ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಶಸ್ವಿ 100 ಕಾರ್ಯಾಚರಣೆ: 2021ರಲ್ಲಿ 20 ವಿದೇಶಿಗರು ಸೇರಿ 182 ಉಗ್ರರು ಹತ

|
Google Oneindia Kannada News

ಶ್ರೀನಗರ, ಡಿಸೆಂಬರ್‌ 31: ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಭದ್ರತಾ ಪಡೆಗಳು ಕೇಂದ್ರಾಡಳಿತ ಪ್ರದೇಶದಲ್ಲಿ ನಡೆಸಿದ 100 ಯಶಸ್ವಿ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳಲ್ಲಿ 44 ಉನ್ನತ ಕಮಾಂಡರ್‌ಗಳು ಮತ್ತು 20 ವಿದೇಶಿಯರು ಸೇರಿದಂತೆ ಒಟ್ಟು 182 ಭಯೋತ್ಪಾದಕರನ್ನು 2021 ರಲ್ಲಿ ಹತರಾಗಿದ್ದಾರೆ ಎಂದು ಪೊಲೀಸ್ ಮುಖ್ಯಸ್ಥ ದಿಲ್ಬಾಗ್ ಸಿಂಗ್ ಹೇಳಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ 100ನೇ ಯಶಸ್ವಿ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯ ಒಂದು ದಿನದ ನಂತರ ಭಯೋತ್ಪಾದಕರ ಒಟ್ಟು ಸಾವುನೋವುಗಳ ಸಂಖ್ಯೆಯನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಪೊಲೀಸ್‌ ಮಹಾನಿರ್ದೇಶಕರು ಬಹಿರಂಗಪಡಿಸಿದ್ದಾರೆ. ಕಳೆದ 24 ಗಂಟೆಗಳಲ್ಲಿ ಪಂಥಾ ಚೌಕ್‌ನಲ್ಲಿ ಪೊಲೀಸ್ ಬಸ್‌ನ ಮೇಲೆ ನಡೆದ ದಾಳಿಯಲ್ಲಿ ಭಾಗಿಯಾಗಿರುವ ಒಟ್ಟು ಒಂಬತ್ತು ಜೈಶ್-ಎ-ಮೊಹಮ್ಮದ್ ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ. ಈ ವರ್ಷದಲ್ಲಿ ಒಟ್ಟು 20 ವಿದೇಶಿ ಭಯೋತ್ಪಾದಕರು ಕೂಡಾ ಹತರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಜಮ್ಮು: 31 ವರ್ಷದಲ್ಲಿ 89 ಕಾಶ್ಮೀರಿ ಪಂಡಿತರು ಸೇರಿ 1,724 ಮಂದಿಯ ಹತ್ಯೆಗೈದ ಉಗ್ರರುಜಮ್ಮು: 31 ವರ್ಷದಲ್ಲಿ 89 ಕಾಶ್ಮೀರಿ ಪಂಡಿತರು ಸೇರಿ 1,724 ಮಂದಿಯ ಹತ್ಯೆಗೈದ ಉಗ್ರರು

ಅಫ್ಘಾನಿಸ್ತಾನದಿಂದ ಯಾವುದೇ ಭಯೋತ್ಪಾದಕರು ದೇಶದೊಳಗೆ ನುಸುಳುವ ಯಾವುದೇ ನಿದರ್ಶನ ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದಲ್ಲಿ ಕಡಿಮೆ ಆಗಿದೆ ಎಂದು ಡಿಜಿಪಿ ಸಿಂಗ್ ಹೇಳಿದ್ದಾರೆ.

184 Terrorists Killed In J&K In 2021 Says Top Cop

"ಕಳೆದ ರಾತ್ರಿ, ನಾವು 100 ನೇ ಯಶಸ್ವಿ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದ್ದೇವೆ. 100 ಯಶಸ್ವಿ ಕಾರ್ಯಾಚರಣೆಗಳಲ್ಲಿ, ನಾವು ವಿವಿಧ ಸಂಘಟನೆಗಳ 182 ಭಯೋತ್ಪಾದಕರನ್ನು ನಿರ್ಮೂಲನೆ ಮಾಡಿದ್ದೇವೆ," ಎಂದು ಜಮ್ಮು ಕಾಶ್ಮೀರ ಪೊಲೀಸರ ವಾರ್ಷಿಕ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಜಮ್ಮು ಕಾಶ್ಮೀರದಲ್ಲಿ ನಿರಂತರವಾಗಿ ಯಶಸ್ವಿ ಭಯೋತ್ಪಾದನಾ-ವಿರೋಧಿ ಕಾರ್ಯಾಚರಣೆಗಳ ಕಾರಣದಿಂದಾಗಿ, ಆಗಾಗ್ಗೆ ಭಯೋತ್ಪಾದಕ ದಾಳಿಯಿಂದ ಬಳಲುತ್ತಿದ್ದ ಜಮ್ಮು ಕಾಶ್ಮೀರವನ್ನು ಭಯೋತ್ಪಾದನೆಯಿಂದ ಮುಕ್ತ ಮಾಡಲಾಗಿದೆ ಎಂದು ಹೇಳಿದರು.

ಹತ ಉಗ್ರರು ಯಾವ ಸಂಘಟನೆಗೆ ಸೇರಿದವರು?

