ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೆನ್ನಿಸ್ ಲೋಕದ ಗೆಲುವಿನ ತಾರೆಗೆ ಕಣ್ಣೀರು ಹಾಕಿಸಿದ ಕೊನೆಯ ಪಂದ್ಯ!

|
Google Oneindia Kannada News

ಟೆನ್ನಿಸ್ ಲೋಕದ ಪಾಲಿಗೆ ಸೆಪ್ಟೆಂಬರ್ 23ರ ಶುಕ್ರವಾರ ಎಂದಿನಂತೆ ಇರಲಿಲ್ಲ. ಟೆನ್ನಿಸ್ ಅಂಗಳದಲ್ಲಿ ಅಭಿಮಾನಿಗಳು ರಂಜಿಸುತ್ತಾ, ಟೆನ್ನಿಸ್ ಅಂಗಳದ ತಾರೆಯಾಗಿ ಜಗತ್ತಿನಾದ್ಯಂತ ಮಿನುಗಿದ ರೋಜರ್ ಫೆಡರರ್ ಎಂಬ ಸ್ಟಾರ್ ಆಟಗಾರ ತನ್ನ ಕ್ರೀಡಾ ಬದುಕಿಗೆ ವಿದಾಯ ಹೇಳಿದರು.

ಶುಕ್ರವಾರ ಅಂತಿಮ ಪಂದ್ಯವನ್ನು ಆಡಿದ ಸ್ವಿಡ್ಜರ್ಲೆಂಡ್ ಸ್ಟಾರ್ ಆಟಗಾರನ ಖೇಲ್ ಎಂದಿನಂತೆ ಇರಲಿಲ್ಲ. ಭಾವುಕರಾಗಿ ಅಂಗಳಕ್ಕೆ ಇಳಿದ ಫೆಡರರ್ ಕೊನೆಯ ಪಂದ್ಯದಲ್ಲಿ ತನ್ನ ಅಭಿಮಾನಿಗಳಿಗೆ ಕೊಂಚ ನಿರಾಸೆ ಮೂಡಿಸಿ ಬಿಟ್ಟರು. ಸಾಲು ಸಾಲು ಗೆಲುವು ದಾಖಲಿಸುತ್ತಿದ್ದ ರೋಜರ್ ಫೆಡರರ್ ಅಂತಿಮ ಪಂದ್ಯದಲ್ಲಿ ಮಂಕಾಗಿದ್ದರು.

ನಿವೃತ್ತಿ ನಂತರದ ಯೋಜನೆಗಳ ಬಗ್ಗೆ ಟೆನಿಸ್‌ ತಾರೆ ರೋಜರ್‌ ಫೆಡರರ್‌ ಹೇಳಿದ್ದೇನು?ನಿವೃತ್ತಿ ನಂತರದ ಯೋಜನೆಗಳ ಬಗ್ಗೆ ಟೆನಿಸ್‌ ತಾರೆ ರೋಜರ್‌ ಫೆಡರರ್‌ ಹೇಳಿದ್ದೇನು?

ಭಾವುಕರಾಗಿ ಅಂಗಳಕ್ಕೆ ಇಳಿದಿದ್ದ ರೋಜರ್ ಫೆಡರರ್ ಕೊನೆಯ ಪಂದ್ಯದಲ್ಲಿ ಸೋಲಿನ ವಿದಾಯ ಹೇಳುವ ಮೂಲಕ ಅಭಿಮಾನಿಗಳಿಗೆ ಕೊಂಚ ಬೇಸರ ಮೂಡಿಸಿದರು. ಅದಾಗ್ಯೂ, ಟೆನ್ನಿಸ್ ಲೋಕದ ತಾರೆಯಂತೆ ಮಿನುಗಿನ ಫೆಡರರ್ ವಿದಾಯಕ್ಕೆ ಸ್ಟಾರ್ ಆಟಗಾರರ ಆದಿಯಾಗಿ ಅಭಿಮಾನಿಗಳು ಭಾವುಕರಾಗಿ ಶುಭ ಹಾರೈಸಿದ್ದಾರೆ.

