ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

CWG 2022: ಭಾರತದ ಕ್ರೀಡಾಪಟುಗಳ ಆಟಕ್ಕೆ ಶಹಬ್ಬಾಸ್ ಎಂದ ವಿರಾಟ್ ಕೊಹ್ಲಿ

|
Google Oneindia Kannada News

ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್ ಗೇಮ್ಸ್ 2022 ಕ್ರೀಡಾಕೂಟಕ್ಕೆ ಅದ್ದೂರಿ ತೆರೆ ಬಿದ್ದಿದೆ. ಭಾರತದ ಕ್ರೀಡಾಪಟುಗಳು ಅದ್ಭುತ ಪ್ರದರ್ಶನ ತೋರುವ ಮೂಲಕ ಕ್ರೀಡಾಕೂಟವನ್ನು ಸ್ಮರಣೀಯವಾಗಿಸಿದ್ದಾರೆ. ಕ್ರೀಡಾಕೂಟದಲ್ಲಿ ಭಾರತ 22 ಚಿನ್ನ, 16 ಬೆಳ್ಳಿ, 23 ಕಂಚಿನ ಪದಕ ಸೇರಿ ಒಟ್ಟು 61 ಪದಕಗಳನ್ನು ಗೆಲ್ಲುವ ಮೂಲಕ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಅಲಂಕರಿಸಿದೆ. ಗೆದ್ದ ಅಥ್ಲಿಟ್‌ಗಳಿಗೆ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದೆ.

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್ 2022 ನಲ್ಲಿ ಭಾರತದ ಅಥ್ಲಿಟ್‌ಗಳ ಪ್ರದರ್ಶನವನ್ನು ಅಭಿನಂದಿಸಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ರಾಷ್ಟ್ರಕ್ಕಾಗಿ ಪದಕ ಗೆದ್ದ ಎಲ್ಲಾ ಭಾರತೀಯ ಕ್ರೀಡಾಪಟುಗಳ ಕೊಲಾಜ್ ಅನ್ನು ಹಂಚಿಕೊಂಡ ವಿರಾಟ್ ಕೊಹ್ಲಿ ಹೃತ್ಪೂರ್ವಕವಾಗಿ ಅಭಿನಂದನೆ ಸಲ್ಲಿಸಿ ಟ್ವೀಟ್ ಮಾಡಿದ್ದಾರೆ.

ಕನ್ನಡತಿ, ಮಹಿಳಾ ಕ್ರಿಕೆಟರ್‌ ರಾಜೇಶ್ವರಿಗೆ 15 ಲಕ್ಷ ಪುರಸ್ಕಾರ ಘೋಷಣೆಕನ್ನಡತಿ, ಮಹಿಳಾ ಕ್ರಿಕೆಟರ್‌ ರಾಜೇಶ್ವರಿಗೆ 15 ಲಕ್ಷ ಪುರಸ್ಕಾರ ಘೋಷಣೆ

ಭಾರತೀಯ ಅಥ್ಲಿಟ್‌ಗಳಿಗೆ ಅಭಿನಂದನೆ ಸಲ್ಲಿಸಿರುವ ವಿರಾಟ್ ಕೊಹ್ಲಿ, "ನೀವು ನಮ್ಮ ದೇಶಕ್ಕೆ ಶ್ರೇಷ್ಠ ಪ್ರಶಸ್ತಿಗಳನ್ನು ತಂದಿದ್ದೀರಿ. ನಮ್ಮ ಎಲ್ಲಾ ವಿಜೇತರಿಗೆ ಮತ್ತು ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾಗವಹಿಸಿದವರಿಗೆ ಅಭಿನಂದನೆಗಳು. ನಿಮ್ಮ ಬಗ್ಗೆ ಹೆಮ್ಮೆಪಡುತ್ತೇವೆ. ಜೈ ಹಿಂದ್," ಎಂದು ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದಾರೆ.

