ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಲ್ಡೀವ್ಸ್‌ ನಿಂದ ಬಂದ ಕೊಹ್ಲಿಗೆ ಕೋವಿಡ್, ಸರಣಿ ಗತಿಯೇನು?

|
Google Oneindia Kannada News

ಲಂಡನ್, ಜೂನ್ 22: ಇಂಗ್ಲೆಂಡ್‌ಗೆ ತೆರಳಿರುವ ಭಾರತ ತಂಡಕ್ಕೆ ಸರಣಿ ಆರಂಭಕ್ಕೂ ಮುನ್ನವೇ ಭಾರೀ ವಿಘ್ನ ಎದುರಾಗಿದೆ. ಐಪಿಎಲ್ ಮುಗಿಸಿ ಮಾಲ್ಡೀವ್ಸ್‌ಗೆ ಪ್ರವಾಸ ತೆರಳಿದ್ದ ವಿರಾಟ್ ಕೊಹ್ಲಿ ಸೇರಿದಂತೆ ಕೆಲವು ಭಾರತೀಯ ಕ್ರಿಕೆಟಿಗರಿಗೆ ಕೋವಿಡ್‌ -19 ಸೋಂಕಿಗೆ ತುತ್ತಾಗಿದ್ದಾರೆ ಎಂದು ವರದಿಯಾಗಿವೆ. ಪ್ರಸ್ತುತ ಕೊಹ್ಲಿ ಸೋಂಕಿನಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಎಂಬ ಮಾಹಿತಿಯೂ ಇದೆ.

"ಹೌದು, ಮಾಲ್ಡೀವ್ಸ್‌ನಿಂದ ರಜೆ ಮುಗಿಸಿ ಬಂದಿದ್ದ ವಿರಾಟ್‌ ಕೊಹ್ಲಿ ಕೂಡ ಕೋವಿಡ್‌ ಸೋಂಕಿಗೆ ಒಳಗಾಗಿದ್ದಾರೆ. ಆದರೆ ಅವರು ಚೇತರಿಸಿಕೊಂಡಿದ್ದಾರೆ" ಎಂದು ಮೂಲ ಮಾಧ್ಯಮಕ್ಕೆ ತಿಳಿಸಿದೆ.

ಬೆಂಗಳೂರಿನಲ್ಲಿ ಮುಂಬೈ-ಮಧ್ಯ ಪ್ರದೇಶ ತಂಡಗಳ ನಡುವೆ ರಣಜಿ ಫೈನಲ್ ಫೈಟ್ಬೆಂಗಳೂರಿನಲ್ಲಿ ಮುಂಬೈ-ಮಧ್ಯ ಪ್ರದೇಶ ತಂಡಗಳ ನಡುವೆ ರಣಜಿ ಫೈನಲ್ ಫೈಟ್

ಕಳೆದ ವರ್ಷ ಮುಂದೂಡಲ್ಪಟ್ಟಿರುವ ಪಂದ್ಯ ಆರಂಭಗೊಳ್ಳುವ ಮುನ್ನವೇ ಜೂನ್ 24 ರಿಂದ ಟೀಮ್ ಇಂಡಿಯಾ, ಲೀಸೆಸ್ಟರ್‌ಶೈರ್ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡಬೇಕಿತ್ತು. ಆದರೆ ಆಟಗಾರರು ಕೋವಿಡ್ -19 ಸೋಂಕಿಗೆ ಒಳಗಾದ ನಂತರ ಅವರಿಗೆ ಹೆಚ್ಚಿನ ಕೆಲಸದೊತ್ತಡ ನೀಡಬಾರದು ಎಂಬುದು ವೈದ್ಯರ ಸಲಹೆಯಾಗಿದೆ. ಹಾಗಾಗಿ ಅಭ್ಯಾಸ ಪಂದ್ಯಕ್ಕೆ ಹೆಚ್ಚಿನ ಮಹತ್ವ ನೀಡಲಾಗುವುದಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

Virat Kohli and Other Indian Players Infected With COVID-19 After Reaching in England Reports

