ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

17 ವರ್ಷಗಳಲ್ಲೇ ಅತಿಹೆಚ್ಚು ಬಾರಿ ಕದನ ವಿರಾಮ ಉಲ್ಲಂಘನೆ!

|
Google Oneindia Kannada News

ಶ್ರೀನಗರ್, ನವೆಂಬರ್.13: ಜಮ್ಮು ಕಾಶ್ಮೀರದ ಗಡಿಯಲ್ಲಿ ಪಾಕಿಸ್ತಾನದ ಪುಂಡಾಟ ಹೆಚ್ಚಿದೆ. 2020ರ ಜನವರಿಯಿಂದ ನವೆಂಬರ್ ತಿಂಗಳವರೆಗೂ ನಡೆಸಿದ ಕದನ ವಿರಾಮ ಉಲ್ಲಂಘನೆಗಳ ಸಂಖ್ಯೆಯು 17 ವರ್ಷಗಳ ದಾಖಲೆಗಳನ್ನೇ ಹಿಂದಿಕ್ಕಿದೆ.

2020ರಲ್ಲಿ ಪಾಕಿಸ್ತಾನ ಸೇನೆಯು 4052 ಬಾರಿ ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆ ಮಾಡಿದ್ದಲ್ಲದೇ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ನವೆಂಬರ್ ನಲ್ಲಿ 128 ಬಾರಿ, ಅಕ್ಟೋಬರ್ ನಲ್ಲಿ 394 ಬಾರಿ ಕದನ ವಿರಾಮ ಉಲ್ಲಂಘಿಸಿತ್ತು.

ಜಮ್ಮು-ಕಾಶ್ಮೀರ ಎನ್ ಕೌಂಟರ್ ನಲ್ಲಿ 3 ಉಗ್ರರಿಗೆ ಹೆಡೆಮುರಿಜಮ್ಮು-ಕಾಶ್ಮೀರ ಎನ್ ಕೌಂಟರ್ ನಲ್ಲಿ 3 ಉಗ್ರರಿಗೆ ಹೆಡೆಮುರಿ

ಕಳೆದ 2019ರಲ್ಲಿ ಪಾಕಿಸ್ತಾನ ಸೇನೆಯು 3233 ಬಾರಿ ವಾಸ್ತವ ಗಡಿ ರೇಖೆಯಲ್ಲಿ ಕದನ ವಿರಾಮ ಉಲ್ಲಂಘಿಸಿದ್ದು, ಅಪ್ರಚೋದಿತ ಗುಂಡಿನ ದಾಳಿ ನಡೆಸಿತ್ತು. 2020ರ ಅಕ್ಟೋಬರ್ ತಿಂಗಳವರೆಗೆ 3800 ಬಾರಿ ಕದನ ವಿರಾಮ ಉಲ್ಲಂಘಿಸಿರುವ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಅನುರಾಗ್ ಶ್ರೀವಾಸ್ತವ್ ಮಾಹಿತಿ ನೀಡಿದ್ದಾರೆ.

