ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಚ್ ಮೇಲೆ ಕಿರುಕುಳ ಆರೋಪ ಹೊರೆಸಿದ ಮಹಿಳಾ Sailor

|
Google Oneindia Kannada News

ನವದೆಹಲಿ, ಜೂನ್ 9: ಮಹಿಳಾ ಸೈಕಲಿಸ್ಟ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಭಾರತೀಯ ರಾಷ್ಟ್ರೀಯ ಸೈಕಲ್ ಪಟುಗಳ ತಂಡದ ಕೋಚ್ ಅಮಾನತುಗೊಳಿಸಲಾಗಿದೆ. ಈ ಸುದ್ದಿ ಬೆನ್ನಲ್ಲೇ ತರಬೇತಿ ವೇಳೆ ಮತ್ತೊಬ್ಬ ಕೋಚ್ ಕಿರುಕುಳ ನೀಡಿರುವ ಘಟನೆ ಬಗ್ಗೆ ವರದಿ ಬಂದಿದೆ. ಮಹಿಳಾ ನಾವಿಕ(Sailor) ತಂಡದ ಕೋಚ್ ಮೇಲೆ ಬಂದಿರುವ ಆರೋಪ ಇದಾಗಿದೆ.

"ಜರ್ಮನಿಯಲ್ಲಿ ವಿದೇಶಿ ಮಾನ್ಯತೆ ಶಿಬಿರದಲ್ಲಿರುವ ಮಹಿಳಾ ನಾವಿಕರಿಂದ ಭಾರತೀಯ ಕ್ರೀಡಾ ಪ್ರಾಧಿಕಾರ(SAI) ದೂರನ್ನು ಸ್ವೀಕರಿಸಿದೆ. ಶಿಬಿರವನ್ನು ಯಾಚಿಂಗ್ ಅಸೋಸಿಯೇಷನ್ ​​ಆಫ್ ಇಂಡಿಯಾ (YAI) ಆಯೋಜಿಸಿದ್ದು, ACTC ಮೂಲಕ SAI ನಿಂದ ಧನಸಹಾಯವನ್ನು ಪಡೆದುಕೊಂಡಿದೆ." ಎಂದು ತಿಳಿದು ಬಂದಿದೆ. ಆದರೆ, ಯಾವುದೇ ಲಿಖಿತ ದೂರು ಬಂದಿಲ್ಲ ಎಂದು YAI ಕಾರ್ಯದರ್ಶಿ ಕ್ಯಾಪ್ಟನ್ ಜಿತೇಂದ್ರ ದೀಕ್ಷಿತ್ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ತಿಳಿದು ಬಂದಿದ್ದು, ಇದು ಲೈಂಗಿಕ ಕಿರುಕುಳ ಪ್ರಕರಣವಲ್ಲ, ಆಕೆಯ ಆಟದ ಸಾಮರ್ಥ್ಯ ಹೆಚ್ಚಳಕ್ಕಾಗಿ ತರಬೇತಿ ಸಂದರ್ಭದಲ್ಲಿ ಉಂಟಾದ ಮಾನಸಿಕ ಒತ್ತಡ ಎಂದು ದೀಕ್ಷಿತ್ ಹೇಳಿದ್ದಾರೆ.

"ಅಥ್ಲೀಟ್‌ಗಳ ಜೊತೆ ತರಬೇತುದಾರರು ಅನುಚಿತವಾಗಿ ವರ್ತಿಸಿದ್ದಾರೆ. ಆರೋಪ ಹೊತ್ತಿರುವ ತರಬೇತುದಾರರನ್ನು ಫೆಡರೇಶನ್‌ನಿಂದ ನೇಮಿಸಲಾಗಿದೆ, ಫೆಡರೇಶನ್‌ನ ಪ್ರಸ್ತಾವನೆಯಂತೆ ತಂಡಕ್ಕೆ ಸೇರಿಸಲಾಗಿದೆ'' ಎಂದು ಸಾಯ್ ಹೇಳಿದೆ.