 ಕ್ರೀಡಾಕೂಟಕ್ಕೆ ಅದ್ದೂರಿ ತೆರೆ

ಕ್ರೀಡಾಕೂಟಕ್ಕೆ ಅದ್ದೂರಿ ತೆರೆ

ಕ್ರೀಡಾಕೂಟದ 11 ನೇ ದಿನ ಅದ್ದೂರಿ ಕಾರ್ಯಕ್ರಮದ ಮೂಲಕ ಬರ್ಮಿಂಗ್‌ಹ್ಯಾಮ್ ಕ್ರೀಡಾಕೂಟಕ್ಕೆ ತೆರೆ ಎಳೆಯಲಾಗಿದೆ. ಅಂತಿಮ ದಿನದಂದು ಅದ್ಭುತವಾದ ಸಮಾರೋಪ ಸಮಾರಂಭ ಆಯೋಜನೆ ಮಾಡಲಾಗಿತ್ತು. ಭಾರತದ ನಿಖತ್ ಜರೀನಾ ಮತ್ತು ಶರತ್ ಕಮಲ್ ಸಮಾರಂಭದ ಧ್ವಜಧಾರಿಗಳಾಗಿದ್ದರು.

ಬರ್ಮಿಂಗ್‌ಹ್ಯಾಮ್‌ನ ಅಲೆಕ್ಸಾಂಡರ್ ಸ್ಟೇಡಿಯಂನಲ್ಲಿ ನಡೆದ ಸಮಾರೋಪ ಸಮಾರಂಭದ ನಂತರ ಕಾಮನ್‌ವೆಲ್ತ್ ಗೇಮ್ಸ್ 2022 ಮುಕ್ತಾಯಗೊಂಡಿತು. ಗೇಮ್ಸ್ ಧ್ವಜವನ್ನು ಕೆಳಗಿಳಿಸಲಾಯಿತು ಮತ್ತು 2026 ರಲ್ಲಿ ಕಾಮನ್‌ವೆಲ್ತ್‌ ಗೇಮ್ಸ್‌ ಮುಂದಿನ ಆವೃತ್ತಿಯನ್ನು ಆಯೋಜಿಸುವ ಆಸ್ಟ್ರೇಲಿಯಾದ ವಿಕ್ಟೋರಿಯಾಕ್ಕೆ ಹಸ್ತಾಂತರಿಸಲಾಯಿತು.

 ಪದಕ ಗಳಿಕೆಯಲ್ಲಿ ಭಾರತದ ಉತ್ತಮ ಸಾಧನೆ

ಪದಕ ಗಳಿಕೆಯಲ್ಲಿ ಭಾರತದ ಉತ್ತಮ ಸಾಧನೆ

ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಒಟ್ಟು 61 ಪದಕಗಳನ್ನು ಗೆಲ್ಲುವ ಮೂಲಕ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. 2022ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತದ ಪ್ರದರ್ಶನ ಒಟ್ಟಾರೆ ಐದನೇ ಉತ್ತಮ ಪ್ರದರ್ಶನವಾಗಿದೆ.

2010ರಲ್ಲಿ ಭಾರತದಲ್ಲಿ ನಡೆದ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತ 38 ಚಿನ್ನದ ಪದಕಗಳೊಂದಿಗೆ ಒಟ್ಟು 101 ಪದಕ ಗೆದ್ದಿದ್ದು, ಇದುವರೆಗಿನ ಅತ್ಯುತ್ತಮ ಸಾಧನೆಯಾಗಿದೆ. ಅದರಲ್ಲೂ ಮೊದಲ ಬಾರಿಗೆ ಲಾನ್ ಬೌಲ್, ಕ್ರಿಕೆಟ್‌, ಟ್ರಿಪಲ್ ಜಂಪ್ ವಿಭಾಗದಲ್ಲಿ ಪದಕ ಗೆಲ್ಲುವ ಮೂಲಕ ಇತಿಹಾಸ ಬರೆದಿದೆ.

 ಕುಸ್ತಿ, ವೇಟ್‌ ಲಿಫ್ಟಿಂಗ್‌ನಲ್ಲಿ ಹೆಚ್ಚಿನ ಪದಕ

ಕುಸ್ತಿ, ವೇಟ್‌ ಲಿಫ್ಟಿಂಗ್‌ನಲ್ಲಿ ಹೆಚ್ಚಿನ ಪದಕ

ಕುಸ್ತಿ ವಿಭಾಗದಲ್ಲಿ ಭಾರತೀಯರು ಅಪ್ರತಿಮ ಪ್ರದರ್ಶನ ನೀಡಿದ್ದಾರೆ. ಕುಸ್ತಿ ವಿಭಾಗದಲ್ಲಿ ಭಾರತ 6 ಚಿನ್ನ, ಒಂದು ಬೆಳ್ಳಿ ಮತ್ತು ಐದು ಕಂಚಿನ ಪದಕಗಳನ್ನು ಗೆದ್ದುಕೊಂಡಿದೆ. ನಂತರದ ಸ್ಥಾನದಲ್ಲಿ ವೇಟ್‌ ಲಿಫ್ಟಿಂಗ್ ಇದೆ. ಭಾರತದ ವೇಟ್‌ ಲಿಫ್ಟರ್ ಗಳು 4 ಚಿನ್ನ, 3 ಬೆಳ್ಳಿ ಮತ್ತು 4 ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾರೆ.

ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತಕ್ಕೆ 1 ಚಿನ್ನ, 4 ಬೆಳ್ಳಿ ಮತ್ತು 3 ಕಂಚಿನ ಪದಕಗಳು ಬಂದಿವೆ, ಬಾಕ್ಸಿಂಗ್‌ ವಿಭಾಗದಲ್ಲಿ 3 ಚಿನ್ನ, 1 ಬೆಳ್ಳಿ, 3 ಕಂಚಿನ ಪದಕಗಳನ್ನು ಗೆದಿದ್ದಾರೆ. ಟೇಬಲ್ ಟೆನ್ನಿಸ್ ವಿಭಾಗದಲ್ಲಿ 4 ಚಿನ್ನ, 1 ಬೆಳ್ಳಿ, 2 ಕಂಚಿನ ಪದಕಗಳನ್ನು ಪಡೆದಿದೆ.

 ಏಷ್ಯಾ ಕಪ್‌ನಲ್ಲಿ ವಿರಾಟ್ ಕೊಹ್ಲಿ ಕಣಕ್ಕೆ

ಏಷ್ಯಾ ಕಪ್‌ನಲ್ಲಿ ವಿರಾಟ್ ಕೊಹ್ಲಿ ಕಣಕ್ಕೆ

ಇತ್ತೀಚೆಗೆ ಮುಕ್ತಾಯಗೊಂಡ ವೆಸ್ಟ್ ಇಂಡೀಸ್ ಟಿ20 ಸರಣಿ ಮತ್ತು ಮುಂಬರುವ ಜಿಂಬಾಬ್ವೆ ಪ್ರವಾಸಕ್ಕೆ ವಿಶ್ರಾಂತಿ ಪಡೆದಿರುವ ಕೊಹ್ಲಿ, ರೋಹಿತ್ ಶರ್ಮಾ ನೇತೃತ್ವದ ಬಿಸಿಸಿಐ ಪ್ರಕಟಿಸಿದ 15 ಸದಸ್ಯರ ತಂಡದಲ್ಲಿ ವಿರಾಟ್ ಕೊಹ್ಲಿ ಆಯ್ಕೆಯಾಗಿದ್ದಾರೆ.

ಭಾರತವು ಆಗಸ್ಟ್ 28 ರಂದು (ಭಾನುವಾರ) ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಾಕಿಸ್ತಾನದ ವಿರುದ್ಧ ಟೂರ್ನಿಯ ತನ್ನ ಮೊದಲ ಪಂದ್ಯವನ್ನು ಆಡಲಿದ್ದಾರೆ. ಹಳೆಯ ವಿರಾಟ್ ಕೊಹ್ಲಿಯನ್ನು ನೋಡಲು ಅಭಿಮಾನಿಗಳು ಆಶಿಸುತ್ತಿದ್ದಾರೆ, ಪಾಕಿಸ್ತಾನದ ವಿರುದ್ಧವೇ ವಿರಾಟ್ ಕೊಹ್ಲಿ ಫಾರ್ಮ್‌ಗೆ ಮರಳಿದರೆ ಅಭಿಮಾನಿಗಳ ಖುಷಿಗೆ ಪಾರವೇ ಇರುವುದಿಲ್ಲ.

Recommended Video

Asia Cupಗಾಗಿ ಪ್ರಕಟವಾದ ಭಾರತ ತಂಡದಲ್ಲಿ ಏನೆಲ್ಲಾ ಸಮಸ್ಯೆಗಳಿವೆ | OneIndia Kannada

English summary
Indian cricketer Virat Kohli congratulated the Indian athletes on their stellar show in Birmingham Commonwealth Games 2022. "You have brought great laurels for our country. Congratulations to all our winners and the participants of CWG 2022. We are so proud of you. Jai Hind," He Penned down in his Twitter Post. India finished 4th in the medal tally, with 22 gold, and overall 61 medals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X