2000ಕ್ಕಿಂತ ಹೆಚ್ಚು ಬಾರಿ ಕದನ ವಿರಾಮ ಉಲ್ಲಂಘನೆ

2000ಕ್ಕಿಂತ ಹೆಚ್ಚು ಬಾರಿ ಕದನ ವಿರಾಮ ಉಲ್ಲಂಘನೆ

ಪಾಕಿಸ್ತಾನ ಸೇನೆಯು 2020ರಲ್ಲಿ ಕದನ ವಿರಾಮ ಉಲ್ಲಂಘನೆ ಮೂಲಕ ಪದೇ ಪದೆ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದೆ. ಕಳೆದ ಆರು ತಿಂಗಳಿನಲ್ಲೇ 2000ಕ್ಕಿಂತ ಹೆಚ್ಚು ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿರುವುದು ಸ್ಪಷ್ಟವಾಗಿ ಅಂಕಿ ಅಂಶಗಳ ಮೂಲಕ ಗೊತ್ತಾಗುತ್ತಿದೆ ಎಂದು ರಕ್ಷಣಾ ಇಲಾಖೆ ವಕ್ತಾರ ಲೆಫ್ಟಿನೆಂಟ್ ಕರ್ನಲ್ ದೇವೇಂದರ್ ಆನಂದ್ ತಿಳಿಸಿದ್ದಾರೆ. ಜೂನ್ ಮೊದಲ 10 ದಿನಗಳಲ್ಲೇ 114 ಬಾರಿ ಕದನ ವಿರಾಮ ಉಲ್ಲಂಘಿಸಲಾಗಿದೆ. 2019ರ ಜೂನ್ ಮೊದಲ 10 ದಿನಗಳಲ್ಲಿ 118 ಬಾರಿ ಕದನ ವಿರಾಮ ಉಲ್ಲಂಘಿಸಿದ್ದರೆ, 2018ರಲ್ಲಿ ಇದೇ ಅವಧಿಯಲ್ಲಿ ಕೇವಲ 14 ಬಾರಿ ಪಾಕಿಸ್ತಾನ ಸೇನೆಯು ಕದನ ವಿರಾಮ ಉಲ್ಲಂಘಿಸಿತ್ತು.

ಭಾರತ ಲಾಕ್ ಡೌನ್ ಸಮಯ ಸಾಧಿಸಿದ ಪಾಕಿಸ್ತಾನ

ಭಾರತ ಲಾಕ್ ಡೌನ್ ಸಮಯ ಸಾಧಿಸಿದ ಪಾಕಿಸ್ತಾನ

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದಾಗಿ ಭಾರತದಲ್ಲಿ ಲಾಕ್ ಡೌನ್ ಜಾರಿಗೊಳಿಸಲಾಗಿತ್ತು. ಮಾರ್ಚ್ ತಿಂಗಳಿನಿಂದ ಮೂರು ತಿಂಗಳು ಇಡೀ ದೇಶವೇ ಕೊವಿಡ್-19 ಭೀತಿಯಲ್ಲಿ ಬಹುತೇಕ ಸ್ತಬ್ಧಗೊಂಡಿತ್ತು. ಇದೇ ಸಮಯವನ್ನು ಸಾಧಿಸಿದ ಪಾಕಿಸ್ತಾನವು ಜಮ್ಮು ಕಾಶ್ಮೀರದ ಗಡಿಯಲ್ಲಿ ಉಗ್ರರೊಂದಿಗೆ ಸೇರಿಕೊಂಡು ಕದನ ವಿರಾಮ ಉಲ್ಲಂಘನೆ ಮತ್ತು ಉಗ್ರರ ನುಸುಳುವಿಕೆ ಹಾಗೂ ಉಗ್ರ ಚಟುವಟಿಕೆಗಳಿಗೆ ಪ್ರೊತ್ಸಾಹ ನೀಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿತ್ತು. ಸಮಯ ಸಿಕ್ಕಾಗಲೆಲ್ಲ ಜಮ್ಮು ಕಾಶ್ಮೀರದ ಗಡಿಯುದ್ದಕ್ಕೂ ಕದನ ವಿರಾಮ ಉಲ್ಲಂಘಿಸುವ ಮೂಲಕ ಉಗ್ರರ ನುಸುಳುವಿಕೆಗೆ ಕುಮ್ಮಕ್ಕು ನೀಡುತ್ತಿತ್ತು ಎಂದು ಹೇಳಲಾಗುತ್ತಿದೆ.

