• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಬೆತ್ತಲೆಗೊಳಿಸಿ ಬಡಿದರು'- ಕಿಡ್ನಾಪ್ ಘಟನೆ ನೆನಪಿಸಿಕೊಂಡ ಮಾಜಿ ಕ್ರಿಕೆಟಿಗ ಸ್ಟುವರ್ಟ್

|
Google Oneindia Kannada News

ಸಿಡ್ನಿ, ಜೂನ್ 19: ಹಲವು ಊಹಾಪೋಹಗಳಿಗೆ ಕಾರಣವಾಗಿದ್ದ ತಮ್ಮ ಅಪಹರಣ ಘಟನೆ ಬಗ್ಗೆ ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಸ್ಟುವರ್ಟ್ ಮೆಕ್‌ಗಿಲ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. "ನನಗೆ ಆಗಿದ್ದು ಕೇಳಿದರೆ ನಿಮ್ಮ ಪರಮ ಶತ್ರುವಿಗೂ ಅಂಥ ಸ್ಥಿತಿ ಬರಬಾರದು ಅಂತ ಭಾವಿಸುತ್ತೀರಿ" ಎಂದು ಸ್ಟುವರ್ಟ್ ಮೆಕ್‌ಗಿಲ್ ಹೇಳಿದ್ದಾರೆ.

"ಆಯುಧಗಳನ್ನು ಹೊಂದಿದ್ದ ಅಪಹರಣಕಾರರು ನನ್ನನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಯಾವುದೋ ಶೆಡ್‌ನಲ್ಲಿ ಇರಿಸಿ ಬೆತ್ತಲೆಗೊಳಿಸಿ ಹೊಡೆದರು. ಬೆದರಿಕೆ ಹಾಕಿದರು..." ಎಂದು ಮಾಜಿ ಆಸ್ಟ್ರೇಲಿಯನ್ ಕ್ರಿಕೆಟಿಗ ಮೆಕ್‌ಗಿಲ್ ಅವರು ಪೋಡ್‌ಕ್ಯಾಸ್ಟ್ ಪ್ರಸಾರದಲ್ಲಿ ಮತ್ತೊಬ್ಬ ಕ್ರಿಕೆಟಿಗ ಅಡಂ ಗಿಲ್‌ಕ್ರಿಸ್ಟ್ ಅವರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.

ಕ್ರಿಕೆಟರ್ ಮೇಲೆ ಲೈಂಗಿಕ ದೌರ್ಜನ್ಯ: ಪಾಕ್ ರಾಷ್ಟ್ರೀಯ ಮಟ್ಟದ ಕೋಚ್ ಅಮಾನತುಕ್ರಿಕೆಟರ್ ಮೇಲೆ ಲೈಂಗಿಕ ದೌರ್ಜನ್ಯ: ಪಾಕ್ ರಾಷ್ಟ್ರೀಯ ಮಟ್ಟದ ಕೋಚ್ ಅಮಾನತು

ಅದು ಕಳೆದ ವರ್ಷ ಸಿಡ್ನಿ ನಗರದಲ್ಲಿ ನಡೆದ ಕಿಡ್ನಾಪ್ ಘಟನೆ. ಸ್ಟುವರ್ಟ್ ಮೆಕ್‌ಗಿಲ್ ಅವರನ್ನು ಅಪಹರಣ ಮಾಡಿದ್ದು ರಿಚರ್ಡ್ ಮತ್ತು ಫ್ರೆಡ್ರಿಕ್ ಶಾಫ್ ಎಂಬಿಬ್ಬರು ಸಹೋದರರೆನ್ನಲಾಗಿದೆ. ಈ ಪ್ರಕರಣದ ವಿಚಾರಣೆ ಕೋರ್ಟ್‌ನಲ್ಲಿ ನಡೆಯುತ್ತಿದೆ.