 ಸೋಲಿನ ವಿದಾಯ ಹೇಳಿದ ರೋಜರ್ ಫೆಡರರ್

ಸೋಲಿನ ವಿದಾಯ ಹೇಳಿದ ರೋಜರ್ ಫೆಡರರ್

ಸೆಪ್ಟೆಂಬರ್ 23 ರಂದು ಲೇವರ್ ಕಪ್ 2022 ಡಬಲ್ಸ್ ಪಂದ್ಯದಲ್ಲಿ ಟೀಮ್ ವರ್ಲ್ಡ್‌ನ ಜಾಕ್ವೆಸ್ ಸಾಕ್ ಮತ್ತು ಫ್ರಾನ್ಸಿಸ್ ಟಿಯಾಫೊ ವಿರುದ್ಧ ಜೋಡಿ ಸೋತಿತು. ಅವರು ಸೆಂಟರ್ ಕೋರ್ಟ್‌ನಲ್ಲಿ 6-4, 6-7 (2-7), 9-11 ರಲ್ಲಿ ಪಂದ್ಯವನ್ನು ಸೋತರು. ತನ್ನ ವೃತ್ತಿಜೀವನದ ಅಂತಿಮ ಪಂದ್ಯವನ್ನಾಡಿದ ರೋಜರ್ ಫೆಡರರ್ ಮೇಲೆ ಇಡೀ ಟೆನಿಸ್ ಲೋಕವೇ ದೃಷ್ಟಿ ನೆಟ್ಟಿತ್ತು. ಲೇವರ್ ಕಪ್ ಆರಂಭಕ್ಕೂ ಮುನ್ನ ಎಲ್ಲರ ಕಣ್ಣು ಸ್ವಿಟ್ಜರ್ಲೆಂಡ್ ತಾರೆಯತ್ತ ನೆಟ್ಟಿದ್ದು, ಕಿಕ್ಕಿರಿದು ತುಂಬಿದ್ದ ಕ್ರೀಡಾಂಗಣದ ಮುಂದೆ ತಮ್ಮ ಆಟಕ್ಕೆ ಫೆಡರರ್ ವಿದಾಯ ಹೇಳಿದರು.

ಅಂತಿಮ ಪಂದ್ಯದಲ್ಲಿ ರೋಜರ್ ಫೆಡರರ್-ನಡಾಲ್ ಭಾವುಕ

ಅಂತಿಮ ಪಂದ್ಯದಲ್ಲಿ ರೋಜರ್ ಫೆಡರರ್-ನಡಾಲ್ ಭಾವುಕ

ಈ ಮೂಲಕ ರೋಜರ್ ಫೆಡರರ್ ಶುಕ್ರವಾರ ಸೆಪ್ಟೆಂಬರ್ 23 ರಂದು ATP ಪ್ರವಾಸದಲ್ಲಿ ತಮ್ಮ ಕೊನೆಯ ಪಂದ್ಯವನ್ನು ಆಡಿದರು. ಅವರು ಲೇವರ್ ಕಪ್ 2022 ಡಬಲ್ಸ್ ಪಂದ್ಯದಲ್ಲಿ 22 ಗ್ರ್ಯಾಂಡ್ ಸ್ಲ್ಯಾಮ್ ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದ ರಾಫೆಲ್ ನಡಾಲ್ ಜೊತೆಗೆ ಪಾಲುದಾರರಾಗಿ ಅಂಗಳಕ್ಕೆ ಇಳಿದಿದ್ದರು. ಫೆಡರರ್ ನಿರ್ಗಮನದ ಸಮಯದಲ್ಲಿ ಸ್ವತಃ ನಡಾಲ್ ಕೂಡ ಕಣ್ಣೀರು ಹಾಕುವ ಮೂಲಕ ಭಾವುಕರಾಗಿ ಕಂಡು ಬಂದರು.

ಫೆಡರರ್ ಮತ್ತು ನಡಾಲ್ ಪಂದ್ಯವನ್ನು ಸೋತ ಬಳಿಕ ಸಂದರ್ಶನದಲ್ಲಿ ಫೆಡರರ್ ಕಣ್ಣೀರು ಹಾಕಿದರು. ಫೆಡರರ್ ಮಾತು ಕೇಳಿ ನಡಾಲ್ ಕೂಡ ಕಣ್ಣೀರು ಹಾಕುತ್ತಿರುವುದು ಕಂಡು ಬಂದಿತು. ತದನಂತರ ಇಬ್ಬರೂ ಕೂಡ ಪಕ್ಕದಲ್ಲಿ ಕುಳಿತು ಕಣ್ಣೀರು ಸುರಿಸುತ್ತಿರುವ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯಿತು.