Woman sailor accuses coach of making her uncomfortable, complains to Sports Authority of India
ಟೂರ್ನಮೆಂಟ್-ಕಮ್-

ಎಕ್ಸ್‌ಪೋಸರ್ ಟ್ರಿಪ್‌ಗಾಗಿ ಭಾರತೀಯ ನೌಕಾಯಾನ ತಂಡದೊಂದಿಗೆ ಬಂದಿರುವ ತರಬೇತುದಾರ ಫರೋಖ್ ತಾರಾಪೋರ್ ತನ್ನ ಮೇಲೆ "ಮಾನಸಿಕ ಒತ್ತಡ" ಹೇರುತ್ತಿದ್ದಾರೆ ಎಂದು ರಾಷ್ಟ್ರೀಯ ಚಾಂಪಿಯನ್ ಮಹಿಳಾ ನಾವಿಕರೊಬ್ಬರು ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ (ಎಸ್‌ಎಐ) ದೂರು ನೀಡಿದ್ದಾರೆ.

Breaking News: ಮಹಿಳಾ ಸೈಕಲಿಸ್ಟ್ ಜೊತೆ ಅಸಭ್ಯ ವರ್ತನೆ, ಕೋಚ್ ಅಮಾನತುBreaking News: ಮಹಿಳಾ ಸೈಕಲಿಸ್ಟ್ ಜೊತೆ ಅಸಭ್ಯ ವರ್ತನೆ, ಕೋಚ್ ಅಮಾನತು

ಈ ಹಿಂದೆ ರಾಷ್ಟ್ರೀಯ ಶ್ರೇಯಾಂಕ ಚಾಂಪಿಯನ್‌ಶಿಪ್ ಗೆದ್ದಿರುವ ಯುವ ನಾವಿಕ, ಮೇ 31 ರಿಂದ ಜೂನ್ 5 ರವರೆಗೆ ನೆದರ್‌ಲ್ಯಾಂಡ್‌ನಲ್ಲಿ ನಡೆದ ಹೆಂಪೆಲ್ ವಿಶ್ವಕಪ್ ಸರಣಿಯಲ್ಲಿ ಭಾಗವಹಿಸಿದ ಭಾರತೀಯ ತಂಡದ ಸದಸ್ಯೆಯಾಗಿದ್ದಾರೆ. ಹೆಚ್ಚಿನ ಭಾರತೀಯ ನಾವಿಕರು ತರಬೇತಿಗಾಗಿ ಜರ್ಮನಿಯಲ್ಲಿ ಉಳಿದುಕೊಂಡಿದ್ದಾರೆ. ಕೀಲ್‌ನಲ್ಲಿ ಕೀಲರ್ ವೋಚೆಯಲ್ಲಿ ಮುಂದಿನ ರೆಗಟ್ಟಾದಲ್ಲಿ ಸ್ಪರ್ಧಿಸಲು ತಯಾರಿ ನಡೆದಿದೆ. ತಾರಾಪೋರ್ ತನ್ನ ಸದಸ್ಯರಿಗೆ ತರಬೇತಿ ನೀಡುತ್ತಿರುವ 470 ತಂಡವು ಜರ್ಮನಿಯಲ್ಲಿನ ಎಕ್ಸ್‌ಪೋಸರ್ ತರಬೇತಿ ಶಿಬಿರದ ಭಾಗವಾಗಿದೆ.

1984, 1988 ಮತ್ತು 1992 ರ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ ಮೂರು ಬಾರಿ ಒಲಿಂಪಿಯನ್ ನಾವಿಕರಾದ ತಾರಾಪೋರ್ ಅವರು 470 ವರ್ಗದ ತಂಡದ ತರಬೇತುದಾರರಾಗಿ ಪ್ರವಾಸದ ಭಾಗವಾಗಿದ್ದರು. ಮೂಲಗಳ ಪ್ರಕಾರ, ಈ ಹಿಂದಿನ ಹಾರ್ಡ್ ಟಾಸ್ಕ್ ಮಾಸ್ಟರ್ ಆಗಿದ್ದರ ವಿರುದ್ಧವೂ ನಾವಿಕರು ಗೊಣಗುತ್ತಿದ್ದರು.

