ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಷ್ಯಾಕಪ್‌ನಲ್ಲಿ ವಿರಾಟ್‌ ಕೊಹ್ಲಿ ಶತಕ ಬಾರಿಸುತ್ತಾರೆ: ಸೌರವ್ ಗಂಗೂಲಿ ವಿಶ್ವಾಸ

|
Google Oneindia Kannada News

ಆಗಸ್ಟ್ 27ರಿಂದ ಆರಂಭವಾಗುವ ಏಷ್ಯಾಕಪ್ 2022 ಪಂದ್ಯಾವಳಿಯಲ್ಲಿ ವಿರಾಟ್ ಕೊಹ್ಲಿ ಶತಕ ಬಾರಿಸುವ ವಿಶ್ವಾಸವಿದೆ ಎಂದು ಭಾರತದ ಮಾಜಿ ನಾಯಕ ಮತ್ತು ಹಾಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

ಸದ್ಯ ಕಳಪೆ ಫಾರ್ಮ್‌ನಿಂದ ಟೀಕೆಗೊಳಗಾಗಿರುವ ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆಯುತ್ತಿದ್ದು, ಏಷ್ಯಾಕಪ್‌ನಲ್ಲಿ ಮತ್ತೆ ಫಾರ್ಮ್‌ಗೆ ಮರಳುವ ವಿಶ್ವಾಸದಲ್ಲಿದ್ದಾರೆ. ಅದರಲ್ಲೂ ಮೊದಲನೇ ಪಂದ್ಯವೇ ಬಲಿಷ್ಠ ಪಾಕಿಸ್ತಾನದ ವಿರುದ್ಧ ನಡೆಯುತ್ತಿದ್ದು, ಇದೇ ಪಂದ್ಯದಲ್ಲಿ ಶತಕ ಬಾರಿಸಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ.

131 ಎಸೆತಗಳಲ್ಲಿ 174 ರನ್: ಆಂಗ್ಲರ ನೆಲದಲ್ಲಿ ಚೇತೇಶ್ವರ ಪೂಜಾರ ಬ್ಯಾಟಿಂಗ್ ಅಬ್ಬರ131 ಎಸೆತಗಳಲ್ಲಿ 174 ರನ್: ಆಂಗ್ಲರ ನೆಲದಲ್ಲಿ ಚೇತೇಶ್ವರ ಪೂಜಾರ ಬ್ಯಾಟಿಂಗ್ ಅಬ್ಬರ

ವಿರಾಟ್ ಕೊಹ್ಲಿಗೆ ಕೇವಲ ಅಭ್ಯಾಸ ಬೇಕಿದೆ ಮತ್ತು ಆಟಕ್ಕೆ ಹೊಂದಿಕೊಳ್ಳಲು ಸಮಯ ಬೇಕಾಗುತ್ತದೆ. 2019ರಿಂದ ಶತಕದ ಬರ ಅನುಭವಿಸುತ್ತಿರುವ ಕೊಹ್ಲಿ ಏಷ್ಯಾ ಕಪ್‌ ಪಂದ್ಯಾವಳಿಯಲ್ಲಿ ಶತಕ ಗಳಿಸುವ ವಿಶ್ವಾಸವಿದೆ ಎಂದು ಸೌರವ್ ಗಂಗೂಲಿ ಹೇಳಿದರು.

ಈ ಕುರಿತು ಮಾತನಾಡಿದ ಸೌರವ್ ಗಂಗೂಲಿ, "ವಿರಾಟ್‌ಗೆ ಅಭ್ಯಾಸದ ಅಗತ್ಯವಿದೆ ಮತ್ತು (ಹೆಚ್ಚು) ಪಂದ್ಯಗಳನ್ನು ಆಡಬೇಕಾಗಿದೆ. ಅವರು ಉತ್ತಮ ಆಟಗಾರ. ಅವರು ಉತ್ತಮವಾಗಿ ಆಡುತ್ತಿದ್ದಾರೆ ಆದರೆ ಶತಕವನ್ನು ಗಳಿಸುತ್ತಿಲ್ಲ. ಅವರು ಈ ಏಷ್ಯಾಕಪ್‌ನಲ್ಲಿ ಶತಕವನ್ನು ಗಳಿಸುತ್ತಾರೆ ಎಂದು ನಾನು ಭಾವಿಸುತ್ತೇನೆ." ಎಂದು ಹೇಳಿದ್ದಾರೆ.

 ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ವೈಫಲ್ಯ

ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ವೈಫಲ್ಯ

2022ರ ಐಪಿಎಲ್‌ನಲ್ಲಿ 22.73ರ ಸರಾಸರಿಯಲ್ಲಿ ಕೇವಲ 341 ರನ್‌ಗಳನ್ನು ಗಳಿಸಿದ್ದ ವಿರಾಟ್ ಕೊಹ್ಲಿ, ನಂತರ ಇಂಗ್ಲೆಂಡ್ ಪ್ರವಾಸದಲ್ಲಿ ಎಡ್ಜ್‌ಬಾಸ್ಟನ್ ಟೆಸ್ಟ್‌ನಲ್ಲಿ11 ಮತ್ತು 20 ರನ್ ಗಳಿಸಿದರು. ನಂತರ ನಡೆದ ಟಿ20 ಮತ್ತು ಏಕದಿನ ಪಂದ್ಯಗಳಲ್ಲಿ 1, 11, 16 ಮತ್ತು 17 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದ್ದರು.

ನಂತರ ಅವರು ವೆಸ್ಟ್ ಇಂಡೀಸ್ ಸರಣಿಯಿಂದ ವಿರಾಮವನ್ನು ಕೇಳಿದರು ಮತ್ತು ಜಿಂಬಾಬ್ವೆ ವಿರುದ್ಧ ಮುಂಬರುವ ಏಕದಿನ ಪಂದ್ಯಗಳಿಂದ ವಿಶ್ರಾಂತಿ ಪಡೆದರು. ಸದ್ಯ ಕುಟುಂಬದ ಜೊತೆ ಕಾಲ ಕಳೆದಿರುವ ವಿರಾಟ್ ಮತ್ತೆ ಫಾರ್ಮ್‌ಗೆ ಮರಳುವ ವಿಶ್ವಾಸದಲ್ಲಿದ್ದಾರೆ.

 ಆಗಸ್ಟ್ 28ರಂದು ಭಾರತ-ಪಾಕಿಸ್ತಾನ ಮುಖಾಮುಖಿ

ಆಗಸ್ಟ್ 28ರಂದು ಭಾರತ-ಪಾಕಿಸ್ತಾನ ಮುಖಾಮುಖಿ

ಆಗಸ್ಟ್ 27 ರಂದು ಏಷ್ಯಾಕಪ್ ಆರಂಭವಾಗಲಿದ್ದು ಆರಂಭಿಕ ದಿನದಂದು ಶ್ರೀಲಂಕಾ ಮತ್ತು ಆಫ್ಘಾನಿಸ್ತಾನ ತಂಡಗಳು ಮುಖಾಮುಖಿಯಾಗಲಿದೆ. ಆಗಸ್ಟ್ 28ರಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಭಾರತ-ಪಾಕಿಸ್ತಾನ ಪಂದ್ಯ ನಡೆಯಲಿದೆ.

ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಹೈ ವೋಲ್ಟೇಜ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ ಬ್ಯಾಟಿಂಗ್ ಲಯಕ್ಕೆ ಮರಳಲಿ, ಶತಕ ಗಳಿಸಲಿ ಎಂದು ಅಭಿಮಾನಿಗಳು ಪ್ರಾರ್ಥನೆ ಮಾಡುತ್ತಿದ್ದಾರೆ.

 ಕೊಹ್ಲಿ ಪ್ರದರ್ಶನ ನೀಡಬೇಕು ಎಂದ ಪಾಕಿಸ್ತಾನ ಕ್ರಿಕೆಟರ್

ಕೊಹ್ಲಿ ಪ್ರದರ್ಶನ ನೀಡಬೇಕು ಎಂದ ಪಾಕಿಸ್ತಾನ ಕ್ರಿಕೆಟರ್

ವಿರಾಟ್ ಕೊಹ್ಲಿ ಭಾರತದ ಟಿ 20 ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಬೇಕಾದರೆ ಮುಂಬರುವ ಏಷ್ಯಾಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಬೇಕಾಗುತ್ತದೆ ಎಂದು ಪಾಕಿಸ್ತಾನದ ಮಾಜಿ ಸ್ಪಿನ್ನರ್ ಡ್ಯಾನಿಶ್ ಕನೇರಿಯಾ ಅಭಿಪ್ರಾಯಪಟ್ಟಿದ್ದರು.


