ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Karnataka State Sports Awards 2020-21 : 15 ಕ್ರೀಡಾಪಟುಗಳಿಗೆ ಏಕಲವ್ಯ ಪ್ರಶಸ್ತಿ: ನಾರಾಯಣಗೌಡ

|
Google Oneindia Kannada News

ಬೆಂಗಳೂರು, ಏ. 04: ಕರ್ನಾಟಕದ ಹದಿನೈದು ಕ್ರೀಡಾ ಸಾಧಕರಿಗೆ 2020-21 ನೇ ಸಾಲಿನ ಏಕಲವ್ಯ ಪ್ರಶಸ್ತಿ ಘೋಷಣೆ ಮಾಡಲಾಗಿದೆ. 14 ಕ್ರೀಡಾಪಟುಗಳು ಕ್ರೀಡಾರತ್ನ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ.

ಕರ್ನಾಟಕ ಸರ್ಕಾರದ ಕ್ರೀಡಾ ಇಲಾಖೆ ವತಿಯಿಂದ ನೀಡುವ 2020-21 ನೇ ಸಾಲಿನ ಏಕಲವ್ಯ ಪ್ರಶಸ್ತಿ, ಜೀವಮಾನ ಸಾಧನೆ, ಕ್ರೀಡಾರತ್ನ ಹಾಗೂ ಕ್ರೀಡಾ ಪೋಷಕ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ. ಕೆ.ಸಿ. ನಾರಾಯಣಗೌಡ ಸೋಮವಾರ ಘೋಷಣೆ ಮಾಡಿದರು.

ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವ ನಾರಾಯಣಗೌಡ ಅವರು, ಕ್ರೀಡಾ ಕ್ಷೇತ್ರದಲ್ಲಿ ವಿವಿಧ ಸಾಧನೆ ಮಾಡಿದ ಕ್ರೀಡಾಪಟುಗಳು ಹಾಗೂ ತರಬೇತುದಾರರಿಗೆ ಕೊಡಲ್ಪಡುವ ಕ್ರೀಡಾಪಶಸ್ತಿ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆಗೊಳಿಸಿದರು. ಏಕಲವ್ಯ ಪ್ರಶಸ್ತಿಗೆ 15, ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿಗೆ 14, ಕರ್ನಾಟಕ ಕ್ರೀಡಾಪೋಷಕ ಪ್ರಶಸ್ತಿಗೆ 10 ಹಾಗೂ ಜೀವಮಾನ ಸಾಧನೆ ಪ್ರಶಸ್ತಿಗೆ ಇಬ್ಬರನ್ನು ಆಯ್ಕೆ ಮಾಡಲಾಗಿದೆ.

Sports minister Narayana Gowda announced 2020-21 Karnataka State Sports awards; Heres Winners List

2020-21 ನೇ ಸಾಲಿನಲ್ಲಿ ಏಕಲವ್ಯ ಪ್ರಶಸ್ತಿಗೆ 151, ಕರ್ನಾಟಕ ಕ್ರೀಡಾರತ್ನ 53, ಕ್ರೀಡಾ ಪೋಷಕ 25 ಹಾಗೂ ಜೀವಮಾನ ಸಾಧನೆ ಪ್ರಶಸ್ತಿಗೆ 28 ಅರ್ಜಿಗಳು ಸ್ವೀಕೃತವಾಗಿದ್ದವು. ಇದರಲ್ಲಿ ಪ್ರಶಸ್ತಿ ಆಯ್ಕೆಗೆ ನೇಮಿಸಲಾಗಿದ್ದ ತಜ್ಞರ ಸಮಿತಿ ಪರಿಶೀಲನೆ ನಡೆಸಿ ಅರ್ಹರನ್ನು ಆಯ್ಕೆ ಮಾಡಿದೆ. ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ, ದಿನಾಂಕವನ್ನು ನಿಗದಿಮಾಡಿ ಶೀಘ್ರದಲ್ಲೇ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಚಿವರು ಇದೇ ವೇಳೆ ತಿಳಿಸಿದರು.

Sports minister Narayana Gowda announced 2020-21 Karnataka State Sports awards; Heres Winners List

