ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೋಕಿಯೋ ಒಲಿಂಪಿಕ್ಸ್-2021: ನಿಮಗೆ ನೀವೇ ಹಾಕಿಕೊಳ್ಳಿ ಚಿನ್ನದ ಪದಕ!

|
Google Oneindia Kannada News

ಟೋಕಿಯೋ, ಜುಲೈ 23: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಕಾಲದಲ್ಲಿ ನಡೆಯುತ್ತಿರುವ ಟೋಕಿಯೋ-2021 ಒಲಿಂಪಿಕ್ಸ್ ಕ್ರೀಡಾಕೂಟ ವಿಭಿನ್ನ ಹಾಗೂ ಹಲವು ವಿಶೇಷತೆಗಳಿಗೆ ಸಾಕ್ಷಿ ಆಗಲಿದೆ. ಕೊವಿಡ್-19 ಮಾರ್ಗಸೂಚಿಗಳ ಪಾಲನೆ ಜೊತೆಗೆ ಸರಳವಾಗಿ ಒಲಿಂಪಿಕ್ಸ್‌ಗೆ ಶುಕ್ರವಾರ ಚಾಲನೆ ಸಿಗಲಿದೆ.

ರಾಜಧಾನಿ ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಜಗತ್ತಿನ ಹಲವು ರಾಷ್ಟ್ರಗಳಿಂದ ಸಾವಿರಾರು ಸಂಖ್ಯೆಯಲ್ಲಿ ಕ್ರೀಡಾಸ್ಪರ್ಧಿಗಳು ಆಗಮಿಸಲಿದ್ದಾರೆ. ಜಪಾನಿನಲ್ಲಿ ಕೊರೊನಾವೈರಸ್ ಸೋಂಕಿನ ಹಾವಳಿಯೇನೂ ಕಡಿಮೆಯಿಲ್ಲ. ಕ್ರೀಡಾಕೂಟದಿಂದ ಸಾಂಕ್ರಾಮಿಕ ಪಿಡುಗಿನ ಅಪಾಯ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳೂ ಇವೆ.

ಜಪಾನಿನಲ್ಲಿ ಕಳೆದ 24 ಗಂಟೆಗಳಲ್ಲಿ 4943 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 8,52,517ಕ್ಕೆ ಏರಿಕೆಯಾಗಿದೆ. ಮಹಾಮಾರಿಗೆ ಒಂದು ದಿನದಲ್ಲಿ 18 ಮಂದಿ ಪ್ರಾಣ ಬಿಟ್ಟಿದ್ದು, ಈವರೆಗೂ 15,097 ಜನರು ಮೃತಪಟ್ಟಿದ್ದಾರೆ. 31,218 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ. ಇಂಥ ಪರಿಸ್ಥಿತಿಯಲ್ಲಿ ಕೊರೊನಾವೈರಸ್ ನಿಯಮಗಳ ಕಟ್ಟುನಿಟ್ಟಿನ ಪಾಲನೆ ನಡುವೆ ಒಲಿಂಪಿಕ್ಸ್ ಆಯೋಜನೆಗೆ ಜಪಾನ್ ಅಣಿಯಾಗಿದೆ.

ಜಪಾನ್ ರಾಜಧಾನಿ ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ವಿಶೇಷತೆಗಳೇನು. ಕೊವಿಡ್-19 ನಿಯಂತ್ರಣಕ್ಕೆ ಸ್ಥಳೀಯ ಆಡಳಿತ ಮಂಡಳಿ ತೆಗೆದುಕೊಂಡಿರುವ ನಿರ್ಧಾರಗಳೇನು. ಒಲಿಂಪಿಕ್ಸ್ ಕ್ರೀಡಾಕೂಟದ ಆಯೋಜನೆ ಮೊದಲಿಗಿಂತ ಹೇಗೆ ವಿಭಿನ್ನ ಮತ್ತು ವಿಶಿಷ್ಟವಾಗಿದೆ ಎಂಬುದರ ಕುರಿತು ಒಂದು ವಿಸ್ತೃತ ವರದಿ ಇಲ್ಲಿದೆ ಓದಿ.