ಕಳೆದ ದಶಕದಲ್ಲಿ ಕೊಹ್ಲಿ ಅತ್ಯಂತ ಸ್ಥಿರ ಆಟಗಾರರಾಗಿದ್ದರೆ, ಅವರ ಇತ್ತೀಚಿನ ಫಾರ್ಮ್ ಕುಸಿತವು ಭಾರತ ತಂಡದಲ್ಲಿ ಅವರ ಆಯ್ಕೆಯ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿದೆ. ಕೊಹ್ಲಿಗೆ ನಾಯಕ ರೋಹಿತ್ ಶರ್ಮಾ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಸಂಪೂರ್ಣ ಬೆಂಬಲವಿದೆ ಎಂದು ಕನೇರಿಯಾ ಹೇಳಿದರು. ಕೊಹ್ಲಿ ಮೇಲೆ ತಂಡದ ಮ್ಯಾನೇಜ್‌ಮೆಂಟ್ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಬೇಕಾಗುತ್ತದೆ ಎಂದು ಹೇಳಿದರು.

 ಐತಿಹಾಸಿಕ ಪಂದ್ಯಕ್ಕೆ ಸಿದ್ದವಾಗುತ್ತಿರುವ ಸೌರವ್ ಗಂಗೂಲಿ

ಐತಿಹಾಸಿಕ ಪಂದ್ಯಕ್ಕೆ ಸಿದ್ದವಾಗುತ್ತಿರುವ ಸೌರವ್ ಗಂಗೂಲಿ

75 ವರ್ಷಗಳ ಭಾರತೀಯ ಸ್ವಾತಂತ್ರ್ಯದ ಸವಿನೆನಪಿಗಾಗಿ ಕೋಲ್ಕತ್ತಾದ ಈಡನ್‌ ಗಾರ್ಡನ್ ಮೈದಾನದಲ್ಲಿ ವಿಶೇಷ ಕ್ರಿಕೆಟ್ ಪಂದ್ಯ ಆಯೋಜನೆ ಮಾಡಲಾಗಿದೆ. ಸೌರವ್ ಗಂಗೂಲಿ ನಾಯಕತ್ವದ ಭಾರತ ಮಹಾರಾಜ ತಂಡ ವರ್ಲ್ಡ್‌ ಜೈಂಟ್ಸ್ ವಿರುದ್ಧ ಸೆಣಸಲಿದೆ.

ಈ ಪಂದ್ಯದ ಕುರಿತು ಮಾತನಾಡಿರುವ ಸೌರವ್ ಗಂಗೂಲಿ, "ನಾನು ಮತ್ತೆ ಈಡನ್ ಗಾರ್ಡನ್ಸ್‌ನಲ್ಲಿ ಆಡಲು ತುಂಬಾ ಉತ್ಸುಕನಾಗಿದ್ದೇನೆ. ಇದು 75 ವರ್ಷಗಳ ಭಾರತದ ಸ್ವಾತಂತ್ರ್ಯ ದಿನದ ನೆನಪಿಗಾಗಿ ಆಡುತ್ತಿರುವ ಚಾರಿಟಿ ಪಂದ್ಯ. ನಾನು ಇನ್ನು ಅಭ್ಯಾಸದಲ್ಲಿ ಇಲ್ಲ, ಮೊದಲಿನಂತೆಯೇ ಕವರ್ ಡ್ರೈವ್ ಆಡಲು ನಾನು ಬಯಸುತ್ತೇನೆ, ಒಂದೇ ಪಂದ್ಯದಲ್ಲಿ ನಾನು ಆಡಲಿದ್ದು, ಉತ್ತಮವಾಗಿ ಬ್ಯಾಟಿಂಗ್ ಮಾಡುವ ವಿಶ್ವಾಸವಿದೆ. ಈ ಆಟದಲ್ಲಿ ಭಾಗವಹಿಸಲು ನನಗೆ ಸಂತೋಷವಾಗುತ್ತಿದೆ" ಎಂದರು.

Recommended Video

ಅಟಲ್ ಅಂದ್ರೆ ಅಮೋಘ, ಅನನ್ಯ, ಅನರ್ಘ್ಯ ರತ್ನ | Oneindia Kannada

English summary
BCCI president Sourav Ganguly was hopeful of Virat Kohli making a sensational return in the Asia Cup 2022. Ganguly said that Kohli just needs practice and some game time and he will be good while hoping for a century from him. Virat needs practice and has to play more matches. He is a great player. He is playing very well but not getting a century. Hope he will make a century in this Asia Cup. I am very hopeful, He Said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X