ರೋಜರ್ ಫೆಡರರ್ ಮುಡಿಗೆ 20 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ

ರೋಜರ್ ಫೆಡರರ್ ಮುಡಿಗೆ 20 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ

ರೋಜರ್ ಫೆಡರರ್ ಗೆಲುವಿನ ದಾರಿಯಲ್ಲಿ ಸತತವಾಗಿ ಐದು US ಓಪನ್ ಪ್ರಶಸ್ತಿಗಳು, 8 ವಿಂಬಲ್ಡನ್ ಪ್ರಶಸ್ತಿಗಳು ಮತ್ತು 369 ಗ್ರ್ಯಾಂಡ್ ಸ್ಲಾಮ್ ಗೆಲುವುಗಳು ಸೇರಿವೆ. ಸತತ 36 ಗ್ರ್ಯಾನ್ ಸ್ಲಾಮ್ ಕ್ವಾರ್ಟರ್ ಫೈನಲ್, 23 ಸತತ ಗ್ರ್ಯಾನ್ ಸ್ಲಾಮ್ ಸೆಮಿಫೈನಲ್ ಮತ್ತು 81 ಗ್ರ್ಯಾನ್ ಸ್ಲಾಮ್ ಆಡಿರುವುದನ್ನು ಮರೆಯುವಂತಿಲ್ಲ. ಈ ಎಲ್ಲಾ ಸಾಧನೆಗಳು ಸಾರ್ವಕಾಲಿಕ ದಾಖಲೆಗಳಾಗಿವೆ.

ಫೆಡರರ್ ತಮ್ಮ ವೃತ್ತಿಜೀವನದಲ್ಲಿ ಒಟ್ಟು 103 ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇವುಗಳಲ್ಲಿ 6 ATP ಫೈನಲ್ಸ್ ಟೈಟಲ್ಸ್ ಸೇರಿವೆ. 71 ಹಾರ್ಡ್ ಕೋರ್ಟ್ ಟೈಟಲ್ಸ್ ಮತ್ತು 19 ಗ್ರಾಸ್ ಕೋರ್ಟ್ ಟೈಟಲ್ಸ್ ಸೇರಿವೆ. ಇವುಗಳಲ್ಲದೆ ಫೆಡರರ್ ಒಲಿಂಪಿಕ್ ಸಿಂಗಲ್ಸ್ ಬೆಳ್ಳಿ ಪದಕ, ಒಲಿಂಪಿಕ್ ಡಬಲ್ಸ್ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಅವರು ಡೇವಿಸ್ ಕಪ್ ಚಾಂಪಿಯನ್ ಕೂಡ ಆಗಿದ್ದಾರೆ.

1251 ಪಂದ್ಯ ಗೆದ್ದಿರುವ ರೋಜರ್ ಫೆಡರರ್

1251 ಪಂದ್ಯ ಗೆದ್ದಿರುವ ರೋಜರ್ ಫೆಡರರ್

ರೋಜರ್ ಫೆಡೆರರ್ 237 ವಾರಗಳವರೆಗೆ ನಂಬರ್ 1 ಆಗಿದ್ದು ಅವರ ದೀರ್ಘಾಯುಷ್ಯ ದಾಖಲೆಯ ಆಗಿದೆ. ಅವರು 5 ಬಾರಿ ವರ್ಷಾಂತ್ಯದಲ್ಲಿ ನಂಬರ್ 1 ಆಗಿದ್ದರು. ಅವರು ಒಟ್ಟು 1,251 ಪಂದ್ಯಗಳನ್ನು ಗೆದ್ದಿದ್ದಾರೆ, ಇದರಲ್ಲಿ ಕ್ರಮವಾಗಿ 783 ಹಾರ್ಡ್ ಕೋರ್ಟ್ ಗೆಲುವುಗಳು ಮತ್ತು 192 ಗ್ರಾಸ್ ಕೋರ್ಟ್ ಗೆಲುವುಗಳು ಸೇರಿವೆ. ಇವೆರಡೂ ಸಾರ್ವಕಾಲಿಕ ದಾಖಲೆಗಳಾಗಿವೆ.

English summary
Star player Roger Federer goodbye to Tennis after defeat in the final match. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X