೆ ಪಾಕಿಸ್ತಾನದ ಒಂದು ವಿಮಾನವನ್ನು ಹೊಡೆದುರುಳಿಸಲಾಗಿದೆ' ಎಂದು ರವೀಶ್ ಕುಮಾರ್ ತಿಳಿಸಿದರು.

ಹೊಡೆತ ತಿಂದ ನಂತರ ಮಾತುಕತೆಯ ಭಿಕ್ಷೆ ಬೇಡುತ್ತಿರುವ ಇಮ್ರಾನ್ ಖಾನ್ಹೊಡೆತ ತಿಂದ ನಂತರ ಮಾತುಕತೆಯ ಭಿಕ್ಷೆ ಬೇಡುತ್ತಿರುವ ಇಮ್ರಾನ್ ಖಾನ್

ಪಾಕಿಸ್ತಾನದ ಮೇಜರ್ ಜನರಲ್ ಎ.ಗಫೂರ್ ಅವರು ಬುಧವಾರ ಬೆಳಗ್ಗೆ ಪಾಕಿಸ್ತಾನದ ಗಡಿಯೊಳಗೆ ಬಂದ ಭಾರತದ ಎರಡು ವಿಮಾನಗಳನ್ನು ಹೊಡೆದುರುಳಿಸಿ, ಪೈಲೆಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಟ್ವೀಟ್ ಮಾಡಿದ್ದರು.

72 ಗಂಟೆಯಲ್ಲಿ ಏನಾದರೂ ಅಗಬಹುದು ಎಂದ ಪಾಕ್ ರೈಲ್ವೆ ಸಚಿವ72 ಗಂಟೆಯಲ್ಲಿ ಏನಾದರೂ ಅಗಬಹುದು ಎಂದ ಪಾಕ್ ರೈಲ್ವೆ ಸಚಿವ

ಭಾರತ ಪಾಕಿಸ್ತಾನದ ಹೇಳಿಕೆಯನ್ನು ತಳ್ಳಿ ಹಾಕಿತ್ತು. ಭಾರತದ ಯಾವುದೇ ವಿಮಾನವನ್ನು ಹೊಡೆದುರುಳಿಸಿಲ್ಲ. ಭಾರತೀಯ ವಾಯುಪಡೆಗೆ ಯಾವುದೇ ಈ ಕಾರ್ಯಾಚರಣೆ ಸಂದರ್ಭದಲ್ಲಿ ಹಾನಿಯಾಗಿಲ್ಲ ಎಂದು ಹೇಳಿತ್ತು.

ಎಫ್-16 ಬಗ್ಗೆ ಸುದ್ದಿ ಬಿತ್ತರಿಸದಂತೆ ಪಾಕ್ ಮಾಧ್ಯಮಗಳಿಗೆ ಸೂಚನೆಎಫ್-16 ಬಗ್ಗೆ ಸುದ್ದಿ ಬಿತ್ತರಿಸದಂತೆ ಪಾಕ್ ಮಾಧ್ಯಮಗಳಿಗೆ ಸೂಚನೆ

ಪಾಕಿಸ್ತಾನದ ವಿಮಾನ ಗಡಿನಿಯಂತ್ರಣ ರೇಖೆಯನ್ನು ದಾಟಿ ಬಂದಿತ್ತು. ಭಾರತೀಯ ವಾಯುಪಡೆ ಪಾಕಿಸ್ತಾನ ವಾಯುಪಡೆಯ ಎಫ್-16 ವಿಮಾನವನ್ನು ಜಮ್ಮು ಮತ್ತು ಕಾಶ್ಮೀರದ ಲಾವ್ ಪ್ರದೇಶದಲ್ಲಿ ಹೊಡೆದುರುಳಿಸಿದೆ ಎಂದು ವಾಯುಪಡೆ ಹೇಳಿಕೆ ಬಿಡುಗಡೆ ಮಾಡಿತ್ತು.

English summary
One MiG 21 aircraft yet to return safely to the air base of Srinagar. Five out of the six MiG 21 aircraft which took off from Srinagar to push back Pakistani Air Force planes on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X