ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಂಕಾ ಬಿಕ್ಕಟ್ಟು: ಭಾರತದ ನೆರವು- ಮತ್ತೊಬ್ಬ ಮಾಜಿ ಕ್ರಿಕೆಟಿಗ ಜಯಸೂರ್ಯ ಮೆಚ್ಚುಗೆ

|
Google Oneindia Kannada News

ಕೊಲಂಬೋ, ಏ. 7: ಶ್ರೀಲಂಕಾದಲ್ಲಿ ಉದ್ಭವಿಸಿರುವ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಭಾರತ ಸಹಾಯಹಸ್ತ ನೀಡಿದೆ. ಭಾರತದ ಈ ಔದಾರ್ಯ ಕ್ರಮಕ್ಕೆ ಲಂಕನ್ನರು ಕೃತಜ್ಞತೆ ಅರ್ಪಿಸಿದ್ದಾರೆ. ನಿನ್ನೆ ಮಾಜಿ ಕ್ರಿಕೆಟಿಗ ಹಾಗು ರಾಜಕಾರಣಿಯೂ ಆಗಿರುವ ಅರ್ಜುನ ರಣತುಂಗ ಅವರು ಭಾರತವನ್ನು ಲಂಕಾದ ದೊಡ್ಡಣ್ಣನೆಂದು ಬಣ್ಣಿಸಿ, ಭಾರತದ ನೆರವಿನ ಕ್ರಮವನ್ನು ಪ್ರಶಂಸಿಸಿದ್ದರು. ಇದೀಗ ಮತ್ತೊಬ್ಬ ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯ ಅವರು ಇದೇ ಅಭಿಪ್ರಾಯವನ್ನು ಪುನರುಚ್ಚರಿಸಿದ್ದಾರೆ.

"ನಮಗೆ ಹಿರಿಯಣ್ಣ ಎನಿಸಿರುವ ನಮ್ಮ ನೆರೆ ದೇಶವಾದ ಭಾರತ ನಮಗೆ ನೆರವು ನೀಡುತ್ತಿದೆ. ಭಾರತ ಸರ್ಕಾರಕ್ಕೆ ಮತ್ತು ಅದರ ಪ್ರಧಾನಿಗೆ ನಾವು ಕೃತಜ್ಞರಾಗಿದ್ದೇವೆ" ಎಂದು ಸನತ್ ಜಯಸೂರ್ಯ ಇಂದು ಗುರುವಾರ ಹೇಳಿಕೆ ನೀಡಿದ್ದಾರೆಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

Sri Lanka Economic Crisis : ಶ್ರೀಲಂಕಾ ತುರ್ತು ಪರಿಸ್ಥಿತಿ ವಾಪಸ್: ಯುಎನ್ ಸ್ವಾಗತSri Lanka Economic Crisis : ಶ್ರೀಲಂಕಾ ತುರ್ತು ಪರಿಸ್ಥಿತಿ ವಾಪಸ್: ಯುಎನ್ ಸ್ವಾಗತ

ಲಂಕಾದ ಆರ್ಥಿಕ ಬಿಕ್ಕಟ್ಟಿಗೆ ಖೇದ ವ್ಯಕ್ತಪಡಿಸಿದ ಮಾಜಿ ಆರಂಭಿಕ ಬ್ಯಾಟರ್ ಆದ ಸನತ್ ಜಯಸೂರ್ಯ, ಈ ಪರಿಸ್ಥಿತಿ ಉದ್ಭಿವಿಸಲು ಕಾರಣವಾದ ಲಂಕಾ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ಧಾರೆ. ಹಾಗೆಯೇ ಲಂಕಾ ಅಧ್ಯಕ್ಷ ಗೋಟಾಬಯ ರಾಜಪಕ್ಸ ವಿರುದ್ಧ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳನ್ನ ಅವರು ಸಮರ್ಥಿಸಿಕೊಂಡಿದ್ದಾರೆ.