ಏಕಲವ್ಯ ಪ್ರಶಸ್ತಿ ಪುರಸ್ಕೃತರು

ಜೀವನ್ ಕೆ.ಎಸ್ - ಅಥ್ಲೆಟಿಕ್ಸ್

ನಿತಿನ್ - ನೆಟ್ಬಾಲ್

ಅಶ್ವಿನಿಭಟ್ - ಬ್ಯಾಡ್ಮಿಂಟನ್

ಜಿ. ತರಣ್ ಕಷ್ಣಪ್ರಸಾದ್ - ರೋಯಿಂಗ್

ಲೋಪಮುದ್ರಾತಿಮ್ಮಯ್ಯ- ಬಾಸ್ಕೆಟ್‌ಬಾಲ್

ಲಿಖಿತ್ಎಸ್.ಪಿ- ಈಜು

ಕರಣ್ ನಾಯರ್ - ಕ್ರಿಕೆಟ್

ಅನರ್ಘ್ಯ ಮಂಜುನಾಥ್ - ಟೇಬಲ್ ಟೆನ್ನಿಸ್

ದಾನಮ್ಮ ಚಿಚಖಂಡಿ- ಸೈಕ್ಲಿಂಗ್

ಅಶ್ವಲ್‌ ರೈ - ವಾಲಿಬಾಲ್

ವಸುಂಧರಾ ಎಂ.ಎನ್. - ಜುಡೋ

ಪ್ರಧಾನ್ ಸೋಮಣ್ಣ- ಹಾಕಿ

ಪ್ರಶಾಂತ್ ಕುಮಾರ್ ರೈ- ಕಬಡ್ಡಿ

ರಾಧಾ .ವಿ- ಪ್ಯಾರಾ ಅಥ್ಲೆಟಿಕ್ಸ್

ಮುನೀರ್ ಬಾಷಾ- ಖೋ-ಖೋ

Sports minister Narayana Gowda announced 2020-21 Karnataka State Sports awards; Heres Winners List

ಜೀವಮಾನ ಸಾಧನಾ ಪ್ರಶಸ್ತಿ:

ಗಾವಂಕರ್ ಜಿ.ವಿ.- ಅಥ್ಲೆಟಿಕ್ಸ್

ಕ್ಯಾಪ್ಟನ್ ದಿಲೀಪ್ ಕುಮಾರ್ - ಕಯಾಕಿಂಗ್ & ಕನೋಯಿಂಗ್

ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ

ಪೂಜಾಗಾಲಿ- ಆಟ್ಯಾ-ಪಾಟ್ಯಾ

ಬಿ.ಎನ್. ಕಿರಣ್ ಕುಮಾರ್ - ಬಾಲ್ ಬ್ಯಾಡ್ಮಿಂಟನ್

ಗೋಪಾಲನಾಯ್ಕ್ - ಕಂಬಳ

ದೀಕ್ಷಾ ಕೆ. ಖೋ-ಖೋ

ಶಿವಯೋಗಿ ಬಸಪ್ಪ ಬಾಗೇವಾಡಿ - ಗುಂಡುಕಲ್ಲು ಎತ್ತುವುದು

ಲಕ್ಷ್ಮೀಬಿರೆಡೆಕರ್ - ಕುಸ್ತಿ

ಪಿ. ಗೋಪಾಲಕೃಷ್ಣ- ಯೋಗ

ರಾಘವೇಂದ್ರಎಸ್. ಹೊಂಡದಕೇರಿ- ಪವರ್‌ ಲಿಫ್ಟಿಂಗ್

ಸಿದ್ದಪ್ಪ ಪಾಂಡಪ್ಪ ಹೊಸಮನಿ- ಸಂಗ್ರಾಣಿಕಲ್ಲು ಎತ್ತುವುದು

ಸೂರಜ್ ಎಸ್. ಅಣ್ಣಿಕೇರಿ- ಕುಸ್ತಿ

ಶಶಾಂಕ್ ಬಿ.ಎಂ- ಪ್ಯಾರಾ ಈಜು

ಡಿ.ನಾಗಾರಾಜು- ಯೋಗ

ಶ್ರೀವರ್ಷಿಣಿ- ಜಿಮ್ನಾಸ್ಟಿಕ್

ಅವಿನಾಶ್ ವಿ. ನಾಯ್ಕ - ಜುಡೋ

ಕ್ರೀಡಾ ಪೋಷಕ ಪ್ರಶಸ್ತಿ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಷಲ್ ಟ್ರಸ್ಟ್ , ಉಜಿರೆ- ದಕ್ಷಿಣಕನ್ನಡ

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವ ವಿದ್ಯಾಲಯ, ಬೆಂಗಳೂರು ನಗರ ಜಿಲ್ಲೆ

ಆರ್. ವಿ. ತಾಂತ್ರಿಕ ಮಹಾವಿದ್ಯಾಲಯ - ಬೆಂಗಳೂರು ನಗರ ಜಿಲ್ಲೆ

ಹೂಡಿ ಸ್ಪೋರ್ಟ್ಸ್ ಕ್ಲಬ್ - ಬೆಂಗಳೂರು ನಗರ ಜಿಲ್ಲೆ

ಶ್ರೀ ಬಾಲಮಾರುತಿ ಸಂಸ್ಥೆ- ಧಾರವಾಡ

ಎಮಿನೆಂಟ್ ಶೂಟಿಂಗ್ ಹಬ್ - ಬೆಂಗಳೂರು ನಗರ ಜಿಲ್ಲೆ

ಬಾಲಾಂಜನೇಯ ಜಿಮ್ನಾಸಿಯಂ (ರಿ.) ಮಂಗಳೂರು

ಬಸವನಗುಡಿ ಅಕ್ವಾಟಿಕ್ ಸೆಂಟರ್ - ಬೆಂಗಳೂರು ನಗರ ಜಿಲ್ಲೆ

ಪೀಪಲ್ ಎಜುಕೇಷನ್ ಟ್ರಸ್ಟ್, ಮಂಡ್ಯ

English summary
Sports minister Narayana Gowda announced 2020-21 Karnataka State Sports awards; Here's Winners List.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X