ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎನ್‌ಕೌಂಟರ್‌: ಇಬ್ಬರು ಪಾಕ್‌ ಉಗ್ರರು ಹತ, ಭಾರತೀಯ ಯೋಧರಿಬ್ಬರು ಹುತಾತ್ಮ

|
Google Oneindia Kannada News

ಶ್ರೀನಗರ, ಜು.09: ''ನಿಯಂತ್ರಣ ರೇಖೆಯ ಉದ್ದಕ್ಕೂ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರನ್ನು ಗುಂಡಿಕ್ಕಿ ಕೊಂದಿದ್ದಾರೆ,'' ಎಂದು ಜಮ್ಮು ಮತ್ತು ಕಾಶ್ಮೀರದ ರಕ್ಷಣಾ ವಕ್ತಾರರು ತಿಳಿಸಿದ್ದಾರೆ. ''ಇಬ್ಬರು ಭಾರತೀಯ ಸೈನಿಕರು ಕೂಡಾ ಸಾವನ್ನಪ್ಪಿದ್ದಾರೆ,'' ಎಂದು ವಕ್ತಾರರು ತಿಳಿಸಿದ್ದಾರೆ.

Recommended Video

ಪಾಕಿಸ್ತಾನದ ಉಗ್ರರಿಂದ ಮತ್ತೊಮ್ಮೆ ಗಡಿಯಲ್ಲಿ ಕಿರಿಕ್ | Oneindia Kannada

ಇದು ಹಲವು ದಿನಗಳಲ್ಲಿ ನಿಯಂತ್ರಣ ರೇಖೆ ಅಥವಾ ನಿಯಂತ್ರಣ ರೇಖೆಯ ಉದ್ದಕ್ಕೂ ನಡೆದ ಎರಡನೇ ಮುಖಾಮುಖಿಯಾಗಿದೆ. ನಿಯಂತ್ರಣ ರೇಖೆಯ ಉದ್ದಕ್ಕೂ ಕದನ ವಿರಾಮವನ್ನು ಆಗಾಗೇ ಉಲ್ಲಂಘನೆ ಮಾಡಲಾಗುತ್ತಿದೆ.

ಎನ್‌ಕೌಂಟರ್: ಹಿಜ್ಬುಲ್ ಮುಜಾಹಿದ್ದೀನ್ ಟಾಪ್ ಕಮಾಂಡರ್ ಹತ್ಯೆಎನ್‌ಕೌಂಟರ್: ಹಿಜ್ಬುಲ್ ಮುಜಾಹಿದ್ದೀನ್ ಟಾಪ್ ಕಮಾಂಡರ್ ಹತ್ಯೆ

ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಲಷ್ಕರ್-ಎ-ತೈಬಾ ಜಮ್ಮು ಪ್ರದೇಶದ ಭಾರತೀಯ ವಾಯುಪಡೆಯ ನೆಲೆಯ ಮೇಲೆ ಡ್ರೋನ್ ದಾಳಿ ನಡೆಸಿದ ಒಂದು ತಿಂಗಳೊಳಗೆ ಭಾರತೀಯ ಸೈನಿಕರು ಎನ್‌ಕೌಂಟರ್‌ಗಳು ಮತ್ತು ತೀವ್ರ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

2 Pakistan Terrorists Shot Dead In J&K Encounter: 2 Soldiers Killed In Action

ಈ ಬಗ್ಗೆ ಮಾಹಿತಿ ನೀಡಿರುವ ರಕ್ಷಣಾ ವಕ್ತಾರರು, "ರಾಜೌರಿ ಜಿಲ್ಲೆಯ ದಾದಲ್, ಸುಂದರಬಾನಿ ಸೆಕ್ಟರ್‌ನಲ್ಲಿ ಒಳನುಸುಳುವಿಕೆ ಮತ್ತು ಭಯೋತ್ಪಾದಕರ ಕೃತ್ಯಗಳ ಬಗ್ಗೆ ಮಾಹಿತಿ ಲಭಿಸಿದ ಆಧಾರದ ಮೇಲೆ, ಸೈನ್ಯವು ಜೂನ್ 29 ರಂದು ವ್ಯಾಪಕ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಕಾರ್ಯಾಚರಣೆ ವಿಸ್ತರಿಸಿ ಜುಲೈ 8 ರಂದು ದಾದಲ್ ಕಾಡಿನಲ್ಲಿ ಉಗ್ರರನ್ನು ಮುಖಾಮುಖಿ ಮಾಡಲಾಯಿತು," ಎಂದು ಹೇಳಿದರು.

ಎನ್‌ಕೌಂಟರ್: ಹಿಜ್ಬುಲ್ ಮುಜಾಹಿದ್ದೀನ್ ಟಾಪ್ ಕಮಾಂಡರ್ ಹತ್ಯೆಎನ್‌ಕೌಂಟರ್: ಹಿಜ್ಬುಲ್ ಮುಜಾಹಿದ್ದೀನ್ ಟಾಪ್ ಕಮಾಂಡರ್ ಹತ್ಯೆ

ಆದರೆ ಉಗ್ರರು ಗುಂಡು ಹಾರಿಸಿದ್ದು, ಗ್ರೆನೇಡ್‌ಗಳನ್ನು ಎಸೆಯಲು ಆರಂಭಿಸಿದರು. ಎನ್‌ಕೌಂಟರ್‌ ಆಗಿ ಇಬ್ಬರು ವಿದೇಶಿ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಹಾಗೆಯೇ ಕಾರ್ಯಾಚರಣೆಯಲ್ಲಿ ಇಬ್ಬರು ಭಾರತೀಯ ಯೋಧರು ಕೂಡಾ ಮೃತಪಟ್ಟಿದ್ದಾರೆ. ಇನ್ನಿಬ್ಬರು ಯೋಧರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮುಂದುವರೆದಿದೆ," ಎಂದು ಮಾಹಿತಿ ನೀಡಿದ್ದಾರೆ.

ಇನ್ನು ಇದಕ್ಕೂ ಮುನ್ನ ಜುಲೈ 7 ರಂದು ನಡೆದ ಎನ್‌ಕೌಂಟರ್‌ನಲ್ಲಿ, ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ, ಮೆಹ್ರಾಜುದ್ದೀನ್ ಹಲ್ವಾಯ್‌ನನ್ನು ಭದ್ರತಾ ಪಡೆಗಳು ಗುಂಡಿಕ್ಕಿ ಕೊಂದಿದೆ.

(ಒನ್‌ಇಂಡಿಯಾ ಸುದ್ದಿ)

English summary
Two Pakistani terrorists were shot dead in an encounter along the Line of Control. Two Indian soldiers were killed in action said a defence spokesperson in Jammu and Kashmir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X