• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿ ಜೊತೆ ಐಪಿಎಲ್ ಪಂದ್ಯ ವೀಕ್ಷಿಸಿ, ಆಟವಾಡಿ, ಬಹುಮಾನ ಗೆಲ್ಲಿ

|

ಬೆಂಗಳೂರು, ಏಪಿರ್ಲ್ 12: ದೇಶದ ಅತಿದೊಡ್ಡ ಕ್ರೀಡಾ ಉತ್ಸವ ಚಾಲನೆ ಪಡೆದಿದ್ದು, ವಿವೊ ಐಪಿಎಲ್ 2021ರ ಸಹ ಮಾಧ್ಯಮ ಪ್ರಾಯೋಜಕ ಹಾಗೂ ಭಾರತದ ಮುಂಚೂಣಿ ಟೆಲಿಕಾಂ ಬ್ರಾಂಡ್ ಆಗಿರುವ ವಿ, ಜನಪ್ರಿಯ "ಪ್ಲೇ ಅಲಾಂಗ್" ಗೇಮಿಂಗ್ ಪರಿಕಲ್ಪನೆಯಡಿ ಪ್ರೇಕ್ಷಕರನ್ನು ತೊಡಗಿಸಿಕೊಳ್ಳುವ ಮತ್ತು ಬಹುಮಾನ ನೀಡುವ ಸೌಲಭ್ಯಕ್ಕೆ ಚಾಲನೆ ನೀಡಿದೆ.

ವಿ ಗ್ರಾಹಕರು ಟಿ20 ಲೀಗ್ ನೇರಪ್ರಸಾರವನ್ನು ವೀಕ್ಷಿಸುತ್ತಲೇ, 52 ದಿನಗಳ ಕಾಲ ನಡೆಯುವ ಎಲ್ಲ 60 ಪಂದ್ಯಗಳ ವೇಳೆಯೂ ವೈಯಕ್ತಿಕವಾಗಿ ಅಥವಾ ತಮ್ಮ ಸ್ನೇಹಿತರ ಜತೆಗೆ ಮೋಜಿನ ಹಾಗೂ ರೋಮಾಂಚಕ ಆಟವಾಡಿ ಬಹುಮಾನ ಗೆಲ್ಲಲು ಅವಕಾಶವಿದೆ. ವಿ ತನ್ನ ಗ್ರಾಹಕರಿಗೆ ವಿ ದೇಖೊ ಭಾಯ್, ಖೇಲೋ ಭಾಯ್, ಜೀತೋ ಭಾಯ್ ಆನ್‍ಲೈನ್ ಗೇಮಿಂಗ್ ಉಪಕ್ರಮದಲ್ಲಿ ಭಾಗವಹಿಸಲು ಮತ್ತು 2021ರ ಏಪ್ರಿಲ್ 9ರಿಂದ ಮೇ 30ರವರೆಗೆ ಪ್ರತಿದಿನ ಬಹುಮಾನ ಗೆಲ್ಲಲು ಮತ್ತು ಬಂಪರ್ ಟೂರ್ನಮೆಂಟ್ ಬಹುಮಾನ ಗೆಲ್ಲಲು ಅವಕಾಶ ಮಾಡಿಕೊಟ್ಟಿದೆ.

ಸ್ಟಾರ್ ನಟನಿಗೆ ಜೆರ್ಸಿ ಗಿಫ್ಟ್ ಕೊಟ್ಟ ರಾಜಸ್ಥಾನ ನಾಯಕ ಸ್ಯಾಮ್ಸನ್ಸ್ಟಾರ್ ನಟನಿಗೆ ಜೆರ್ಸಿ ಗಿಫ್ಟ್ ಕೊಟ್ಟ ರಾಜಸ್ಥಾನ ನಾಯಕ ಸ್ಯಾಮ್ಸನ್

ಡಿಸ್ನಿ + ಹಾಟ್‍ಸ್ಟಾರ್ ಜತೆ ವಿ ಒಪ್ಪಂದ ಮಾಡಿಕೊಂಡ ಹಿನ್ನೆಲೆಯಲ್ಲಿ, ವಿ ಗ್ರಾಹಕರು ಎಲ್ಲೇ ಇದ್ದರೂ, ಐಪಿಎಲ್ ಟಿ20 ಪಂದ್ಯಗಳ ನೇರಪ್ರಸಾರವನ್ನು ತಮ್ಮ ಮೊಬೈಲ್ ಫೋನ್‍ಗಳಲ್ಲೇ ವೀಕ್ಷಿಸಲು ಸಾಧ್ಯವಾಗಿರುವ ಬೆನ್ನಲ್ಲೇ ಈ ಘೋಷಣೆ ಹೊರಬಿದ್ದಿದೆ.

