ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಲಿಂಪಿಕ್ಸ್: ಸಾಧನೆಯ ಗುರಿಯೊಂದಿಗೆ ಟೋಕಿಯೊಕ್ಕೆ ಬಂದಿಳಿದ ಭಾರತೀಯ ಕ್ರೀಡಾಪಟುಗಳು!

|
Google Oneindia Kannada News

ಟೋಕಿಯೊ, ಜು. 18: ಭಾರತದ ಹಾಕಿ ವೈಭವವನ್ನು ಒಲಿಂಪಿಕ್ಸ್‌ನಲ್ಲಿ ಮರಳಿ ತರುವುದು ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಸಾಧನೆ ಮಾಡುವ ಗುರಿಯೊಂದಿಗೆ 54 ಅಥ್ಲೀಟ್ ಗಳೂ ಸೇರಿದಂತೆ 88 ಸದಸ್ಯರ ಭಾರತದ ಕ್ರೀಡಾಪಟುಗಳ ತಂಡ ಟೋಕಿಯೊ ನಗರದ ನರಿಟಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದಿಳಿದಿದೆ. ಕುರ್ಬೆ ನಗರದ ಪ್ರತಿನಿಧಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ಭಾರತೀಯ ತಂಡವನ್ನು ಬರಮಾಡಿಕೊಂಡರು.

ಬ್ಯಾಡ್ಮಿಂಟನ್, ಬಿಲ್ಲುಗಾರಿಕೆ, ಹಾಕಿ, ಜುಡೋ, ಈಜು, ಭಾರ ಎತ್ತುವ ಸ್ಪರ್ಧೆ, ಜಿಮ್ನಾಸ್ಟಿಕ್ಸ್ ಮತ್ತು ಟೆಬಲ್ ಟೆನಿಸ್ ಸೇರಿದಂತೆ 8 ತಂಡಗಳ ಅಥ್ಲೀಟ್‌ಗಳು ಮತ್ತು ಇತರ ಸಿಬ್ಬಂದಿ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಿನ್ನೆ (ಜು.17) ರಾತ್ರಿ ಪ್ರಯಾಣ ಬೆಳೆಸಿದ್ದರು. ಈ ಸಲ ಒಲಿಂಪಿಕ್ಸ್‌ ಗೇಮ್ಸ್‌ನಲ್ಲಿ ಸ್ಪರ್ಧೆ ಮಾಡಲು 127 ಅಥ್ಲೀಟ್‌ಗಳು ಹೋಗುತ್ತಿದ್ದು, ಇದು ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಭಾರತದ ಅತಿ ದೊಡ್ಡ ಕ್ರೀಡಾಪಟುಗಳ ತಂಡವಾಗಿದೆ.

The 88 member Indian team including 54 athletes arrived in Tokyo to participate in Olympics

ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಮತ್ತು ಕ್ರೀಡಾ ಖಾತೆ ರಾಜ್ಯ ಸಚಿವ ನಿಶಿತ್ ಪ್ರಮಾಣಿಕ್ ಅವರು ತಂಡಕ್ಕೆ ಶುಭ-ಹಾರೈಸಿ ಬೀಳ್ಕೊಟ್ಟಿದ್ದರು.

"ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಕ್ರೀಡಾಪಟುಗಳ ಮೇಲೆ 135 ಕೋಟಿ ಭಾರತೀಯರ ಶುಭ ಹಾರೈಕೆ ಇದೆ. ಇಂತಹ ಶ್ರೇಷ್ಠ ಅವಕಾಶ ಪಡೆದ ಆಯ್ದ ಕೆಲವೇ ಕೆಲವರಲ್ಲಿ ನೀವೂ ಸೇರಿದ್ದೀರಿ, ನೀವು ಜೀವನದಲ್ಲಿ ಇನ್ನೂ ದೂರ ಸಾಗಬೇಕಾಗಿದೆ. ಪ್ರಧಾನಿ ನರೇಂದ್ರ ಮೋದಿ ಸಲಹೆ ಮಾಡಿರುವಂತೆ ಒತ್ತಡಕ್ಕೆ ಒಳಗಾಗದೆ ನಿಮ್ಮ ಅತ್ಯುತ್ತಮ ಪ್ರದರ್ಶನ ನೀಡಿ" ಎಂದು ದೆಹಲಿ ವಿಮಾನ ನಿಲ್ದಾಣದಲ್ಲಿ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.

English summary
The 88 member Indian team of athletes, including 54 athletes, arrived at the Narita International Airport in Tokyo, with the goal of achieving different sports in Olympics games. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X