ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾ ಆತಿಕ್ರಮಣದ ನಂತರ ಮೊದಲ ಬಾರಿಗೆ ಮೈದಾನಕ್ಕಿಳಿದ ಉಕ್ರೇನ್ ಫುಟ್‌ಬಾಲ್‌ ತಂಡ

|
Google Oneindia Kannada News

ನವದೆಹಲಿ, ಮೇ 12: ರಷ್ಯಾ ಸೈನಿಕಾ ಕಾರ್ಯಾಚರಣೆಯ ನಂತರ ಬುಧವಾರ ಮೊದಲ ಬಾರಿಗೆ ಉಕ್ರೇನ್ ಫುಟ್‌ಬಾಲ್‌ ತಂಡ ಮೈದಾನಕ್ಕಿಳಿದಿದೆ. ಈ ಸೌಹಾರ್ದ ಪಂದ್ಯದಲ್ಲಿ ಜರ್ಮನ್‌ ಕ್ಲಬ್‌ ಬೊರುಸ್ಸಿಯಾ ವಿರುದ್ಧ ತನ್ನ ಮೊದಲ ಪಂದ್ಯವನ್ನಾಡಿ 2-1 ಗೋಲುಗಳಿಂದ ಗೆಲುವು ಸಾಧಿಸಿತು. ಈ ಪಂದ್ಯವನ್ನು ಯುದ್ದದಲ್ಲಿ ನೊಂದವರಿಗೆ ನೆರವಾಗಲು ದೇಣಿಗೆ ಸಂಗ್ರಹಿಸಲು ಆಯೋಜಿಸಲಾಗಿತ್ತು.

ಈ ಪಂದ್ಯವನ್ನು ವೀಕ್ಷಿಸಲು ಸಾವಿರಾರು ಪ್ರೇಕ್ಷಕರು ಉಕ್ರೇನ್ ಧ್ವಜವನ್ನು ಹಾರಿಸುತ್ತಾ ರಷ್ಯಾದಿಂದ ಆಕ್ರಮಣಕ್ಕೊಳಗಾಗಿರುವ ದೇಶಕ್ಕೆ ತಮ್ಮ ಬೆಂಬಲದ ಸಂದೇಶವನ್ನು ಪ್ರಸಾರ ಮಾಡಲು ಉಕ್ರೇನ್ ಆಟಗಾರರ ಜೊತೆಗೆ ಕೈಜೋಡಿಸಿದರು.

ಈ ಪಂದ್ಯ ನಮ್ಮ ತಂಡಕ್ಕೆ ಮತ್ತು ನಮ್ಮ ದೇಶಕ್ಕೆ ತುಂಬಾ ಪ್ರಮುಖವಾಗಿದೆ. ಇದು ನಾವು ಒಬ್ಬಂಟಿಯಲ್ಲ, ಇಡೀ ವಿಶ್ವ ನಮ್ಮ ಹಿಂದಿದೆ ಎನ್ನುವ ಭಾವನೆಯನ್ನು ನಮ್ಮಲ್ಲಿ ಮೂಡಿಸಿದೆ ಎಂದು ಪಂದ್ಯದ ಕಾಮೆಂಟರಿ ಮಾಡುತ್ತಿದ್ದ ಉಕ್ರೇನ್‌ನ ಮಾಜಿ ಫುಟ್‌ಬಾಲ್ ಆಟಗಾರ ಆ್ಯಂಡ್ರಿ ವೊರೊನಿನ್‌ ಭಾವುಕರಾಗಿ ತಿಳಿಸಿದ್ದಾರೆ.

Ukraine Football Team Plays For First Time Since Russia Invasion

ಜೂನ್‌ 1 ರಂದು ಉಕ್ರೇನ್‌ ತಂಡ ವಿಶ್ವಕಪ್ ಪ್ಲೇ ಆಫ್‌ ಸೆಮಿಫೈನಲ್ ಪಂದ್ಯದಲ್ಲಿ ಸ್ಕಾಟ್ಲೆಂಡ್‌ ತಂಡ ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ನಾಲ್ಕು ದಿನಗಳ ನಂತರ ಕಾರ್ಡಿಫ್‌ನಲ್ಲಿ ವೇಲ್ಸ್ ವಿರುದ್ಧ ಕಣಕ್ಕಿಳಿಯಲಿದ್ದು, ಗೆದ್ದ ತಂಡ ಕತಾರ್‌ನಲ್ಲಿ ನಡೆಯುವ ಫಿಫಾ ವಿಶ್ವಕಪ್‌ನಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲಿದೆ.

ಯುರೋಪಿಯನ್ ಒಕ್ಕೂಟಕ್ಕೆ ಸೇರಲು ಬಯಸುತ್ತಿದ್ದನ್ನು ರಷ್ಯಾ ದೀರ್ಘ ಕಾಲದಿಂದ ವಿರೋಧಿಸುತ್ತಾ ಬಂದಿತ್ತು. ನ್ಯಾಟೋ ಮತ್ತು ಐರೋಪ್ಯ ಒಕ್ಕೂಟ ಎರಡರ ಪಾಲುದಾರಿಕೆಯನ್ನೂ ಉಕ್ರೇನ್ ಬಯಸುತ್ತಿದ್ದದ್ದನ್ನು ಪುಟಿನ್‌ ವಿರೋಧಿಸಿದ್ದರು. ಫೆಬ್ರವರಿ 24ರಂದು ರಷ್ಯಾ ಉಕ್ರೇನ್ ಮೇಲೆ ಯುದ್ದ ಸಾರಿತ್ತು. ಸೈನಿಕ ಕಾರ್ಯಾಚರಣೆ ಕೈಗೊಂಡಿತ್ತು. ಎರಡು ದೇಶಗಳ ನಡುವೆ ಯುದ್ದ ಆರಂಭವಾಗಿ ಎರಡುವರೆ ತಿಂಗಳಾದರೂ ಇನ್ನು ಯುದ್ದ ಅಂತ್ಯವಾಗಿಲ್ಲ. ಈಗಾಗಲೆ ಎರಡೂ ಕಡೆಯ ಸಾವಿರಾರು ಸೈನಿಕರು ಮತ್ತು ನಾಗರೀಕರು ಸಾವೀಗೀಡಾಗಿದ್ದರೆ, 9 ಲಕ್ಷಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ. ರಷ್ಯಾ ತನ್ನ ಗುರಿ ಮುಟ್ಟುವರರೆಗೂ ಈ ಕಾರ್ಯಾಚರಣೆ ನಿಲ್ಲಿಸುವುದಿಲ್ಲ ಎಂದು ಪುಟಿನ್‌ ಹೇಳಿರುವುದರಿಂದ ಸಧ್ಯದಲ್ಲೇ ಯುದ್ದ ಕೊನೆಗೊಳ್ಳುವ ಸಾಧ್ಯತೆಯಿಲ್ಲ ಎಂಬುದು ಸ್ಪಷ್ಟವಾಗಿದೆ.

Recommended Video

Delhi Captain ಬಲಿಷ್ಠ ರಾಜಸ್ಥಾನ ತಂಡವನ್ನು ಸೋಲಿಸಿದ್ದು ಹೇಗೆ | Oneindia Kannada

English summary
Ukraine's national football team played its first game since the invasion by Russia on Wednesday, beating German club Borussia Moenchengladbach 2-1 in a friendly organized to raise funds for victims of the conflict.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X