ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"24 ವರ್ಷಗಳು 24 ಗಂಟೆಗಳಂತೆ ಭಾಸವಾಗುತ್ತವೆ": ನಿವೃತ್ತಿ ಘೋಷಿಸಿದ ರೋಜರ್ ಫೆಡರರ್

|
Google Oneindia Kannada News

20 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದ ಮೊದಲ ಟೆನಿಸ್ ದಂತಕಥೆ ರೋಜರ್ ಫೆಡರರ್, ಲೇವರ್ ಕಪ್ 2022 ರ ನಂತರ ಕ್ರೀಡೆಯಿಂದ ನಿವೃತ್ತಿಯಾಗುವ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ರೋಜರ್ ಫೆಡರರ್ ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ವಿಡಿಯೋ ಮತ್ತು ಪತ್ರವನ್ನು ಪೋಸ್ಟ್ ಮಾಡುವ ಮೂಲಕ ತಮ್ಮ ನಿರ್ಧಾರವನ್ನು ತಿಳಿಸಿದ್ದಾರೆ. ಫೆಡರರ್ 2003 ರಲ್ಲಿ ವಿಂಬಲ್ಡನ್ ಪ್ರಶಸ್ತಿಯನ್ನು ಗೆದ್ದಾಗ ತಮ್ಮ ಮೊದಲ ಗ್ರಾಂಡ್ ಸ್ಲಾಮ್ ಗೆದ್ದಿದ್ದರು. ಅಂದಿನಿಂದ ಅವರು 6 ಆಸ್ಟ್ರೇಲಿಯನ್ ಓಪನ್, 1 ಫ್ರೆಂಚ್ ಓಪನ್, 8 ವಿಂಬಲ್ಡನ್ ಮತ್ತು 5 ಯುಎಸ್ ಓಪನ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

Breaking: ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ ಕನ್ನಡಿಗ ರಾಬಿನ್ ಉತ್ತಪ್ಪBreaking: ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ ಕನ್ನಡಿಗ ರಾಬಿನ್ ಉತ್ತಪ್ಪ

ಟೆನಿಸ್ ದಿಗ್ಗಜ ರೋಜರ್ ಫೆಡರರ್ ಬಹಳ ಸಮಯದಿಂದ ಮೊಣಕಾಲು ಗಾಯದಿಂದ ಬಳಲುತ್ತಿದ್ದಾರೆ.

ಲೇವರ್ ಕಪ್ ನನ್ನ ಅಂತಿಮ ಎಟಿಪಿ ಪಂದ್ಯ

ಲೇವರ್ ಕಪ್ ನನ್ನ ಅಂತಿಮ ಎಟಿಪಿ ಪಂದ್ಯ

"ಮುಂದಿನ ವಾರ ಲಂಡನ್‌ನಲ್ಲಿ ನಡೆಯಲಿರುವ ಲೇವರ್ ಕಪ್ ನನ್ನ ಅಂತಿಮ ಎಟಿಪಿ ಪಂದ್ಯಾವಳಿಯಾಗಿದೆ" ಎಂದು ರೋಜರ್ ಫೆಡರರ್ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಲೇವರ್ ಕಪ್ ಮುಂದಿನ ವಾರ ಲಂಡನ್‌ನಲ್ಲಿ ಸೆಪ್ಟೆಂಬರ್ 23 ರಿಂದ 25 ರವರೆಗೆ ನಡೆಯಲಿದೆ.

