ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು-ಕಾಶ್ಮೀರದ ಅನಂತ್ ನಾಗ್ ನಲ್ಲಿ 14 ಪರ್ಸೆಂಟ್ ಮತದಾನ

|
Google Oneindia Kannada News

ಶ್ರೀನಗರ್ (ಜಮ್ಮು ಮತ್ತು ಕಾಶ್ಮೀರ), ಏಪ್ರಿಲ್ 24: ಅನಂತ್ ನಾಗ್ ಲೋಕಸಭಾ ಕ್ಷೇತ್ರದಲ್ಲಿ ಭದ್ರತಾ ಕಾರಣಗಳಿಗಾಗಿ ಮೂರು ಹಂತದಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಮಂಗಳವಾರ 13.61 ಪರ್ಸೆಂಟ್ ಮತದಾನವಾಗಿದೆ. ಅನಂತ್ ನಾಗ್ ಜಿಲ್ಲೆಗೆ ಮೊದಲ ಹಂತದಲ್ಲಿ ಚುನಾವಣೆ ಆಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಕುಲ್ಗಾಮ್ ಜಿಲ್ಲೆಯಲ್ಲಿ ಏಪ್ರಿಲ್ 29ರಂದು ಮತ್ತು ಪುಲ್ವಾಮಾ ಹಾಗೂ ಶೋಪಿಯಾನ್ ನಲ್ಲಿ ಮೇ 6ನೇ ತಾರೀಕು ಮತದಾನ ನಡೆಯಲಿದೆ. ಮುಖ್ಯ ಚುನಾವಣಾಧಿಕಾರಿ ಶೈಲೇಂದ್ರ ಕುಮಾರ್ ಮಾತನಾಡಿ, ಮತದಾನ ಶಾಂತಯುತವಾಗಿ ನಡೆದಿದೆ ಎಂದು ತಿಳಿಸಿದ್ದಾರೆ. ಈ ಜಿಲ್ಲೆಯಲ್ಲಿ ಅನಂತ್ ನಾಗ್, ಬಿಜ್ ಬೆಹರಾ, ದೂರು, ಕೊಕರ್ ನಾಗ್, ಪಹಲ್ಗಾಮ್ ಹಾಗೂ ಶಂಗುಸ್ ವಿಧಾನಸಭಾ ಕ್ಷೇತ್ರಗಳು ಬರುತ್ತವೆ.

ಸಂಜೆ ಐದು ಗಂಟೆ ವೇಳೆಗೆ ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ? ಸಂಜೆ ಐದು ಗಂಟೆ ವೇಳೆಗೆ ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ?

ಪಹಲ್ಗಾಮ್ ನಲ್ಲಿ ಅತಿ ಹೆಚ್ಚು ಅಂದರೆ ಶೇ 20.37ರಷ್ಟು (17,649 ಮತಗಳು) ಹಾಗೂ ಬಿಜ್ ಬೆಹರಾನಲ್ಲಿ ಅತ್ಯಂತ ಕಡಿಮೆ ಅಂದರೆ ಶೇ 2.04ರಷ್ಟು (1,905 ಮತಗಳು) ಮತದಾನ ಆಗಿದೆ. ಅನಂತ್ ನಾಗ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ 3.47 (3,004 ಮತಗಳು), ದೂರು ಶೇ 17.28 (13,598 ಮತಗಳು), ಕೊಕರ್ ನಾಗ್ ಶೇ 19.5 (18,312 ಮತಗಳು) ಹಾಗೂ ಶಂಗುಸ್ ನಲ್ಲಿ ಶೇ 15.1 (13,354 ಮತಗಳು) ಮತದಾನ ಆಗಿದೆ.

14 percent of voting in Jammu and Kashmirs Ananthnag

ಒಟ್ಟಾರೆಯಾಗಿ 71,777 ಮತಗಳು, ಅದರಲ್ಲಿ ವಲಸಿಗರ 4,101 ಮತಗಳು ಸೇರಿವೆ. 2014ರ ಲೋಕಸಭಾ ಚುನಾವಣೆಯಲ್ಲಿ ಶೇ 39.37ರಷ್ಟು ಮತದಾನ ಆಗಿತ್ತು. ಅದಕ್ಕೆ ಹೋಲಿಸಿದರೆ ಈ ಬಾರಿ ಕಡಿಮೆ ಮತದಾನ ಆಗಿದೆ. ಒಟ್ಟಾರೆಯಾಗಿ 5.27 ಲಕ್ಷ ಮತದಾರರಿದ್ದರೆ, 2.69 ಲಕ್ಷ ಪುರುಷ ಹಾಗೂ 2.57 ಲಕ್ಷ ಮಹಿಳಾ ಮತದಾರರಿದ್ದಾರೆ.

ಕರ್ನಾಟಕ ಲೋಕಸಭೆ ಚುನಾವಣೆ 2ನೇ ಹಂತದ ಒಟ್ಟಾರೆ ಚಿತ್ರಣಕರ್ನಾಟಕ ಲೋಕಸಭೆ ಚುನಾವಣೆ 2ನೇ ಹಂತದ ಒಟ್ಟಾರೆ ಚಿತ್ರಣ

ಜಿಲ್ಲೆಯಲ್ಲಿ ಒಟ್ಟಾರೆ 714 ಮತದಾನ ಕೇಂದ್ರಗಳಿದ್ದವು. ಅದರಲ್ಲಿ ವಲಸಿಗ ಮತದಾರರಿಗೆ 21 ಕೇಂದ್ರಗಳಿದ್ದವು. ಈ ಬಾರಿ ಮೊದಲ ಸಲ ಮತ ಹಾಕಿದವರ ಸಂಖ್ಯೆ 54,663. ಅದರಲ್ಲಿ 24,536 ಮಂದಿ 18ರಿಂದ 21ರ ವಯೋಮಾನದವರು.

English summary
A voter turnout of 13.61 per cent was recorded Tuesday in the Jammu and Kashmir's Anantnag Parliamentary constituency where polls are being held in three phases due to security reasons.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X