ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು ಮತ್ತು ಕಾಶ್ಮೀರದಲ್ಲಿ 3.7 ತೀವ್ರತೆಯ ಭೂಕಂಪನ

|
Google Oneindia Kannada News

ಶ್ರೀನಗರ, ಡಿಸೆಂಬರ್ 21: ಜಮ್ಮು ಮತ್ತು ಕಾಶ್ಮೀರದಲ್ಲಿ ಸೋಮವಾರ ಬೆಳಿಗ್ಗೆ ಭೂಕಂಪ ಸಂಭವಿಸಿರುವುದಾಗಿ ತಿಳಿದುಬಂದಿದೆ. ರಿಕ್ಟರ್ ಮಾಪನದಲ್ಲಿ 3.7 ತೀವ್ರತೆಯಷ್ಟು ಭೂಕಂಪ ಸಂಭವಿಸಿದೆ ಎನ್ನಲಾಗಿದೆ.

ಸೋಮವಾರ ಬೆಳಿಗ್ಗೆ ಸುಮಾರು 8.33ರ ಸಮಯದಲ್ಲಿ ಭೂಕಂಪನವಾಗಿರುವುದಾಗಿ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ಮಾಹಿತಿ ನೀಡಿದೆ.

ಉಡುಗಿಸುವ ಚಳಿಯ ನಡುವೆ ಮತ್ತಷ್ಟು ನಡುಗಿಸಿದ ಭೂಮಿ: ದೆಹಲಿಯಲ್ಲಿ ಭೂಕಂಪನಉಡುಗಿಸುವ ಚಳಿಯ ನಡುವೆ ಮತ್ತಷ್ಟು ನಡುಗಿಸಿದ ಭೂಮಿ: ದೆಹಲಿಯಲ್ಲಿ ಭೂಕಂಪನ

ಬೆಳಿಗ್ಗೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನರು ಮನೆಗಳಿಂದ, ವಾಣಿಜ್ಯ ಮಳಿಗೆಗಳಿಂದ ಹೊರಗೆ ಓಡಿದ್ದಾರೆ. ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಭೂಕಂಪದಿಂದ ಯಾವುದೇ ಆಸ್ತಿಪಾಸ್ತಿ, ಜೀವಹಾನಿ ಸಂಭವಿಸಿರುವ ವರದಿಯಾಗಿಲ್ಲ.

3.7 Magnitude Of Earthquake Reported In Jammu And Kashmir

ಕಳೆದ ಗುರುವಾರವಷ್ಟೇ ರಾಜಸ್ಥಾನದ ಅಲ್ವಾರ್ ನಲ್ಲಿ 4.2 ತೀವ್ರತೆಯ ಭೂಕಂಪ ಸಂಭವಿಸಿದ್ದು, ದೆಹಲಿಯಲ್ಲಿಯೂ ಇದರ ಪರಿಣಾಮ ಉಂಟಾಗಿತ್ತು. ದೆಹಲಿ, ನೋಯ್ಡಾ, ಗುರುಗ್ರಾಮ, ಫಾಜಿಯಾಬಾದ್ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಭೂಮಿ ಕಂಪಿಸಿದ್ದಾಗಿ ತಿಳಿದುಬಂದಿತ್ತು.

ಡಿ. 20ರ ಭಾನುವಾರ ರಾತ್ರಿ ಟೋಕಿಯೋ, ಜಪಾನ್ ನಲ್ಲಿಯೂ 6.3 ತೀವ್ರತೆಯ ಭೂಕಂಪ ಸಂಭವಿಸಿರುವುದಾಗಿ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ಮಾಹಿತಿ ನೀಡಿದೆ. ಯಾವುದೇ ಜೀವಹಾನಿ ಸಂಭವಿಸಿದ ವರದಿಯಾಗಿಲ್ಲ.

English summary
An earthquake measuring 3.7 hit Jammu and Kashmir at 8:33 am today, according to National Center for Seismology,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X