41 ವರ್ಷದ ರೋಜರ್ ಫೆಡರರ್ 20 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳಿಗೆ ಮುತ್ತಿಟ್ಟಿದ್ದಾರೆ. 2021 ರಲ್ಲಿ ವಿಂಬಲ್ಡನ್‌ನಲ್ಲಿ ಕ್ವಾರ್ಟರ್-ಫೈನಲ್ ಸೋತ ನಂತರ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ನನ್ನ ದೇಹದ ಸಾಮರ್ಥ್ಯ, ಮಿತಿಗಳು ನನಗೆ ತಿಳಿದಿವೆ

ನನ್ನ ದೇಹದ ಸಾಮರ್ಥ್ಯ, ಮಿತಿಗಳು ನನಗೆ ತಿಳಿದಿವೆ

"ಟೆನ್ನಿಸ್ ನನಗೆ ನೀಡಿದ ಎಲ್ಲಾ ಉಡುಗೊರೆಗಳಲ್ಲಿ, ನಿಸ್ಸಂದೇಹವಾಗಿ, ನಾನು ಈ ಪ್ರಯಾಣದಲ್ಲಿ ಭೇಟಿಯಾದ ಜನರೇ ಶ್ರೇಷ್ಠ. ನನ್ನ ಸ್ನೇಹಿತರು, ನನ್ನ ಪ್ರತಿಸ್ಪರ್ಧಿಗಳು ಮತ್ತು ಕ್ರೀಡೆಗೆ ಜೀವನ ನೀಡುವ ಎಲ್ಲ ಅಭಿಮಾನಿಗಳು" ಎಂದಿದ್ದಾರೆ.

"ನಿಮ್ಮಲ್ಲಿ ಅನೇಕರಿಗೆ ತಿಳಿದಿರುವಂತೆ, ಕಳೆದ ಮೂರು ವರ್ಷಗಳು ನನಗೆ ಗಾಯಗಳು ಮತ್ತು ಶಸ್ತ್ರಚಿಕಿತ್ಸೆಗಳ ರೂಪದಲ್ಲಿ ಸವಾಲುಗಳನ್ನು ನೀಡಿವೆ. ನಾನು ಸಂಪೂರ್ಣ ಸ್ಪರ್ಧಾತ್ಮಕ ರೂಪಕ್ಕೆ ಮರಳಲು ಶ್ರಮಿಸಿದ್ದೇನೆ. ಆದರೆ ನನ್ನ ದೇಹದ ಸಾಮರ್ಥ್ಯಗಳು ಮತ್ತು ಮಿತಿಗಳು ನನಗೆ ತಿಳಿದಿವೆ. ಇತ್ತೀಚೆಗೆ ನನಗೆ ಅದು ಮತ್ತಷ್ಟು ಸ್ಪಷ್ಟವಾಗಿದೆ. ಮುಂದಿನ ವಾರದ ಲೇವರ್ ಕಪ್ ನನ್ನ ಅಂತಿಮ ATP ಪಂದ್ಯ ಆಗಿರುತ್ತದೆ" ಎಂದಿದ್ದಾರೆ.

ಕನಸು ಕಂಡಿದಕ್ಕಿಂತ ಹೆಚ್ಚಿನದನ್ನು ಟೆನಿಸ್ ನೀಡಿದೆ

ಕನಸು ಕಂಡಿದಕ್ಕಿಂತ ಹೆಚ್ಚಿನದನ್ನು ಟೆನಿಸ್ ನೀಡಿದೆ

"ನನಗೆ 41 ವರ್ಷ. ನಾನು 24 ವರ್ಷಗಳಲ್ಲಿ 1,500 ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ್ದೇನೆ. ನಾನು ಕನಸು ಕಂಡಿರುವುದಕ್ಕಿಂತಲೂ ಟೆನಿಸ್ ನನ್ನನ್ನು ಉತ್ತಮವಾಗಿ ನಡೆಸಿಕೊಂಡಿದೆ. ಈಗ ನನ್ನ ಸ್ಪರ್ಧಾತ್ಮಕ ವೃತ್ತಿಜೀವನವನ್ನು ಕೊನೆಗೊಳಿಸುವ ಸಮಯ ಬಂದಿದೆ" ಎಂದು ತಮ್ಮ ವಿಡಿಯೋ ಮತ್ತು ನಾಲ್ಕು ಪುಟಗಳ ಪತ್ರದಲ್ಲಿ ತಿಳಿಸಿದ್ದಾರೆ.