ಸಿಡ್ನಿ ನಗರದ ಆ ನಿರ್ಜನ ಸ್ಥಳಕ್ಕೆ ಸ್ಟುವರ್ಟ್ ಮೆಕ್‌ಗಿಲ್ ಅವರೇ ಸ್ವ ಇಚ್ಛೆಯಿಂದ ಬಂದಿದ್ದರು. ಅವರು ಡ್ರಗ್ ವ್ಯವಹಾರದಲ್ಲಿ ಭಾಗಿಯಾಗಿದ್ದರು ಎಂದು ಈ ಸಹೋದರರಿಬ್ಬರು ಹೇಳಿದ್ದಾರೆ.

CWG ತಂಡದಿಂದ ಹೊರಕ್ಕೆ, ಕೋರ್ಟ್ ಮೆಟ್ಟಿಲೇರಿದ ಅರ್ಚನಾ ಕಾಮತ್CWG ತಂಡದಿಂದ ಹೊರಕ್ಕೆ, ಕೋರ್ಟ್ ಮೆಟ್ಟಿಲೇರಿದ ಅರ್ಚನಾ ಕಾಮತ್

ಈ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ಸ್ಟುವರ್ಟ್ ಮೆಕ್‌ಗಿಲ್ ಅವರಿಂದ ಯಾವ ತಪ್ಪೂ ಆಗಿದ್ದು ಕಂಡುಬಂದಿಲ್ಲ ಎಂದು ಹೇಳಿದ್ಧಾರೆ. ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಲಿದೆ.

ಈಗ ಮೆಕ್‌ಗಿಲ್ ಹೇಳಿದ್ದಿಷ್ಟು?
"ಪೊಲೀಸ್ ತನಿಖೆ ಬಹುತೇಕ ಮುಗಿದಿದೆ. ಈಗ ವಿಚಾರಣೆಯ ಭಾಗ ಶುರುವಾಗಲಿದೆ. ಆ ಘಟನೆಯನ್ನು ಕೇಳಿದರೆ ನಿಮ್ಮ ಪರಮಶತ್ರುವಿಗೂ ಬೇಡ ಎನ್ನುವ ಸ್ಥಿತಿ ಅದು. ಆ ದಿನ ಸಂಜೆ ಕತ್ತಲೆಯಲ್ಲಿ ಮೂವರು ವ್ಯಕ್ತಿಗಳು ನನ್ನನು ಕಾರಿನೊಳಗೆ ದೂಡಿದರು. ನಾನು ಕಾರಿನೊಳಗೆ ಹೋಗಲು ಒಪ್ಪಲಿಲ್ಲ. ಆದರೆ, ಅವರು ಆಯುಧಗಳನ್ನು ಹಿಡಿದಿದ್ದರಿಂದ ಏನೂ ಮಾಡಲಾಗಲಿಲ್ಲ. ನಿಮ್ಮೊಂದಿಗೆ ಮಾತನಾಡಬೇಕು ಎಂದು ಹೇಳಿ ನನ್ನನ್ನು ಕಾರಿಗೆ ದಬ್ಬಿದರು. ಆ ಕಾರಿನಲ್ಲಿ ನಾನು ಒಂದೂವರೆ ಗಂಟೆ ಇದ್ದೆ.

Stripped Me Naked, Ex Aussies Cricketer Stuart MacGill Recollects Kidnap Incident

