ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿ20 ವಿಶ್ವಕಪ್; ಕೆಎಲ್ ರಾಹುಲ್ ಓಪನಿಂಗ್ ಮಾಡ್ತಾರಾ? ತಂಡದಲ್ಲಿ ಸ್ಥಾನವಾದರೂ ಸಿಗುತ್ತಾ?

|
Google Oneindia Kannada News

ನವದೆಹಲಿ, ಸೆ. 18: ಇತ್ತೀಚಿನ ಕೆಲ ಪಂದ್ಯಗಳಲ್ಲಿ ಸಾಮಾನ್ಯ ಪ್ರದರ್ಶನ ನೀಡಿರುವ ಕರ್ನಾಟಕದ ಬ್ಯಾಟರ್ ಕೆಎಲ್ ರಾಹುಲ್ ಅವರನ್ನು ತಂಡದಿಂದ ಕೈಬಿಡಬೇಕೆಂದು ಸೋಷಿಯಲ್ ಮೀಡಿಯಾದಲ್ಲಿ ಕೆಲವರು ವಾದಿಸುತ್ತಿದ್ದಾರೆ. ಕೆಎಲ್ ರಾಹುಲ್ ಅವರನ್ನು ಆಡಿಸಿದರೂ ಅವರಿಗೆ ಓಪನಿಂಗ್ ನೀಡುವುದು ಬೇಡ ಎಂದೂ ಚರ್ಚೆಯಾಗುತ್ತಿದೆ.

ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ಟೀಮ್ ಮ್ಯಾನೇಜ್ಮೆಂಟ್ ಮನಸ್ಸಲ್ಲಿ ಏನಿರಬಹುದು? ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಾಯಕ ರೋಹಿತ್ ಶರ್ಮಾ, ಟೀಮ್ ಇಂಡಿಯಾದ ಓಪನಿಂಗ್ ಬ್ಯಾಟರ್ ಸ್ಥಾನಕ್ಕೆ ಕೆಎಲ್ ರಾಹುಲ್ ನಿಶ್ಚಿತ ಎಂದು ಸ್ಪಷ್ಟಪಡಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಶಮಿ ಬದಲಿಗೆ ಉಮೇಶ್‌ಗೆ ಸ್ಥಾನಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಶಮಿ ಬದಲಿಗೆ ಉಮೇಶ್‌ಗೆ ಸ್ಥಾನ

ಕೆಎಲ್ ರಾಹುಲ್ ಬದಲು ವಿರಾಟ್ ಕೊಹ್ಲಿಗೆ ಓಪನಿಂಗ್ ಜವಾಬ್ದಾರಿ ಕೊಡಬೇಕು ಎಂಬ ಮಾತಿಗೆ ಪ್ರತಿಕ್ರಿಯಿಸಿದ ರೋಹಿತ್ ಶರ್ಮಾ, ವಿಶ್ವಕಪ್‌ನ ಕೆಲ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಆರಂಭಿಕ ಬ್ಯಾಟರ್ ಆಗಿ ಬರಬೇಕಾಗಬಹುದು ಎಂದಿದ್ದಾರೆ.

"ರಾಹುಲ್ ದ್ರಾವಿಡ್ ಮತ್ತು ನಾನು ಮಾತನಾಡಿದ್ದು, ವಿರಾಟ್ ಕೊಹ್ಲಿ ನಮ್ಮ ಮೂರನೇ ಆರಂಭಿಕ ಬ್ಯಾಟರ್ ಆದ್ದರಿಂದ ಕೆಲ ಪಂದ್ಯಗಳಲ್ಲಿ ಅವರು ಓಪನಿಂಗ್ ಬ್ಯಾಟರ್ ಆಗಬೇಕಾಗಬಹುದು ಎಂದು ಚರ್ಚಿಸಿದೆವು ಎಂದು ರೋಹಿತ್ ಶರ್ಮಾ ತಿಳಿಸಿದ್ದಾರೆ.

