ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಕದಿನ ಕ್ರಿಕೆಟ್‌: ಮೊದಲ ಬಾರಿಗೆ ಆಸ್ಟ್ರೇಲಿಯಾ ನೆಲದಲ್ಲಿ ಪಂದ್ಯ ಗೆದ್ದು ಇತಿಹಾಸ ಬರೆದ ಜಿಂಬಾಬ್ವೆ

|
Google Oneindia Kannada News

ಜಿಂಬಾಬ್ವೆ ಕ್ರಿಕೆಟ್ ತಂಡ ಶನಿವಾರ ಆಸ್ಟ್ರೇಲಿಯಾದಲ್ಲಿ ಇತಿಹಾಸ ನಿರ್ಮಿಸಿದೆ. ಇದೇ ಮೊದಲ ಬಾರಿಗೆ ಜಿಂಬಾಬ್ವೆ ಆಸ್ಟ್ರೇಲಿಯಾ ತಂಡವನ್ನು ಆಸ್ಟ್ರೇಲಿಯಾದಲ್ಲಿ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಸೋಲಿಸಿದೆ. ಟಿ20 ವಿಶ್ವಕಪ್ ಟೂರ್ನಿ ಹತ್ತಿರದಲ್ಲೇ ಇರುವ ಸಂದರ್ಭದಲ್ಲಿ ಜಿಂಬಾಬ್ವೆ ತಂಡಕ್ಕೆ ಈ ಗೆಲವು ಭಾರಿ ವಿಶ್ವಾಸ ನೀಡಿದೆ.

ಜಿಂಬಾಬ್ವೆ ಆಲ್ ರೌಂಡರ್ ರಿಯಾನ್‌ ಬರ್ಲ್ ಶನಿವಾರ ಕೇವಲ ಮೂರು ಓವರ್‌ಗಳಲ್ಲಿ 10 ರನ್ ನೀಡಿ 5 ವಿಕೆಟ್ ಪಡೆಯುವ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ ಆಘಾತ ನೀಡಿದರು. ಟೌನ್ಸ್‌ವಿಲ್ಲೆಯಲ್ಲಿ ನಡೆದ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ಮೂರು ವಿಕೆಟ್‌ಗಳ ಅಂತರದಲ್ಲಿ ರೋಚಕ ಗೆಲುವು ಸಾಧಿಸುವ ಮೂಲಕ ಇತಿಹಾಸ ನಿರ್ಮಿಸಿತು.

ಹಾಂಕಾಂಗ್‌ ವಿರುದ್ಧ ಗೆದ್ದ ಪಾಕಿಸ್ತಾನ: ಸೆಪ್ಟೆಂಬರ್ 4ರಂದು ಮತ್ತೆ ಭಾರತ-ಪಾಕಿಸ್ತಾನ ಪಂದ್ಯಹಾಂಕಾಂಗ್‌ ವಿರುದ್ಧ ಗೆದ್ದ ಪಾಕಿಸ್ತಾನ: ಸೆಪ್ಟೆಂಬರ್ 4ರಂದು ಮತ್ತೆ ಭಾರತ-ಪಾಕಿಸ್ತಾನ ಪಂದ್ಯ

ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಜಿಂಬಾಬ್ವೆ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿತು. ಆಸ್ಟ್ರೇಲಿಯಾ ಪರವಾಗಿ ಡೇವಿಡ್ ವಾರ್ನರ್ ಹೊರತುಪಡಿಸಿ ಉಳಿದ ಇನ್ಯಾವ ಬ್ಯಾಟರ್ ಕೂಡ ರನ್ ಗಳಿಸುವಲ್ಲಿ ವಿಫಲರಾದರು. ಆಸ್ಟ್ರೇಲಿಯಾ ಆರಂಭಿಕ ಆಟಗಾರ ಡೇವಿಡ್ ವಾರ್ನರ್ 96 ಎಸೆತಗಳಲ್ಲಿ 94 ರನ್ ಗಳಿಸಿದರು. ಅಂತಿಮವಾಗಿ ಆಸ್ಟ್ರೇಲಿಯಾ 31 ಓವರ್‌ಗಳಲ್ಲಿ 141 ರನ್‌ಗಳಿಗೆ ಆಲೌಟ್ ಆಯಿತು.

