ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮ್ಯಾಂಚೆಸ್ಟರ್ ಯುನೈಟೆಡ್ ಖರೀದಿ, ಯೂಟರ್ನ್ ಹೊಡೆದ ಮಸ್ಕ್!

|
Google Oneindia Kannada News

ನ್ಯೂಯಾರ್ಕ್, ಆಗಸ್ಟ್ 17: ಟೆಸ್ಲಾ, ಸ್ಪೇಸ್ ಎಕ್ಸ್ ಸಿಇಒ ಇಲಾನ್ ಮಸ್ಕ್ ಮಾಡಿರುವ ಟ್ವೀಟ್ ಮತ್ತೊಮ್ಮೆ ಸಂಚಲನ ಮೂಡಿಸಿದೆ. ಇಂಗ್ಲೀಷ್ ಪ್ರೀಮಿಯರ್ ಲೀಗ್ ನ ಮ್ಯಾಂಚೆಸ್ಟರ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಖರೀದಿಸುವುದಾಗಿ ಮಸ್ಕ್ ಟ್ವೀಟ್ ಮಾಡಿದ್ದಾರೆ. ಮಸ್ಕ್ ಮಾಡಿರುವ ಟ್ವೀಟ್ ನೋಡಿ ಮ್ಯಾಂಚೆಸ್ಟರ್ ಯುನೈಟೆಡ್ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ, ಆದರೆ, ಕೆಲವರು ಮಸ್ಕ್ ಟ್ವೀಟ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಕೊನೆಗೂ ಕೆಲ ಹೊತ್ತಿನಲ್ಲೇ ಅನೇಕರ ಅನುಮಾನ ನಿಜವಾಗಿದ್ದು, ಖುದ್ದು ಮಸ್ಕ್ ಈ ಬಗ್ಗೆ ಟ್ವೀಟ್ ಮಾಡಿ, ನಾನು ಸುಮ್ಮನೆ ಜೋಕ್ ಮಾಡಿದೆ, ನಾನು ಯಾವ ಫುಟ್ಬಾಲ್ ತಂಡವನ್ನು ಖರೀದಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದಕ್ಕೂ ಮುನ್ನ ನಡೆದ ಬೆಳವಣಿಗೆಗಳ ಬಗ್ಗೆ ವಿವರ ಮುಂದಿದೆ...

ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿ ಮಸ್ಕ್ ತಮ್ಮ ಈ ಹಿಂದಿನ ಟ್ವೀಟ್ ಮುಂದುವರೆದ ಭಾಗದಂತೆ ಹೊಸ ಟ್ವೀಟ್ ಮಾಡಿ, "ಸ್ಪಷ್ಟವಾಗಿ ಹೇಳಬೇಕೆಂದರೆ, ನಾನು ರಿಪಬ್ಲಿಕನ್ ಪಕ್ಷದ ಎಡ ಅರ್ಧ ಮತ್ತು ಡೆಮಾಕ್ರಟಿಕ್ ಪಕ್ಷದ ಬಲ ಅರ್ಧವನ್ನು ಬೆಂಬಲಿಸುತ್ತೇನೆ!" ಎಂದು ಮಸ್ಕ್ ಬುಧವಾರ ಬೆಳಗ್ಗೆ ಟ್ವೀಟ್ ಬರೆದಿದ್ದಾರೆ. ಇದಾದ ಒಂದು ಗಂಟೆಯ ನಂತರ, ಅವರು ಯುಕೆಯಲ್ಲಿನ ಇಂಗ್ಲಿಷ್ ಪ್ರೀಮಿಯರ್ ಲೀಗ್‌ನ ಅತ್ಯಂತ ಜನಪ್ರಿಯ ತಂಡವನ್ನು ಖರೀದಿಸುತ್ತಿರುವುದಾಗಿ ಹೇಳಿದ್ದಾರೆ.

"ಹಾಗೆ, ನಾನು ಮ್ಯಾಂಚೆಸ್ಟರ್ ಯುನೈಟೆಡ್ ಖರೀದಿಸುತ್ತಿದ್ದೇನೆ, ನಿಮಗೆ ಸ್ವಾಗತ" ಎಂದು ಟ್ವೀಟ್ ಮಾಡಿದ್ದು, ಸಾಮಾಜಿಕ ಜಾಲ ತಾಣದಲ್ಲಿ ಕಿಚ್ಚು ಹಚ್ಚಿದೆ.

