ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಂಬಲ್ಡನ್ ಟೆನಿಸ್ ನೋಡಲು ಇವರಿಗೆ ಸಿಗಲಿದೆ ಉಚಿತ ಟಿಕೆಟ್!

|
Google Oneindia Kannada News

ಲಂಡನ್, ಜೂನ್ 25: ಟೆನಿಸ್ ಪ್ರಿಯರ ನೆಚ್ಚಿನ ಪಂದ್ಯಾವಳಿ ವಿಂಬಲ್ಡನ್ ಜೂನ್ 27ರಿಂದ ಆರಂಭವಾಗಲಿದೆ. ವಿಶ್ವದೆಲ್ಲೆಡೆಯಿಂದ ಟೆನಿಸ್ ಪ್ರೇಮಿಗಳು ಟಿಕೆಟ್ ಗಾಗಿ ಹಾತೊರೆಯುತ್ತಾರೆ. ಈ ನಡುವೆ ಯುದ್ಧಪೀಡಿತ ಉಕ್ರೇನ್ ದೇಶದ ಟೆನಿಸ್ ಪ್ರೇಮಿಗಳಿಗೆ ಸಂತಸದ ಸುದ್ದಿಯನ್ನು ಆಲ್ ಇಂಗ್ಲೆಂಡ್ ಲಾನ್ ಟೆನಿಸ್ ಕ್ಲಬ್ ನೀಡಿದೆ.

ವಿಂಬಲ್ಡನ್ ನೋಡಲು ಬಯಸುವ ಉಕ್ರೇನ್ ನಿರಾಶ್ರಿತರಿಗೆ ಉಚಿತವಾಗಿ ಟಿಕೆಟ್ ಹಂಚುತ್ತಿದೆ. ಜೊತೆಗೆ ಸಂತ್ರಸ್ತರಿಗೆ 250,000 ಪೌಂಡ್ಸ್ ($307,100) ನೆರವು ನೀಡುತ್ತಿದೆ.

ಪೌರತ್ವ ಬದಲಿಸಿಕೊಂಡ ರಷ್ಯನ್ ತಾರೆಗೆ ವಿಂಬಲ್ಡನ್‌ನಲ್ಲಿ ಆಡುವ ಅವಕಾಶಪೌರತ್ವ ಬದಲಿಸಿಕೊಂಡ ರಷ್ಯನ್ ತಾರೆಗೆ ವಿಂಬಲ್ಡನ್‌ನಲ್ಲಿ ಆಡುವ ಅವಕಾಶ

ಯುದ್ಧದ ಪರಿಣಾಮ ಈ ಬಾರಿ ರಷ್ಯಾದ ಮತ್ತು ಬೆಲರೂಸಿಯನ್ ಆಟಗಾರರನ್ನು ವಿಂಬಲ್ಡನ್ ಪಂದ್ಯಾವಳಿಯಿಂದ ನಿಷೇಧಿಸಲಾಗಿದೆ. ಇದರ ಪರಿಣಾಮವಾಗಿ ಪುರುಷರ ATP ಪ್ರವಾಸ ಮತ್ತು ಮಹಿಳೆಯರ WTA ಟೂರ್ ಅದರ ಶ್ರೇಯಾಂಕದ ಅಂಕಗಳನ್ನು ಹಿಂಪಡೆಯಲಾಗಿದೆ.

ವಿಂಬಲ್ಡನ್ 2022 ಪಂದ್ಯಾವಳಿ ಆರಂಭ ದಿನಾಂಕ, ಆಟಗಾರರ ವಿವರ!ವಿಂಬಲ್ಡನ್ 2022 ಪಂದ್ಯಾವಳಿ ಆರಂಭ ದಿನಾಂಕ, ಆಟಗಾರರ ವಿವರ!

