ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

India squad for T20 World Cup : ಟಿ20 ವಿಶ್ವಕಪ್ 2022ಗಾಗಿ ಟೀಂ ಇಂಡಿಯಾ ಪ್ರಕಟ

|
Google Oneindia Kannada News

ಮುಂಬೈ, ಸೆ. 12: ಟಿ20 ವಿಶ್ವಕಪ್ 2022 ಆಡಲಿರುವ ಟೀಂ ಇಂಡಿಯಾ ಪ್ರಕಟಗೊಂಡಿದೆ. ನಿರೀಕ್ಷೆಗೂ ಮುಂಚಿತವಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ತಂಡವನ್ನು ಸೋಮವಾರ ಸಂಜೆ ಪ್ರಕಟಿಸಿದೆ. ತಂಡದಲ್ಲಿ ಹೆಚ್ಚಿನ ಅಚ್ಚರಿಯ ಆಯ್ಕೆ ಕಂಡು ಬಂದಿಲ್ಲ. ಬಹುತೇಕ ಇದೇ ತಂಡ ಆಸ್ಟ್ರೇಲಿಯಾ ಸರಣಿಯಲ್ಲೂ ಆಡುವ ಸಾಧ್ಯತೆಯಿದೆ.

ಆಸ್ಟ್ರೇಲಿಯಾದಲ್ಲಿ ಆರಂಭವಾಗಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಅಭ್ಯಾಸ ಪಂದ್ಯಗಳಲ್ಲಿ ಭಾರತದ ಎದುರಾಳಿಗಳು ಫಿಕ್ಸ್ ಆಗಿದ್ದಾರೆ. ಅಕ್ಟೋಬರ್ 17 ಮತ್ತು ಅಕ್ಟೋಬರ್ 19ರಂದು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳ ವಿರುದ್ಧ ಭಾರತ ಅಭ್ಯಾಸ ಪಂದ್ಯಗಳನ್ನು ಆಡಲಿದೆ.

Breaking: ಪಾಕಿಸ್ತಾನ ಸೋಲಿಸಿ, ಏಷ್ಯಾಕಪ್ ಎತ್ತಿ ಹಿಡಿದ ಶ್ರೀಲಂಕಾBreaking: ಪಾಕಿಸ್ತಾನ ಸೋಲಿಸಿ, ಏಷ್ಯಾಕಪ್ ಎತ್ತಿ ಹಿಡಿದ ಶ್ರೀಲಂಕಾ

ಈ ಬಾರಿಯ ಟಿ20 ವಿಶ್ವಕಪ್ ಅಕ್ಟೋಬರ್ 16ರಿಂದ ನವೆಂಬರ್ 13ರವರೆಗೂ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. ಒಟ್ಟು 16 ತಂಡಗಳು ಆಡುತ್ತಿವೆ. ಟೂರ್ನಿ ಶುರುವಾಗುವ ಮುನ್ನ ಈ 16 ತಂಡಗಳಿಗೆ ವಾರ್ಮಪ್ ಪಂದ್ಯಗಳನ್ನು ಐಸಿಸಿ ನಿಗದಿ ಮಾಡಿದೆ. ಅಭ್ಯಾಸ ಪಂದ್ಯಗಳು ಅಕ್ಟೋಬರ್ 10ರಿಂದ 19ವರೆಗೂ ನಡೆಯಲಿದೆ.

ವಿಶ್ವಕಪ್‌ನ ಗ್ರೂಪ್ ಹಂತದಲ್ಲಿ ಆಡುವ ತಂಡಗಳಿಗೆ ವಾರ್ಮಪ್ ಪಂದ್ಯಗಳು ಅಕ್ಟೋಬರ್ 10ರಿಂದ 13ರವರೆಗೂ ನಡೆಯಲಿದೆ. ಸೂಪರ್-12ರ ಹಂತದಲ್ಲಿ ನೇರವಾಗಿ ಕ್ವಾಲಿಫೈ ಆಗಿರುವ ತಂಡಗಳಿಗೆ ವಾರ್ಮಪ್ ಪಂದ್ಯಗಳು ಅಕ್ಟೋಬರ್ 17ರಿಂದ 19ರವರೆಗೆ ನಡೆಯಲಿದೆ.

ವಿಶ್ವದೆಲ್ಲೆಡೆಯಿಂದ ಅರ್ಹತೆ ಪಡೆದ ನಾಲ್ಕು ತಂಡಗಳು ಹಾಗೂ ಕಳೆದ ಟಿ20 ವಿಶ್ವಕಪ್‌ನಲ್ಲಿ ಗ್ರೂಪ್ ಹಂತದಿಂದ ನಿರ್ಗಮಿಸಿದ ನಾಲ್ಕು ತಂಡಗಳು ಹೀಗೆ ಎಂಟು ತಂಡಗಳು ಗ್ರೂಪ್ ಹಂತದಲ್ಲಿ ಸೆಣಸಲಿವೆ. ಈ ವೇಳೆ ಎರಡು ಗುಂಪುಗಳಾಗಿ ಮಾಡಲಾಗಿದೆ.