ಸೈಕಲಿಸ್ಟ್ ಕೇಸ್, ಕೋಚ್ ಅಮಾನತು
ಇದಕ್ಕೂ ಮುನ್ನ ಸೈಕಲಿಸ್ಟ್ ಮಯೂರಿಗೆ ಕಿರುಕುಳ ನೀಡಿದ ಆರೋಪ ಮೇಲೆ ಮುಖ್ಯ ಕೋಚ್ ಆರ್ ಕೆ ಶರ್ಮರನ್ನು ಅಮಾನತುಗೊಳಿಸಲಾಗಿದೆ. ಸೈಕಲಿಂಗ್ ಫೆಡರೇಷನ್ ಆಫ್ ಇಂಡಿಯಾ(ಸಿಎಫ್ಐ) ಹಾಗೂ ಭಾರತೀಯ ಕ್ರೀಡಾ ಪ್ರಾಧಿಕಾರ(SAI) ಈ ಬಗ್ಗೆ ಪ್ರತ್ಯೇಕ ಹೇಳಿಕೆ ನೀಡಿ, ಸೈಕಲಿಸ್ಟ್ ಮಯೂರಿ ನೀಡಿದ ದೂರಿನ ಮೇರೆಗೆ ಮುಖ್ಯ ಕೋಚ್ ಆರ್ ಕೆ ಶರ್ಮ ಮೇಲಿನ ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ ಎಂದಿವೆ.

Recommended Video

ಸೌತ್ ಆಫ್ರಿಕಾ ವಿರುದ್ಧ ಭಾರತಕ್ಕೆ ಮೊದಲ ಪಂದ್ಯದಲ್ಲೇ ಸೋಲು | *Cricket | OneIndia Kannada

ಏನೆಂದು ಆರೋಪ:
ಸೈಕ್ಲಿಸ್ಟ್ ತಂಡದೊಂದಿಗೆ ಪ್ರಯಾಣಿಸುತ್ತಿದ್ದ ಏಕೈಕ ಮಹಿಳೆಯಾಗಿದ್ದ ಮಯೂರಿ, ಶರ್ ಅವರ ವಿರುದ್ಧ ಅಸಭ್ಯ ವರ್ತನೆ, ಲೈಂಗಿಕ ಕಿರುಕುಳ ಯತ್ನ ಆರೋಪ ಮಾಡಿದ್ದಾರೆ. ತನ್ನ ಕೊಠಡಿಗೆ ಕರೆಸಿಕೊಂಡು ಅಲ್ಲೇ ಉಳಿಯಲು ಒತ್ತಾಯಿಸಿದರು, "ತರಬೇತಿ ನಂತರದ ಮಸಾಜ್" ಅನ್ನು ನೀಡಿದರು, "ಬಲವಂತವಾಗಿ" ತನ್ನ ಕಡೆಗೆ ಎಳೆಯಲು ಪ್ರಯತ್ನಿಸಿದರು ಮತ್ತು ತನ್ನ ಜೊತೆ ಮಲಗುವಂತೆ ಕೇಳಿದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಶಿಬಿರದ ಸಮಯದಲ್ಲಿ ಆಕೆಯನ್ನು ತನ್ನ ಹೆಂಡತಿಯಂತೆ ಭಾವಿಸಿ, ಅದೇ ರೀತಿ ವರ್ತಿಸುತ್ತಿದ್ದರು ಹಾಗೂ ಜೊತೆಗೆ ಮಲಗುವಂತೆ ಪೀಡಿಸಿದ್ದರು ಎಂದು ತಿಳಿದು ಬಂದಿದೆ.

English summary
The Sports Authority of India (SAI) has received a complaint from a female sailor currently on a foreign exposure camp who has accused a coach of making her feel uncomfortable and creating mental pressure during training.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X