 ವಿ ದೇಖೊ ಭಾಯ್, ಖೇಲೋ ಭಾಯ್, ಜೀತೋ ಭಾಯ್ ಬಗ್ಗೆ

ವಿ ದೇಖೊ ಭಾಯ್, ಖೇಲೋ ಭಾಯ್, ಜೀತೋ ಭಾಯ್ ಬಗ್ಗೆ

* ಎಲ್ಲ ವಿ ಗ್ರಾಹಕರು (ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್) ನೋಂದಾಯಿಸಿಕೊಂಡು ಆಟವಾಡಬಹುದಾಗಿದೆ. ಇದಕ್ಕೆ ವಿ ಆ್ಯಪ್ ಹೋಮ್‍ಪೇಜ್‍ನಲ್ಲಿ ಒಂದು ಬಾರಿ ನೋಂದಾಯಿಸಿಕೊಳ್ಳುವ ಅಗತ್ಯವಿರುತ್ತದೆ. ಯಾವುದೇ ಷರತ್ತುಗಳು ಇರುವುದಿಲ್ಲ!
* ಪ್ರತಿ ಆಟಕ್ಕೆ ನಾಲ್ಕು ಹಂತಗಳಿರುತ್ತವೆ- ಪಂದ್ಯಕ್ಕೆ ಮುನ್ನ, ಪಂದ್ಯದ ಜತೆಗೆ, ಸ್ಟ್ರಾಟಜಿಕ್ ಟೈಮ್ ಔಟ್ ಮತ್ತು ಪವರ್‍ಪ್ಲೇ.
* ಆ ದಿನದ ಪಂದ್ಯದ ಆಧಾರದಲ್ಲಿ ದೈನಂದಿನ ಸವಾಲುಗಳಿಗೆ ಇರುತ್ತವೆ.
* ನಾವು ಪಂದ್ಯದ ಫಲಿತಾಂಶವನ್ನು ಅಂದಾಜಿಸಬಹುದಾಗಿದೆ- ಅಂದರೆ ಯಾರು ಟಾಸ್ ಗೆಲ್ಲುತ್ತಾರೆ, ಯಾರು ಪಂದ್ಯ ಗೆಲ್ಲುತ್ತಾರೆ, ಮುಂದಿನ ಓವರ್‌ನಲ್ಲಿ ಎಷ್ಟು ರನ್ ಗಳಿಸಬಹುದು.. ಹೀಗೆ.
* ಹೆಚ್ಚುವರಿ ರನ್ ಪಡೆಯಲು ನಿಮ್ಮ ಕ್ರಿಕೆಟ್ ಜ್ಞಾನವನ್ನು ಬಳಸಿಕೊಳ್ಳಬಹುದು.