"ಇದಲ್ಲದೆ, ಆಲ್ ಇಂಗ್ಲೆಂಡ್ ಕ್ಲಬ್ ಮತ್ತು LTA ಜಂಟಿಯಾಗಿ ವಿಂಬಲ್ಡನ್ ಪರವಾಗಿ 250,000 ಯುರೋಗಳ ದೇಣಿಗೆಯನ್ನು ಟೆನಿಸ್ ಪ್ಲೇಸ್ ಫಾರ್ ಪೀಸ್ ಉಪಕ್ರಮ ಮತ್ತು ಬ್ರಿಟಿಷ್ ರೆಡ್ ಕ್ರಾಸ್ ಉಕ್ರೇನ್ ಮೇಲ್ಮನವಿಯ ಮೂಲಕ ನಿರಾಶ್ರಿತರ ಪ್ರತಿಕ್ರಿಯೆ ಪ್ರಯತ್ನಗಳಿಗೆ ಬದ್ಧವಾಗಿದೆ" ಎಂದು ಹೇಳಿದರು.

ಆಲ್ ಇಂಗ್ಲೆಂಡ್ ಕ್ಲಬ್ ಅಧ್ಯಕ್ಷ ಇಯಾನ್ ಹೆವಿಟ್

ಆಲ್ ಇಂಗ್ಲೆಂಡ್ ಕ್ಲಬ್ ಅಧ್ಯಕ್ಷ ಇಯಾನ್ ಹೆವಿಟ್

"ಆಲ್ ಇಂಗ್ಲೆಂಡ್ ಲಾನ್ ಟೆನಿಸ್ ಕ್ಲಬ್ ಮತ್ತು LTA ಪರವಾಗಿ, ಉಕ್ರೇನ್‌ನಲ್ಲಿನ ಸಂಘರ್ಷದಿಂದ ಪ್ರಭಾವಿತರಾದ ಎಲ್ಲರಿಗೂ ನಮ್ಮ ನಿರಂತರ ಬೆಂಬಲವನ್ನು ವ್ಯಕ್ತಪಡಿಸಲು ನಾವು ಬಯಸುತ್ತೇವೆ. ಉಕ್ರೇನಿಯನ್ ನಿರಾಶ್ರಿತರನ್ನು ಅವರ ಮನೆಗಳು ಮತ್ತು ಸಮುದಾಯಗಳಿಗೆ ಸ್ವಾಗತಿಸಲು ಬ್ರಿಟಿಷ್ ಸಾರ್ವಜನಿಕರಿಂದ ಅದ್ಭುತ ಪ್ರತಿಕ್ರಿಯೆಯನ್ನು ನಾವು ಗುರುತಿಸುತ್ತೇವೆ. ಆ ನಿಟ್ಟಿನಲ್ಲಿ, ಆಲ್ ಇಂಗ್ಲೆಂಡ್ ಕ್ಲಬ್ ಮೆರ್ಟನ್ ಮತ್ತು ವಾಂಡ್ಸ್‌ವರ್ತ್‌ನಲ್ಲಿ ನೆಲೆಸಿರುವ ಎಲ್ಲಾ ಉಕ್ರೇನಿಯನ್ ನಿರಾಶ್ರಿತರನ್ನು ತಮ್ಮ ಪ್ರಾಯೋಜಕರು ಮತ್ತು ಚಾರಿಟಿ ವಿತರಣಾ ಪಾಲುದಾರರೊಂದಿಗೆ ಜುಲೈ 3 ರ ಮಧ್ಯ ಭಾನುವಾರದಂದು ದಿ ಚಾಂಪಿಯನ್‌ಶಿಪ್‌ನಲ್ಲಿ ನಮ್ಮೊಂದಿಗೆ ಸೇರಲು ಆಹ್ವಾನಿಸಿದೆ, '' ಆಲ್ ಇಂಗ್ಲೆಂಡ್ ಕ್ಲಬ್ ಅಧ್ಯಕ್ಷ ಇಯಾನ್ ಹೆವಿಟ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಂಬಲ್ಡನ್ 2022