 ರಿಯಾನ್‌ ಬರ್ಲ್ ದಾಳಿಗೆ ಕುಸಿದ ಬಲಿಷ್ಠ ಆಸ್ಟ್ರೇಲಿಯಾ

ರಿಯಾನ್‌ ಬರ್ಲ್ ದಾಳಿಗೆ ಕುಸಿದ ಬಲಿಷ್ಠ ಆಸ್ಟ್ರೇಲಿಯಾ

ಆಸ್ಟ್ರೇಲಿಯಾ ತಂಡದ ನಾಯಕ ಆರನ್ ಫಿಂಚ್ ಬ್ಯಾಟಿಂಗ್ ವೈಫಲ್ಯವನ್ನು ಮುಂದುವರೆಸಿದರು. ಕೇವಲ 5 ರನ್ ಗಳಿಸಿದ್ದಾಗ ವೇಗದ ಬೌಲರ್ ರಿಚರ್ಡ್ ನಾಗರವ ಬೌಲಿಂಗ್‌ನಲ್ಲಿ ರಿಯಾನ್ ಬರ್ಲ್‌ಗೆ ಕ್ಯಾಚ್ ನೀಡಿ ಔಟಾದರು. ನಂತರ ಬಂದ ಸ್ಟೀವ್ ಸ್ಮಿತ್ ಕೇವಲ 1 ರನ್ ಗಳಿಸಿ ಔಟಾದರು.

ವಿಕೆಟ್ ಕೀಪರ್ ಬ್ಯಾಟರ್ ಅಲೆಕ್ಸ್ ಕ್ಯಾರಿ 4 ರನ್, ಮಾರ್ಕಸ್ ಸ್ಟೊಯಿನ್ಸ್ 3 ರನ್, ಕ್ರಿಸ್ ಗ್ರೀನ್ 3 ರನ್, ಗ್ಲೆನ್ ಮ್ಯಾಕ್ಸ್‌ವೆಲ್ 19 ರನ್ ಗಳಿಸಿ ಔಟಾದರೆ, ಆಸ್ಟಿನ್ ಅಗರ್ ಶೂನ್ಯಕ್ಕೆ ಪೆವಿಲಿಯನ್ ಸೇರಿಕೊಂಡರು. ಮಿಚೆಲ್ ಸ್ಟಾರ್ಕ್2 ರನ್, ಜೋಶ್ ಹೇಜಲ್ ಹುಡ್ ಶೂನ್ಯಕ್ಕೆ ಔಟಾದರು. ಆಡಮ್ ಜಂಪಾ 1 ರನ್‌ ಗಳಿಸಿ ಔಟಾಗದೆ ಉಳಿದುಕೊಂಡರು. ಆಸ್ಟ್ರೇಲಿಯಾದ 141 ರನ್ ಗಳಲ್ಲಿ ಡೇವಿಡ್ ವಾರ್ನರ್ ಒಬ್ಬರೇ 94 ರನ್ ಗಳಿಸಿ ದಾಖಲೆ ಬರೆದರು.