ಭರ್ಜರಿ ಫಾರ್ಮ್‌ನಲ್ಲಿ ಕೊಹ್ಲಿ

ಭರ್ಜರಿ ಫಾರ್ಮ್‌ನಲ್ಲಿ ಕೊಹ್ಲಿ

ಸಾಕಷ್ಟು ವೈಫಲ್ಯಗಳನ್ನು ಅನುಭವಿಸಿದ್ದ ವಿರಾಟ್ ಕೊಹ್ಲಿ ದುಬೈನಲ್ಲಿ ಇತ್ತೀಚೆಗೆ ನಡೆದ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭರ್ಜರಿ ಫಾರ್ಮ್‌ಗೆ ಮರಳಿದ್ದರು. ಆಡಿದ ಐದು ಪಂದ್ಯಗಳಲ್ಲಿ ಒಂದು ಶತಕ ಹಾಗು ಎರಡು ಅರ್ಧಶತಕ ಭಾರಿಸಿದ್ದರು. ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಜೇಯ 122 ರನ್ ಸಿಡಿಸಿ ತಾನು ಮತ್ತೆ ಬ್ಯಾಟಿಂಗ್ ಲಯಕ್ಕೆ ಬಂದಿರುವುದನ್ನು ನಿಚ್ಚಳವಾಗಿ ನಿರೂಪಿಸಿದರು. 2019ರ ನವೆಂಬರ್ ನಂತರ ವಿರಾಟ್ ಕೊಹ್ಲಿ ಗಳಿಸಿದ ಮೊದಲ ಶತಕ ಅದಾಗಿತ್ತು. ಆ ಪಂದ್ಯದಲ್ಲಿ ಅವರು ಇನ್ನಿಂಗ್ಸ್ ಓಪನಿಂಗ್ ಮಾಡಿದ್ದರು.

ಈ ಬಗ್ಗೆ ಮಾತನಾಡಿರುವ ನಾಯಕ ರೋಹಿತ್ ಶರ್ಮಾ, "ಕಳೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಓಪನರ್ ಆಗಿ ಏನು ಮಾಡಿದ ಎಂದು ನೋಡಿದ್ದೇವೆ. ನಮಗಂತೂ ಸಂಪೂರ್ಣ ಖುಷಿಯಾಗಿದೆ," ಎಂದು ಹೇಳಿದ್ದಾರೆ.

ಆದರೆ, ಒಳ್ಳೆಯ ಫಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿಗೆ ಯಾಕೆ ರೆಗ್ಯುಲರ್ ಆಗಿ ಓಪನಿಂಗ್ ಅವಕಾಶ ನೀಡಲಾಗುವುದಿಲ್ಲ ಎಂಬುದಕ್ಕೆ ರೋಹಿತ್ ಸಮಾಧಾನ ನೀಡುವ ಪ್ರಯತ್ನ ಮಾಡಿದ್ದಾರೆ: "ಕೆಎಲ್ ರಾಹುಲ್ ಟಿ20 ವಿಶ್ವಕಪ್‌ನಲ್ಲಿ ಆರಂಭಿಕ ಬ್ಯಾಟರ್ ಆಗಿರುತ್ತಾರೆ. ಆ ಸ್ಥಾನದಲ್ಲಿ ಹೆಚ್ಚಿನ ಪ್ರಯೋಗ ಮಾಡುವುದಿಲ್ಲ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.

12ನೇ ಪ್ಲೇಯರ್: ಫುಟ್‌ಬಾಲ್‌ನಂತೆಯೇ ಕ್ರಿಕೆಟ್‌ಗೂ ಈ ಹೊಸ ನಿಯಮ?12ನೇ ಪ್ಲೇಯರ್: ಫುಟ್‌ಬಾಲ್‌ನಂತೆಯೇ ಕ್ರಿಕೆಟ್‌ಗೂ ಈ ಹೊಸ ನಿಯಮ?

ಕೆಎಲ್ ರಾಹುಲ್ ಪರ ನಿಂತ ರೋಹಿತ್

ಕೆಎಲ್ ರಾಹುಲ್ ಪರ ನಿಂತ ರೋಹಿತ್

ಕೋವಿಡ್, ಗಾಯ ಇತ್ಯಾದಿ ಕಾರಣದಿಂದ ಕೆಎಲ್ ರಾಹುಲ್ ಆಟ ತುಸು ಮಂಕಾಗಿದೆ. ಹ್ಯಾಮ್‌ಸ್ಟ್ರಿಂಗ್ ಇಂಜುರಿ (ತೊಡೆ ಹಿಂಭಾಗದ ಸ್ನಾಯು), ಶಸ್ತ್ರಚಿಕಿತ್ಸೆಯಿಂದಾಗಿ ಕೆಎಲ್ ರಾಹುಲ್ ಹೆಚ್ಚು ಆಡಲು ಸಾಧ್ಯವಾಗಿಲ್ಲ. ಕೋವಿಡ್ ಸೋಂಕು ತಗುಲಿ ಕೆಲ ಕಾಲ ಅವರು ಆಡಲು ಆಗಲಿಲ್ಲ. ಐಪಿಎಲ್ 2022 ಬಳಿಕ ಅವರು ಎರಡು ತಿಂಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಆಡಲೇ ಇಲ್ಲ. ಜಿಂಬಾಬ್ವೆ ಪ್ರವಾಸದ ಮೂಲಕ ಕಂಬ್ಯಾಕ್ ಮಾಡಿದ ಅವರ ಆಟದ ಲಯವನ್ನೇ ಕಳೆದುಕೊಂಡಂತಿದ್ದರು.

