ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಉಗ್ರರ ದಾಳಿ, 18 ಸಿಆರ್ ಪಿಎಫ್ ಸಿಬ್ಬಂದಿ ಹುತಾತ್ಮ

|
Google Oneindia Kannada News

ಶ್ರೀನಗರ್ (ಜಮ್ಮು ಮತ್ತು ಕಾಶ್ಮೀರ), ಫೆಬ್ರವರಿ 14: ಜಮ್ಮು ಮತ್ತು ಕಾಶ್ಮೀರದಲ್ಲಿ ಗುರುವಾರ ಬಾಂಬ್ ಸ್ಫೋಟದಲ್ಲಿ ಕೇಂದ್ರೀಯ ಮೀಸಲು ಪಡೆಯ 18 ಸಿಬ್ಬಂದಿ ಹುತಾತ್ಮರಾಗಿ, ಹಲವರು ಗಾಯಗೊಂಡಿದ್ದಾರೆ. ಸಿಆರ್ ಪಿಎಫ್ ಸಿಬ್ಬಂದಿಯನ್ನು ಕರೆದೊಯ್ಯುತ್ತಿದ್ದ ವಾಹನವನ್ನು ಗುರಿ ಮಾಡಿಕೊಂಡು ಉಗ್ರಗಾಮಿಗಳು ಈ ದಾಳಿ ನಡೆಸಿದ್ದಾರೆ.

ವಾಹನವು ಸಿಅರ್ ಪಿಎಫ್ ಬೆಟಾಲಿಯನ್ 54ಕ್ಕೆ ಸೇರಿದ್ದಾಗಿತ್ತು. ಈ ಸ್ಫೋಟದ ಹೊಣೆಯನ್ನು ಜೈಷ್-ಇ-ಮೊಹ್ಮದ್ ಹೊತ್ತಿಕೊಂದಿದೆ. ಸ್ಥಳೀಯ ಯುವಕರಿಂದ ನಡೆದ ಫಿದಾಯಿನ್ ದಾಳಿ ಎಂದು ಉಗ್ರ ಸಂಘಟನೆ ಹೇಳಿಕೊಂಡಿದೆ. ಶ್ರೀನಗರ್ ನಿಂದ ಮೂವತ್ತು ಕಿಲೋಮಿಟರ್ ದುರದ ಜಮ್ಮು-ಶ್ರೀನರ್ ಹೆದ್ದಾರಿಯಲ್ಲಿರುವ ಲೆಥ್ ಪುರ್ ನಲ್ಲಿ ಈ ಘಟನೆ ನಡೆದಿದೆ.

26/11 ಮುಂಬೈ ದಾಳಿ: ಪಾಕ್ ನ ಇಬ್ಬರು ಸೇನಾಧಿಕಾರಿ ವಿರುದ್ಧ ಜಾಮೀನುರಹಿತ ವಾರಂಟ್26/11 ಮುಂಬೈ ದಾಳಿ: ಪಾಕ್ ನ ಇಬ್ಬರು ಸೇನಾಧಿಕಾರಿ ವಿರುದ್ಧ ಜಾಮೀನುರಹಿತ ವಾರಂಟ್

ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ವಕ್ತಾರರು ಈ ದುರ್ಘಟನೆಯನ್ನು ಖಾತ್ರಿ ಪಡಿಸಿದ್ದು, ಸುಧಾರಿತ ಸ್ಫೋಟಕ ಸಲಕರಣೆ ಬಳಸಿ ಸ್ಫೋಟ ಮಾಡಲಾಗಿದೆ ಎಂದು ತಿಳಿಸಲಾಗಿದೆ. ಸ್ಫೋಟದ ನಂತರ ಪುಲ್ವಾಮ ಜಿಲ್ಲೆಯಲ್ಲಿ ಭದ್ರತಾ ಪಡೆಯನ್ನು ಗುರಿ ಮಾಡಿಕೊಂಡು ದಾಳಿ ನಡೆಸಲಾಗಿದೆ.

Terrorist Attack

ಸಿಆರ್ ಪಿಎಫ್ ಸಿಬ್ಬಂದಿಯನ್ನು ಕರೆದೊಯ್ಯುಲಾಗುತ್ತಿತ್ತು. ‌ಅವಂತಿಪುರದಲ್ಲಿ ವಾಹನವೊಂದರಲ್ಲಿ ಸುಧಾರಿತ ಸ್ಫೋಟಕವನ್ನು ಅಳವಡಿಸಲಾಗಿತ್ತು. ಜಮ್ಮುವಿನಿಂದ ಶ್ರೀನಗರ್ ಗೆ ಸಾಗುವ ಮಾರ್ಗ ಮಧ್ಯದಲ್ಲಿ ವಾಹನದ ಮೇಲೆ ದಾಳಿ ನಡೆದಿದೆ. ಸುಧಾರಿತ ಸ್ಪೋಟಕವು ಆಟೋರಿಕ್ಷಾದಲ್ಲಿತ್ತು. ಅದನ್ನು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ನಿಲ್ಲಿಸಲಾಗಿತ್ತು. ಇದೀಗ ಸಿಆರ್ ಪಿಎಫ್, ಜಮ್ಮು-ಕಾಶ್ಮೀರದ ಪೊಲೀಸರು ಹಾಗೂ ಸೇನೆ ಕಾವಲು ಕಾಯುತ್ತಿದೆ.

Terrorist Attack

ಈ ಸ್ಫೋಟಕವನ್ನು ಭದ್ರತಾ ಸಿಬ್ಬಂದಿಯ ವಾಹನವನ್ನು ಗುರಿ ಆಗಿಸಿಕೊಂಡು ಇಡಲಾಗಿದೆ. ಭದ್ರತಾ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

English summary
12 CRPF jawans have lost their lives in an IED blast in Awantipora, Pulwama, Jammu and Kashmir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X