Sanath Jayasurya and other former Lanka cricketers express gratitude for Indian help

"ದೇಶದಲ್ಲಿ ಇಂಧನ ಮತ್ತು ಅನಿಲದ ಕೊರತೆ ಇದೆ. ಕೆಲವೊಮ್ಮೆ ದಿನದಲ್ಲಿ 10-12 ಗಂಟೆ ಕಾಲ ವಿದ್ಯುತ್ ಇರುವುದಿಲ್ಲ. ಜನಸಾಮಾನ್ಯರಿಗೆ ಬಹಳ ಕಷ್ಟವಾಗಿದೆ. ಹೀಗಾಗಿ ಜನರು ಬೀದಿಗೆ ಬಂದು ಪ್ರತಿಭಟನೆ ನಡೆಸುತ್ತಿದ್ದಾರೆ" ಎಂದು ಜಯಸೂರ್ಯ ಅಭಿಪ್ರಾಯಪಟ್ಟಿದ್ದಾರೆ.

ಶ್ರೀಲಂಕಾ ದೇಶದ ಆರ್ಥಿಕತೆಯನ್ನು ಅಧ್ಯಕ್ಷರು ಸರಿಯಾಗಿ ನಿಭಾಯಿಸಿಲ್ಲ ಎಂಬ ಅಸಮಾಧಾನ ಬಹಳಷ್ಟು ಮಡುಗಟ್ಟಿದೆ. ಈ ಬಗ್ಗೆ ಮಾತನಾಡಿದ ಜಯಸೂರ್ಯ, ಈಗಲಾದರೂ ಆರ್ಥಿಕ ಪರಿಸ್ಥಿತಿಯನ್ನು ಸರಕಾರ ಸರಿಯಾಗಿ ನಿಭಾಯಿಸಲಿಲ್ಲವಾದರೆ ದೊಡ್ಡ ಅನಾಹುತ ಆಗಬಹುದು ಎಂದು ಎಚ್ಚರಿಸಿದ್ದಾರೆ.

"ಇಂತಹ ಪರಿಸ್ಥಿತಿ ಎದುರಾಗದೇ ಇರಲಿ ಎಂಬುದು ನಮ್ಮ ಆಶಯ. ಡೀಸೆಲ್, ಗ್ಯಾಸ್, ಹಾಲಿನಪುಡಿ ಇತ್ಯಾದಿಗಳಿಗೆ ಜನರು ೩-೪ ಕಿ.ಮೀ.ಯಷ್ಟು ಸರದಿಯಲ್ಲಿ ನಿಲ್ಲಬೇಕಾದ ಸ್ಥಿತಿ ಇದೆ. ಜನರು ಬಹಳಷ್ಟು ನೊಂದುಹೋಗಿದ್ದಾರೆ" ಎಂದು ಸನತ್ ಜಯಸೂರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Sanath Jayasurya and other former Lanka cricketers express gratitude for Indian help

ಭಾರತದ ನೆರವಿಗೆ ಅರ್ಜುನ ರಣತುಂಗ ಮೆಚ್ಚುಗೆ:
ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಅರ್ಜುನ ರಣತುಂಗ ಅವರೂ ಕೂಡ ನಿನ್ನೆ ಭಾರತದ ನೆರವಿನ ಕ್ರಮವನ್ನು ಪ್ರಶಂಸಿಸಿದ್ದರು. ಲಂಕಾದ ಜನರಿಗೆ ಭಾರತ ಒಂದು ರೀತಿಯಲ್ಲಿ ಹಿರಿಯಣ್ಣನಿದ್ದಂತೆ ಎಂದು ಹೇಳಿದ ಅವರು, ಪೆಟ್ರೋಲ್, ಔಷಧ ಇತ್ಯಾದಿ ಅಗತ್ಯ ವಸ್ತುಗಳನ್ನ ನಮಗೆ ಭಾರತ ಪೂರೈಸುತ್ತಿದೆ ಎಂದರು.