ವಿಂಬಲ್ಡನ್ 2022

ವಿಂಬಲ್ಡನ್ 2022 ರಲ್ಲಿ, ನೊವಾಕ್ ಜೊಕೊವಿಕ್ ಪುರುಷರ ಸಿಂಗಲ್ಸ್‌ನಲ್ಲಿ ಅಗ್ರ ಶ್ರೇಯಾಂಕಿತರಾಗಿ ಕಣಕ್ಕಿಳಿಯುತ್ತಿದ್ದರೆ, ಇಗಾ ಸ್ವಿಯಾಟೆಕ್ ಮಹಿಳೆಯರ ಸಿಂಗಲ್ಸ್‌ನಲ್ಲಿ ಅಗ್ರ ಶ್ರೇಯಾಂಕಿತರಾಗಿದ್ದಾರೆ.

ವಿಶ್ವದ ನಂ.1 ಡೆನಿಲ್ ಮೆಡ್ವೆಡೆವ್ ಈ ಬಾರಿ ವಿಂಬಲ್ಡನ್ ಅಂಗಳದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಆಲ್ ಇಂಗ್ಲೆಂಡ್ ಕ್ಲಬ್ ತೆಗೆದುಕೊಂಡ ನಿರ್ಣಯದಂತೆ ರಷ್ಯಾದ ಆಟಗಾರರಿಗೆ ನಿರ್ಬಂಧ ವಿಧಿಸಲಾಗಿದೆ. ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದ್ದು, ಯುದ್ಧದ ಪರಿಸ್ಥಿತಿ ಇನ್ನೂ ತಿಳಿಯಾಗಿಲ್ಲ. ಇನ್ನು ವಿಶ್ವ ನಂ.2 ಸೀಡ್ ಆಟಗಾರ ಅಲೆಕ್ಸಾಂಡರ್ ಜ್ವೆರೆವ್ ಗಾಯಗೊಂಡಿದ್ದು ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ.

ವಿಂಬಲ್ಡನ್ 2022 ನೋಡುವುದು ಎಲ್ಲಿ? ಹೇಗೆ?

ವಿಂಬಲ್ಡನ್ 2022 ನೋಡುವುದು ಎಲ್ಲಿ? ಹೇಗೆ?

ಟಿವಿ: ಸ್ಟಾರ್ ಸ್ಪೋರ್ಟ್ಸ್ ಸಮೂಹ ಜಾಲದಲ್ಲಿ ನೇರ ಪ್ರಸಾರವಾಗಲಿದೆ.
ಆನ್ ಲೈನ್ ಸ್ಟ್ರೀಮಿಂಗ್: ಡಿಸ್ನಿ + ಹಾಟ್ ಸ್ಟಾರ್
ಫೈನಲ್ ಪಂದ್ಯ: ವಿಂಬಲ್ಡನ್ 2022ರ ಫೈನಲ್ ಪಂದ್ಯ ಜುಲೈ 10ರ ಭಾನುವಾರ ನಡೆಯಲಿದೆ.

ವಿಂಬಲ್ಡನ್ ಬಹುಮಾನದ ಮೊತ್ತ ಈ ಬಾರಿ ಪುರುಷ/ ಮಹಿಳಾ ಸಿಂಗಲ್ಸ್ ಗೆಲ್ಲುವ ಟೆನಿಸ್ ಪಟುವಿಗೆ 2 ಮಿಲಿಯನ್ ಪೌಂಡ್ ಪ್ರಶಸ್ತಿ ಮೊತ್ತ, ಫಲಕ ಸಿಗಲಿದೆ. ಜೂನ್ 27, 2022(ಸೋಮವಾರ)ದಿಂದ ಅಧಿಕೃತವಾಗಿ ಪಂದ್ಯಾವಳಿಗಳು ನಡೆಯಲಿವೆ. ಸದ್ಯದ ಮಾಹಿತಿಯಂತೆ ಸುಮಾರು 128 ಪುರುಷ ಹಾಗೂ 128 ಮಹಿಳಾ ಆಟಗಾರರು ಪಾಲ್ಗೊಳ್ಳುತ್ತಿದ್ದಾರೆ.

