ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮುವಿಗೆ 6, ಕಾಶ್ಮೀರಕ್ಕೆ 1 ಹೊಸ ಸ್ಥಾನ: ಪಕ್ಷಗಳನ್ನು ಕೆಣಕಿಸಿದ ಕರಡು ಪ್ರಸ್ತಾಪ

|
Google Oneindia Kannada News

ಶ್ರೀನಗರ, ಡಿಸೆಂಬರ್ 21: ಕೇಂದ್ರಾಡಳಿತ ಪ್ರದೇಶವಾದ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ವಿಧಾನಸಭೆ ಸ್ಥಾನಗಳ ವಿಂಗಡಣೆ ಕಾರ್ಯ ನಡೆಯುತ್ತಿದೆ. ಹೊಸ ಪುನರ್ವಿಂಗಡನೆಗೆ ರಚಿಸಲಾಗಿದ್ದ ಆಯೋಗ ಜಮ್ಮುವಿನಲ್ಲಿ 6 ಮತ್ತು ಕಾಶ್ಮೀರ ಕಣಿವೆಯಲ್ಲಿ 1 ವಿಧಾನಸಭಾ ಸ್ಥಾನಗಳನ್ನು ಹೆಚ್ಚಿಸಲು ಪ್ರಸ್ತಾಪಿಸಿದೆ. ಮೊದಲ ಬಾರಿಗೆ ಆಯೋಗವು ಜನಸಂಖ್ಯೆಯ ಆಧಾರದ ಮೇಲೆ ಪರಿಶಿಷ್ಟ ಪಂಗಡಗಳಿಗೆ (ಎಸ್‌ಟಿ) ಒಂಬತ್ತು ಸ್ಥಾನಗಳನ್ನು ಮೀಸಲಿಡಲು ಪ್ರಸ್ತಾಪಿಸಿದೆ. ಪರಿಶಿಷ್ಟ ಜಾತಿ (ಎಸ್‌ಸಿ) ಸಮುದಾಯಕ್ಕೆ ಏಳು ಸ್ಥಾನಗಳನ್ನು ಪ್ರಸ್ತಾಪಿಸಲಾಗಿದೆ. ಪ್ರಸ್ತಾವಿತ ಸೇರ್ಪಡೆಯೊಂದಿಗೆ, ಜಮ್ಮು ಮತ್ತು ಕಾಶ್ಮೀರದ ಒಟ್ಟು ವಿಧಾನಸಭಾ ಕ್ಷೇತ್ರಗಳು 90 ಕ್ಕೆ ಏರಿಕೆಯಾಗಲಿದೆ.

ಆದರೀಗ ಇದರ ಮೇಲೆ ರಾಜಕೀಯ ಪ್ರಾರಂಭವಾಗಿದೆ. ಇದು ವಿರೋಧ ಪಕ್ಷಗಳು ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗವನ್ನು ಕೆಣಕಿದೆ. ಹೊಸ ಡಿಲಿಮಿಟೇಶನ್ ನಂತರ ಜಮ್ಮುವಿನ ವಿಧಾನಸಭಾ ಸ್ಥಾನಗಳ ಸಂಖ್ಯೆ 43 ಕ್ಕೆ ಮತ್ತು ಕಾಶ್ಮೀರ ವಿಧಾನಸಭಾ ಸ್ಥಾನಗಳ ಸಂಖ್ಯೆ 47 ಕ್ಕೆ ಏರಲಿದೆ. ಇದರಲ್ಲಿ ಎಸ್‌ಟಿಗೆ 9 ಮತ್ತು ಎಸ್‌ಸಿಗೆ 7 ಸ್ಥಾನಗಳನ್ನು ಮೀಸಲಿಡಲಾಗುವುದು. ಜೊತೆಗೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ 24 ಸ್ಥಾನಗಳು, ಅವು ಹಾಗೆಯೇ ಉಳಿಯುತ್ತವೆ.

ಕೇಂದ್ರಾಡಳಿತ ಪ್ರದೇಶದ ಏಳು ಹೆಚ್ಚುವರಿ ವಿಧಾನಸಭಾ ಕ್ಷೇತ್ರಗಳಲ್ಲಿ, ಜಮ್ಮು ವಿಭಾಗದ ಕಥುವಾ, ಸಾಂಬಾ, ರಾಜೌರಿ, ರಿಯಾಸಿ, ದೋಡಾ ಮತ್ತು ಕಿಶ್ತ್ವಾರ್ ಮತ್ತು ಕಾಶ್ಮೀರ ಕಣಿವೆಯ ಕುಪ್ವಾರ ಜಿಲ್ಲೆಗಳಲ್ಲಿ ತಲಾ ಒಂದನ್ನು ಪ್ರಸ್ತಾಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

