ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈದರಾಬಾದ್‌ನಲ್ಲಿ ಭಾರತ-ಆಸ್ಟ್ರೇಲಿಯಾ ಕ್ರಿಕೆಟ್ ಟಿಕೆಟ್ ಖರೀದಿ ವೇಳೆ ಕಾಲ್ತುಳಿತ

|
Google Oneindia Kannada News

ಹೈದ್ರಾಬಾದ್, ಸೆಪ್ಟೆಂಬರ್ 22: ಭಾರತ-ಆಸ್ಟ್ರೇಲಿಯಾ ನಡುವಿನ ಮೂರನೇ ಟಿ-20ಐ ಪಂದ್ಯದ ಟಿಕೆಟ್‌ಗಳನ್ನು ಖರೀದಿಸಲು ಕ್ರಿಕೆಟ್ ಅಭಿಮಾನಿಗಳು ಮುಗಿಬಿದ್ದ ಸಂದರ್ಭದಲ್ಲಿ ಜಿಮ್ಖಾನಾ ಮೈದಾನದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ ನಾಲ್ವರು ಗಾಯಗೊಂಡಿದ್ದಾರೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ T-20 ಪಂದ್ಯವು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 25ರ ಭಾನುವಾರ ನಡೆಯಲಿದೆ. ಈ ಪಂದ್ಯದ ಟಿಕೆಟ್ ಖರೀದಿಸಲು ಜಿಮ್ಖಾನಾ ಮೈದಾನದ ಬಳಿ ಸಾವಿರಾರು ಸಂಖ್ಯೆಯಲ್ಲಿ ಕ್ರಿಕೆಟ್ ಅಭಿಮಾನಿಗಳು ಜಮಾಯಿಸಿದ್ದರು.

Video: Stampede broke out in Hyderabad as cricket fans gather to get India vs Australia ticket

ಅಭಿಮಾನಿಗಳ ದೊಡ್ಡ ಸರತಿ ಸಾಲಿನಲ್ಲಿ ಟಿಕೆಟ್ ಪಡೆಯಲು ಕಾದು ನಿಂತಿದ್ದರು. ಆದರೆ ಉತ್ಸುಕರಾದ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳನ್ನು ಉಂಟು ಮಾಡಿದರು. ತದನಂತರ ಶೀಘ್ರದಲ್ಲೇ ಪರಿಸ್ಥಿತಿ ಹತೋಟಿಗೆ ಬಂದಿತು. ಭಾರೀ ಗುಂಪನ್ನು ಚದುರಿಸಲು ಮತ್ತು ನಿಯಂತ್ರಣವನ್ನು ಪುನಃಸ್ಥಾಪಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದರು. ಈ ಎರಡು ತಂಡಗಳ ನಡುವಿನ ಸರಣಿಯಲ್ಲಿ ಆಸ್ಟ್ರೇಲಿಯಾ ಪ್ರಸ್ತುತ 1-0 ಮುನ್ನಡೆ ಸಾಧಿಸಿದೆ. ಸರಣಿಯ ಎರಡನೇ ಪಂದ್ಯ ಶುಕ್ರವಾರ (ಸೆಪ್ಟೆಂಬರ್ 23) ನಾಗ್ಪುರದಲ್ಲಿ ನಡೆಯಲಿದೆ.