ಏಷ್ಯಾಕಪ್‌ನಲ್ಲಿ ಅವರು ಐದು ಪಂದ್ಯಗಳಲ್ಲಿ ಒಂದೇ ಅರ್ಧಶತಕ ಭಾರಿಸಿದರು. ಹೀಗಾಗಿ, ಕೆಎಲ್ ರಾಹುಲ್ ಅವರನ್ನು ಟಿ20 ವಿಶ್ವಕಪ್‌ಗೆ ಆಯ್ಕೆ ಮಾಡಿರುವ ಔಚಿತ್ಯವನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನಿಸಲಾಗುತ್ತಿದೆ. ಆದರೆ, ತಂಡದ ನಾಯಕ ರೋಹಿತ್ ಶರ್ಮಾ ಈ ವಿಚಾರದಲ್ಲಿ ಸ್ಪಷ್ಟ ನಿಲುವು ಹೊಂದಿದ್ದಾರೆ.

"ಕೆಎಲ್ ರಾಹುಲ್ ಒಳ್ಳೆಯ ಆಟ ಆಡಿದಾಗ ಯಾರ ಗಮನಕ್ಕೂ ಬಾರುವುದಿಲ್ಲ. ಅವರು ಬಹಳ ಮುಖ್ಯವೆನಿಸಿರುವ ಆಟಗಾರ. ಕಳೆದ 2-3 ವರ್ಷದಲ್ಲಿ ಅವರು ತೋರಿರುವ ಪ್ರದರ್ಶನವನ್ನು ಗಮನಿಸಿದರೆ ಗೊತ್ತಾಗುತ್ತದೆ ಅವರ ಪ್ರಾಮುಖ್ಯತೆ. ಈ ವಿಚಾರದಲ್ಲಿ ನಮಗೆ ಬಹಳ ಸ್ಪಷ್ಟತೆ ಇದೆ ಎಂದು ಎಲ್ಲರಿಗೂ ಹೇಳಬಯಸುತ್ತೇನೆ. ಇದರಲ್ಲಿ ಯಾವ ಗೊಂದಲವೂ ಬೇಡ" ಎಂದು ರೋಹಿತ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.

"ಕೆಎಲ್ ರಾಹುಲ್ ಅವರಿಂದ ನಮಗೆ ಏನು ಉಪಯೋಗ ಎಂಬುದು ನಮಗೆ ಅರಿವಿದೆ. ಅವರು ನಮಗೆ ಮ್ಯಾಚ್ ವಿನ್ನರ್ ಕೂಡ ಹೌದು. ಪರ್ಯಾಯ ಓಪನರ್ ಅನ್ನು ನಾವು ಆಯ್ಕೆ ಮಾಡಿಲ್ಲ. ವಿರಾಟ್ ಕೊಹ್ಲಿ ಆ ಕೆಲಸ ಮಾಡಬಲ್ಲುರು. ಐಪಿಎಲ್ ಪಂದ್ಯಗಳಲ್ಲಿ ಅವರು ಆ ಸ್ಥಾನದಲ್ಲಿ ಚೆನ್ನಾಗಿ ಆಡಿದ್ದಾರೆ," ಎಂದು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.

