ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಬಾಕ್ಸಿಂಗ್ ಫೆಡರೇಶನ್ ವಿರುದ್ಧ ಕಿರುಕುಳದ ಆರೋಪ ಮಾಡಿದ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್

|
Google Oneindia Kannada News

ಟೋಕಿಯೊ ಒಲಿಂಪಿಕ್ ಕಂಚಿನ ಪದಕ ವಿಜೇತ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ ಅವರು ಕಾಮನ್‌ವೆಲ್ತ್ ಗೇಮ್ಸ್ 2022 ಆರಂಭಕ್ಕೂ ಮುನ್ನವೇ ಭಾರತ ಬಾಕ್ಸಿಂಗ್ ಫೆಡರೇಶನ್ (ಬಿಎಫ್‌ಐ) ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಬಿಎಫ್‌ಐ ತನಗೆ ಮಾನಸಿಕ ಕಿರುಕುಳ ನೀಡುತ್ತಿದೆ ಎಂದು ಹೇಳಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಮೊದಲ ಅಸ್ಸಾಂ ರಾಜ್ಯದ ಮಹಿಳೆ ಎನಿಸಿಕೊಂಡಿರುವ ಲೊವ್ಲಿನಾ ಬೊರ್ಗೊಹೈನ್, ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದರು. ಈಗ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ತಯಾರಿ ನಡೆಸುತ್ತಿದ್ದಾರೆ. ಲೊವ್ಲಿನಾ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ. ಇದೆಲ್ಲದರ ಮಧ್ಯೆಯೇ ಈ ವಿವಾದ ಶುರುವಾಗಿದೆ.

ಪರ್ವತಾರೋಹಿ ದಾಖಲೆ ಮುರಿದ ಬೆಂಗಳೂರಿನ ನವೀನ್ ಮಲ್ಲೇಶ್ಪರ್ವತಾರೋಹಿ ದಾಖಲೆ ಮುರಿದ ಬೆಂಗಳೂರಿನ ನವೀನ್ ಮಲ್ಲೇಶ್

ಬಿಎಫ್‌ಐ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿರುವ ಲೊವ್ಲಿನಾ, ಭಾರತ ಬಾಕ್ಸಿಂಗ್ ಫೆಡರೇಶನ್ (ಬಿಎಫ್‌ಐ) ತನ್ನ ವಿಚಾರದಲ್ಲಿ ಕೆಟ್ಟ ರಾಜಕೀಯ ಮಾಡುತ್ತಿದೆ ಎಂದು ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು "ಒಲಿಂಪಿಕ್‌ ಪದಕ ಗೆಲ್ಲಲು ನನಗೆ ಸಹಾಯ ಮಾಡಿದ ತರಬೇತುದಾರರನ್ನು ತೆಗೆದುಹಾಕಲಾಗಿದೆ, ಇದರಿಂದ ನನ್ನ ತರಬೇತಿಗೆ ಅಡ್ಡಿಯಾಗಿದೆ. ತರಬೇತುದಾರರಲ್ಲಿ ಒಬ್ಬರಾದ ಸಂಧ್ಯಾ ಗುರುಂಗ್‌ ಅವರನ್ನು ತರಬೇತಿ ಶಿಬಿರದಲ್ಲಿ ಸೇರಿಸಿಕೊಳ್ಳಲು ಮನವಿ ಮಾಡಿದೆ ಆದರೆ ನನ್ನ ಮನವಿಗೆ ಬಿಎಫ್‌ಐ ಸೂಕ್ತವಾಗಿ ಸ್ಪಂದಿಸಲಿಲ್ಲ" ಎಂದು ಹೇಳಿದ್ದಾರೆ.