ಕಳೆದ ವರ್ಷ ಪ್ರವಾಸಿ ತಂಡದಲ್ಲಿ ಕೋವಿಡ್ 19 ಕಾಣಿಸಿಕೊಂಡ ಹಿನ್ನಲೆಯಲ್ಲಿ ಸಂಪೂರ್ಣ ಪ್ರವಾಸವನ್ನು ರದ್ದುಗೊಳಿಸಿತ್ತು. ಆಗ ಖಾಸಗಿ ಕಾರ್ಯಕ್ರಮಕ್ಕೆ ತೆರಳಿದ್ದ ಕೋಚ್‌ ರವಿಶಾಸ್ತ್ರಿಗೂ ಕೋವಿಡ್ 19 ಸೋಂಕು ತಗುಲಿತ್ತು. ಇದೀಗ ಹೆಚ್ಚು ಕಡಿಮೆ ವರ್ಷದ ಬಳಿಕ ಪ್ರವಾಸ ಕೈಗೊಳ್ಳುತ್ತಿರುವ ಭಾರತ ತಂಡಕ್ಕೆ ಇದೀಗ ಮತ್ತೆ ಕೋವಿಡ್ ಆತಂಕ ಎದುರಾಗಿದೆ.

ಮಹಾರಾಷ್ಟ್ರದಲ್ಲಿ ಕೊರೊನಾದಿಂದ ಆಸ್ಪತ್ರೆ ಸೇರಿದ ರಾಜ್ಯಪಾಲ ಭಗತ್ ಸಿಂಗ್ ಕಶ್ಯಪ್ ಮಹಾರಾಷ್ಟ್ರದಲ್ಲಿ ಕೊರೊನಾದಿಂದ ಆಸ್ಪತ್ರೆ ಸೇರಿದ ರಾಜ್ಯಪಾಲ ಭಗತ್ ಸಿಂಗ್ ಕಶ್ಯಪ್

ಬಿಸಿಸಿಐ ಖಜಾಂಚಿ ಸಲಹೆ; ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಖಜಾಂಚಿ ಅರುಣ್ ಧುಮಾಲ್ ಆಟಗಾರರಿಗೆ ಅಗತ್ಯವಾದ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ. ಏಕೆಂದರೆ ಬಿಸಿಸಿಐ ಕಳೆದ ಬಾರಿಯಂತೆ ಕೊನೆಯ ಪಂದ್ಯವನ್ನು ರದ್ದುಗೊಳಿಸಿದ್ದ ಪರಿಸ್ಥಿತಿ ಮರುಕಳುಹಿಸುವುದನ್ನು ಬಯಸುವುದಿಲ್ಲ ಎಂದು ತಿಳಿಸಿದ್ದಾರೆ.

Virat Kohli and Other Indian Players Infected With COVID-19 After Reaching in England Reports

ಇಂಗ್ಲೆಂಡ್‌ನಲ್ಲಿ ಕೋವಿಡ್ ಭೀತಿ ಕಡಿಮೆಯಾಗಿದೆ. ಆದರೂ ಆಟಗಾರರು ತೊಂಬಾ ಎಚ್ಚರಿಕೆಯಿಂದ ಇರಬೇಕು. ನಾವು ತಂಡಕ್ಕೆ ಸ್ವಲ್ಪ ಜಾಗೃತರಾಗಿರಬೇಕೆಂದು ಧುಮಾಲ್ ತಿಳಿಸಿದ್ದಾರೆ.

ಇನ್ನು ಬಿಸಿಸಿಐ ತಂಡದಲ್ಲಿ ಕೋವಿಡ್‌ 19 ಸೋಂಕು ತಗುಲಿರುವ ವಿಷಯವನ್ನು ಇನ್ನೂ ಅಧಿಕೃತವಾಗಿ ತಿಳಿಸಿಲ್ಲ. ಒಂದು ವೇಲೆ ಈ ಊಹಾಪೋಹ ಖಚಿತವಾದರೆ ಸರಣಿಯ ವೇಳಾಪಟ್ಟಿ ಬದಲಾಗುವ ಸಾಧ್ಯತೆಯಿದೆ.

Recommended Video

ಶೂ ಒಳಗೆ ನಾಗರಹಾವು!! ನೋಡ್ದೆ ಶೂ ಹಾಕೊಳ್ಳೋಕೋದ್ರೆ ಕಥೆ ಮುಗೀತು | *Trending | OneIndia kannada

English summary
Some Indian test players including Virat kohli have tested COVID 19.several reports said, virat recovered from virus, and he started practice in the nets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X