ಜಪಾನಿನಲ್ಲಿ ಕೊವಿಡ್-19 ನಿಯಂತ್ರಿಸಲು ಕಠಿಣ ಕ್ರಮ

ಜಪಾನಿನಲ್ಲಿ ಕೊವಿಡ್-19 ನಿಯಂತ್ರಿಸಲು ಕಠಿಣ ಕ್ರಮ

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ನಿಯಂತ್ರಿಸುವ ಉದ್ದೇಶದಿಂದ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯು ಹಲವು ರೀತಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿದೆ. ಒಲಿಂಪಿಕ್ಸ್ ವೀಕ್ಷಿಸಲು ಸ್ಥಳೀಯರು ಮತ್ತು ವಿದೇಶಿಯರು ಸೇರಿದಂತೆ ಎಲ್ಲರಿಗೂ ನಿರ್ಬಂಧ ವಿಧಿಸಲಾಗಿದೆ. ಈ ಕುರಿತು ಉಲ್ಲೇಖಿಸಿರುವ ಪ್ರಮುಖ ಅಂಶಗಳನ್ನು ಪಟ್ಟಿ ಮಾಡಲಾಗಿದೆ.

* ಜಪಾನಿಗೆ ಆಗಮಿಸುವ ಶೇ.85ರಷ್ಟು ಕ್ರೀಡಾಪಟುಗಳು ಲಸಿಕೆಯನ್ನು ಪಡೆದುಕೊಂಡಿರಬೇಕು

* ಟೋಕಿಯೋ ಒಲಿಂಪಿಕ್ಸ್ ಗಾಗಿ ಆಗಮಿಸುವ ವ್ಯಕ್ತಿಗಳು ಜಪಾನಿಗೆ ತಲುಪುವುದಕ್ಕೂ ಮೊದಲಿನ 96 ಗಂಟೆಗಳಲ್ಲಿ ಎರಡು ಬಾರಿ ನಡೆಸಿದ ಕೊವಿಡ್-19 ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಪಡೆದಿರಬೇಕು

* ಒಲಿಂಪಿಕ್ಸ್ ನಡೆಯುತ್ತಿರುವ ಜಪಾನ್ ರಾಜಧಾನಿಯಲ್ಲಿ ಉಳಿದುಕೊಳ್ಳುವುದಕ್ಕಾಗಿ ಒಟ್ಟು 11,000 ಕೊಠಡಿಗಳ ವ್ಯವಸ್ಥೆ ಕಲ್ಪಿಸಲಾಗಿದೆ

* ಈ ಕೊಠಡಿಗಳನ್ನು ಪಡೆದುಕೊಳ್ಳುವ ಪ್ರತಿಯೊಬ್ಬ ಕ್ರೀಡಾಪಟುಗಳು ಕಡ್ಡಾಯವಾಗಿ ನಿಯಮಗಳನ್ನು ಪಾಲಿಸಬೇಕು

* ಊಟ, ನಿದ್ದೆ ಮತ್ತು ಸ್ಪರ್ಧೆಯಲ್ಲಿ ತೊಡಗಿಸಿಕೊಂಡ ಸಮಯವನ್ನು ಹೊರತುಪಡಿಸಿ ಉಳಿದೆಲ್ಲ ಸಂದರ್ಭಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ

* ಒಲಿಂಪಿಕ್ಸ್ ಕ್ರೀಡೆಯಲ್ಲಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕವನ್ನು ಗೆದ್ದ ಕ್ರೀಡಾಪಟುಗಳು ತಮ್ಮ ಪದಕವನ್ನು ತಾವೇ ತಮ್ಮ ಕೊರಳಿಗೆ ಹಾಕಿಕೊಳ್ಳುವುದು

* ಕ್ರೀಡೆಯಲ್ಲಿ ಗೆದ್ದ ಅಥವಾ ಸೋತ ಕ್ರೀಡಾಪಟುಗಳು ಎರಡು ದಿನಗಳಲ್ಲಿ ತಮ್ಮ ಸ್ವದೇಶಕ್ಕೆ ವಾಪಸ್ ಹೋಗುವುದು

