ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Video: ಟೋಕಿಯೊ ಒಲಿಂಪಿಕ್ಸ್ ಕ್ರೀಡಾಪಟುಗಳಿಗೆ ಮೋದಿ ಶುಭಹಾರೈಕೆ

|
Google Oneindia Kannada News

ನವದೆಹಲಿ, ಜುಲೈ 23: ಟೋಕಿಯೊ ಒಲಿಂಪಿಕ್ಸ್ ಆಯೋಜಿಸಿರುವ ಜಪಾನ್ ಪ್ರಧಾನ ಮಂತ್ರಿ ಮತ್ತು ಅಲ್ಲಿನ ಜನತೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ. ಜೊತೆಗೆ ಹೊಚ್ಚ ಹೊಸ ಕ್ರೀಡಾಂಗಣ ಪ್ರವೇಶಿಸಿದ ಭಾರತದ ಕ್ರೀಡಾಪಟುಗಳಿಗೆ ನರೇಂದ್ರ ಮೋದಿ ಅವರು ಶುಭಹಾರೈಸಿದ್ದಾರೆ.

ಜಪಾನ್ ರಾಜಧಾನಿ ಟೋಕಿಯೊದ ನೂತನ ಸುಸಜ್ಜಿತ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ಆಯೋಜಿಸಿರುವ ಜಪಾನ್ ಪ್ರಧಾನ ಮಂತ್ರಿ ಯೊಶಿಹಿದೆ ಸುಗಾ ಅವರಿಗೆ ಹಾಗೂ ಕ್ರೀಡಾಂಗಣ ಪ್ರವೇಶಿಸಿದ ಭಾರತದ ಕ್ರೀಡಾಪಟುಗಳಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶುಭಾಶಯ ಕೋರಿದ್ದಾರೆ.

VIDEO: PM Modi stands up to cheer athletes as Indian contingent enter Olympic stadium

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ಅವರು, "ಟೋಕಿಯೊದಲ್ಲಿ ಒಲಿಂಪಿಕ್ಸ್ ಮತ್ತು ಪ್ಯಾರಾಂಲಿಪಿಕ್ಸ್ ಕ್ರೀಡಾಕೂಟ ಆಯೋಜಿಸಿರುವ ಜಪಾನ್ ಪ್ರಧಾನ ಮಂತ್ರಿ ಯೊಶಿಹಿದೆ ಸುಗಾ ಮತ್ತು ಜಪಾನ್ ಜನತೆಗೆ ಈ ಸುಸಂದರ್ಭದಲ್ಲಿ ಶುಭಾಶಯ ಕೋರುತ್ತೇನೆ. ಟೋಕಿಯೊ-ಒಲಿಂಪಿಕ್ಸ್‌ನಲ್ಲಿ ವಿಶ್ವದ ಅತ್ಯುತ್ತಮ ಕ್ರೀಡಾಪಟು(ಅಥ್ಲೀಟ್)ಗಳ ಅದ್ಭುತ ಪ್ರದರ್ಶನಗಳನ್ನು ನೋಡಲು ನಾವೆಲ್ಲಾ ಎದುರು ನೋಡುತ್ತಿದ್ದೇವೆ, ಕಾತರರಾಗಿದ್ದೇವೆ!" ಎಂದಿದ್ದಾರೆ.

ಈ ಬಾರಿ ಒಲಿಂಪಿಕ್ಸ್ ಗೆ ಭಾರತ ಅತಿದೊಡ್ಡ ತಂಡವನ್ನು ಕಳುಹಿಸಿದೆ. 22 ರಾಜ್ಯಗಳ 127 ಅಥ್ಲೀಟ್ ಗಳನ್ನೊಳಗೊಂಡ 228 ಮಂದಿಯ ಬಲಿಷ್ಠ ತಂಡ ಪಾಲ್ಗೊಳ್ಳುತ್ತಿದೆ. 18 ಕ್ರೀಡಾ ವಿಭಾಗಗಳಲ್ಲಿ ಅಂದರೆ ಆರ್ಚರಿ, ಅಥ್ಲೆಟಿಕ್ಸ್, ಬಾಕ್ಸಿಂಗ್, ಬ್ಯಾಡ್ಮಿಂಟನ್, ಈಕ್ವೆಸ್ಟ್ರಿಯನ್, ಫೆನ್ಸಿಂಗ್, ರೋಯಿಂಗ್, ಶೂಟಿಂಗ್, ಸೈಲಿಂಗ್, ಸ್ವಿಮ್ಮಿಂಗ್, ಟೇಬಲ್ ಟೆನಿಸ್, ಟೆನಿಸ್, ವೇಯ್ಟ್ ಲಿಫ್ಟಿಂಗ್ ಮತ್ತು ಕುಸ್ತಿಯಲ್ಲಿ ಸೆಣಸುವರು. ಭಾರತೀಯ ನಿಯೋಗದಲ್ಲಿ 68 ಪುರುಷ ಹಾಗೂ 52 ಮಹಿಳಾ ಅಥ್ಲಿಟ್ ಗಳು, 58 ಅಧಿಕಾರಿಗಳು, 43 ಪರ್ಯಾಯ ಅಥ್ಲೀಟ್ ಗಳು ಮತ್ತು 8 ತುರ್ತು ಸೇವಾ ಸಿಬ್ಬಂದಿ, ಕೋಚ್ ಗಳು, ತಂಡದ ಅಧಿಕಾರಿಗಳು ಭಾಗವಹಿಸುತ್ತಿದ್ದಾರೆ. ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತೀಯ ಅಥ್ಲೀಟ್ ಗಳು 85 ಸಂಭವನೀಯ ಪದಕಗಳಿಗಾಗಿ ಸೆಣಸುವರು.

English summary
VIDEO: Prime Minister Narendra Modi on Friday stood up to cheer athletes as the Indian contingent enters Olympic Stadium in Tokyo during the opening ceremony.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X