ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಲಂಕಾದಲ್ಲಿ ನಡೆಯಬೇಕಿದ್ದ ಏಷ್ಯಾ ಕಪ್ ಟೂರ್ನಿ ಯುಎಇಗೆ ಸ್ಥಳಾಂತರ: ಸೌರವ್ ಗಂಗೂಲಿ

|
Google Oneindia Kannada News

ಶ್ರೀಲಂಕಾದಲ್ಲಿ ನಡೆಯಬೇಕಿದ್ದ ಏಷ್ಯಾ ಕಪ್ ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸಲಾಗಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಗುರುವಾರ ಮಾಹಿತಿ ನೀಡಿದ್ದಾರೆ. ಆರ್ಥಿಕ ಬಿಕ್ಕಟ್ಟಿನಿಂದ ಕಂಗಾಲಾಗಿರುವ ಶ್ರೀಲಂಕಾದಿಂದ ಏಷ್ಯಾಕಪ್‌ ಟೂರ್ನಿ ಯುಎಇಗೆ ಸ್ಥಳಾಂತರಗೊಳ್ಳುತ್ತದೆ ಎಂದು ಕಳೆದ ಹಲವು ದಿನಗಳಿಂದ ಊಹಾಪೋಹಗಳು ಕೇಳಿಬಂದಿದ್ದವು. ಈಗ ಅದು ನಿಜವಾಗಿದ್ದು ಸೌರವ್ ಗಂಗೂಲಿ ಸ್ಪಷ್ಟನೆ ನೀಡಿದ್ದಾರೆ.

ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಸಭೆಯ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, "ಏಷ್ಯಾಕಪ್ ನಿಗದಿತ ವೇಳಾಪಟ್ಟಿಯಂತೆ ಯುಎಇನಲ್ಲಿ ನಡೆಯಲಿದೆ. ಇದು ಮಳೆ ಬೀಳದ ಏಕೈಕ ಸ್ಥಳವಾಗಿದೆ ಎಂದು" ತಿಳಿಸಿದರು. ಕೊರೊನಾ ವೇಳೆ ಭಾರತದಲ್ಲಿ ನಡೆಯಬೇಕಿದ್ದ ಐಪಿಎಲ್‌ ಯುಎಇಗೆ ಸ್ಥಳಾಂತರವಾಗಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದಾಗಿದೆ.

Breaking: ಕೊರೊನಾವೈರಸ್ ಸೋಂಕಿಗೆ ತುತ್ತಾದ ಸ್ಟಾರ್ ಆಟಗಾರBreaking: ಕೊರೊನಾವೈರಸ್ ಸೋಂಕಿಗೆ ತುತ್ತಾದ ಸ್ಟಾರ್ ಆಟಗಾರ

ಶ್ರೀಲಂಕಾ ಕ್ರಿಕೆಟ್ (ಎಸ್‌ಎಲ್‌ಸಿ) ಬುಧವಾರ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಗೆ ತಿಳಿಸಿದ್ದು, ದೇಶದಲ್ಲಿ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟಿನ ಕಾರಣ ಮುಂಬರುವ ಏಷ್ಯಾ ಕಪ್ ಟಿ 20 ಆವೃತ್ತಿಯ ಆತಿಥ್ಯ ವಹಿಸಲು ಸಾಧ್ಯವಿಲ್ಲ ಎಂದು ಅದು ಹೇಳಿತ್ತು. ಆದರೆ ಶ್ರೀಲಂಕಾ ಕ್ರಿಕೆಟ್ ತಂಡ ನಿಗದಿಯಂತೆ ಟೂರ್ನಿಯಲ್ಲಿ ಭಾಗವಹಿಸಲಿದೆ.

