ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಪಿಎಲ್ ಮಾಧ್ಯಮ ಹಕ್ಕು ಸ್ಟಾರ್, ವಯಾಕಾಮ್ 18, ಟೈಮ್ಸ್ ಇಂಟರ್‌ನಟ್‌ ಪಾಲು: 48,390 ಕೋಟಿ ರೂ.ಗೆ ಮಾರಾಟ

|
Google Oneindia Kannada News

ಮುಂಬೈ, ಜೂನ್ 14: ಇಂಡಿಯನ್ ಪ್ರೀಮಿಯರ್ ಲೀಗ್‌ನ 2023-2037ರ ವರೆಗಿನ ಮಾಧ್ಯಮ ಹಕ್ಕುಗಳ ಇ- ಹರಾಜು ಪ್ರಕ್ರಿಯೆ ಮುಗಿದಿದ್ದು, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬರೋಬ್ಬರಿ 48,390 ಕೋಟಿ ರೂ.ಗಳನ್ನು ಪಡೆದುಕೊಂಡಿದೆ. ಈ ಮೂಲಕ ಐಪಿಎಲ್ ಕ್ರಿಕೆಟ್‌ ಜಗತ್ತಿನ ಶ್ರೀಮಂತ ಕ್ರಿಕೆಟ್‌ ಲೀಗ್‌ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ಬಿಸಿಸಿಐ ಮುಂದಿನ 5 ವರ್ಷಗಳ ನೇರ ಪ್ರಸಾರದ ಹಕ್ಕುಗಳನ್ನು ಎ, ಬಿ, ಸಿ, ಡಿ ಎಂದು ನಾಲ್ಕು ಪ್ಯಾಕೇಜ್‌ಗಳಾಗಿ ವಿಂಗಡಿಸಿತ್ತು. 'ಎ' ಪ್ಯಾಕೇಜ್‌ನಲ್ಲಿ ಭಾರತದಲ್ಲಿನ ಟಿವಿ ಪ್ರಸಾರ ಹಕ್ಕು, 'ಬಿ' ಪ್ಯಾಕೇಜ್‌ನಲ್ಲಿ ಭಾರತದಲ್ಲಿನ ಡಿಜಿಟಲ್, 'ಸಿ' ಪ್ಯಾಕೇಜ್‌ನಲ್ಲಿ 18 ಆಯ್ದ ಪಂದ್ಯಗಳನ್ನು ಹಾಗೂ 'ಡಿ' ಪ್ಯಾಕೇಜ್‌ನಲ್ಲಿ ವಿದೇಶಿ ಪ್ರಸಾರದ ಹಕ್ಕನ್ನು ವಿಂಗಡಿಸಿ ಹರಾಜು ಮಾಡಲಾಗಿತ್ತು.

ಪ್ರೀಮಿಯರ್ ಲೀಗ್‌ಗಿಂತಲೂ ದುಬಾರಿಯಾಯ್ತು IPL... NFL ಒಂದೇ ಬಾಕಿಪ್ರೀಮಿಯರ್ ಲೀಗ್‌ಗಿಂತಲೂ ದುಬಾರಿಯಾಯ್ತು IPL... NFL ಒಂದೇ ಬಾಕಿ

'ಎ' ಪ್ಯಾಕೇಜ್‌ ಅನ್ನು ಸ್ಟಾರ್ ಇಂಡಿಯಾ ಸಂಸ್ಥೆ 23, 575 ಕೋಟಿ ರೂ. ನೀಡಿ ಖರೀದಿಸಿದೆ. ಡಿಜಿಟಲ್ ಹಕ್ಕನ್ನು ರಿಲಯನ್ಸ್ ಬೆಂಬಲಿತ ಸಂಸ್ಥೆ ವಯಾಕಾಮ್‌ 18 20,500 ಕೋಟಿ ರೂ. ನೀಡಿ ಖರೀದಿಸಿತು. 'ಸಿ' ಪ್ಯಾಕೇಜ್‌ ಸೇರಿದಂತೆ 3258 ಕೋಟಿ ರೂ. ನೀಡಿ ಖರೀದಿಸಿದೆ. 'ಡಿ' ಪ್ಯಾಕೇಜ್‌ಅನ್ನು ಟೈಮ್ಸ್‌ ಇಂಟರ್‌ನೆಟ್‌ ಮತ್ತು ವಯಾಕಾಮ್‌ ಸಂಸ್ಥೆಗಳು ಖರೀದಿಸಿವೆ. ಒಟ್ಟಾರೆ ವಯಾಕಾಮ್‌ ಮೂರು ಡಿಜಿಟಲ್ ಪ್ರಸಾರದ ಹಕ್ಕನ್ನು 23,758 ಕೋಟಿ ರೂ. ನೀಡಿ ಖರೀದಿಸಿದೆ.