Elon Musk says hes buying Manchester United

ಒಂದೆರಡು ಗಂಟೆಗಳಲ್ಲಿ, ಟ್ವೀಟ್ ಅನ್ನು 200,000 ಕ್ಕೂ ಹೆಚ್ಚು ಬಳಕೆದಾರರು ಇಷ್ಟಪಟ್ಟಿದ್ದಾರೆ, 65,000 ಬಾರಿ ರೀಟ್ವೀಟ್ ಆಗಿದೆ. ಈ ಒಂದು ಟ್ವೀಟ್ ಉದ್ಯಮ, ಕ್ರೀಡಾಲೋಕದಲ್ಲಿ ಸಂಚಲನ ಮೂಡಿಸುತ್ತಿದೆ.. ಇಂಗ್ಲೆಂಡ್‌ ಅಲ್ಲದೆ ವಿಶ್ವದೆಲ್ಲೆಡೆ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಮ್ಯಾಂಚೆಸ್ಟರ್ ಯುನೈಟೆಡ್, ಸದ್ಯ ಅತಿ ದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿದೆ.

ಫೋರ್ಬ್ಸ್ ಪ್ರಕಾರ ಮ್ಯಾಂಚೆಟರ್ ಯುನೈಟೆಡ್ ಮೇ ವೇಳೆಗೆ ಸುಮಾರು $4.6 ಶತಕೋಟಿ ಮೌಲ್ಯವನ್ನು ಹೊಂದಿತ್ತು. ಮಂಗಳವಾರದ ಸ್ಟಾಕ್ ಮಾರುಕಟ್ಟೆಯ ಮುಕ್ತಾಯದಲ್ಲಿ, ಫುಟ್‌ಬಾಲ್ ಕ್ಲಬ್‌ನ ಮಾರುಕಟ್ಟೆ ಮೌಲ್ಯ $2 ಶತಕೋಟಿಗಿಂತ ಹೆಚ್ಚು ಇತ್ತು.

ಒಟ್ಟಾರೆ $270 ಶತಕೋಟಿ ನಿವ್ವಳ ಮೌಲ್ಯದ ಆಸ್ತಿ ಹೊಂದಿರುವ ಮಸ್ಕ್ ಖಂಡಿತವಾಗಿಯೂ ಫುಟ್‌ಬಾಲ್‌ನ ಅತಿದೊಡ್ಡ ಕ್ಲಬ್‌ಗಳಲ್ಲಿ ಒಂದನ್ನು ಖರೀದಿಸಲು ಸಮರ್ಥರಾಗಿದ್ದಾರೆ. ಡೀಲ್ ಮೌಲ್ಯಮಾಪನವು $44 ಶತಕೋಟಿ ಟ್ವಿಟ್ಟರ್ ಒಪ್ಪಂದಕ್ಕಿಂತ ಕಡಿಮೆ ಮೌಲ್ಯಕ್ಕೆ ಖರೀದಿ ನಡೆಯಬಹುದು ಎಂದು ಅಂದಾಜಿಸಬಹುದು.

ಆದರೆ, ಟ್ವಿಟ್ಟರ್ ಬಳಕೆದಾರರು ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ನಿಜಕ್ಕೂ ಆತ ತಂಡವನ್ನು ಖರೀದಿಸುತ್ತಾನಾ? ಅಥವಾ ಸುಮ್ಮನೆ ಕಥೆ ಹೇಳ್ತಾನಾ? ಎಂದು ಪ್ರಶ್ನಿಸಿದ್ದಾರೆ.

"ನಿಮಗೆ ಇದು ಬೇಡ, ನನ್ನನ್ನು ನಂಬಿ ಈ ವ್ಯಕ್ತಿ ಟ್ವಿಟ್ಟರ್ ಅನ್ನು USD 44 ಶತಕೋಟಿಗೆ ಖರೀದಿಸಲು ಒಪ್ಪಂದ ಮಾಡಿಕೊಂಡು ನಂತರ ಅದು ಕೆಟ್ಟ ವ್ಯವಹಾರವೆಂದು ಅರಿತುಕೊಂಡು, ಹಿಂದೆ ಸರಿದಿದ್ದಾನೆ ಈಗ ಕಾನೂನು ಹೋರಾಟ ನಡೆಸುತ್ತಿದ್ದಾನೆ" ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

English summary
Tesla and SpaceX CEO Elon Musk on Wednesday morning made another headline grabbing statement, stating on Twitter that he is going to buy Manchester United Football Club.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X