• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಐಪಿಎಲ್: ಪತಿ ಬೂಮ್ರಾ ಬೆಂಬಲಿಸಲು ನೀಲಿ ಡ್ರೆಸ್ ಧರಿಸಿದ ನಿರೂಪಕಿ ಸಂಜನಾ!

|

ಮುಂಬೈ, ಏಪ್ರಿಲ್ 11: ಅತ್ಯಂತ ಜನಪ್ರಿಯ ಕ್ರಿಕೆಟ್ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿ ಭರ್ಜರಿಯಾಗಿ ಆರಂಭವಾಗಿದೆ. ಕ್ರಿಕೆಟರ್‌ಗಳ ಆಟದ ಜೊತೆಗೆ ಕ್ರೀಡಾ ನಿರೂಪಕ/ಕಿಯರ ಬಗ್ಗೆ ಕೂಡಾ ಹೆಚ್ಚು ಚರ್ಚೆಯಾಗುತ್ತದೆ.

ಇತ್ತೀಚೆಗೆ ಮುಂಬೈ ಇಂಡಿಯನ್ಸ್ ವೇಗಿ ಜಸ್ಪ್ರಿತ್ ಬುಮ್ರಾ ಅವರನ್ನು ವರಿಸಿದ ಸ್ಟಾರ್ ನಿರೂಪಕಿ ಸಂಜನಾ ಗಣೇಶನ್ ಅವರು ಆರಂಭ ಪಂದ್ಯದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ಧರಿಸಿದ್ದ ನೀಲಿ ಉಡುಪು ಈಗ ಚರ್ಚೆಯ ವಿಷಯವಾಗಿದೆ.

Twitterati reaction on Sanjana Ganesan Wears Blue Dress to Support MI in IPL 2021

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮುಂಬೈ ಇಂಡಿಯನ್ಸ್ ಪಂದ್ಯಕ್ಕೂ ಮುಂಚೆ ನಡೆಯುವ ಕಾರ್ಯಕ್ರಮದಲ್ಲಿ ಸಂಜನಾ ಅವರು ನೀಲಿ ಬಣ್ಣದ ಉಡುಪನ್ನು ಧರಿಸಿ ತಮ್ಮ ಪತಿ ಬೂಮ್ರಾ ಇರುವ ಮುಂಬೈ ಇಂಡಿಯನ್ಸ್ ತಂಡಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು ಎಂದು ಟ್ವಿಟ್ಟರಲ್ಲಿ ಪ್ರತಿಕ್ರಿಯೆಗಳು ಬಂದಿವೆ.

ಐಪಿಎಲ್‌ನಲ್ಲಿ ನಿರೂಪಣೆ ಮೂಲಕ ಎಲ್ಲರ ಗಮನ ಸೆಳೆದಿರುವ ಸಂಜನಾ ಅವರು ಇಂಗ್ಲೀಷ್ ಹಾಗೂ ಹಿಂದಿ ಎರಡು ಕಾರ್ಯಕ್ರಮದಲ್ಲೂ ಪಾಲ್ಗೊಂಡು ಕೂಡಾ ವೀಕ್ಷಕರನ್ನು ಅಚ್ಚರಿಗೆ ದೂಡಿದ್ದಾರೆ.

ಈ ಪಂದ್ಯದಲ್ಲಿ ಬೂಮ್ರಾ 2 ವಿಕೆಟ್ ಗಳಿಸಿದರೂ ರೋಚಕ ಪಂದ್ಯದಲ್ಲಿ ಮುಂಬೈ ವಿರುದ್ಧ ಬೆಂಗಳೂರು 2 ವಿಕೆಟ್‌ಗಳಿಂದ ಗೆಲುವು ದಾಖಲಿಸಿತು.