ಲಂಕಾ ಅಧ್ಯಕ್ಷ ಗೋಟಾಬಯ ರಾಜಪಕ್ಸ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿದ ರಣತುಂಗ, ದೇಶದಲ್ಲಿ ಮತ್ತೊಮ್ಮೆ ರಕ್ತಪಾತ ಆಗದಿರಲಿ ಎಂದು ಆಶಿಸಿದರು.

"ನನಗೆ ಬಹಳ ಭಯವಾಗುತ್ತಿದೆ. 30 ವರ್ಷ ಕಾಲ ಯುದ್ಧದಿಂದ ಕಂಗೆಟ್ಟಿರುವ ಜನರು ಮತ್ತೊಂದು ಯುದ್ಧಕ್ಕೆ ಸನ್ನದ್ಧವಾಗುವ ಪರಿಸ್ಥಿತಿ ಬರುವುದು ಬೇಡ. ತಮಿಳರು ಮತ್ತು ಮುಸ್ಲಿಮರಿಂದ ಈ ಪರಿಸ್ಥಿತಿ ಸೃಷ್ಟಿಯಾಗಿದೆ ಎಂಬ ಅಭಿಪ್ರಾಯವನ್ನು ಸರಕಾರದಲ್ಲಿರುವ ಕೆಲ ರಾಜಕಾರಣಿಗಳು ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಈ ಮೂಲಕ ದೇಶವನ್ನು ಒಡೆಯಲು ಮತ್ತೊಮ್ಮೆ ಯತ್ನಿಸುತ್ತಿದ್ದಾರೆ" ಎಂದು ರಣತುಂಗ ಬೇಸರ ಹೊರಹಾಕಿದರು. ಮತ್ತೊಬ್ಬ ಮಾಜಿ ಕ್ರಿಕೆಟಿಗ ಕುಮಾರ ಸಂಗಕ್ಕಾರ ಅವರೂ ಲಂಕಾ ಸರಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದು, ಭಾರತದ ಔದಾರ್ಯ ಕ್ರಮವನ್ನು ಸ್ವಾಗತಿಸಿದ್ದಾರೆ.

ಲಂಕಾ ಬಿಕ್ಟಟ್ಟು ಏನು?
ಸಿಂಹಳೀಯರ ದೇಶ ಬಹಳಷ್ಟು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ. ಅದರ ವಿದೇಶೀ ವಿನಿಮಯ ಬಹಳ ದುರ್ಬಲಗೊಂಡಿದೆ. ಸಾಲದ ಶೂಲಕ್ಕೆ ಸಿಕ್ಕು ಒದ್ದಾಡುತ್ತಿದೆ. ಆಮದು ವಸ್ತುಗಳಿಗೆ ಹಣ ಕೊಡಲೂ ಆಗದ ಸ್ಥಿತಿ ಇದೆ. ಇಂಧನ ಇತ್ಯಾದಿ ಅತ್ಯಗತ್ಯ ವಸ್ತುಗಳನ್ನ ಆಮದು ಮಾಡಿಕೊಳ್ಳಲು ಅದರ ಕೈಯಲ್ಲಿ ಹಣ ಇಲ್ಲದಂತಾಗಿದೆ. ದೇಶಾದ್ಯಂತ ಜನಸಾಮಾನ್ಯರಿಗೆ ಪೆಟ್ರೋಲ್, ಔಷಧ, ಹಾಲು ಇತ್ಯಾದಿ ವಸ್ತುಗಳು ದೊರಕುವುದು ದುಸ್ತರವಾಗಿದೆ. ಜನರು ದಂಗೆ ಏಳುವ ಪರಿಸ್ಥಿತಿ ಬಂದಿದೆ.
(ಒನ್ಇಂಡಿಯಾ ಸುದ್ದಿ)

English summary
Grateful to 'big brother' India for sending help: Former Sri Lankan cricketer Sanath Jayasuriya joins Arjuna Ranatunga, Kumara Sangakkara in showing gratitude for Indian help to island nation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X