ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು-ಕಾಶ್ಮೀರದಲ್ಲಿ ಯೋಧರ ಗುಂಡಿಗೆ ಬಲಿಯಾದ ಮೂವರು ಉಗ್ರರಲ್ಲ

|
Google Oneindia Kannada News

ಶ್ರೀನಗರ, ಸೆಪ್ಟೆಂಬರ್ 25: ಜಮ್ಮು ಮತ್ತು ಕಾಶ್ಮೀರದಲ್ಲಿ ಯೋಧರ ಗುಂಡಿಗೆ ಬಲಿಯಾದ ಮೂವರು ಉಗ್ರರಲ್ಲ ಅವರು ಕಾರ್ಮಿಕರು ಎಂಬುದು ಸಾಬೀತಾಗಿದೆ.

ಅಬ್ರಾರ್(20), ಇಮ್ತಿಯಾಜ್(25), ಇಬ್ರಾರ್ ಅಹ್ಮದ್( 17) ಮೂವರು ಕಾರ್ಮಿಕರಾಗಿದ್ದರು. ಯೋಧರು ಅವರನ್ನು ಉಗ್ರರು ಎಂದು ಬಿಂಬಿಸಿ ಅವರನ್ನು ಶೋಪಿಯನ್‌ನಲ್ಲಿ ಇರುವ ಬಾಡಿಗೆ ಮನೆಗೆ ಕರೆದುಕೊಂಡು ಹೋಗಿ ಹತ್ಯೆ ಮಾಡಿದ್ದರು.

ಪುಲ್ವಾಮಾ ದಾಳಿ ಸುದ್ದಿ ಐಎಸ್ಐಗೆ ಮುಟ್ಟಿಸಿದ Spy ಬಂಧನಪುಲ್ವಾಮಾ ದಾಳಿ ಸುದ್ದಿ ಐಎಸ್ಐಗೆ ಮುಟ್ಟಿಸಿದ Spy ಬಂಧನ

ನ್ಯಾಯಾಲಯದ ತನಿಖೆಯಲ್ಲಿ ಈ ಎನ್‌ಕೌಂಟರ್‌ನಲ್ಲಿ ಯೋಧರು ಶಾಮೀಲಾಗಿದ್ದಾರೆ ಎಂಬುದು ತಿಳಿದುಬಂದಿದೆ. ಆರ್ಮಿ ಆಕ್ಟ್ ಪ್ರಕಾರ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಕೋರ್ಟ್ ಹೇಳಿದೆ.

3 Men Killed By Army In Jammu and Kashmir Encounter Confirms They Were Labourers

ಯೋಧರು ತಮಗೆ ನೀಡಿರುವ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ, ಅವರಿಗೆ ಯಾರಾದರೂ ಉಗ್ರರಂತೆ ಕಂಡರೆ ಅವರನ್ನು ಹತ್ಯೆ ಮಾಡಬಹುದೇ ಅಂತಹ ಅಧಿಕಾರ ಅವರಿಗಿಲ್ಲ ಎಂದು ಕೋರ್ಟ್ ಹೇಳಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಆ ಮೂರು ವ್ಯಕ್ತಿಗಳ ಫೋಟೊ ಹರಿದಾಡಿತ್ತು. ಬಳಿಕ ಕುಟುಂಬದವರು ಅವರು ಅಣ್ಣ ತಮ್ಮಂದಿರು ಜುಲೈನಿಂದ ನಮ್ಮ ಸಂಪರ್ಕಕ್ಕೆ ಸಿಗಲಿಲ್ಲ ಎಂದು ಹೇಳಿದ್ದಾರೆ.

ಯೋಧರು ಹಾಗೂ ಪೊಲೀಶರು ತನಿಖೆಯನ್ನು ಆರಂಭಿಸುವುದಾಗಿ ತಿಳಿಸಿದ್ದಾರೆ. ಆಪ್ರದೇಶದಲ್ಲಿ ವಾಸಿಸುತ್ತಿದ್ದವರ ಬಳಿ ಹೋಗಿ ಮೂವರ ಗುರುತು ಪತ್ತೆ ಹಚ್ಚಲು ಕೇಳಿಕೊಳ್ಳಲಾಗಿತ್ತು, ಆದರೆ ಅವರು ಇವರ್ಯಾರು ಸ್ಥಳೀಯರಲ್ಲ, ಇವರ್ಯಾರು ಎಂದು ಗೊತ್ತಿಲ್ಲ ಎಂದು ಸ್ಥಳೀಯರೊಬ್ಬರು ಹೇಳಿದ್ದರು.

ಇದೀಗ ಅವರ ಕುಟುಂಬದಿಂದ ಡಿಎನ್‌ಎ ಪಡೆದುಕೊಂಡು ನೋಡಿದಾಗ ಆ ಮೂವರು ಹಾಗೂ ಕುಟುಂಬದವರ ಡಿಎನ್‌ಎ ಮ್ಯಾಚ್ ಆಗುತ್ತಿದೆ. ಹಾಗಾಗಿ ಅಂದು ಯೋಧರ ಗುಂಡಿಗೆ ಬಲಿಯಾದವರು ಉಗ್ರರಲ್ಲ ಕಾರ್ಮಿಕರು ಎಂದು ಹೇಳಲಾಗಿದೆ.

English summary
DNA profiling has established that the three young men killed by the Army during an alleged encounter in Jammu and Kashmir's Shopian district in July were, in fact, labourers from Rajouri.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X