 ತರಬೇತಿ ನಿಲ್ಲಿಸಲಾಗಿದೆ ಎಂದು ಲೊವ್ಲಿನಾ ಆರೋಪ

ತರಬೇತಿ ನಿಲ್ಲಿಸಲಾಗಿದೆ ಎಂದು ಲೊವ್ಲಿನಾ ಆರೋಪ

ತರಬೇತಿ ಶಿಬಿರಗಳಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದೇನೆ. ಬಿಎಫ್‌ಇ ವರ್ತನೆಯಿಂದ ಮಾನಸಿಕವಾಗಿ ಕಿರುಕುಳ ಉಂಟಾಗುತ್ತಿದೆ. ನನ್ನ ತರಬೇತುದಾರರಾದ ಸಂಧ್ಯಾ ಗುರುಂಗ್ ಕಾಮನ್‌ವೆಲ್ತ್ ಗ್ರಾಮದಿಂದ ಹೊರಗಿದ್ದಾರೆ ಅವರಿಗೆ ಪ್ರವೇಶ ನಿರಾಕರಿಸಲಾಗಿದೆ. ಕ್ರೀಡಾಕೂಟಕ್ಕೆ ಎಂಟು ದಿನಗಳ ಮೊದಲೇ ನನ್ನ ತರಬೇತಿ ನಿಲ್ಲಿಸಲಾಗಿದೆ ಎಂದು ಹೇಳಿದ್ದಾರೆ.
ಇನ್ನೊಬ್ಬ ತರಬೇತುದಾರರನ್ನು ಭಾರತಕ್ಕೆ ವಾಪಸ್ ಕಳುಹಿಸಲಾಗಿದೆ. ನಾನು ಸಾಕಷ್ಟು ಮನವಿ ಮಾಡಿದರೂ ಮಾನಸಿಕವಾಗಿ ಕಿರುಕುಳ ಅನುಭವಿಸಬೇಕಾಯಿತು. ನನ್ನ ಕೊನೆಯ ವಿಶ್ವ ಚಾಂಪಿಯನ್‌ಶಿಪ್‌ ಕೂಡಾ ಹಾಳಾಗಿದೆ. ಇಷ್ಟೆಲ್ಲಾ ಸಮಸ್ಯೆಗಳ ಮಧ್ಯೆ ಕಾಮನ್‌ವೆಲ್ತ್ ಗೇಮ್ಸ್‌ನತ್ತ ಹೇಗೆ ಗಮನಹರಿಸಬೇಕು ಎಂದು ನನಗೆ ಅರ್ಥವಾಗುತ್ತಿಲ್ಲ ಎಂದು ಹೇಳಿದ್ದಾರೆ.

Breaking; ವಿಶ್ವ ಅಥ್ಲೆಟಿಕ್ಸ್‌; ಬೆಳ್ಳಿ ಪದಕ ಗೆದ್ದ ನೀರಜ್ ಚೋಪ್ರಾBreaking; ವಿಶ್ವ ಅಥ್ಲೆಟಿಕ್ಸ್‌; ಬೆಳ್ಳಿ ಪದಕ ಗೆದ್ದ ನೀರಜ್ ಚೋಪ್ರಾ

 ರಾಜಕೀಯ ಮೀರಿ ದೇಶಕ್ಕಾಗಿ ಪದಕ ಗೆಲ್ಲುತ್ತೇನೆ

ರಾಜಕೀಯ ಮೀರಿ ದೇಶಕ್ಕಾಗಿ ಪದಕ ಗೆಲ್ಲುತ್ತೇನೆ

ಸಮಸ್ಯೆಗಳು ಏನೇ ಇದ್ದರು ಈ ಬಾರಿ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪದಕ ಗೆಲ್ಲುತ್ತೇನೆ ಎಂದು ಅವರು ತಿಳಿಸಿದ್ದಾರೆ. ಬಿಎಫ್‌ಐ ಮಾಡುತ್ತಿರುವ ರಾಜಕೀಯದಿಂದ ನನ್ನ ಆಟವನ್ನು ಹಾಳು ಮಾಡಿಕೊಳ್ಳಲು ಬಿಡುವುದಿಲ್ಲ. ನನ್ನ ದೇಶಕ್ಕಾಗಿ ನಾನು ಆಡುತ್ತೇನೆ. ಈ ರಾಜಕೀಯಗಳನ್ನು ಮೀರಿ ದೇಶಕ್ಕಾಗಿ ಪದಕ ಗೆಲ್ಲುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಟೋಕಿಯೊ 2020 ರಲ್ಲಿ ಮಹಿಳೆಯರ 69 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಲೊವ್ಲಿನಾ ಇತಿಹಾಸ ನಿರ್ಮಿಸಿದ್ದರು. ವಿಜೇಂದರ್ ಸಿಂಗ್, ಮೇರಿ ಕೋಮ್ ನಂತರ ಒಲಿಂಪಿಕ್ಸ್‌ ನಲ್ಲಿ ಪದಕ ಗೆದ್ದ ಮೂರನೇ ಭಾರತೀಯ ಬಾಕ್ಸರ್ ಎನಿಸಿಕೊಂಡಿದ್ದಾರೆ. ಈ ಬಾರಿ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲೂ ಅವರು ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ.

 ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಬಿಎಫ್‌ಐ

ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಬಿಎಫ್‌ಐ

ಲೊವ್ಲಿನಾ ಆರೋಪಗಳಿಗೆ ಪ್ರತಿಕ್ರಿಯೆ ನೀಡಲು ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ನಿಯಮಗಳ ಪ್ರಕಾರ ಕೇವಲ ಒಟ್ಟು ಆಟಗಾರರ ಶೇಕಡ 33 ರಷ್ಟು ಸಹಾಯಕ ಸಿಬ್ಬಂದಿಗೆ ಮಾತ್ರ ಕಾಮನ್‌ವೆಲ್ತ್‌ ಗ್ರಾಮಕ್ಕೆ ಪ್ರವೇಶಿಸಲು ಅನುಮತಿ ನೀಡಲಾಗಿದೆ ಎಂದು ಅದು ಹೇಳಿದೆ.
"12 ಬಾಕ್ಸರ್ ಗಳಿಗೆ ನಾಲ್ವರು ಸಿಬ್ಬಂದಿಯ ಮಿತಿ ಇತ್ತು. ಒಟ್ಟು ಆಟಗಾರರ ಶೇಕಡ 33 ರಷ್ಟು ಸಹಾಯಕ ಸಿಬ್ಬಂದಿಗೆ ಮಾತ್ರ ಅನುಮತಿ ನೀಡಲಾಗಿದೆ ಅದರಂತೆ ಭಾರತದಿಂದ ಭಾಗವಹಿಸಿರುವ 12 ಬಾಕ್ಸರ್ ಗಳಿಗೆ (8 ಪುರುಷರು, 4 ಮಹಿಳೆಯರು) 4 ಸಹಾಯಕ ಸಿಬ್ಬಂದಿ ಮಾತ್ರ ಬರ್ಮಿಂಗ್‌ಹ್ಯಾಮ್‌ಗೆ ಪ್ರಯಾಣಿಸಬೇಕಾಗಿತ್ತು." ಎಂದು ಹೇಳಿಕೆ ನೀಡಿದೆ.

 ಕೋಚ್ ಸಂಧ್ಯಾ ಗುರುಂಗ್‌ಗೆ ಅನುಮತಿ

ಕೋಚ್ ಸಂಧ್ಯಾ ಗುರುಂಗ್‌ಗೆ ಅನುಮತಿ

ಆದರೆ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ​​(ಐಒಎ) ಅವರ ಬೆಂಬಲದಿಂದ ಸಿಬ್ಬಂದಿಯ ಕೋಟಾವನ್ನು 4 ರಿಂದ 8 ಕ್ಕೆ ಹೆಚ್ಚಿಸಿದೆ ಎಂದು ಬಿಎಫ್‌ಐ ಬಹಿರಂಗಪಡಿಸಿದೆ.
"ಭಾರತೀಯ ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾ ಸಂಧ್ಯಾ ಗುರುಂಗ್ ಐರ್ಲೆಂಡ್‌ನಲ್ಲಿನ ತರಬೇತಿ ಶಿಬಿರದಲ್ಲಿ ಇರುವುದನ್ನು ಖಚಿತಪಡಿಸಿದೆ. ಲೊವ್ಲಿನಾ ಅವರ ಕೋಚ್ ಸಂಧ್ಯಾ ಅವರು ಕಾಮನ್‌ವೆಲ್ತ್ ಗೇಮ್ಸ್ ಗ್ರಾಮಕ್ಕೆ ತೆರಳುವುದನ್ನು ಖಚಿತಪಡಿಸಿಕೊಳ್ಳಲು ಬಿಎಫ್‌ಐ ಮತ್ತು ಐಒಎ ಯೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದೆ, ಇದರಿಂದಾಗಿ ಸಂಧ್ಯಾ ಗುರುಂಗ್ ಬರ್ಮಿಂಗ್‌ಹ್ಯಾಮ್‌ನಲ್ಲಿ ತಂಡದ ಭಾಗವಾಗಲು ಸಾಧ್ಯವಾಯಿತು." ಎಂದು ಹೇಳಿದೆ.

English summary
Tokyo Olympic bronze medalist boxer Lovlina Borgohain alleged facing harassment from The Boxing Federation of India (BFI) after one of her coaches was denied entry into the Commonwealth Games village. the BFI clarified about issue and said only 33% of the playing contingent are allowed as support staff.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X