ವಿಶ್ವಕಪ್ ವೇಳಾಪಟ್ಟಿ

ವಿಶ್ವಕಪ್ ವೇಳಾಪಟ್ಟಿ

2022ರ ಟಿ20 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ 16ರಿಂದ ನವೆಂಬರ್ 13ರವರೆಗೂ ನಡೆಯಲಿದೆ. ಮೊದಲಿಗೆ ಗ್ರೂಪ್ ಹಂತ ಅಥವಾ ಅರ್ಹತಾ ಹಂತ ಇರುತ್ತದೆ. ನಂತರ ಸೂಪರ್-12 ಹಂತ ಇರುತ್ತದೆ. ಭಾರತ, ಆಸ್ಪ್ರೇಲಿಯಾ ಸೇರಿ ಟಿ20 ಕ್ರಿಕೆಟ್‌ನ ಟಾಪ್-8 ರ್‍ಯಾಂಕಿಂಗ್ ತಂಡಗಳು ಆಟೊಮ್ಯಾಟಿಕ್ ಆಗಿ ಸೂಪರ್-12 ಹಂತಕ್ಕೆ ಅರ್ಹತೆ ಪಡೆದಿವೆ. ಗ್ರೂಪ್ ಹಂತದಲ್ಲಿ ಸ್ಪರ್ಧಿಸುತ್ತಿರುವ 8 ತಂಡಗಳ ಪೈಕಿ 4 ತಂಡಗಳು ಸೂಪರ್-12 ಹಂತಕ್ಕೆ ಹೋಗುತ್ತವೆ.

ಒಟ್ಟು 12 ತಂಡಗಳಾಗುವ ಸೂಪರ್-12 ಹಂತದಲ್ಲಿ ಎರಡು ಗುಂಪುಗಳನ್ನು ಮಾಡಲಾಗಿದೆ. ಭಾರತ, ಪಾಕಿಸ್ತಾನ, ಸೌತ್ ಆಫ್ರಿಕಾ, ಬಾಂಗ್ಲಾದೇಶ ತಂಡಗಳು ಎರಡನೇ ಗುಂಪಿನಲ್ಲಿದ್ದರೆ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ತಂಡಗಳು ಮೊದಲ ಗುಂಪಿನಲ್ಲಿವೆ.

ಕಳೆದ ಟಿ20 ವಿಶ್ವಕಪ್‌ನಲ್ಲಿ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಿದ್ದ ಭಾರತ ಮತ್ತು ಪಾಕಿಸ್ತಾನ ತಂಡಗಳು ಈ ಬಾರಿಯೂ ಮೊದಲ ಪಂದ್ಯದಲ್ಲಿ ಪರಸ್ಪರ ಸೆಣಸುತ್ತಿವೆ. ಆಗ ಪಾಕಿಸ್ತಾನದೆದುರು ಹೀನಾಯವಾಗಿ ಸೋತಿದ್ದ ಭಾರತ ನಾಕೌಟ್ ಹಂತಕ್ಕೇರಲಾಗದೇ ನಿರ್ಗಮಿಸಿತ್ತು. ಏಷ್ಯಾ ಕಪ್‌ನಲ್ಲೂ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು.

ಭಾರತ-ಆಸ್ಟ್ರೇಲಿಯಾ ಸರಣಿ

ಭಾರತ-ಆಸ್ಟ್ರೇಲಿಯಾ ಸರಣಿ

ಟಿ20 ವಿಶ್ವಕಪ್‌ಗೆ ಮುನ್ನ ಭಾರತ ತಂಡ ತವರಿನಲ್ಲಿ ಆಸ್ಟ್ರೇಲಿಯಾವನ್ನು ಎದುರುಗೊಳ್ಳಲಿದೆ. ಮೊಹಾಲಿ, ನಾಗಪುರ ಮತ್ತು ಹೈದರಾಬಾದ್‌ನಲ್ಲಿ ಎರಡು ತಂಡಗಳ ಮಧ್ಯೆ ಮೂರು ಟಿ20 ಪಂದ್ಯಗಳ ಸರಣಿ ನಡೆಯಲಿದೆ. ಸೆಪ್ಟೆಂಬರ್ 20ರಂದು ಈ ಸರಣಿ ಆರಂಭವಾಗುತ್ತದೆ. ಆರೋನ್ ಫಿಂಚ್ ಆಸ್ಟ್ರೇಲಿಯಾದ ಕ್ಯಾಪ್ಟನ್ ಆದರೆ, ರೋಹಿತ್ ಶರ್ಮಾ ಟೀಮ್ ಇಂಡಿಯಾ ನಾಯಕರಾಗಿದ್ದಾರೆ. ಕೆಎಲ್ ರಾಹುಲ್ ವೈಸ್ ಕ್ಯಾಪ್ಟನ್ ಇದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
KL Rahul, who is not in great form, will still play in the T20 world cup as opening batter, clarified captain Rohit Sharma. And he added that, Virat Kohli will play as opener in few matches
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X