ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೆನ್ನಿಸ್‌ ಜಗತ್ತಿಗೆ ನಿವೃತ್ತಿ ಘೋಷಿಸಿದ ತಾರೆ ಸೆರೆನಾ ವಿಲಿಯಮ್ಸ್‌

|
Google Oneindia Kannada News

ವಾಷಿಂಗ್‌ಟನ್‌,ಆಗಸ್ಟ್‌ 10: ಗ್ರ್ಯಾಂಡ್ ಸ್ಲಾಮ್‌ ಪ್ರಶಸ್ತಿಗಳ ಒಡತಿ, ಅಮೆರಿಕದ ದಂತಕಥೆ ಸೆರೆನಾ ವಿಲಿಯಮ್ಸ್ ಅವರು ಟೆನಿಸ್‌ನಿಂದ ನಿವೃತ್ತಿ ಘೋಷಿಸಿದ್ದಾರೆ.

40ರ ವರ್ಷದ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್‌ ತಾನು ಏನು ಮಾಡುತ್ತಿದ್ದೇನೆ ಎಂಬುದನ್ನು ವಿವರಿಸಲು ಅತ್ಯುತ್ತಮ ಪದವೆಂದರೆ "ವಿಕಸನ" (evolution) ಮತ್ತು ತನ್ನ ಕುಟುಂಬವನ್ನು ಸಲಹಲು ಬಯಸುತ್ತಿರುವುದಾಗಿ ಹೇಳಿದರು.

ನಾನು ನಿವೃತ್ತಿ ಎಂಬ ಪದವನ್ನು ಎಂದಿಗೂ ಇಷ್ಟಪಡಲಿಲ್ಲ. ಇದು ಆಧುನಿಕ ಪದದಂತೆ ನನಗೆ ಅನಿಸುವುದಿಲ್ಲ. ನಾನು ಇದನ್ನು ಸ್ಥಿತ್ಯಂತರವೆಂದು ಯೋಚಿಸುತ್ತಿದ್ದೇನೆ. ಆದರೆ ನಾನು ಆ ಪದವನ್ನು ಹೇಗೆ ಬಳಸುತ್ತೇನೆ ಎಂಬುದರ ಕುರಿತು ಸೂಕ್ಷ್ಮವಾಗಿರಲು ಬಯಸುತ್ತೇನೆ. ಇದು ಜನ ಸಮುದಾಯಕ್ಕೆ ನಿರ್ದಿಷ್ಟವಾದ ಮತ್ತು ಮುಖ್ಯವಾದ ವಿಷಯವಾಗಿದೆ ಎಂದು ಸೆರೆನಾ ಹೇಳಿದ್ದಾರೆ.

 ಯುಎಸ್‌ ಓಪನ್‌ನಲ್ಲಿ ಗೆಲ್ಲುವ ಗುರಿ

ಯುಎಸ್‌ ಓಪನ್‌ನಲ್ಲಿ ಗೆಲ್ಲುವ ಗುರಿ

ಈ ವರ್ಷದ ಆರಂಭದಲ್ಲಿ ಅವರು ವಿಂಬಲ್ಡನ್‌ನಲ್ಲಿ ತಮ್ಮ ಮೊದಲ ಸಿಂಗಲ್ಸ್ ಪಂದ್ಯದಲ್ಲೇ ಹೊರಬಿದ್ದಿದ್ದರು. ಆದಾಗ್ಯೂ, ಅವರು ಈಗ ತನ್ನ ವಿದಾಯ ಪಂದ್ಯಾವಳಿಯನ್ನು ಯುಎಸ್‌ ಓಪನ್‌ನಲ್ಲಿ ತನ್ನ ಪ್ರಶಸ್ತಿಯ ಗುರಿ ಹಾಕಿ ಕೊಂಡಿದ್ದಾರೆ. ದುರದೃಷ್ಟವಶಾತ್ ನಾನು ಈ ವರ್ಷ ವಿಂಬಲ್ಡನ್ ಗೆಲ್ಲಲು ಸಿದ್ಧಳಾಗಿರಲಿಲ್ಲ. ಆದರೆ ನ್ಯೂಯಾರ್ಕ್‌ನಲ್ಲಿ ಗೆಲ್ಲಲು ಸಿದ್ಧಳಾಗಿದ್ದಾರೆ. ಹಾಗಾಗಿ ನಾನು ಪ್ರಯತ್ನಪಡುತ್ತೇನೆ. ಲೀಡ್-ಅಪ್ ಪಂದ್ಯಾವಳಿಗಳು ರೋಚಕವಾಗಿರುತ್ತವೆ ಎಂದು ಅವರು ಸಂದರ್ಶನದಲ್ಲಿ ಹೇಳಿದರು.