ವಿಮಾನ ನಿಲ್ದಾಣಗಳಲ್ಲಿ ಚಮತ್ಕಾರಕ ಬೆಳವಣಿಗೆಗೆ ನಾಂದಿ

ವಿಮಾನ ನಿಲ್ದಾಣಗಳಲ್ಲಿ ಚಮತ್ಕಾರಕ ಬೆಳವಣಿಗೆಗೆ ನಾಂದಿ

ಜಪಾನಿನಲ್ಲಿ ನಡೆಯುತ್ತಿರುವ ಟೋಕಿಯೋ ಒಲಿಂಪಿಕ್ಸ್ ಹಲವು ಚಮತ್ಕಾರಕ ಬೆಳವಣಿಗೆಗಳಿಗೆ ಸಾಕ್ಷಿಯಾಗಿದೆ. ವಿಮಾನ ನಿಲ್ದಾಣಗಳಲ್ಲಿ ಪ್ರತಿನಿತ್ಯ ನೂರಾರು ಪ್ರೇಕ್ಷಕರಿಗೆ ಕೊರೊನಾವೈರಸ್ ಸೋಂಕಿನ ಪರೀಕ್ಷೆ ನಡೆಸಲಾಗುತ್ತಿದೆ. ಟೋಕಿಯೋ ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರಿಗೆ ಕೊವಿಡ್-19 ಪರೀಕ್ಷೆ ನಂತರ 'ಗುಲಾಬಿ ಬಣ್ಣದ ಚೀಟಿ'ಯನ್ನು ನೀಡಿದರೆ ಅದು ವ್ಯಕ್ತಿಗೆ ಸೋಂಕು ತಗುಲಿಲ್ಲ ಎನ್ನುವುದರ ಸೂಚಕವಾಗಿರುತ್ತದೆ. ಒಂದು ವೇಳೆ ಕೊರೊನಾವೈರಸ್ ಸೋಂಕು ಪತ್ತೆಯಾಗಿದ್ದರೆ ಅಂಥವರಿಗೆ 'ಹಸಿರು ಬಣ್ಣದ ಚೀಟಿ'ಯನ್ನು ನೀಡಲಾಗುತ್ತದೆ. ಅಂಥ ವ್ಯಕ್ತಿಯನ್ನು ಮತ್ತೊಮ್ಮೆ RT-PCR ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಈ ಎರಡನೇ ಹಂತದ ಪರೀಕ್ಷೆಯಲ್ಲೂ ಸೋಂಕು ತಗುಲಿರುವುದು ದೃಢಪಟ್ಟರೆ, 14 ದಿನ ಕ್ವಾರೆಂಟೈನ್ ಆಗುವುದರ ಜೊತೆಗೆ ಒಲಿಂಪಿಕ್ಸ್ ಕನಸಿಗೆ ವಿದಾಯ ಹೇಳಬೇಕಾಗುತ್ತದೆ.

"ಇಲ್ಲಿ ಸರಿಯಾಗಿ ಉಗುಳಿ"

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆ ಸಾರ್ವಜನಿಕ ಪ್ರದೇಶಗಳಲ್ಲಿ ಯಾರೂ ಉಗುಳಬಾರದು ಎಂದು ಭಾರತದಲ್ಲಿ ಕಟ್ಟುನಿಟ್ಟಿನ ನಿರ್ಬಂಧವನ್ನು ಹೇರಲಾಗಿದೆ. ಆದರೆ ಜಪಾನ್ ಈ ವಿಷಯದಲ್ಲಿ ಸಂಪೂರ್ಣ ವಿಚಿತ್ರ ಮತ್ತು ವಿಶೇಷವಾಗಿದೆ. ಜಪಾನ್ ಸರ್ಕಾರವು ಸಾರ್ವಜನಿಕರು ನಿಗದಿತ ಸ್ಥಳಗಳಲ್ಲಿ ಸರಿಯಾಗಿ ಉಗುಳಬೇಕು. ಅದರಿಂದ ಕೊವಿಡ್-19 ಸೋಂಕಿನ ತಪಾಸಣೆಗೆ ಮಾದರಿ ಸಂಗ್ರಹಿಸಲು ಸುಲಭವಾಗುತ್ತದೆ ಎಂದು ಹೇಳುತ್ತಿದೆ. ಮಾದರಿ ತಪಾಸಣೆಗೆ ತೆರಳಿದ ಸಂದರ್ಭದಲ್ಲಿ ತುಂಡಾಕಾರದ ಪರೀಕ್ಷಾ ಕಿಟ್ ಅನ್ನು ನೀಡಲಾಗುತ್ತದೆ. ಅದರಲ್ಲಿ ಗುರುತಿಸಲಾದ ಸ್ಥಳದಲ್ಲಿ ನೀಡದಿದ್ದರೆ, ನಿಮ್ಮ ಪರೀಕ್ಷಾ ಫಲಿತಾಂಶವು ಗೊಂದಲಮಯವಾಗಲಿದ್ದು, ಸ್ಥಳದಲ್ಲೇ ನಿಮ್ಮನ್ನು ಹಿಡಿದಿಟ್ಟುಕೊಳ್ಳಬೇಕಾಗುತ್ತದೆ.