'ನಾನು ಭೂಮಿಯ ಮೇಲಿನ ಅತ್ಯಂತ ಅದೃಷ್ಟಶಾಲಿ ವ್ಯಕ್ತಿಗಳಲ್ಲಿ ಒಬ್ಬನೆಂದು ಪರಿಗಣಿಸುತ್ತೇನೆ. ನನಗೆ ಟೆನಿಸ್ ಆಡಲು ವಿಶೇಷ ಪ್ರತಿಭೆಯನ್ನು ನೀಡಿತು' ಎಂದಿರುವ ರೋಜರ್, ಪತ್ನಿ ಮಿರ್ಕಾಗೆ ನಾನು ವಿಶೇಷವಾಗಿ ಧನ್ಯವಾದ ಹೇಳಲು ಬಯಸುತ್ತೇನೆ ಎಂದಿದ್ದಾರೆ.

8 ತಿಂಗಳ ಗರ್ಭಿಣಿಯಾಗಿದ್ದರೂ ಪಂದ್ಯ ನೋಡಿದ್ದ ಪತ್ನಿ

8 ತಿಂಗಳ ಗರ್ಭಿಣಿಯಾಗಿದ್ದರೂ ಪಂದ್ಯ ನೋಡಿದ್ದ ಪತ್ನಿ

"ನನ್ನೊಂದಿಗೆ ಪ್ರತಿ ನಿಮಿಷವೂ ಬದುಕಿದ ನನ್ನ ಅದ್ಭುತ ಪತ್ನಿ ಮಿರ್ಕಾಗೆ ನಾನು ವಿಶೇಷವಾಗಿ ಧನ್ಯವಾದ ಹೇಳಲು ಬಯಸುತ್ತೇನೆ. ಅವರು ಫೈನಲ್‌ಗೆ ಮುನ್ನ ನನ್ನನ್ನು ಹೆಚ್ಚು ಹುರಿದುಂಬಿಸಿದ್ದಾರೆ. 8 ತಿಂಗಳ ಗರ್ಭಿಣಿಯಾಗಿರುವಾಗಲೂ ಲೆಕ್ಕವಿಲ್ಲದಷ್ಟು ಪಂದ್ಯಗಳನ್ನು ವೀಕ್ಷಿಸಿದ್ದಾರೆ. ನನ್ನನ್ನು ಬೆಂಬಲಿಸಿದ್ದಕ್ಕಾಗಿ ನನ್ನ 4 ಅದ್ಭುತ ಮಕ್ಕಳಿಗೆ ಧನ್ಯವಾದ ಹೇಳಲು ನಾನು ಬಯಸುತ್ತೇನೆ, ಯಾವಾಗಲೂ ಹೊಸ ಸ್ಥಳಗಳನ್ನು ಅನ್ವೇಷಿಸಲು ಮತ್ತು ಪ್ರಯಾಣದುದ್ದಕ್ಕೂ ಅದ್ಭುತವಾದ ನೆನಪುಗಳನ್ನು ಸೃಷ್ಟಿಸಲು ಉತ್ಸುಕನಾಗಿದ್ದೇನೆ" ಎಂದಿದ್ದಾರೆ.

ಸೆರೆನಾ ವಿಲಿಯಮ್ಸ್ ನಿವೃತ್ತಿಯ ಬೆನ್ನಲ್ಲೇ ಫೆಡರರ್ ಈ ಘೋಷಣೆ ಮಾಡಿದ್ದಾರೆ. ಸೆರೆನಾ ಮಹಿಳಾ ಆಟದಲ್ಲಿ ಎರಡನೇ ಅತಿ ಹೆಚ್ಚು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾರೆ.

English summary
Tennis legend Roger Federer the first men's player to win 20 grand slam titles has announced Retirement. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X