6 for Jammu, 1 for Kashmir New position: Draft proposal that stirred the parties

ಕೇಂದ್ರ ಸರ್ಕಾರದ ಡಿಲಿಮಿಟೇಶನ್ ಆಯೋಗ ಸೋಮವಾರ ದೆಹಲಿಯಲ್ಲಿ ಸಭೆ ನಡೆಸಿದೆ. ಇದರಲ್ಲಿ ಹೊಸ ಡಿಲಿಮಿಟೇಶನ್ ಕುರಿತು ಚರ್ಚೆ ನಡೆಸಲಾಯಿತು. ಈ ಹೊಸ ಪ್ರಸ್ತಾವನೆಯನ್ನು ಕಾಶ್ಮೀರದ ಎಲ್ಲಾ ರಾಜಕೀಯ ಪಕ್ಷಗಳು ಪಕ್ಷಪಾತ ಮತ್ತು ಸ್ವೀಕಾರಾರ್ಹವಲ್ಲ ಎಂದು ಕರೆದಿವೆ. ಸಭೆಯಲ್ಲಿ ಭಾಗವಹಿಸಿದ್ದ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಮತ್ತು ಸಂಸದ ಫಾರೂಕ್ ಅಬ್ದುಲ್ಲಾ ಅವರು ಕರಡನ್ನು ದೃಢಪಡಿಸಿದರು ಮತ್ತು ಡಿಸೆಂಬರ್ 31 ರೊಳಗೆ ಔಪಚಾರಿಕವಾಗಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು. ಆದಾಗ್ಯೂ, ವಿರೋಧದ ದೃಷ್ಟಿಯಿಂದ ಆಯೋಗವು 2011 ರ ಜನಗಣತಿಯನ್ನು ಆಧರಿಸಿದೆ ಮತ್ತು ವಿಧಾನಸಭಾ ಸ್ಥಾನಗಳ ಮರು ನಿಗದಿಗೆ ಜನಸಂಖ್ಯೆಯು ಏಕೈಕ ಮಾನದಂಡವಾಗಿದೆ ಎಂದು ಹೇಳಿದೆ.

ಸಭೆಯ ನಂತರ ಡಿಲಿಮಿಟೇಶನ್ ಆಯೋಗವು ಮುಂದಿನ 10 ದಿನಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಮತ್ತು ಸಲಹೆಗಳನ್ನು ಡಿಸೆಂಬರ್ 31 ರೊಳಗೆ ಒದಗಿಸುವಂತೆ ವಿನಂತಿಯೊಂದಿಗೆ ಎಲ್ಲಾ ಸದಸ್ಯರೊಂದಿಗೆ ಪ್ರಸ್ತಾವಿತ ಸೀಟು ಹಂಚಿಕೆಯನ್ನು ವಿವರಿಸುವ ಕಾಗದವನ್ನು ಹಂಚಿಕೊಂಡಿದೆ ಎಂದು ಹೇಳಿದರು.

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಕೂಡ ಈ ಕರಡನ್ನು ವಿರೋಧಿಸುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಡಿಲಿಮಿಟೇಶನ್ ಆಯೋಗದ ಕರಡು ಶಿಫಾರಸು ಸ್ವೀಕಾರಾರ್ಹವಲ್ಲ ಎಂದು ಅವರು ಟ್ವೀಟ್ ಮಾಡಿ ಬರೆದಿದ್ದಾರೆ. ಇದರ ಪ್ರಕಾರ ಜಮ್ಮುವಿಗೆ 6 ಹೊಸ ಸೀಟುಗಳು ಬರುತ್ತಿದ್ದು, ಕಾಶ್ಮೀರದಲ್ಲಿ ಹೊಸ ಸೀಟುಗಳ ಸಂಖ್ಯೆ 1 ಆಗಲಿದೆ. ಇದಕ್ಕೆ 2011 ರ ಜನಗಣತಿ ಸಂಬಂಧಿಸಿಲ್ಲ ಎಂದಿದ್ದಾರೆ.

ಈ ಹಿಂದೆ ಜಮ್ಮುವಿನಲ್ಲಿ 37, ಕಾಶ್ಮೀರದಲ್ಲಿ 46 ಮತ್ತು ಲಡಾಖ್‌ನಲ್ಲಿ 4 ಸ್ಥಾನಗಳಿದ್ದವು. ಲಡಾಖ್ ಈಗ ಕೇಂದ್ರಾಡಳಿತ ಪ್ರದೇಶವಾಗಿ ಪ್ರತ್ಯೇಕಗೊಂಡಿದೆ. ಈ ಕಾರಣಕ್ಕಾಗಿ ಹೊಸ ಡಿಲಿಮಿಟೇಶನ್ ಅಗತ್ಯವಾಗಿತ್ತು. ಹೊಸ ಕರಡು ಪ್ರಕಾರ, ಈಗ ಜಮ್ಮುವಿನಲ್ಲಿ 43 ಮತ್ತು ಕಾಶ್ಮೀರದಲ್ಲಿ 47 ಸ್ಥಾನಗಳು ಇರುತ್ತವೆ. ಮತ್ತೊಂದೆಡೆ, ನಾವು 2011 ರ ಜನಗಣತಿ ವರದಿಯ ಬಗ್ಗೆ ಮಾತನಾಡಿದರೆ, ಜಮ್ಮುವಿನ ಜನಸಂಖ್ಯೆ 53.5 ಲಕ್ಷ ಇದ್ದರೆ ಕಾಶ್ಮೀರದಲ್ಲಿ 68.8 ಲಕ್ಷವಿದೆ.

English summary
The Delimitation Commission has proposed to increase 6 assembly seats in Jammu and 1 in the Kashmir Valley, but politics started on this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X