 ಏಷ್ಯಾಕಪ್ 2022: ಗಾಯಗೊಂಡ ರವೀಂದ್ರ ಜಡೇಜಾ ಟೂರ್ನಿಯಿಂದ ಹೊರಕ್ಕೆ, ಅಕ್ಷರ್ ಪಟೇಲ್‌ಗೆ ಸ್ಥಾನ ಏಷ್ಯಾಕಪ್ 2022: ಗಾಯಗೊಂಡ ರವೀಂದ್ರ ಜಡೇಜಾ ಟೂರ್ನಿಯಿಂದ ಹೊರಕ್ಕೆ, ಅಕ್ಷರ್ ಪಟೇಲ್‌ಗೆ ಸ್ಥಾನ

 ಎಚ್ಚರಿಕೆಯಿಂದ ಬ್ಯಾಟ್ ಮಾಡಿದ ಜಿಂಬಾಬ್ವೆ ಬ್ಯಾಟರ್

ಎಚ್ಚರಿಕೆಯಿಂದ ಬ್ಯಾಟ್ ಮಾಡಿದ ಜಿಂಬಾಬ್ವೆ ಬ್ಯಾಟರ್

ಕಡಿಮೆ ಮೊತ್ತವನ್ನು ಬೆನ್ನತ್ತುವುದು ಜಿಂಬಾಬ್ವೆಗೆ ಸುಲಭವೇನೂ ಇರಲಿಲ್ಲ. ಆಸ್ಟ್ರೇಲಿಯಾ ತಂಡದಲ್ಲಿರುವ ವಿಶ್ವದ ಉತ್ತಮ ಬೌಲರ್ ಗಳನ್ನು ಅದು ಎದುರಿಸಬೇಕಾಗಿತ್ತು. ಆದ್ದರಿಂದಲೇ ಜಿಂಬಾಬ್ವೆ ಆರಂಭಿಕ ಬ್ಯಾಟರ್ ಗಳು ಎಚ್ಚರಿಕೆಯಿಂದ ರನ್ ಗಳಿಸಲು ಆರಂಭಿಸಿದರು.

ಟಿ. ಕೈಟಾನೊ 19 ರನ್, ತಡಿವಾನಾಶೆ ಮರುಮಾನಿ 35 ರನ್ ಗಳಿಸಿ ಜಿಂಬಾಬ್ವೆ ತಂಡಕ್ಕೆ ಉತ್ತಮ ಆರಂಭ ನೀಡಿದರು. 38 ರನ್‌ಗಳ ಜೊತೆಯಾಟವನ್ನು ಜೋಶ್ ಹೇಝಲ್‌ವುಡ್ ಮುರಿದರು. ಟಿ. ಕೈಟಾನೊ ಸ್ಟೀವ್ ಸ್ಮಿತ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

 ಸೋಲುವ ಹಂತದಲ್ಲಿದ್ದ ಜಿಂಬಾಬ್ವೆ

ಸೋಲುವ ಹಂತದಲ್ಲಿದ್ದ ಜಿಂಬಾಬ್ವೆ

ಉತ್ತಮ ಆರಂಭವನ್ನು ಕಂಡ ಜಿಂಬಾಬ್ವೆಗೆ ಮೊದಲ ವಿಕೆಟ್ ಪತನದ ನಂತರ ಆಘಾತ ಎದುರಾಯಿತು, 38 ರನ್ ಗಳಿಗೆ ಮೊದಲ ವಿಕೆಟ್ ಕಳೆದುಕೊಂಡ ಜಿಂಬಾಬ್ವೆ 44 ರನ್ ಆಗುವಷ್ಟರಲ್ಲಿ ಇನ್ನು ಮತ್ತೆರಡು ವಿಕೆಟ್ ಕಳೆದುಕೊಂಡಿತು. ವೆಸ್ಲೆ ಮಧೆವರ್ ಮತ್ತು ಸೀನ್ ವಿಲಿಯಮ್ಸ್ ಬೇಗನೇ ಔಟಾದರು. ನಂತರ ಬಂದ ಸಿಕಂದರ್ ರಜಾ ಕೂಡ 8 ರನ್ ಗಳಿಸಿ ಔಟಾದರು. 77 ರನ್‌ಗಳಿಗೆ ಪ್ರಮುಖ 5 ವಿಕೆಟ್ ಕಳೆದುಕೊಂಡು ಜಿಂಬಾಬ್ವೆ ಸಂಕಷ್ಟಕ್ಕೆ ಸಿಲುಕಿತು.