Team India squad for T20 World Cup 2022 announced

ಎ ಗುಂಪಿನಲ್ಲಿ ಶ್ರೀಲಂಕಾ, ನೆದರ್‌ಲೆಂಡ್ಸ್, ನಮೀಬಿಯಾ ಮತ್ತು ಯುಎಇ ತಂಡಗಳಿವೆ.
ಬಿ ಗುಂಪಿನಲ್ಲಿ ವೆಸ್ಟ್ ಇಂಡೀಸ್, ಜಿಂಬಾಬ್ವೆ, ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್ ತಂಡಗಳಿವೆ.
ಈ ಎರಡು ಗುಂಪುಗಳಿಂದ ನಾಲ್ಕು ತಂಡಗಳು ಸೂಪರ್-12 ಹಂತಕ್ಕೇರುತ್ತವೆ.

ಟಿ20 ವಿಶ್ವಕಪ್ 2022ಗಾಗಿ ಟೀಂ ಇಂಡಿಯಾ
ರೋಹಿತ್ ಶರ್ಮ(ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಬ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಯಜುವೇಂದ್ರ ಚಾಹಲ್, ಅಕ್ಷರ್ ಪಟೇಲ್, ಜಸ್ ಪ್ರೀತ್ ಬೂಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್ ಹಾಗೂ ಅರ್ಷ್ ದೀಪ್ ಸಿಂಗ್.

ಸ್ಟ್ಯಾಂಡ್ ಬೈ ಪ್ಲೇಯರ್ಸ್: ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ನೋಯಿ, ದೀಪಕ್ ಚಾಹರ್

ಒಟ್ಟು 8 ತಂಡಗಳು ಈಗಾಗಲೇ ನೇರವಾಗಿ ಸೂಪರ್-12 ಹಂತದಲ್ಲಿವೆ. ಆಸ್ಟ್ರೇಲಿಯಾ, ಭಾರತ, ಪಾಕಿಸ್ತಾನ, ಸೌತ್ ಆಫ್ರಿಕಾ, ಅಫ್ಗಾನಿಸ್ತಾನ, ಬಾಂಗ್ಲಾದೇಶ, ಇಂಗ್ಲೆಂಡ್, ನ್ಯೂಜಿಲೆಂಡ್ ತಂಡಗಳ ಹಾಗೂ ಗ್ರೂಪ್ ಹಂತದಿಂದ ಬಂದ 4 ತಂಡಗಳು ಹೀಗೆ 12 ತಂಡಗಳು ಸೂಪರ್-12ನಲ್ಲಿ ಸೆಣಸಲಿವೆ.

ಕ್ರಿಕೆಟರ್ ವೇದಾ ಕೃಷ್ಣಮೂರ್ತಿ ಜೊತೆ ಕ್ರಿಕೆಟರ್ ಅರ್ಜುನ್ ಹೊಯ್ಸಳ ನಿಶ್ಚಿತಾರ್ಥ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ ಜೊತೆ ಕ್ರಿಕೆಟರ್ ಅರ್ಜುನ್ ಹೊಯ್ಸಳ ನಿಶ್ಚಿತಾರ್ಥ

ಸೂಪರ್-12 ಹಂತದಲ್ಲಿ 12 ತಂಡಗಳನ್ನು ತಲಾ 6 ತಂಡಗಳಾಗಿ ಎರಡು ಗುಂಪು ಮಾಡಲಾಗಿದೆ. ಮೊದಲ ಗುಂಪಿನಲ್ಲಿ ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್ ತಂಡಗಳಿವೆ. ಎರಡನೇ ಗುಂಪಿನಲ್ಲಿ ಭಾರತ, ಸೌತ್ ಆಫ್ರಿಕಾ, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ತಂಡಗಳಿವೆ.

ಆಸ್ಟ್ರೇಲಿಯಾ ವಿರುದ್ಧದ ಟಿ20ಐ ಸರಣಿಗಾಗಿ ತಂಡ:

ರೋಹಿತ್ ಶರ್ಮ(ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಬ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಯಜುವೇಂದ್ರ ಚಾಹಲ್, ಅಕ್ಷರ್ ಪಟೇಲ್, ಜಸ್ ಪ್ರೀತ್ ಬೂಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ದೀಪಕ್ ಚಾಹರ್, ಮೊಹಮ್ಮದ್ ಶಮಿ ಹಾಗೂ ಅರ್ಷ್ ದೀಪ್ ಸಿಂಗ್.

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20ಐ ಸರಣಿಗಾಗಿ ತಂಡ:

ರೋಹಿತ್ ಶರ್ಮ(ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಬ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಯಜುವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅರ್ಷ್ ದೀಪ್ ಸಿಂಗ್, ಮೊಹಮ್ಮದ್ ಶಮಿ, ಹರ್ಷಲ್ ಪಟೇಲ್, ದೀಪಕ್ ಚಾಹರ್ ಹಾಗೂ ಜಸ್ ಪ್ರೀತ್ ಬೂಮ್ರಾ

ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20ಐ ಸರಣಿ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ, ಅರ್ಷ್ ದೀಪ್ ಸಿಂಗ್ ಹಾಗೂ ಭುವನೇಶ್ವರ್ ಕುಮಾರ್ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಭೇಟಿ ನೀಡಿ ಫಿಟ್ನೆಸ್ ಕ್ಲಿಯೆರೆನ್ಸ್ ಪಡೆಯಲು ಬಿಸಿಸಿಐ ಸೂಚಿಸಿದೆ.

English summary
India’s squad for ICC Men’s T20 World Cup 2022 announced by BCCI on September 12
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X