 186 ಸತತ ವಾರಗಳ ಜಂಟಿ ದಾಖಲೆ

186 ಸತತ ವಾರಗಳ ಜಂಟಿ ದಾಖಲೆ

ಮಹಿಳಾ ಟೆನಿಸ್ ಅಸೋಸಿಯೇಷನ್ ​​(ಡಬ್ಲ್ಯೂಟಿಎ) ಯಿಂದ 319 ವಾರಗಳ ಕಾಲ ಅವರು ಸಿಂಗಲ್ಸ್ ವಿಶ್ವದ ನಂಬರ್ ಒನ್ ಶ್ರೇಯಾಂಕವನ್ನು ಹೊಂದಿದ್ದರು, ಇದರಲ್ಲಿ 186 ಸತತ ವಾರಗಳ ಜಂಟಿ ದಾಖಲೆ ಸೇರಿದೆ. ಸೆರೆನಾ ವಿಲಿಯಮ್ಸ್ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿಯೂ ನಿವೃತ್ತಿ ಕುರಿತು ಪೋಸ್ಟ್ ಹಂಚಿಕೊಂಡಿದ್ದಾರೆ. ಜೀವನದಲ್ಲಿ ನಾವು ಬೇರೆ ದಿಕ್ಕಿನಲ್ಲಿ ಚಲಿಸಲು ನಿರ್ಧರಿಸಬೇಕಾದ ಸಮಯ ಬಂದೆ ಬರುತ್ತದೆ. ನೀವು ಏನನ್ನಾದರೂ ತುಂಬಾ ಪ್ರೀತಿಸಿದಾಗ ಆ ಸಮಯಗಳು ಯಾವಾಗಲೂ ಕಠಿಣವಾಗಿರುತ್ತದೆ. ನನ್ನ ಒಳ್ಳೆಯತನವೆಂದರೆ ನಾನು ಟೆನ್ನಿಸ್ ಅನ್ನು ಪ್ರೀತಿಸುತ್ತೇನೆ. ಆದರೆ ಈಗ ನನ್ನ ಕೌಂಟ್ ಡೌನ್ ಶುರುವಾಗಿದೆ ಎಂದು ಬರೆದಿರುವ ಅವರ ಈ ಪೋಸ್ಟ್ ಇದೀಗ ಭಾರಿ ವೈರಲ್ ಆಗಿದೆ.

 ಫ್ರೆಂಚ್ ಓಪನ್, ಯುಎಸ್ ಓಪನ್ ವಿಜೇತೆ

ಫ್ರೆಂಚ್ ಓಪನ್, ಯುಎಸ್ ಓಪನ್ ವಿಜೇತೆ

23 ಬಾರಿ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಸೆರೆನಾ ವಿಲಿಯಮ್ಸ್‌ ತನ್ನದಾಗಿಸಿಕೊಂಡಿದ್ದಾರೆ. ಅವುಗಳಲ್ಲಿ 2003, 2005, 2007, 2009, 2010, 2015, 2017 ವರ್ಷಗಳಲ್ಲಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದರೆ. ಇನ್ನೂ 2002, 2013, 2015 ರಲ್ಲಿ ಫ್ರೆಂಚ್ ಓಪನ್ ಮತ್ತು 2002, 2003, 2009, 2010, 2012, 2015, 2016 ರಲ್ಲಿ ವಿಂಬಲ್ಡನ್ ಗೆದ್ದಿದ್ದಾರೆ. ಇದೇ ವೇಳೆ ಅವರು 1999, 2002, 2008, 2012, 2013, 2014 ವರ್ಷಗಳಲ್ಲಿ ಯುಎಸ್ ಓಪನ್ ವಿಜೇತರಾಗಿದ್ದಾರೆ.

 ಅಕ್ಷರಶಃ ಟೆನಿಸ್ ಜಗತ್ತನ್ನು ಆಳಿದ್ದ ಸೆರೆನಾ

ಅಕ್ಷರಶಃ ಟೆನಿಸ್ ಜಗತ್ತನ್ನು ಆಳಿದ್ದ ಸೆರೆನಾ

ಆರ್ಥರ್ ಆಶೆ ಬಳಿಕ ಸಿಂಗಲ್ಸ್‌ನಲ್ಲಿ ಟೆನಿಸ್‌ ಗ್ರ್ಯಾನ್‌ ಸ್ಲಾಂ ವಿಜೇತರಾಗಿದ್ದ ಅಮೆರಿಕಾ ಕಪ್ಪುವರ್ಣೀಯ ಟೆನ್ನಿಸ್‌ ಆಟಗಾರ್ತಿ ಸೆರೆನಾ ವಿಲಿಯಮ್ಸ್‌ ದಶಕಗಳ ಕಾಲವೇ ಅಕ್ಷರಶಃ ಟೆನಿಸ್ ಜಗತ್ತನ್ನು ಆಳಿದ್ದರು. ತಮ್ಮ 17ನೇ ವಯಸ್ಸಿನಲ್ಲಿ ಸೆರೆನಾ ವಿಲಿಯಮ್ಸ್‌ ಚೊಚ್ಚಲ ಟೆನಿಸ್ ಗ್ರ್ಯಾನ್‌ಸ್ಲಾಮ್ ಗೆದ್ದು ಬೀಗಿದ್ದರು. ಇದೇ ತಿಂಗಳು 29ರಿಂದ ನಡೆಯಲಿರುವ ಯುಎಸ್‌ ಓಪನ್‌ ಟೂರ್ನಿ ಆರಂಭಗೊಳ್ಳಲಿದೆ. ಇಲ್ಲಿ ಸೆರೆನಾ ತಾಯಿಯಾದ ಬಳಿಕ ಮೊದಲ ಗ್ರ್ಯಾನ್‌ ಸ್ಲಾಮ್ ಪ್ರಶಸ್ತಿ ಜಯಿಸುವುದರೊಂದಿಗೆ ವಿದಾಯ ಹೇಳಲು ಬಯಸಿದ್ದಾರೆ. ಇದಕ್ಕೂ ಮುನ್ನ 2017ರಲ್ಲಿ ಸೆರೆನಾ ವಿಲಿಯಮ್ಸ್‌ ಕೊನೆ ಬಾರಿಗೆ ಗ್ರ್ಯಾನ್‌ ಸ್ಲಾಮ್ ಜಯಿಸಿದ್ದರು.

English summary
American legend Serena Williams, the winnaer of 23 Grand Slam titles, has announced her retirement from tennis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X