ಕದನ ವಿರಾಮ ಉಲ್ಲಂಘನೆ ವರ್ಷ ಮತ್ತು ಅಂಕಿ-ಸಂಖ್ಯೆ

ಕದನ ವಿರಾಮ ಉಲ್ಲಂಘನೆ ವರ್ಷ ಮತ್ತು ಅಂಕಿ-ಸಂಖ್ಯೆ

ಕಳೆದ 2014ರಲ್ಲಿ 583 ಬಾರಿ ಕದನ ವಿರಾಮ ಉಲ್ಲಂಘಿಸಿದ್ದರೆ, 2015ರಲ್ಲಿ ಪಾಕಿಸ್ತಾನ ಸೇನೆಯು 405 ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿತ್ತು. 2009 ರಿಂದ 2013ರವರೆಗೂ ಹಂತ ಹಂತವಾಗಿ ಕದನ ವಿರಾಮ ಉಲ್ಲಂಘನೆಯ ಸಂಖ್ಯೆಯು ಏರುಮುಖವಾಗಿತ್ತು. 2009ರಲ್ಲಿ 28 ಬಾರಿ, 2010ರಲ್ಲಿ 44, 2011ರಲ್ಲಿ 62 ಬಾರಿ, 2012ರಲ್ಲಿ 114 ಬಾರಿ ಹಾಗೂ 2013ರಲ್ಲಿ 347 ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿರುವುದು ಅಂಕಿ-ಅಂಶಗಳಲ್ಲಿ ಗೊತ್ತಾಗಿದೆ.

2004-2006ರವರೆಗೂ ಕದನ ವಿರಾಮ ಉಲ್ಲಂಘನೆಯಾಗಿಲ್ಲ

2004-2006ರವರೆಗೂ ಕದನ ವಿರಾಮ ಉಲ್ಲಂಘನೆಯಾಗಿಲ್ಲ

ಕಳೆದ 2008ರಲ್ಲಿ 77 ಬಾರಿ ಪಾಕಿಸ್ತಾನ ಸೇನೆಯು ಕದನ ವಿರಾಮ ಉಲ್ಲಂಘನೆ ಮಾಡಿತ್ತು. 2007ರಲ್ಲಿ 21 ಬಾರಿ ಕದನ ವಿರಾಮ ಉಲ್ಲಂಘಿಸಿರುವ ಬಗ್ಗೆ ಗೊತ್ತಾಗಿತ್ತು. ಆದರೆ 2004, 2005 ಹಾಗೂ 2006ರಲ್ಲಿ ಒಂದೇ ಒಂದು ಬಾರಿ ಕದನ ವಿರಾಮ ಉಲ್ಲಂಘನೆ ಆಗಿಲ್ಲ ಎಂದು ಗೊತ್ತಾಗಿದೆ.

ಭಾರತದ ಎದುರೇಟಿಗೆ 8 ಪಾಕಿಸ್ತಾನದ ಯೋಧರು ಸಾವು

ವಾಸ್ತವ ಗಡಿ ರೇಖೆ ಉಲ್ಲಂಘಿಸಿದ ಪಾಕಿಸ್ತಾನದ ವಿರುದ್ಧ ಭಾರತೀಯ ಸೇನೆಯು ನಡೆಸಿರುವ ಪ್ರತಿದಾಳಿಯಲ್ಲಿ 8 ಮಂದಿ ಪಾಕಿಸ್ತಾನ ಯೋಧರು ಹತರಾಗಿದ್ದಾರೆ. ನಾಲ್ವರು ಪಾಕಿಸ್ತಾನ ಸೇನಾ ಯೋಧರು ಮತ್ತು ಮೂವರು ಪಾಕಿಸ್ತಾನ ವಿಶೇಷ ಸೇವಾ ಪಡೆ ಯೋಧರು ಸೇರಿದ್ದಾರೆ ಎಂದು ಭಾರತೀಯ ಸೇನಾ ಮೂಲಗಳು ತಿಳಿಸಿವೆ. ಭಾರತೀಯ ಸೇನೆ ನಡೆಸಿರುವ ಪ್ರತಿದಾಳಿಯಲ್ಲಿ ಪಾಕಿಸ್ತಾನದ 10 ರಿಂದ 12 ಮಂದಿ ಯೋಧರು ಗಾಯಗೊಂಡಿದ್ದಾರೆ. ಪಾಕಿಸ್ತಾನ ಸೇನೆಗೆ ಸೇರಿದ ಸೇನಾ ಬಂಕರ್, ಪ್ಯೂಯಿಲ್ ಡಂಪ್ ಮತ್ತು ಲಾಂಚ್ ಪ್ಯಾಡ್ ನಾಶಪಡಿಸಲಾಗಿದೆ ಎಂದು ತಿಳಿದು ಬಂದಿದೆ.

English summary
2020 Ceasefire Violation Records: Highest Provocative Firing Along Jammu Kashmir Border By Pakistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X