 ಎಷ್ಟು ಬಾರಿ ಬೇಕಾದರೂ ಬಹುಮಾನ ಗೆಲ್ಲಬಹುದು

ಎಷ್ಟು ಬಾರಿ ಬೇಕಾದರೂ ಬಹುಮಾನ ಗೆಲ್ಲಬಹುದು

* ಆ ದಿನದ ಆಟ ಮುಗಿದ ಬಳಿಕ ಪ್ರತಿ ದಿನವೂ ಆ ದಿನದ ಪಂದ್ಯದ ಫಲಿತಾಂಶವನ್ನು (ಲೀಡರ್‌ಬೋರ್ಡ್) ಪ್ರಕಟಿಸಲಾಗುತ್ತದೆ. ಅಂದರೆ ಪ್ರತಿದಿನದ ಆಟದ ಬಳಿಕ ಆ ದಿನದ ವಿಜೇತರ ಹೆಸರುಗಳನ್ನು ಪ್ರಕಟಿಸಲಾಗುತ್ತದೆ.
* ಭಾಗವಹಿಸಿದ ಆಟಗಾರರು 52 ದಿನಗಳ ಅವಧಿಯಲ್ಲಿ ಎಷ್ಟು ಬಾರಿ ಬೇಕಾದರೂ ಬಹುಮಾನ ಗೆಲ್ಲಬಹುದು. ಗೆಲುವಿಗೆ ಯಾವುದೇ ಮಿತಿ ಇರುವುದಿಲ್ಲ.
* ಸ್ನೇಹಿತರು, ಸಯೋದ್ಯೋಗಿಗಳು ಮತ್ತು ಸಂಬಂಧಿಕರನ್ನು ಆಡಲು ಆಹ್ವಾನಿಸಬಹುದು. ನಿಮ್ಮದೇ ಲೀಗ್‍ಗಳನ್ನು ಸೃಷ್ಟಿಸಿಕೊಂಡು, ನಿಮ್ಮೊಳಗೆ ಸ್ಪರ್ಧೆ ಏರ್ಪಡಿಸಬಹುದು.
* ನಿಮ್ಮ ಸ್ಥಾನವನ್ನು ವಾಟ್ಸಪ್, ಫೇಸ್‍ಬುಕ್, ಟ್ವಿಟ್ಟರ್ ಮತ್ತು ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಳ್ಳಿ.
* ಸ್ನೇಹಿತರನ್ನು ಆಹ್ವಾನಿಸುವ ಮೂಲಕ ಅಥವಾ ವಿ ಆ್ಯಪ್ ಮೂಲಕ ರೀಚಾರ್ಜ್ ಮಾಡುವ/ ಬಿಲ್ ಪಾವತಿ ಮಾಡುವ ಮೂಲಕ ಭಾಗವಹಿಸುವ ಪ್ರತಿಯೊಬ್ಬರೂ ಬೂಸ್ಟರ್ ಪಾಯಿಂಟ್‍ಗಳನ್ನು ಪಡೆಯಲಿದ್ದಾರೆ.

ಗಮನ ಸೆಳೆದ ಯುವತಿ: ಮಾಸ್ಕ್ ಹಾಕದ ಆರೆಂಜ್ ಆರ್ಮಿ ಸಿಇಒ!ಗಮನ ಸೆಳೆದ ಯುವತಿ: ಮಾಸ್ಕ್ ಹಾಕದ ಆರೆಂಜ್ ಆರ್ಮಿ ಸಿಇಒ!

 ದೈನಿಕ ಬಹುಮಾನಗಳಿರುತ್ತವೆ

ದೈನಿಕ ಬಹುಮಾನಗಳಿರುತ್ತವೆ

* ಪಂದ್ಯದಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿರುವವರಿಗೆ ದೈನಿಕ ಬಹುಮಾನಗಳಿರುತ್ತವೆ ಹಾಗೂ ಇಡೀ ಟೂರ್ನಮೆಂಟ್‍ನಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿರುವವರಿಗೆ ಬಂಪರ್ ಬಹುಮಾನಗಳಿರುತ್ತವೆ. ಇದರ ಜತೆಗೆ ನಿರ್ದಿಷ್ಟ ಕನಿಷ್ಠ ಅಂಕಗಳನ್ನು ಪಡೆದವರಿಗೆ ಡ್ರಾ ಮೂಲಕ ಮೆಗಾ ಬಹುಮಾನಗಳನ್ನು ನೀಡಲಾಗುತ್ತದೆ.
• ಬಂಪರ್ ಬಹುಮಾನಗಳು: ಫೋನ್, ಬೈಕ್, ಕಾರು, ಲ್ಯಾಪ್‍ಟಾಪ್, ಸ್ಕೂಟರ್ ಇತ್ಯಾದಿ.
• ದೈನಂದಿನ ಬಹುಮಾನಗಳು: ಮೈಂತ್ರಾ, ಫ್ಲಿಪ್‍ಕಾಟ್, ಲೆನ್ಸ್‍ಕಾರ್ಟ್, ಪ್ಯೂಮಾ, ಫಾಸೋಸ್, ಝೊಮ್ಯಾಟೊ, ಕ್ಯೂರ್‍ಫಿಟ್, ಗ್ರೋಫೇರ್ಸ್, ಗೊಯಿಬಿಬ್ಬೊ ಇತ್ಯಾದಿ ಪಾಲುದಾರ ಕಂಪನಿಗಳ ಜತೆ ತಮ್ಮ ಪಾಯಿಂಟ್‍ಗಳನ್ನು ಬಳಸಿಕೊಳ್ಳಲು ಅವಕಾಶವಿರುತ್ತದೆ.