The Asia Cup Has Been Shifted to The UAE : BCCI President Sourav Ganguly

ಲಂಕಾ ಪ್ರೀಮಿಯರ್ ಲೀಗ್ ರದ್ದುಪಡಿಸಿದ್ದ ಶ್ರೀಲಂಕಾ ಕ್ರಿಕೆಟ್
ದೇಶದಲ್ಲಿ ಪ್ರತಿಭಟನೆ ತೀವ್ರವಾಗುವ ಮೊದಲು ಶ್ರೀಲಂಕಾ ಬಿಕ್ಕಟ್ಟಿನ ನಡುವೆಯೂ ಆಸ್ಟ್ರೇಲಿಯಾ ವಿರುದ್ಧ ಸರಣಿಯನ್ನು ಯಶಸ್ವಿಯಾಗಿ ಪೂರೈಸಿತ್ತು. ಬಿಕ್ಕಟ್ಟಿನ ನಡುವೆಯೂ ಶ್ರೀಲಂಕಾ ಕ್ರಿಕೆಟ್ ಪ್ರೇಮಿಗಳು ತಮ್ಮ ದೇಶವನ್ನು ಹುರಿದುಂಬಿಸಿದ್ದರು. ಆದರೆ ಪ್ರತಿಭಟನೆ ತೀವ್ರವಾಗಿ ಪರಿಸ್ಥಿತಿ ಕೈಮೀರಿದ್ದು, ಶ್ರೀಲಂಕಾ ಸುಧಾರಣೆ ಕಾಣಲು ಸಾಕಷ್ಟು ಸಮಯ ಹಿಡಿಯಲಿದೆ. ಅದರಲ್ಲೂ ಪ್ರತಿಭಟನೆಗಳು ಯಾವಾಗ ಬೇಕಾದರೂ ತೀವ್ರವಾಗುವ ಸಾಧ್ಯತೆ ಇರುವ ಕಾರಣ ಆಟಗಾರರ ಭದ್ರತೆ, ಆರ್ಥಿಕ ಹೊರೆಯ ಕಾರಣದಿಂದ ಶ್ರೀಲಂಕಾ ಏಷ್ಯಾ ಕಪ್ ಆಯೋಜನೆಯಿಂದ ಹಿಂದೆ ಸರಿದಿದೆ.

ದಕ್ಷಿಣ ಆಫ್ರಿಕಾ ಟಿ20 ಕ್ರಿಕೆಟ್‌ ಲೀಗ್‌: ಫ್ರಾಂಚೈಸಿ ಖರೀದಿ ಮಾಡಿದ ರಿಲಯನ್ಸ್ದಕ್ಷಿಣ ಆಫ್ರಿಕಾ ಟಿ20 ಕ್ರಿಕೆಟ್‌ ಲೀಗ್‌: ಫ್ರಾಂಚೈಸಿ ಖರೀದಿ ಮಾಡಿದ ರಿಲಯನ್ಸ್

ದೇಶದ ಆರ್ಥಿಕ, ರಾಜಕೀಯ ಬಿಕ್ಕಟ್ಟಿನಿಂದಾಗಿ ಶ್ರೀಲಂಕಾ ಕ್ರಿಕೆಟ್ ಇತ್ತೀಚೆಗೆ ಲಂಕಾ ಪ್ರೀಮಿಯರ್ ಲೀಗ್ (LPL) ನ ಮೂರನೇ ಆವೃತ್ತಿಯನ್ನು ಮುಂದೂಡಿತ್ತು. ಈಗ ಏಷ್ಯಾ ಕಪ್‌ ಟೂರ್ನಿ ಆಯೋಜನೆಯ ಹೊಣೆಯಿಂದ ತಪ್ಪಿಸಿಕೊಂಡಿದೆ. ಏಷ್ಯಾ ಕಪ್ ಆಗಸ್ಟ್ 27 ರಿಂದ ಸೆಪ್ಟೆಂಬರ್ 11 ರವರೆಗೆ ನಡೆಯಲಿದೆ. ಈ ಮೊದಲು ಏಷ್ಯಾಕಪ್‌ ಏಕದಿನ ಮಾದರಿಯಲ್ಲಿ ನಡೆಯುತ್ತಿತ್ತು ಇನ್ನು ಮುಂದೆ ಟಿ20 ಮಾದರಿಯಲ್ಲಿ ನಡೆಯಲಿದೆ.

The Asia Cup Has Been Shifted to The UAE : BCCI President Sourav Ganguly

ಏಷ್ಯಾಕಪ್‌ ಟೂರ್ನಿಯಲ್ಲಿ ಭಾರತ, ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾ ಮತ್ತು ಅಫ್ಘಾನಿಸ್ತಾನ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಏಷ್ಯಾಕಪ್‌ನಲ್ಲಿ ಭಾರತ ಕಪ್ ಗೆಲ್ಲುವ ನೆಚ್ಚಿನ ತಂಡವಾಗಿದೆ. ಆದರೆ ಐದೂ ತಂಡಗಳು ಬಲಿಷ್ಠವಾಗಿರುವುದರಿಂದ ಪ್ರಶಸ್ತಿಗಾಗಿ ತೀವ್ರ ಪೈಪೋಟಿಯನ್ನು ನಿರೀಕ್ಷೆ ಮಾಡಬಹುದಾಗಿದೆ.

Recommended Video

Basavaraj Bommai ನನ್ನ ಅಣ್ಣ ಇದ್ದಂಗೆ...ನನ್ಮೇಲೆ ಸಿಡುಕೋ ಹಕ್ಕು ಅವರಿಗಿದೆ ಎಂದ ಪ್ರತಾಪ್ ಸಿಂಹ | Oneindia

English summary
BCCI president Sourav Ganguly confirms That, The Asia Cup, which was scheduled to be held in Sri Lanka, has been shifted to the UAE. Sri Lanka Cricket (SLC) on Wednesday had informed the Asian Cricket Council (ACC) that the board will not be in a position to host the upcoming edition of the Asia Cup T20 because of the economic and political crisis in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X