"ನಾನು ಪರ್ತ್ ನಗರದನಾದ್ದರಿಂದ ಸಿಡ್ನಿಯ ಅನೇಕ ಪ್ರದೇಶಗಳು ನನಗೆ ಪರಿಚಿತ ಇರಲಿಲ್ಲ. ಅದು ನನ್ನ ಜೀವನದ ಅತಿದೀರ್ಘ ಒಂದೂವರೆ ತಾಸು ಎಂದು ಹೇಳಬಹುದು. ನಾನು ಎಲ್ಲಿದ್ದೆ ಅಂತ ಗೊತ್ತಿಲ್ಲ, ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದಾರೆ ಎಂದೂ ಗೊತ್ತಿರಲಿಲ್ಲ. ಬಹಳ ಭಯವಾಗಿತ್ತು. ಆಗ ಅವರು ನನ್ನನ್ನು ಬೆತ್ತಲುಗೊಳಿಸಿ ಹೊಡೆದರು, ಬೆದರಿಕೆ ಹಾಕಿದರು. ನನ್ನನ್ನು ಬಿಸಾಡಿದರು. ಯಾವುದೋ ಗೊತ್ತಿಲ್ಲದ ಪ್ರದೇಶದ ಶೆಡ್‌ನಲ್ಲಿ ಮೂರು ಗಂಟೆಗಳ ಕಾಲ ಬಿಸಾಡಿದರು. ನನಗೆ ಭಯವಾಗಿತ್ತು, ಅವಮಾನವೆನಿಸಿತ್ತು. ಮುಂದೆ ಏನು ನಡೆಯುತ್ತೆ ಎಂದೂ ಗೊತ್ತಾಗಲಿಲ್ಲ. ಅವರು ನನ್ನನ್ನು ಬೆಲ್‌ಮೋರ್ ಎಂಬಲ್ಲಿ ಬಿಟ್ಟುಹೋದರು. ಆಗ ನನಗೆ ಆ ಜಾಗ ಯಾವುದು ಎಂದು ಗೊತ್ತಿರಲಿಲ್ಲ. ನನ್ನ ಅದೃಷ್ಟಕ್ಕೆ ಒಬ್ಬ ಒಳ್ಳೆಯ ಕ್ಯಾಬ್ ಡ್ರೈವರ್ ಸಿಕ್ಕರು. ಮನೆಗೆ ಕರೆದುಕೊಂಡು ಹೋಗು ಅವರ ಕುಟುಂಬದ ಜೊತೆ ಊಟಕ್ಕೆ ವ್ಯವಸ್ಥೆ ಮಾಡಿದರು" ಎಂದು ಸ್ಟುವರ್ಟ್ ಮೆಕ್‌ಗಿಲ್ ಹೇಳಿದ್ಧಾರೆ.

ಶೇನ್ ವಾರ್ನ್ ನಿವೃತ್ತಿಯ ಅಂಚಿಗೆ ಬರುತ್ತಿದ್ದ ಕಾಲಘಟ್ಟದಲ್ಲಿ ಸ್ಟುವರ್ಟ್ ಮೆಕ್‌ಗಿಲ್ ಆಸ್ಟ್ರೇಲಿಯಾ ಕ್ರಿಕೆಟ್‌ಗೆ ಅಡಿ ಇಟ್ಟಿದ್ದರು. ವಾರ್ನ್ ಸ್ಥಾನ ತುಂಬುವ ಎಲ್ಲಾ ರೀತಿಯ ಲಕ್ಷಣಗಳು ಅವರಲ್ಲಿದ್ದವು. 1998ರಿಂದ 2008ರ ಅವಧಿಯಲ್ಲಿ ಆಡಿದ್ದ ಅವರು ಕೇವಲ 44 ಟೆಸ್ಟ್ ಪಂದ್ಯಗಳಲ್ಲಿ 208 ವಿಕೆಟ್ ಪಡೆದಿದ್ದರು. ಆದರೆ, ನಿರೀಕ್ಷಿತ ರೀತಿಯಲ್ಲಿ ಅವರ ಕ್ರಿಕೆಟ್ ವೃತ್ತಿ ಸಾಗಲಿಲ್ಲ.

(ಒನ್ಇಂಡಿಯಾ ಸುದ್ದಿ)

English summary
Former Australian cricket player Stuart MacGill has broken his silence on his kidnap incident of last year. He said he was stripped naked and beaten by kidnappers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X