ಮೊಹಾಲಿಯಲ್ಲಿ ನಡೆದ ಮೊದಲ T20 ಪಂದ್ಯ:
ಮೊಹಾಲಿಯಲ್ಲಿ ನಡೆದ ಮೊದಲ T20 ಪಂದ್ಯದಲ್ಲಿ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಮಾಡಿತು. ನಂತರ ಅಖಾಡಕ್ಕೆ ಇಳಿದ ಟೀಮ್ ಇಂಡಿಯಾ, ನಾಯಕ ರೋಹಿತ್ ಶರ್ಮಾ 11, ವಿರಾಟ್ ಕೊಹ್ಲಿ 2 ರನ್ ಸ್ಕೋರ್‌ಗಳಿಗೆ ಕಳೆದುಕೊಂಡಿತು. ಇದರಿಂದ 35 ರನ್‌ಗಳಿಗೆ ಪ್ರಮುಖ ಎರಡು ವಿಕೆಟ್ ಕಳೆದುಕೊಂಡ ಟೀಮ್ ಇಂಡಿಯಾ ಸಂಕಷ್ಟಕ್ಕೆ ಸಿಲುಕಿತು. ನಂತರ ಫೀಲ್ಡ್ ಗೆ ಇಳಿದ ಕೆಎಲ್ ರಾಹುಲ್ 55 ರನ್ ಬಾರಿಸಿದರೆ, ಸೂರ್ಯಕುಮಾರ್ ಯಾದವ್ 46 ರನ್ ಸಿಡಿಸಿದರು. ಈ ಜೋಡಿಯ 68 ರನ್ ಜೊತೆಯಾಟದೊಂದಿಗೆ ಇನ್ನಿಂಗ್ಸ್ ಅನ್ನು ಜೀವಂತವಾಗಿಟ್ಟರು. ನಂತರ ಬಂದ ಹಾರ್ದಿಕ್ ಪಾಂಡ್ಯ 30 ಎಸೆತಗಳಲ್ಲಿ ಏಳು ಬೌಂಡರಿ ಮತ್ತು ಐದು ಸಿಕ್ಸರ್‌ಗಳೊಂದಿಗೆ ಔಟಾಗದೆ 71 ರನ್ ಗಳಿಸಿ ಇನ್ನಿಂಗ್ಸ್ ಅನ್ನು 208/6ಕ್ಕೆ ಮುಗಿಸಿದರು.

ವೇಗಿಗಳಾದ ನಾಥನ್ ಎಲ್ಲಿಸ್ 3 ವಿಕೆಟ್ ಕಬಳಿಸಿದರೆ, ಜೋಶ್ ಹೇಜಲ್‌ವುಡ್ 2 ವಿಕೆಟ್ ಪಡೆದುಕೊಂಡು ಆಸೀಸ್ ಪರ ಯಶಸ್ವಿ ಬೌಲರ್‌ ಎನಿಸಿದರು. 209 ರನ್‌ಗಳ ಗುರಿ ಬೆನ್ನತ್ತಿದ ಆರಂಭಿಕರಾದ ಆರನ್ ಫಿಂಚ್ 22 ರನ್ ಗಳಿಸಿ ಔಟ್ ಆದರೆ, ಕ್ಯಾಮರೂನ್ ಗ್ರೀನ್ 39 ರನ್‌ಗಳಿ ವೇಗದ ಜೊತೆಯಾಟದಿಂದ ಆಸ್ಟ್ರೇಲಿಯಕ್ಕೆ ದೃಢವಾದ ಆರಂಭವನ್ನು ನೀಡಿದರು. ಸ್ಟೀವ್ ಸ್ಮಿತ್ 35 ರನ್ ಗಳಿಸಿದರೆ, ಗ್ರೀನ್ 30 ಎಸೆತಗಳಲ್ಲಿ ಆಕರ್ಷಕ 61 ರನ್ ಗಳಿಸಿ ಔಟಾದರು.

ಇದರ ನಂತರ ಕೇವಲ 36 ರನ್ ಅಂತರದಲ್ಲಿ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್ 1, ಜೋಶ್ ಇಂಗ್ಲಿಸ್ 17 ವಿಕೆಟ್ ಪಡೆದರು. ಆದರೆ ವಿಕೆಟ್‌ಕೀಪರ್-ಬ್ಯಾಟರ್ ಮ್ಯಾಥ್ಯೂ ವೇಡ್ ಔಟಾಗದೆ 45 ರನ್ ಗಳಿಸಿದರು. ಚೊಚ್ಚಲ ಪಂದ್ಯದಲ್ಲೇ ಆಟಗಾರ ಟಿಮ್ ಡೇವಿಡ್ 18 ರನ್ ಗಳಿಸಿದರು.

English summary
Video: Stampede broke out in Hyderabad as cricket fans gather to get India vs Australia ticket.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X