ಐಪಿಎಲ್ ಕಾಮೆಂಟ್ರಿ ಇಂಗ್ಲೀಷ್, ಹಿಂದಿ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಬೆಂಗಾಲಿ ಅಲ್ಲದೆ ಮರಾಠಿ ಭಾಷೆಗಳಲ್ಲಿ ಲಭ್ಯವಿದೆ. ಜತಿನ್ ಸಪ್ರು, ನೆರೋಲಿ ಮೆಡೋವ್ಸ್, ಸಂಜನಾ ಗಣೇಶನ್, ತಾನ್ಯಾ ಪುರೋಹಿತ್, ಅನಂತ್ ತ್ಯಾಗಿ, ಸುರೆನ್ ಸುರೇಂದ್ರನ್, ಧೀರಜ್ ಜುನೇಜ, ಭಾವನಾ ಬಾಲಕೃಷ್ಣನ್ ನಶ್ ಪ್ರೀತ್ ಕೌರ್, ಅನುಭವ್ ಜೈನ್, ರಾಧಾಕೃಷ್ಣನ್ ಶ್ರೀನಿವಾಸನ್, ಮುತ್ತುರಾಮನ್ ಆರ್, ಎಂ ಆನಂದ್ ಶ್ರೀಕೃಷ್ಣ, ವಿಂಧ್ಯ ಮೆದಪಟ್ಟಿ, ನೇಹಾ ಚೌಧರಿ, ರೀನಾ ಡಿಸೋಜ, ಕಿರಣ್ ಶ್ರೀನಿವಾಸ್, ಮಧು ಎಂ ವಿವಿಧ ಭಾಷೆಗಳಲ್ಲಿ ನಿರೂಪಣೆ ಹೊಣೆ ಹೊತ್ತುಕೊಂಡಿದ್ದಾರೆ.

   ಪಂದ್ಯ ಸೋತು ಸೊಕ್ಕಿನ ಮಾತಾಡಿದ ರೋಹಿತ್ ಶರ್ಮಾ | Oneindia Kannada

   ಇಂಗ್ಲೆಂಡ್ ಸರಣಿ ಸಂದರ್ಭದಲ್ಲಿ ಗೈರಾಗಿದ್ದ ಬೂಮ್ರಾ ಅವರು ಯಾರನ್ನು ಮದುವೆಯಾಗಲಿದ್ದಾರೆ ಎಂಬ ಕುತೂಹಲ ಮೂಡಿತ್ತು. ಕೊನೆಗೆ ಸಂಜನಾ ಅವರನ್ನು ಆಪ್ತೇಷ್ಟರ ಸಮ್ಮುಖದಲ್ಲಿ ವರಿಸಿದರು. ಟೀಂ ಇಂಡಿಯಾ ಆಟಗಾರರು ಬಯೋ ಬಬಲ್‌ನಲ್ಲಿದ್ದರಿಂದ ಮದುವೆ ಸಂಭ್ರಮದಲ್ಲಿ ಪಾಲ್ಗೊಳ್ಳಲು ಆಗಿರಲಿಲ್ಲ. ಮದುವೆ ಮುಗಿದ ಕೆಲ ದಿನಗಳಲ್ಲೇ ಬೂಮ್ರಾ ಹಾಗೂ ಸಂಜನಾ ತಮ್ಮ ಕರ್ತವ್ಯಕ್ಕೆ ಮರಳಿದರು. ಕೆಕೆಆರ್ ತಂಡದ ಫ್ಯಾನ್ ಆಗಿ ಗುರುತಿಸಿಕೊಂಡಿದ್ದ ಸಂಜನಾ ಈಗಲೂ ಪರ್ಪಲ್ ಡ್ರೆಸ್ ಹಾಕಿಕೊಂಡು ಬಂದು ಕೋಲ್ಕತಾವನ್ನು ಬೆಂಬಲಿಸುತ್ತಾರೆ ಎಂಬ ನಂಬಿಕೆ ಅಭಿಮಾನಿಗಳಿಗಿದೆ..

   English summary
   Sports presenter Sanjana Ganesan dressing up in a blue outfit for the IPL 2021 season opener, Twitterati reaction.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X