ಪ್ರತ್ಯೇಕ ಉಪಕ್ರಮವಾಗಿ ವಿ, ತನ್ನ ಗ್ರಾಹಕರಿಗೆ ವಿ ಫ್ಯಾನ್ ಆಫ್ ದಿ ಮ್ಯಾಚ್ ಆಟವಾಡಲೂ ಅವಕಾಶ ಮಾಡಿಕೊಡುತ್ತಿದೆ. ಪಂದ್ಯದ ಬಿಡುವಿನ ವೇಳೆ ನಡೆಯುವ ಈ ಸ್ಪರ್ಧೆಯ ಮೂಲಕ ಐಫೋನ್‍ಗಳು ಸೇರಿದಂತೆ ರೋಮಾಂಚಕ ಬಹುಮಾನಗಳನ್ನು ಗೆಲ್ಲಲು ಅವಕಾಶ ಇರುತ್ತದೆ.

 ವಿ ಫ್ಯಾನ್ ಆಫ್ ದ ಮ್ಯಾಚ್ ಆಟ

ವಿ ಫ್ಯಾನ್ ಆಫ್ ದ ಮ್ಯಾಚ್ ಆಟ

ವಿ ಗ್ರಾಹಕರು ಪ್ರತಿ ಪಂದ್ಯದ ಬಿಡುವಿನ ಸಂದರ್ಭದಲ್ಲಿ 'ವಿ ಫ್ಯಾನ್ ಆಫ್ ದ ಮ್ಯಾಚ್' ಆಟವನ್ನು ವಿ ಫೇಸ್‍ಬುಕ್ ಪೇಜ್, ವಿ ಇನ್‍ಸ್ಟಾಗ್ರಾಂ ಪೇಜ್ ಮತ್ತು ಟ್ವಿಟ್ಟರ್‌ನಲ್ಲಿ ಆಡಬಹುದಾಗಿದೆ. ಇದರಲ್ಲಿ ಭಾಗವಹಿಸುವವರು ನೇರ ಪ್ರಸಾರವಾಗುತ್ತಿರುವ ಪಂದ್ಯದ ಬಗೆಗಿನ ಸರಳ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ಪ್ರತಿ ಪಂದ್ಯಕ್ಕೆ 20 ಪ್ರಶ್ನೆಗಳಿರುತ್ತವೆ. ಗರಿಷ್ಠ ಸರಿ ಉತ್ತರಗಳನ್ನು ಹೇಳಿದವರಿಗೆ ಬಹುಮಾನ ನೀಡಲಾಗುತ್ತದೆ:

* ಪ್ರತಿ ವಿರಾಮದಲ್ಲೂ ಅಚ್ಚರಿಯ ವೋಚರ್‌ಗಳು
* ಪ್ರತಿ ಪಂದ್ಯದ ಕೊನೆಗೆ ಐಫೋನ್ ಗೆಲ್ಲುವ ಅವಕಾಶ- 60 ಪಂದ್ಯಗಳು, 60 ವಿಜೇತರು, 60 ಐಫೋನ್‍ಗಳು.
* ಸೀಸನ್ ಕೊನೆಗೆ ಬಂಪರ್ ಬಹುಮಾನ

ಹೆಚ್ಚುವರಿಯಾಗಿ, ಪ್ರತಿದಿನದ ವಿಜೇತರ ಹೆಸರುಗಳು ಮತ್ತು ಫೋಟೊಗಳನ್ನು ವಿ ಸಾಮಾಜಿಕ ಜಾಲತಾಣ ಪುಟಗಳಲ್ಲಿ ಪ್ರದರ್ಶಿಸಲಾಗುತ್ತದೆ. ಆದ್ದರಿಂದ ನೀವು ವಿ ಗ್ರಾಹಕರಾಗಿದ್ದಲ್ಲಿ, ಈ ಐಪಿಎಲ್ ಸೀಸನ್ ನಿಮಗೆ ಗೆಲುವಿನ ಕೊಡುಗೆಯಾಗಲಿದೆ! ಡಿಸ್ನಿ + ಹಾಟ್‍ಸ್ಟಾರ್‌ನಲ್ಲಿ ಉಚಿತವಾಗಿ ಪಂದ್ಯದ ನೇರ ಪ್ರಸಾರ ವೀಕ್ಷಿಸುವ ಜತೆಜತೆಗೆ ವಿ ಫ್ಯಾನ್ ಆಫ್ ದ ಮ್ಯಾಚ್‍ನಲ್ಲಿ ಭಾಗವಹಿಸಿ ಪ್ರತಿ ಪಂದ್ಯದಲ್ಲೂ ಬಹುಮಾನ ಗೆಲ್ಲಬಹುದು.

English summary
This announcement comes close on the heels of Vi’s partnership with Disney+ Hotstar giving Vi customers the opportunity to watch the IPL T20 games live from their mobile phones, from anywhere.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X