ಜಪಾನಿನಲ್ಲಿ ಪ್ರತಿನಿತ್ಯ ಕೊರೊನಾವೈರಸ್ ಪರೀಕ್ಷೆ

ಜಪಾನಿನಲ್ಲಿ ಪ್ರತಿನಿತ್ಯ ಕೊರೊನಾವೈರಸ್ ಪರೀಕ್ಷೆ

ಭಾರತ ಸೇರಿದಂತೆ ಜಗತ್ತಿನ 14 ರಾಷ್ಟ್ರಗಳನ್ನು ಅಪಾಯಕಾರಿ ಎಂಬ ಪಟ್ಟಿಯಲ್ಲಿ ಗುರುತಿಸಲಾಗಿದೆ. ಈ ಹಿನ್ನೆಲೆ 14 ರಾಷ್ಟ್ರಗಳಿಂದ ಆಗಮಿಸಿದ ಪ್ರತಿಯೊಬ್ಬರೂ ಜಪಾನಿಗೆ ತೆರಳಿದ ಏಳು ದಿನಗಳವರೆಗೂ ಪ್ರತಿನಿತ್ಯ ಕೊವಿಡ್-19 ಸೋಂಕಿನ ತಪಾಸಣೆಗೆ ಒಳಗಾಗಬೇಕು. ಜಪಾನಿನಲ್ಲಿ ಇರುವವರೆಗೂ ಪ್ರತಿ ನಾಲ್ಕು ದಿನಗಳಿಗೆ ಒಮ್ಮೆ ಕೊರೊನಾವೈರಸ್ ಸೋಂಕಿನ ಪರೀಕ್ಷೆಯನ್ನು ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ.

ಸರಳ ರೀತಿಯಲ್ಲಿ ಟೋಕಿಯೋ ಒಲಿಂಪಿಕ್ಸ್ ಉದ್ಘಾಟನೆ

ಸರಳ ರೀತಿಯಲ್ಲಿ ಟೋಕಿಯೋ ಒಲಿಂಪಿಕ್ಸ್ ಉದ್ಘಾಟನೆ

ಜಪಾನ್ ಅಷ್ಟೇ ಅಲ್ಲ. ಇಡೀ ಜಗತ್ತಿನ ಕೋಟ್ಯಂತರ ಅಭಿಮಾನಿಗಳು ಕಾತುರತೆಯಿಂದ ಎದುರು ನೋಡುತ್ತಿರುವ ಟೋಕಿಯೋ ಒಲಿಂಪಿಕ್ಸ್ 2021 ಉದ್ಘಾಟನಾ ಸಮಾರಂಭವನ್ನು ಸರಳ ರೀತಿಯಲ್ಲಿ ಆಯೋಜನೆ ಮಾಡಲಾಗಿದೆ. ಪ್ರತಿವರ್ಷ ಅದ್ಧೂರಿ ಸಮಾರಂಭದೊಂದಿಗೆ ಆರಂಭವಾಗುವ ಒಲಿಂಪಿಕ್ಸ್ ನಲ್ಲಿ ಕಾಣಿಸಿಕೊಳ್ಳಬೇಕು ಎನ್ನುವ ಸಾವಿರಾರು ಕ್ರೀಡಾಪಟುಗಳ ಕನಸು ಈ ಬಾರಿ ಕನಸಾಗಿಯೇ ಉಳಿಯಲಿದೆ. ಅತಿಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವುದರಿಂದ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಹರಡುವಿಕೆ ಅಪಾಯ ಹೆಚ್ಚಾಗುತ್ತದೆ ಎಂಬ ಭೀತಿಯಲ್ಲಿ ಸರಳ ರೀತಿಯಾಗಿ ಉದ್ಘಾಟನೆ ಸಮಾರಂಭವನ್ನು ಆಯ.ೋಜನೆ ಮಾಡಲಾಗಿದೆ. ಭಾರತದಿಂದ ಈ ಉದ್ಘಾಟನಾ ಸಮಾರಂಭದಲ್ಲಿ 120 ಸದಸ್ಯರ ಬದಲಿಗೆ ಕೇವಲ 28 ಮಂದಿ ಭಾಗವಹಿಸಲಿದ್ದಾರೆ. ಗ್ರೇಟ್ ಬ್ರಿಟನ್ 376 ಕ್ರೀಡಾಪಟುಗಳ ಬದಲಿಗೆ ಈ ಬಾರಿ ಕೇವಲ 30 ಕ್ರೀಡಾಪಟುಗಳನ್ನು ಕಳುಹಿಸಿ ಕೊಟ್ಟಿದೆ.

ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ 67,000 ಆಸನಗಳು ಖಾಲಿ

ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ 67,000 ಆಸನಗಳು ಖಾಲಿ

ಭಾರತೀಯ ಸಮಯದ ಪ್ರಕಾರ, ಶುಕ್ರವಾರ ಸಂಜೆ 4.30ರ ಸಮಯದಲ್ಲಿ ನಡೆಯುವ ಟೋಕಿಯೋ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ 67,000 ಆಸನಗಳು ಖಾಲಿ ಖಾಲಿ ಆಗಿರಲಿವೆ. ಹೌದು, 68,000 ಆಸನಗಳಿರುವ ಕ್ರೀಡಾಂಗಣದಲ್ಲಿ ಕೇವಲ 1,000 ವಿವಿಐಪಿಗಳಿಗೆ ಮಾತ್ರ ಹಾಜರಾಗಲು ಅವಕಾಶ ನೀಡಲಾಗಿದೆ. ಜಪಾನ್ ದೊರೆ ನುರುಹಿಟೋ ಅಧಿಕೃತವಾಗಿ ಚಾಲನೆ ನೀಡಲಿದ್ದು, ಈ ವೇಳೆ ಫ್ರಾನ್ಸ್ ಅಧ್ಯಕ್ಷ ಎಮ್ಯಾನುವಲ್ ಮ್ಯಾಕ್ರೋನ್, ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಮತ್ತು ಪತ್ನಿ ಜೈಲ್ ಬೈಡನ್ ಉಪಸ್ಥಿತರಿರಲಿದ್ದಾರೆ. ಈ ಬಾರಿ ಹೆಚ್ಚು ಸಾಂಸ್ಕೃತಿ ಕಾರ್ಯಕ್ರಮಗಳಿಗೂ ಅನುಮತಿ ನೀಡಿಲ್ಲ ಎಂದು ತಿಳಿದು ಬಂದಿದೆ.

ಸ್ಥಳೀಯರ ಬೆಂಬಲ ಪಡೆಯಲು ನಿರ್ಧಾರ

ಸ್ಥಳೀಯರ ಬೆಂಬಲ ಪಡೆಯಲು ನಿರ್ಧಾರ

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ಟೋಕಿಯೋ ಒಲಿಂಪಿಕ್ಸ್-2021ಗೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಕ್ರೀಡಾಕೂಟ ಆಯೋಜನೆಗೆ ಸಂಬಂಧಿಸಿದಂತೆ ಜಾಹೀರಾತು ನೀಡಿದ್ದ ಪ್ರಾಯೋಜಕರು ಕೊನೆಯ ಘಳಿಗೆಯಲ್ಲಿ ತಮ್ಮ ಜಾಹೀರಾತುಗಳನ್ನು ವಾಪಸ್ ಪಡೆದುಕೊಂಡಿದ್ದಾರೆ. ಆ ಮೂಲಕ ಕೊವಿಡ್-19 ಕಾಲದಲ್ಲಿ ಯಾವುದೇ ವಿವಾದಕ್ಕೆ ಸಿಲುಕದೇ ಸ್ಥಳೀಯರ ಬೆಂಬಲವನ್ನು ಪಡೆದುಕೊಳ್ಳಲು ಹಾಗೂ ಸ್ಪಷ್ಟ ಸಂದೇಶ ರವಾನಿಸಲು ಮುಂದಾಗಿದ್ದಾರೆ.

English summary
Tokyo Olympics 2021: Check Out The Date, Indian Timings, 33 Competitions And 339 Events Will Be Held Across 42 Venues. Here Is All You Need To Know About Tokyo Olympics In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X