ನಂತರ ಕ್ರೀಸ್‌ಗೆ ಬಂದ ಜಿಂಬಾಬ್ವೆ ತಂಡದ ನಾಯಕ ಚಕಬ್ವ ಎಚ್ಚರಿಕೆಯ ಆಟವಾಡಿದರು. 72 ಎಸೆತಗಳಲ್ಲಿ 37 ರನ್ ಗಳಿಸಿ ಕೊನೆಯವರೆಗೂ ಕ್ರೀಸ್‌ನಲ್ಲಿ ಉಳಿದು ಜಿಂಬಾಬ್ವೆಯನ್ನು ಗೆಲುವಿನ ದಡ ಸೇರಿಸಿದರು. 39 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿದ ಜಿಂಬಾಬ್ವೆ ಆಸ್ಟ್ರೇಲಿಯಾ ನೆಲದಲ್ಲಿ ಹೊಸ ದಾಖಲೆ ಬರೆಯಿತು.

 ಮೂರನೇ ಬಾರಿ ಗೆಲುವು ಸಾಧಿಸಿದ ಜಿಂಬಾಬ್ವೆ

ಮೂರನೇ ಬಾರಿ ಗೆಲುವು ಸಾಧಿಸಿದ ಜಿಂಬಾಬ್ವೆ

1983ರಿಂದ ಇದುವರೆಗೂ ಜಿಂಬಾಬ್ವೆ ತಂಡ ಆಸ್ಟ್ರೇಲಿಆ ವಿರುದ್ಧ 33 ಪಂದ್ಯಗಳನ್ನಾಡಿದೆ, ಇದರಲ್ಲಿ ಆಸ್ಟ್ರೇಲಿಯಾ ತಂಡ 29 ಪಂದ್ಯಗಳಲ್ಲಿ ಜಯ ಸಾಧಿಸಿದ್ದು, ಒಂದು ಪಂದ್ಯದಲ್ಲಿ ಮಾತ್ರ ಯಾವುದೇ ಫಲಿತಾಂಶ ಬಂದಿಲ್ಲ. ಉಳಿದ ಮೂರು ಪಂದ್ಯಗಲ್ಲಿ ಮಾತ್ರ ಜಿಂಬಾಬ್ವೆ ಜಯ ಸಾಧಿಸಿದೆ.


1983ರಲ್ಲಿ ಆಸ್ಟ್ರೆಲಿಯಾ ವಿರುದ್ಧ ಆಡಿದ ಮೊದಲ ಏಕದಿನ ಪಂದ್ಯದಲ್ಲಿ ಜಿಂಬಾಬ್ವೆ ತಂಡ ಜಯ ಸಾಧಿಸಿತ್ತು. ನಂತರ 2014ರಲ್ಲಿ ಜಿಂಬಾಬ್ವೆಯ ಹರಾರೆಯಲ್ಲಿ ನಡೆದ ಪಂದ್ಯದಲ್ಲಿ ಮೂರು ವಿಕೆಟ್‌ಗಳ ಜಯ ಸಾಧಿಸಿತ್ತು.

ಅದಾದ 8 ವರ್ಷಗಳ ಬಳಿಕ ಮೂರನೇ ಬಾರಿಗೆ ಮತ್ತು ಆಸ್ಟ್ರೇಲಿಯಾದಲ್ಲಿ ಮೊದಲನೇ ಬಾರಿಗೆ ಸೆಪ್ಟೆಂಬರ್ 3ರಂದು 3 ವಿಕೆಟ್‌ಗಳ ರೋಚಕ ಗೆಲುವು ದಾಖಲಿಸಿದೆ.

English summary
Leg-spinner Ryan Burl picked up 5-10 in just three overs on Saturday as Zimbabwe stunned Australia in the third one-day international in Townsville. Zimbabwe celebrated their first ODI win against the hosts on Australian soil.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X