ಈ ಒಪ್ಪಂದವೂ ಒಟ್ಟಾರೆ 5 ವರ್ಷಗಳ ವರೆಗೆ ಇರಲಿದೆ. ಈ ವೇಳ 410 ಪಂದ್ಯಗಳು ನಡೆಯಲಿವೆ. 2023 ಮತ್ತು 2024ರ ಆವೃತ್ತಿಗಳಲ್ಲಿ ತಲಾ 74 ಪಂದ್ಯಗಳು, 2025 ಮತ್ತು 2026ರ ಆವೃತ್ತಿಗಳಲ್ಲಿ ತಲಾ 84 ಪಂದ್ಯಗಳು ಹಾಗೂ 2027ರ ಆವೃತ್ತಿಗಳಲ್ಲಿ 94 ಪಂದ್ಯಗಳು ನಡೆಯಲಿವೆ ಎನ್ನಲಾಗಿದೆ. ಒಟ್ಟಾರೆ ಎಲ್ಲಾ ಪ್ಯಾಕೇಜ್‌ ಪರಿಗಣನೆ ಮಾಡಿದರೆ ಒಂದು ಪಂದ್ಯದ ಪ್ರಸಾರ ಹಕ್ಕು 114 ಕೋಟಿ ರೂ.ಗಳಿಗೆ ಮಾರಾಟವಾಗಿದೆ. ಇದು ಕಳೆದ ವರ್ಷಗಳಿಂದ ಡಬಲ್ ಆಗಿದೆ.

Star, VIACOM18, Times Win Ipl Media Rights for 48,390 Crore

2008ರಲ್ಲಿ ಐಪಿಎಲ್ ಆರಂಭಗೊಂಡಿತ್ತು. 10 ವರ್ಷಗಳವರೆಗೆ 8200 ಕೋಟಿ ರೂ. ಪಾವತಿಸಿ ಹಕ್ಕುಗಳನ್ನು ಪಡೆದುಕೊಂಡಿತ್ತು. ನಂತರ ಮುಂದಿನ 5 ವರ್ಷಗಳ ಟಿವಿ ಹಕ್ಕುಗಳನ್ನು 16,347.50 ಕೋಟಿ ರೂ ಬಿಡ್‌ ಮಾಡಿ ಸ್ಟಾರ್ ಇಂಡಿಯಾ ಖರೀದಿಸಿತ್ತು.

ಐಪಿಎಲ್ ಪ್ರಸಾರ ಹಕ್ಕು ಮಾರಾಟ; ಡಿಸ್ನಿಸ್ಟಾರ್‌ಗೆ ಟಿವಿ, ವಯಾಕಾಮ್18ಗೆ ಡಿಜಿಟಲ್ ಹಕ್ಕು ಐಪಿಎಲ್ ಪ್ರಸಾರ ಹಕ್ಕು ಮಾರಾಟ; ಡಿಸ್ನಿಸ್ಟಾರ್‌ಗೆ ಟಿವಿ, ವಯಾಕಾಮ್18ಗೆ ಡಿಜಿಟಲ್ ಹಕ್ಕು

ಪಂದ್ಯಗಳ ಮಾಲ್ಯದ ಆಧಾರದ ಮೇಲೆ ಐಪಿಎಲ್ ಜಾಗತಿಕವಾಗಿ 2ನೇ ಅತಿದೊಡ್ಡ ಲೀಗ್ ಆಗಿದೆ. ಐಪಿಎಲ್ ಮಾಧ್ಯಮ ಹಕ್ಕುಗಳ 14.61 ಮಿಲಿಯನ್ ಡಾಲರ್ ಇದ್ದರೆ, ಅಗ್ರಸ್ಥಾನದಲ್ಲಿರುವ ಎನ್‌ಎಫ್‌ಎಲ್ 17 ಮಿಲಿಯನ್‌ ಡಾಲರ್ ಮೌಲ್ಯವನ್ನು ಹೊಂದಿದೆ.

English summary
Next 5 year IPL media rights sold to 48,390 crores. Star India got its Indian sub-continent TV rights with Rs 23,575 crore, India digital rights win to Viacom18 for Rs 20,500 crore. It also won non-exclusive-Package C paying Rs 2991 crore. Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X