ವಿಂಬಲ್ಡನ್ ಜೂನ್ 27 ರಂದು ಪ್ರಾರಂಭ

ವಿಂಬಲ್ಡನ್ ಜೂನ್ 27 ರಂದು ಪ್ರಾರಂಭ

"ಅವರು (ಉಕ್ರೇನಿಯನ್ ನಿರಾಶ್ರಿತರು) ಸ್ಥಳೀಯ ನಿವಾಸಿಗಳು, NHS ಮತ್ತು ಸಾಮಾಜಿಕ ಕಾಳಜಿಯ ಕೋವಿಡ್ ನಾಯಕರು ಮತ್ತು ವಿವಿಧ ಶಾಲೆಗಳು, ದತ್ತಿಗಳು ಮತ್ತು ಸಮುದಾಯ ಗುಂಪುಗಳಿಂದ ಭಾನುವಾರದಂದು ಸೇರಿಕೊಳ್ಳುತ್ತಾರೆ" ಎಂದು ಎರಡು ಸಂಘಗಳು ತಿಳಿಸಿವೆ.

ಈ ವರ್ಷದ ವಿಂಬಲ್ಡನ್ ಜೂನ್ 27 ರಂದು ಪ್ರಾರಂಭವಾಗಲಿದೆ ಮತ್ತು ಜುಲೈ 10 ರವರೆಗೆ ನಡೆಯಲಿದೆ. ರಫೆಲ್ ನಡಾಲ್ ಈ ಕ್ಯಾಲೆಂಡರ್ ವರ್ಷದ ಗ್ರ್ಯಾನ್ ಸ್ಲಾಮ್ ಅನ್ನು ಪೂರ್ಣಗೊಳಿಸಲು ಎದುರು ನೋಡುತ್ತಿದ್ದು, ಎಲ್ಲರ ಕಣ್ಣುಗಳು ಅವರ ಮೇಲಿರುತ್ತವೆ. ಜೊತೆಗೆ ತನ್ನ ಏಳನೇ ಪ್ರಶಸ್ತಿಯನ್ನು ಗೆಲ್ಲಲು ಎದುರು ನೋಡುತ್ತಿರುವ ನೊವಾಕ್ ಜೊಕೊವಿಕ್ ಈ ಬಾರಿಯ ಫೇವರಿಟ್ ಎನಿಸಿಕೊಂಡಿದ್ದಾರೆ.

ಮಹಿಳೆಯರ ವಿಭಾಗದಲ್ಲಿ ಇಗಾ ಸ್ವಿಟೆಕ್ ಅವರು ಟ್ರೋಫಿಯನ್ನು ಗೆಲ್ಲುವ ನೆಚ್ಚಿನ ಆಟಗಾರ್ತಿಯಾಗಿದ್ದಾರೆ. ಸೆರೆನಾ ವಿಲಿಯಮ್ಸ್ ಮತ್ತೆ ಲಯಕ್ಕೆ ಮರಳುವುದನ್ನು ನೋಡಲು ಪ್ರೇಕ್ಷಕರು ಕಾದಿದ್ದಾರೆ.

ಚಿತ್ರದಲ್ಲಿ: ವಿಶ್ವದ ನಂ.1 ಆಟಗಾರ ಡೇನಿಯಲ್ ಮೆಡ್ವೆಡೆವ್

English summary
Wimbledon will give Ukrainian refugees free tickets to the tournament and donate 250,000 pounds ($307,100) to those affected by Russia’s invasion of the country, the All England Lawn Tennis Club, said on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X