• search
  • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾಶ್ಮೀರದಲ್ಲಿ 40 ನಾಯಕರು, ಸಾವಿರಕ್ಕೂ ಹೆಚ್ಚು ಪ್ರತಿಭಟನಾಕಾರರು ವಶಕ್ಕೆ

|

ಶ್ರೀನಗರ, ಆಗಸ್ಟ್ 27: ಜಮ್ಮು ಕಾಶ್ಮೀರದಲ್ಲಿ 40 ನಾಯಕರು ಹಾಗೂ ಸಾವಿರಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.

ಕಳೆದ 24 ದಿನಗಳಲ್ಲಿ, ಜಮ್ಮು ಮತ್ತು ಕಾಶ್ಮೀರದ 2 ಮಾಜಿ ಮುಖ್ಯಮಂತ್ರಿಗಳನ್ನು ಗೃಹಬಂಧನದಲ್ಲಿರಿಸಲಾಗಿದೆ ಮತ್ತು ಅವರನ್ನು ತಲುಪಲು ಯಾವುದೇ ಕುಟುಂಬದ ಸದಸ್ಯರು ಅಥವಾ ಕೇಂದ್ರವು ಯಾವುದೇ ಪ್ರಯತ್ನ ಮಾಡಿಲ್ಲ.

ಕಾಶ್ಮೀರ ವಿವಾದ: ಮೋದಿ ಖಡಕ್ ಮಾತಿಗೆ ಡೊನಾಲ್ಡ್ ಟ್ರಂಪ್ ಥಂಡಾ!

ಕಳೆದ ವಾರದ ಕೊನೆಯಲ್ಲಿ ಐಬಿ ನಿರ್ದೇಶಕ ಅರವಿಂದ್ ಕುಮಾರ್ ಮತ್ತು ಹಲವಾರು ಅಧಿಕಾರಿಗಳು ಕಾಶ್ಮೀರದಲ್ಲಿದ್ದರು. ಹಲವಾರು ಏಜೆನ್ಸಿಗಳ ಶಾಖೆಗಳೊಂದಿಗೆ ಮಧ್ಯಂತರ ಸಭೆ ನಡೆಸಿದರು ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ನೀಡಿದ ಸೂಚನೆಯಂತೆ ಪ್ರತಿಕ್ರಿಯೆಯನ್ನು ಪಡೆದಿದ್ದಾರೆ.

ಗೃಹ ಸಚಿವ ಅಮಿತ್ ಶಾ ಗೆ ಪತ್ರ ಬರೆದ ಮೆಹಬೂಬಾ ಮುಫ್ತಿ ಅವರ ಪುತ್ರಿ ಇಲ್ತಿಜಾ ಮುಫ್ತಿ ಕೂಡ ರಾಜ್ಯವನ್ನು ತೊರೆದಿದ್ದಾರೆ. ಏತನ್ಮಧ್ಯೆ, ಸುಮಾರು ನಾಲ್ಕು ವಾರಗಳವರೆಗೆ 40 ಕ್ಕೂ ಹೆಚ್ಚು ರಾಜ್ಯ ನಾಯಕರನ್ನು ವಿವಿಧ ಸ್ಥಳಗಳಲ್ಲಿ ಬಂಧಿಸಲಾಗಿದೆ. 6 ಜನರನ್ನು ಜಮ್ಮುವಿನಲ್ಲಿ ಮತ್ತು ಉಳಿದವರನ್ನು ಕಣಿವೆಯಲ್ಲಿ ಬಂಧಿಸಲಾಗಿದೆ.

ಜಮ್ಮುವಿನಲ್ಲಿ ಮೋದಿ ಸರ್ಕಾರದಲ್ಲಿರುವ ಜಿತೇಂದ್ರ ಸಿಂಗ್ ಅವರ ಸಹೋದರನನ್ನೂ ಗೃಹಬಂಧನದಲ್ಲಿರಿಸಲಾಗಿದೆ. ಮೆಹಬೂಬಾ ಮುಫ್ತಿ ಮತ್ತು ಒಮರ್ ಅಬ್ದುಲ್ಲಾ ಅವರ ಸರ್ಕಾರದ ಎಲ್ಲ ಕ್ಯಾಬಿನೆಟ್ ಮಂತ್ರಿಗಳು ಗೃಹಬಂಧನದಲ್ಲಿದ್ದಾರೆ. ಅನೇಕ ರಾಜಕಾರಣಿಗಳು ಸೆಂಟೌರ್ ಹೋಟೆಲ್‌ನಲ್ಲಿ ತಂಗಿದ್ದಾರೆ.

ಭಾರತ-ಪಾಕ್ ವಿಷಯ ನಾವೇ ಬಗೆಹರಿಸಿಕೊಳ್ಳುತ್ತೇವೆ: ಮೋದಿ

ಕೆಲವು ನಾಯಕರ ಸಂಬಂಧಿಕರು ಅವರನ್ನು ಭೇಟಿಯಾಗಲು ಬಂದರು ಆದರೆ ಅಗತ್ಯವಿರುವ ಎಲ್ಲ ದಾಖಲೆಗಳನ್ನು ತೋರಿಸಿದ ನಂತರವೇ ಅವರನ್ನು ಭೇಟಿಯಾಗಲು ಅವಕಾಶ ನೀಡಲಾಯಿತು.

ಆದರೆ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಕುಟುಂಬಗಳನ್ನು ಭೇಟಿ ಮಾಡಲು ಯಾರೂ ಬಂದಿಲ್ಲ. ಒಮರ್ ಅಬ್ದುಲ್ಲಾ ಹರಿ ನಿವಾಸ್ ಅರಮನೆಯಲ್ಲಿದ್ದರೆ ಮತ್ತು ಮೆಹಬೂಬಾ ಮುಫ್ತಿ ಚಶ್ಮೆ ಶಾಹಿಯಲ್ಲಿದ್ದಾರೆ.

ಆದರೆ ಆತಂಕಕಾರಿ ಸಂಗತಿಯೆಂದರೆ, ಈ ನಾಯಕರನ್ನು ಹೇಗೆ ಮತ್ತು ಯಾವಾಗ ಬಿಡುಗಡೆ ಮಾಡಲಾಗುವುದು ಮತ್ತು ಅವರ ಬಂಧನ ಕೊನೆಗೊಳ್ಳುತ್ತದೆ ಎಂಬುದರ ಬಗ್ಗೆ ಭಾರತ ಸರ್ಕಾರಕ್ಕೆ ಯಾವುದೇ ಮಾರ್ಗಸೂಚಿ ಇಲ್ಲ.

ಪ್ರತಿಪಕ್ಷದ ನಾಯಕ ಮೊಹಮ್ಮದ್ ಯೂಸುಫ್ ತರಿಗಾಮಿಯನ್ನೂ ಗೃಹಬಂಧನದಲ್ಲಿರಿಸಲಾಗಿದೆ. ರಾಜ್ಯದಲ್ಲಿ 1100 ಕ್ಕೂ ಹೆಚ್ಚು ಕಲ್ಲು ತೂರಾಟಗಾರರನ್ನು ಬಂಧಿಸಲಾಗಿದೆ.

English summary
Government says 40 Political Leaders More than 1000 stone pelters are under the arrest in Jammu and Kashmir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X