"ಈ ವರ್ಷ ಹತರಾದ 44 ಪ್ರಮುಖ ಭಯೋತ್ಪಾದಕರಲ್ಲಿ 26 ಲಷ್ಕರ್-ಎ-ತೈಬಾ (ಎಲ್‌ಇಟಿ), 10 ಜೈಶ್-ಎ-ಮೊಹಮ್ಮದ್ (ಜೆಇಎಂ), ಏಳು ಹಿಜ್ಬುಲ್ ಮುಜಾಹಿದ್ದೀನ್ (ಎಚ್‌ಎಂ) ಮತ್ತು ಒಬ್ಬರು ಅಲ್-ಬದ್ರ್‌ಗೆ ಸೇರಿದವರು," ಎಂದು ಕೂಡಾ ಮಾಹಿತಿ ನೀಡಿದ್ದಾರೆ. ಹತರಾದ ಭಯೋತ್ಪಾದಕರ ಪೈಕಿ 20 ಮಂದಿ ವಿದೇಶಿಗರು ಎಂದು ಕೂಡಾ ತಿಳಿಸಿದರು. ಈ ಭಯೋತ್ಪಾದಕರು ಪಾಕಿಸ್ತಾನದ ಆಜ್ಞೆಯ ಮೇರೆಗೆ ಭಯೋತ್ಪಾದಕ ಕೃತ್ಯಗಳನ್ನು ಸಂಚು ರೂಪಿಸುವ ಕಾರ್ಯ ಮಾಡಿದ್ದಾರೆ ಎಂದು ಕೂಡಾ ತಿಳಿಸಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ 36 ಗಂಟೆಗಳ ಸೇನಾ ಕಾರ್ಯಾಚರಣೆಯಲ್ಲಿ 9 ಉಗ್ರರ ಹತ್ಯೆ ಜಮ್ಮು ಕಾಶ್ಮೀರದಲ್ಲಿ 36 ಗಂಟೆಗಳ ಸೇನಾ ಕಾರ್ಯಾಚರಣೆಯಲ್ಲಿ 9 ಉಗ್ರರ ಹತ್ಯೆ

ಗಡಿ ರಕ್ಷಣೆ ವಿಚಾರದಲ್ಲಿ ಯಶಸ್ವಿ ವರ್ಷ ಇದಾಗಿದೆ

"ಹಲವು ವರ್ಷಗಳ ನಂತರ, ಈ ಬಾರಿ ಅತ್ಯಂತ ಕಡಿಮೆ ಸಂಖ್ಯೆಯ ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರದಲ್ಲಿ ಸಕ್ರಿಯರಾಗಿದ್ದಾರೆ. ದೀರ್ಘಾವಧಿಯ ನಂತರ ಈ ಸಂಖ್ಯೆ ಕಡಿಮೆಯಾಗಿದೆ," ಎಂದರು. ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆ ಮತ್ತು ಗಡಿಯಾಚೆಗಿನ ಒಳನುಸುಳುವಿಕೆಯನ್ನು ನಿಗ್ರಹಿಸುವ ವಿಷಯದಲ್ಲಿಯೂ ಈ ವರ್ಷ ಯಶಸ್ವಿಯಾಗಿದ್ದೇವೆ ಎಂದು ಡಿಜಿಪಿ ಹೇಳಿದರು. "ಗಡಿ ರಕ್ಷಣೆಯ ವಿಷಯದಲ್ಲಿ ಇದು ಯಶಸ್ವಿ ವರ್ಷವಾಗಿದೆ. ಬಹಳ ಸಮಯದ ನಂತರ, ಒಳನುಸುಳುವಿಕೆಯ ಮಟ್ಟ ಕಡಿಮೆಯಾಗಿದೆ. ಈ ವರ್ಷ ಕೇವಲ 34 ಭಯೋತ್ಪಾದಕರು ಮಾತ್ರ ಗಡಿಯಾಚೆಯಿಂದ ದೇಶಕ್ಕೆ ನುಸುಳಲು ಸಾಧ್ಯವಾಯಿತು. ಅವರಲ್ಲಿ ಬಹಳಷ್ಟು ಮಂದಿ ತಟಸ್ಥರಾಗಿದ್ದಾರೆ. ಉಳಿದವರು ಟ್ರ್ಯಾಕ್ ಮಾಡಲಾಗುತ್ತಿದೆ," ಎಂದಿದ್ದಾರೆ.

"ನಾವು ವಿದೇಶಿ ಭಯೋತ್ಪಾದಕರಾಗಲಿ ಅಥವಾ ಸ್ಥಳೀಯರಾಗಲಿ ಯಾರೇ ಆದರೂ ಅವರ ವಿರುದ್ಧ ಹೋರಾಟ ನಡೆಸುತ್ತೇವೆ. ಜನರನ್ನು ಭಯಭೀತಗೊಳಿಸಲು ಕೈಯಲ್ಲಿ ಬಂದೂಕು ಹಿಡಿದಿರುವ ಇಬ್ಬರಿಂದಲೂ ಬೆದರಿಕೆ ಇದೆ. ಕೇಂದ್ರಾಡಳಿತ ಪ್ರದೇಶದಲ್ಲಿ ಈ ವರ್ಷ 134 ಯುವಕರು ಭಯೋತ್ಪಾದಕರಾಗಿದ್ದಾರೆ. ಆದರೆ ಅವರಲ್ಲಿ 72 ಮಂದಿ ಸಾವನ್ನಪ್ಪಿದ್ದಾರೆ ಮತ್ತು 22 ಮಂದಿಯನ್ನು ಬಂಧಿಸಲಾಗಿದೆ," ಎಂದು ವಿವರಣೆ ನೀಡಿದರು. (ಒನ್‌ಇಂಡಿಯಾ ಸುದ್ದಿ)

English summary
182 Terrorists Killed In J&K In 2021 Says Top Cop.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X